T20 World Cup 2024: ಟಿ20 ವಿಶ್ವಕಪ್’ನಲ್ಲಿ ಅಮೆರಿಕ ಪರ ಆಡಲಿರುವ ಚಿಕ್ಕಮಗಳೂರು ಯುವಕ!

ಈ ಬಾರಿಯ ಟಿ20 ವಿಶ್ವಕಪ್’ನಲ್ಲಿ ಚಿಕ್ಕಮಗಳೂರಿನ ಯುವಕನೊಬ್ಬ ಅಮೆರಿಕ ತಂಡದ ಪರ ಆಡಲಿದ್ದಾನೆ. ಅವನೇ ನೋಶ್’ತುಷ್ ಕೆಂಜಿಗೆ (Noshtush Kenjige).

ಬೆಂಗಳೂರು: ಐಪಿಎಲ್ (IPL 2024) ಮುಗಿದ ಬೆನ್ನಲ್ಲೇ ಮತ್ತೊಂದು ಟಿ20 ಕ್ರಿಕೆಟ್ ಹಬ್ಬ. ಅದುವೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC t20 World Cup 2024). ಚುಟುಕು ಕ್ರಿಕೆಟ್ ವರ್ಲ್ಡ್ ಕಪ್ ಜೂನ್ 2ರಿಂದ ಜೂನ್ 29ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆಯಲಿದೆ. ವಿಶೇಷ ಏನಂದ್ರೆ, ಈ ಬಾರಿಯ ಟಿ20 ವಿಶ್ವಕಪ್’ನಲ್ಲಿ ಚಿಕ್ಕಮಗಳೂರಿನ ಯುವಕನೊಬ್ಬ ಅಮೆರಿಕ ತಂಡದ ಪರ ಆಡಲಿದ್ದಾನೆ. ಅವನೇ ನೋಶ್’ತುಷ್ ಕೆಂಜಿಗೆ (Noshtush Kenjige).

Chikkamagalur cricketer to play for usa in t20 world cup
Image credit to original source

ಎಡಗೈ ಸ್ಪಿನ್ನರ್ ನೋಶ್’ತುಷ್ ಕೆಂಜಿಗೆ ಕ್ರಿಕೆಟ್ ಆಡುವ ಎಲ್ಲಾ ಹುಡುಗರಂತೆ ಭಾರತ ತಂಡದ ಪರ ಆಡುವ ಕನಸು ಕಂಡಿದ್ದ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಫಸ್ಟ್ ಡಿವಿಜನ್ ಪಂದ್ಯಗಳಲ್ಲಿ  ವಿವಿಧ ತಂಡಗಳ ಪರ ಆಡಿದ್ದ ನೋಶ್’ತುಷ್’ಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರಲಿಲ್ಲ.

ಹೀಗಾಗಿ ಕ್ರಿಕೆಟ್’ಗೆ ಗುಡ್ ಬೈ ಹೇಳಿ ಉದ್ಯೋಗಕ್ಕೆಂದು ತಾನು ಹುಟ್ಟಿದ ಅಮೆರಿಕಕ್ಕೆ ಹೋದ ನೋಶ್’ತುಷ್ ಅಲ್ಲಿ ಉದ್ಯೋಗ  ಮಾಡುತ್ತಲೇ ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಿದ್ದ.  ಹೀಗೇ ಆಡುತ್ತಿದ್ದಾಗ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರತಿಭಾನ್ವೇಷಕರ ಕಣ್ಣಿಗೆ ಬಿದ್ದಿದ್ದಾನೆ. ಮೂರು ವರ್ಷ ಯುಎಸ್ಎನಲ್ಲಿ ನೆಲೆಸಿದ ನಂತರ ಅಮೆರಿಕ ತಂಡದ ಪರ ಆಡುವ ಅವಕಾಶ ಪಡೆದಿದ್ದಾನೆ.

ಇದನ್ನೂ ಓದಿ : Dhoni Retired From IPL ? ಚೆನ್ನೈನಲ್ಲಿ ಕೊನೆಯ ಐಪಿಎಲ್ ಪಂದ್ಯವಾಡುತ್ತಿದ್ದಾರಾ “ತಲಾ” ಧೋನಿ ? ಸುಳಿವು ಕೊಟ್ಟಿತಾ ಚೆನ್ನೈ ಸೂಪರ್ ಕಿಂಗ್ಸ್?

ಭಾರತ ತಂಡದ ಪರ ಆಡುವ ಕನಸು ಕಂಡಿದ್ದ ಈ ಯುವಕ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧವೇ ಆಡಲಿದ್ದಾನೆ. 33 ವರ್ಷದ ನೋಶ್’ತುಷ್ ಕೆಂಜಿಗೆ ಮೇಜರ್ ಲೀಗ್ ಕ್ರಿಕೆಟ್ ಹಾಗೂ ಐಎಲ್’ಟಿ20 ಟೂರ್ನಿಗಳಲ್ಲಿ ಎಂಐ ನ್ಯೂ ಯಾರ್ಕ್ ಮತ್ತು ಎಂಐ ಎಮಿರೇಟ್ಸ್ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.

Chikkamagalur cricketer to play for usa in t20 world cup
Image credit to original source

ನೋಶ್’ತುಷ್ ಕೆಂಜಿಗೆ ತಮ್ಮ ಬಾಲ್ಯದಲ್ಲಿ ಬೆಂಗಳೂರಿನ ಹಲಸೂರಿನಲ್ಲಿರುವ ಕರ್ನಾಟಕ ಇನ್ಸ್’ಟಿಟ್ಯೂಟ್ ಆಫ್ ಕ್ರಿಕೆಟ್ (KIOC) ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದ್ದರು. ಟಿ20 ವಿಶ್ವಕಪ್’ಗೆ ಸಜ್ಜಾಗುತ್ತಿರುವ ನೋಶ್’ತುಷ್ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಕೆಐಒಸಿಯಲ್ಲಿ ಅಭ್ಯಾಸ ನಡೆಸಿದ್ದಾರೆ ಎಂದು ಅಕಾಡೆಮಿಯ ನಿರ್ದೇಶಕ ಇರ್ಫಾನ್ ಸೇಠ್ ಹೇಳಿದ್ದಾರೆ.

ಇದನ್ನೂ ಓದಿ : Rohit Sharma Out Of Mumbai Indians: ಮುಂಬೈ ತಂಡದಿಂದ ರೋಹಿತ್ ಶರ್ಮಾಗೆ ಗೇಟ್ ಪಾಸ್ ಪಕ್ಕಾ? ಸೆಹ್ವಾಗ್ ಕೊಟ್ಟರಲ್ಲ “ದೊಡ್ಡ” ಸಂದೇಶ !

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ತಂಡ ಭಾರತ, ಪಾಕಿಸ್ತಾನ, ಕೆನಡಾ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ. ಜೂನ್ 2ರಂದು ಡಲ್ಲಾಸ್’ನಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ತಂಡ, ಪಕ್ಕದ ಕೆನಡಾ ತಂಡವನ್ನು ಎದುರಿಸಲಿದೆ.

ಜೂನ್ 12ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಮೆರಿಕ ತಂಡ, ಭಾರತ ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನು ಓದಿ : RCB Big Offer To KL Rahul: ಎಲ್ಲಾ ನಿನ್ನವರೇ.. ಇಲ್ಲಿ ಯಾರೂ ನಿನ್ನನ್ನು ಬೈಯುವವರಿಲ್ಲ.. ರಾಹುಲ್’ಗೆ ಹೀಗೊಂದು RCB ಆಫರ್..!

 

Comments are closed.