Red lipstick Ban : ತುಟಿ ಅಂದ ಹೆಚ್ಚಿಸೋ ಲಿಪ್ ಸ್ಟಿಕ್ (lipstick) ಹೆಣ್ಣುಮಕ್ಕಳ ಪಾಲಿಗೆ ಒಂಥರಾ ಜೀವನೋತ್ಸಾಹ ಹೆಚ್ಚಿಸೋ ಟಾನಿಕ್ ಇದ್ದಂತೆ. ತುಟಿಗಳ ಅಂದ ಮತ್ತು ಬಣ್ಣ ಎರಡನ್ನೂ ಹೆಚ್ಚಿಸುವ ಲಿಪ್‌ಸ್ಟಿಕ್ ನ ಬಣ್ಣ ಆಯ್ಕೆ ಮಾಡೋಕೆ ಹೆಣ್ಣುಮಕ್ಕಳು ಗಂಟೆಗಟ್ಟಲೇ ಸಮಯ ವ್ಯಯಿಸುತ್ತಾರೆ. ಆದರೆ ನೀವು ಈ ದೇಶಕ್ಕೆ ಬಂದ್ರೇ ಇಲ್ಲಿ ನಿಮ್ಮ ತುಟಿಯ ಬಣ್ಣವನ್ನೂ ಸರ್ಕಾರವೇ ನಿರ್ಧರಿಸುತ್ತದೆ. ಅಯ್ಯಪ್ಪಾ ಇದ್ಯಾವ ದೇಶ ಅಂದ್ರಾ ಇಲ್ಲಿದೆ ಡಿಟೇಲ್ಸ್.

ಹೆಣ್ಣುಮಕ್ಕಳ ಮನಸೆಳೆಯೋ ಲಿಪ್ ಸ್ಟಿಕ್ ನಲ್ಲಿ ಅಚ್ಚ ಕೆಂಪಿನ ಬಣ್ಣಕ್ಕೆ ವಿಶೇಷ ಡಿಮ್ಯಾಂಡ್ . ಮೈಬಣ್ಣ ಯಾವುದೇ ಇದ್ದರೂ ತುಟಿಯ ಬಣ್ಣ ಕೆಂಪಾಗಿರಬೇಕು ಅಂತ ಬಯಸೋ ಹೆಣ್ಣುಮಕ್ಕಳೇ ಜಾಸ್ತಿ. ಆದರೆ ಉತ್ತರ ಕೊರಿಯಾದಲ್ಲಿ ಕೆಂಪು ಲಿಪ್‌ಸ್ಟಿಕ್ ಮೇಲಿದೆ ನಿಷೇಧವಿದೆ. ಹೌದು ಇದು ನಿಮಗೆ ಅಚ್ಚರಿ ಎನ್ನಿಸಿದ್ರೂ ಸತ್ಯ.
ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್-ಉನ್ ಅವರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಬಳಕೆಗೆ ನಿಷೇಧ ಹೇರಿದ್ದಾರೆ. ಉತ್ತರ ಕೊರಿಯಾದಲ್ಲಿ ಜನರು ತಮ್ಮಿಷ್ಟದಂತೆ ಬದುಕುವಂತಿಲ್ಲ. ಅಲ್ಲಿ ಬದುಕಲು ಪಾಲಿಸಲೇಬೇಕಾದ ಕೆಲ ವಿಚಿತ್ರ ನಿಯಮಗಳಿವೆ. ಅದರಲ್ಲಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಮೇಲಿನ ಬ್ಯಾನ್ ಕೂಡ ಒಂದು.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ 80 ಸಾವಿರ ಅರ್ಜಿ ತಿರಸ್ಕಾರ :ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ಸಿಗುತ್ತೆ ಹಣ
ಉತ್ತರ ಕೊರಿಯಾದಲ್ಲಿ ವೈಯಕ್ತಿಕ ಫ್ಯಾಷನ್ ಮತ್ತು ಸೌಂದರ್ಯದ ಆಯ್ಕೆಗಳು ಕೇವಲ ವೈಯಕ್ತಿಕ ಅಭಿವ್ಯಕ್ತಿಯ ವಿಷಯಗಳಾಗಿ ಮಾತ್ರ ಉಳಿದಿಲ್ಲ. ಇಲ್ಲಿ ಒಬ್ಬರ ವೈಯಕ್ತಿಕ ಆಯ್ಕೆಗಳನ್ನು ಸರ್ಕಾರವು ತುಂಬಾ ಬಿಗಿಯಾಗಿ ನಿಯಂತ್ರಿಸುತ್ತದೆ. ಈ ನಿಯಂತ್ರಣದಲ್ಲಿ ಅಚ್ಚರಿ ವಿಚಾರ ಎಂದರೆ ಕೆಂಪು ಲಿಪ್‌ಸ್ಟಿಕ್ ಮೇಲಿನ ನಿಷೇಧ.
ಕಿಮ್ ಜೊಂಗ್-ಉನ್ ಅವರ ನಾಯಕತ್ವದಲ್ಲಿ, ಉತ್ತರ ಕೊರಿಯಾ ಮಹಿಳೆಯರು ಹೇಗೆ ಬಟ್ಟೆ ಧರಿಸುತ್ತಾರೆ ಮತ್ತು ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸುತ್ತಾರೆ ಎಂಬ ಎಲ್ಲಾ ವಿಚಾರಗಳಿಗೆ ಕೆಲ ಕಟ್ಟುನಿಟ್ಟಾದ ನಿಯಮಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ಯಾವುದೇ ಪ್ರಶ್ನೆ ಇಲ್ಲದೇ ಇದನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಉತ್ತರ ಕೊರಿಯಾದಲ್ಲಿ ಕೆಂಪು ಲಿಪ್‌ಸ್ಟಿಕ್ ಮೇಲಿನ ನಿಷೇಧವು ಕೇವಲ ಸೌಂದರ್ಯ ನಿಯಂತ್ರಣವಾಗಿರದೇ, ಇದು ದೇಶದ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹೋರಾಟಗಳೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ವಿಮೋಚನೆ ಮತ್ತು ಸ್ತ್ರೀಲಿಂಗ ಆಕರ್ಷಣೆಯೊಂದಿಗೆ ಹೆಚ್ಚಾಗಿ ಸಂಬಂಧಿಸಿರುವ ಕೆಂಪು ಲಿಪ್‌ಸ್ಟಿಕ್ ಉತ್ತರ ಕೊರಿಯಾದಲ್ಲಿ ಬಂಡವಾಳಶಾಹಿ ಅವನತಿ ಮತ್ತು ನೈತಿಕ ಅವನತಿಯನ್ನು ಪ್ರತಿನಿಧಿಸುತ್ತದೆ.
ಉತ್ತರ ಕೊರಿಯಾದ ಸರ್ಕಾರವು ರಾಜ್ಯದ ಮೌಲ್ಯಗಳೊಂದಿಗೆ ಹೊಂದಿಕೊಳ್ಳುವ ಸಂಪ್ರದಾಯವಾದಿ, ಸಾಧಾರಣ ಸೌಂದರ್ಯವನ್ನು ಉತ್ತೇಜಿಸುತ್ತದೆ. ಆದ್ದರಿಂದ ಮಹಿಳೆಯರು ಸರಳತೆ ಮತ್ತು ಏಕರೂಪತೆಗೆ ಹೊಂದಿಕೊಳ್ಳಬಹುದಾದ ಬೇಸಿಕ್ ಮೇಕ್‌ಅಪ್ ಅನ್ನು ಮಾಡಿಕೊಳ್ಳಲು ಇಲ್ಲಿನ ಆಡಳಿತ ಅನುಮತಿಸುತ್ತದೆ.
ಇದನ್ನೂ ಓದಿ : ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ಬಡ್ಡಿ ರಹಿತ ಸಾಲ, ಈ ದಾಖಲೆಗಳಿದ್ರೆ ಇಂದೇ ಅರ್ಜಿ ಸಲ್ಲಿಸಿ
ಅಲ್ಲದೇ ಕೇವಲ ಕೆಂಪು ಲಿಪ್ ಸ್ಟಿಕ್ ನಿಯಮ ರೂಪಿಸಿರುವುದು ಮಾತ್ರವಲ್ಲದೇ, ಈ ನಿಯಮವನ್ನು ಮಹಿಳೆಯರು ಪಾಲಿಸುತ್ತಾರಾ ಎಂದು ಪರೀಕ್ಷಿಸಲು ಹಾಗೂ ನಿಯಮ ಪಾಲಿಸುವಂತೆಮಾಡಲು ಅಲ್ಲಿನ ಆಡಳಿತ ಮಂಡಳಿ ಗಸ್ತು ತಿರುಗುವ ವ್ಯಕ್ತಿಗಳನ್ನು ಕೂಡ ನೇಮಿಸಿಕೊಂಡಿದೆ. ಇಷ್ಟೇ ಅಲ್ಲದೇ ಅಧಿಕಾರಿಗಳಿಂದ ವಾಡಿಕೆಯ ತಪಾಸಣೆಗಳನ್ನು ಒಳಗೊಂಡಂತೆ ತನ್ನ ನೀತಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ವಿವಿಧ ತಂತ್ರಗಳನ್ನು ಬಳಸುತ್ತದೆ.
ಈ ನಿಯಮಗಳನ್ನು ಧಿಕ್ಕರಿಸುವವರಿಗೆ ಕಠಿಣ ದಂಡವನ್ನು ಸಹ ವಿಧಿಸಲಾಗುತ್ತದೆ. ಜನಸಂಖ್ಯೆಯ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಜನರು ಹೊರಗಿನ ಪ್ರಭಾವಕ್ಕೆ ಒಳಪಡದೇ ಸರ್ಕಾರದ ಅಧೀನದಲ್ಲೇ ಉಳಿಯಲು ಇಂತಹ ನಿಯಮಗಳು ಅಗತ್ಯ ಎಂದು ಸರ್ವಾಧಿಕಾರಿ ಅಭಿಪ್ರಾಯಿಸುತ್ತಾರೆ.
ಇದನ್ನೂ ಓದಿ : ಬೇಸಿಗೆ ರಜೆ ವಿಸ್ತರಣೆ ? ಜೂನ್ ಎರಡನೇ ವಾರದಲ್ಲಿ ಬಾಗಿಲು ತೆರೆಯಲಿವೆ ಶಾಲೆಗಳು !
ಕೇವಲ ಲಿಪ್ ಸ್ಟಿಕ್ ಮಾತ್ರವಲ್ಲ ಉತ್ತರ ಕೊರಿಯಾದಲ್ಲಿ ಮಹಿಳೆಯರು ತಮ್ಮ ಕೂದಲನ್ನು ಉದ್ದವಾಗಿ ಹೇಗೇಗೋ ಅಲಂಕರಿಸಿ ಕೊಳ್ಳಲು ಅವಕಾಶವಿಲ್ಲ. ಬದಲಾಗಿ ಮಹಿಳೆಯರು ತಮ್ಮ ಕೂದಲನ್ನು ಚಿಕ್ಕದಾಗಿ ಮತ್ತು ಅಂದವಾಗಿ ಕಟ್ಟಿಕೊಳ್ಳಬೇಕು.
Be careful before using red lipstick Government Ban Red Lipstick