ಶನಿವಾರ, ಏಪ್ರಿಲ್ 26, 2025
HomeNationalಭೀಮನ ಪತ್ನಿ ಹಿಡಿಂಬೆಗಾಗಿ ಇಲ್ಲಿದೆ ದೇವಾಲಯ ; ಈ ಊರನ್ನು ಕಾಯುತ್ತಾಳೆ ರಾಕ್ಷಸಿ

ಭೀಮನ ಪತ್ನಿ ಹಿಡಿಂಬೆಗಾಗಿ ಇಲ್ಲಿದೆ ದೇವಾಲಯ ; ಈ ಊರನ್ನು ಕಾಯುತ್ತಾಳೆ ರಾಕ್ಷಸಿ

- Advertisement -

Hadimba Devi Temple : ನಮ್ಮ ದೇಶದ ಸಂಸ್ಕೃತಿಯೇ ಹಾಗೆ ಇಲ್ಲಿ ಎಲ್ಲಾ ಥರದ ದೇವತೆಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ದೇವತೆಗಳು ಮಾತ್ರವಲ್ಲದೇ ರಾಕ್ಷಸರಿಗೂ ಇಲ್ಲಿ ಪೂಜೆ ನಡೆಯುತ್ತದೆ. ಅವರ ಉತ್ತಮ ಗುಣಗಳನ್ನು ಗೌರವಿಸಿ ಪೂಜೆ ಸಲ್ಲಿಸಲಾಗುತ್ತೆ. ಅದಕ್ಕೆ ಉತ್ತಮ ಉದಾಹರಣೆ ರಾವಣ. ನಾವು ರಾಮ ಭಕ್ತರಾದರೂ ದೇಶದ ಹಲವೆಡೆ ರಾವಣ ಪೂಜೆಯನ್ನು ಮಾಡಲಾಗುತ್ತೆ. ಇಲ್ಲಿ ರಾಕ್ಷಸ ರಾವಣನಿಗೆ ಅಲ್ಲ ಬದಲಾಗಿ ಶಿವ ಭಕ್ತ ರಾವಣನಿಗೆ ಪೂಜೆಯನ್ನು ಸಲ್ಲಿಸಲಾಗುತ್ತೆ ಅನ್ನೋದೇ ವಿಶೇಷ. ಅಂತೆಯೇ ಇಲ್ಲೊಂದು ದೇವಾಲಯವಿದೆ . ಇಲ್ಲಿ ರಾಕ್ಷಸ ಕುಲದಲ್ಲಿ ಜನಿಸಿ ಕರುಣಾಮೂರ್ತಿ ಅನ್ನಿಸಿಕೊಂಡಿರುವ ರಾಕ್ಷಸಿಯೊಬ್ಬಳಿಗಾಗಿ ನಿರ್ಮಾಣವಾಗಿರೋ ಹಿಡಿಂಬಾ ದೇವಿ ದೇವಾಲಯ (Hadimba Devi Temple) . ಇಲ್ಲಿ ಹಿಡಿಂಬಾಸುರೆ ಎಂಬ ರಾಕ್ಷಸಿ ಈ ಊರಿನ ರಕ್ಷಕಿಯಾಗಿ ನೆಲೆ ನಿಂತಿದ್ದಾಳೆ.

Bhima wife Hadimba Devi Temple In Manali A demon guards this town
Image Credit to Original Source

ಹೌದು, ಇದು ಭೀಮನ ಪತ್ನಿ ಹಿಡಿಂಬೆಯ ದೇವಾಲಯ. ರಾಕ್ಷಸಿ ಯಾಗಿ ಜನಿಸಿದ್ರೂ ಇಲ್ಲಿ ಈಕೆ ಊರ ದೇವಿಯಾಗಿ ಭಕ್ತರನ್ನು ಕಾಯುತ್ತಿದ್ದಾಳೆ. ಕಾನನದ ನಡುವ ಸ್ಥಿತವಾಗಿರೋ ಈ ದೇವಾಲಯ ಇಲ್ಲಿನ ಸುತ್ತಮುತ್ತಲ ಯಾತ್ರಿಕರ ಪಾಲಿಗೆ ಶ್ರದ್ಧಾಕೇಂದ್ರ ಎಂದರೆ ತಪ್ಪಾಗಲ್ಲ . ಸುತ್ತಲು ದೇವದಾರು ಮರಗಳಿಂದ ಆವೃತವಾಗಿರುವ ಈ ಪ್ರದೇಶವನ್ನು ಹಿಡಿಂಬ ವನ ಅಂತಾನೂ ಕರೆಯುತ್ತಾರೆ. ಸಾವಿರಾರು ವರ್ಷಗಳಿಂದ ಈ ವನದಲ್ಲಿ ಈ ವೃಕ್ಷಗಳಿವೆ ಅಂತ ಇಲ್ಲಿನ ಭಕ್ತರು ನಂಬಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ : ಮನುಷ್ಯರಂತೆ ಮೆತ್ತಗಿದೆ ಲಕ್ಷ್ಮೀ ನರಸಿಂಹನ ದೇಹ – ದೇವರ ಹೊಕ್ಕುಳ ತೀರ್ಥ ಸೇವಿಸಿದ್ರೆ ಸಂತಾನ ಭಾಗ್ಯ

ಇಲ್ಲಿ ಈ ಹಿಡಿಂಬೆಯನ್ನು ಕಾಳಿದೇವಿಯ ಪ್ರತಿ ರೂಪ ಅನ್ನೋ ರೀತಿ ಪೂಜಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ನವರಾತ್ರಿಯಂದು ಹಿಡಿಂಬೆಗೆ ವಿಶೇಷ ಪೂಜೆಯನ್ನು ಮಾಡಿ ಜಾತ್ರೆಯನ್ನು ಮಾಡಲಾಗುತ್ತೆ. ಹಿಡಿಂಬಾ ದೇವಿಯ ವಿಗ್ರಹದ ಬದಲಾಗಿ ಇಲ್ಲಿನ ಕಲ್ಲಿನಲ್ಲಿ ಮೂಡಿರುವ ಹಿಡಿಂಬಾ ದೇವಿಯ ಪಾದದ ಅಚ್ಚನ್ನು ಪೂಜೆ ಮಾಡೋದು ಇಲ್ಲಿನ ವಿಶೇಷಗಳಲ್ಲೊಂದು . ಇಲ್ಲಿ ಹಿಡಿಂಬೆ ತಪಸ್ಸನ್ನು ಮಾಡಿ ದೇವಿಯ ಸ್ಥಾನ ಮಾನ ಪಡೆದಳಂತೆ ಆಗ ಈ ಪಾದಗಳು ಮೂಡಿವೆ ಅಂತ ಭಕ್ತರು ಹೇಳುತ್ತಾರೆ.

Bhima wife Hadimba Devi Temple In Manali A demon guards this town
Image Credit to Original Source

ಇದನ್ನೂ ಓದಿ : ಆಲದ ನೆರಳಲ್ಲಿ ನೆಲೆ ನಿಂತಿದ್ದಾನೆ ಬಸ್ರೂರು ತುಳುವೇಶ್ವರ – ಪ್ರಕೃತಿಯೇ ಇಲ್ಲಿ ಶಿವನಿಗೆ ದೇವಾಲಯ

ಇಲ್ಲಿನ ಸ್ಥಳ ಪುರಾಣಕ್ಕೆ ಬರೋದಾದ್ರೆ ಈ ವನವನ್ನು ಮೊದಲು ನಿಂಬವನ ಅಂತ ಕರೆಯಲಾಗುತ್ತಿತ್ತು. ಅದನ್ನು ಹಿಡಿಂಬ ಅನ್ನೋ ರಾಕ್ಷಸ ಆಳುತ್ತಿದ್ದ .ಆತನ ತಂಗಿಯೇ ಈ ಹಿಡಿಂಬೆ . ಒಂದು ಬಾರಿ ಪಾಂಡವರು ಈ ಕಾಡಿಗೆ ಬಂದಾಗ ಭೀಮನ ರೂಪವನ್ನು ನೋಡಿದ ಹಿಡಿಂಬೆ ಆತನಿಗೆ ಮನ ಸೋತಿದ್ದಳು. ಆದರೆ ನರ ಭಕ್ಷಕನಾದ ಹಿಡಿಂಬ ಮಾತ್ರ ಆಕೆಯ ಮನದ ಇಂಗಿತ ಅರಿಯದೇ ಅವರನ್ನು ಕೊಲ್ಲಲು ಯತ್ನಿಸಿದ.

ಇದನ್ನು ಅರಿತ ಭೀಮ ಆತನನ್ನು ಸಂಹಾರ ಮಾಡಿದ . ಆದರೆ ಹಿಡಿಂಬನಿಗೆ ಮದುವೆ ಆಗದ ಕಾರಣ ಆ ಕಾಡಿನ ರಾಜನಾಗಲು ಯಾರು ಅಲ್ಲಿರಲಿಲ್ಲ. ಇದನ್ನು ಅರಿತ ವ್ಯಾಸ ಋಷಿಗಳು ಹಿಡಿಂಬೆಯನ್ನು ವರಿಸುವಂತೆ ಭೀಮನಿಗೆ ಸಲಹೆ ನೀಡಿದ್ರು. ಇದಾದ ನಂತರ ಭೀಮನು ಹಿಡಿಂಬೆಯನ್ನು ವಿವಾಹವಾಗಿ ಘಟೋದ್ಗಜ ಎಂಬ ಮಗನನ್ನು ಪಡೆದನು . ಮುಂದೆ ಮಹಾ ಭಾರತ ಯುದ್ಧದಲ್ಲಿ ಆತ ಕೂಡಾ ಹತನಾದ ಅಂತ ಪುರಾಣ ಹೇಳುತ್ತ.

ಇದನ್ನೂ ಓದಿ : ಕುಕ್ಕೆಯಿಂದ ಕಾಳಿಂಗನಾಗಿ ಬಂದು ಖುದ್ದು ಸುಬ್ರಹ್ಮಣ್ಯ ನೇ ನೆಲೆ ನಿಂತ ಕ್ಷೇತ್ರ – ಇಲ್ಲಿ ಬಂದ್ರೆ ನಾಗದೋಷ ಪರಿಹಾರ

ಇನ್ನು ಈಕೆಯ ಪುತ್ರ ಘಟೋದ್ಗಜ ನಿಗೂ ಇಲ್ಲಿ ಪೂಜೆ ಸಲ್ಲಿಸಲಾಗುತ್ತೆ. ಇಲ್ಲಿರೋ ಅತಿ ದೊಡ್ಡ ದೇವದಾರು ಮರವನ್ನೇ ಘಟೋದ್ಗಜ ಅಂತ ನಂಬಲಾಗುತ್ತೆ. ಅದಕ್ಕೆ ವಾಮ ಮಾರ್ಗ ಅಂದ್ರೆ ಉಗ್ರ ಮಾಗ್ರದಲ್ಲಿ ಪೂಜೆ ಸಲ್ಲಿಸುವ ರೂಢಿ ಈ ಊರಲ್ಲಿದೆ. ಮರಕ್ಕೆ ಚೂಪಾದ ಆಯುಧ , ಕಾಡು ಪ್ರಾಣಿಗಳ ಬುರುಡೆಗಳನ್ನು ಕಟ್ಟಿ ಆರಾಧಿಸಲಾಗುತ್ತೆ. ಇದರಿಂದ ಎಲ್ಲಾ ರೀತಿಯ ಶ್ರೇಯೋಭೀವೃಧಿಯಾಗುತ್ತೆ ಅಂತ ಇಲ್ಲಿನ ಜನರು ನಂಬುತ್ತಾರೆ.

Bhima wife Hadimba Devi Temple In Manali A demon guards this town
Image Credit to Original Source

ಅಂದ ಹಾಗೆ ಇಂತಹಾ ವಿಶೇಷವಾದ ಅಪರೂಪವಾದ ದೇವಾಲಯ ವಿರೋದು ಎಲ್ಲಿ ಗೊತ್ತಾ ? ನಮ್ಮ ಹಿಮಾಲಯದ ಶಿಖರ ಶ್ರೇಣಿಗಳನ್ನು ಹೊಂದಿರುವ ರಾಜ್ಯ ಹಿಮಾಚಲ ಪ್ರದೇಶದ ಮನಾಲಿಯಲ್ಲಿ . ಹಿಮಾಚಲದ ಪ್ರಸಿದ್ಧ ಪ್ರವಾಸಿತಾಣ ಅಂತ ಅನ್ನಿಸಿಕೊಂಡಿರೋ ಮನಾಲಿಯಲ್ಲೇ ಈ ದೇವಾಲಯವಿದೆ. ಪೂರ್ತಿ ಮರದಿಂದಲೇ ನಿರ್ಮಾಣವಾಗಿರೋ ದೇವಾಲಯ ಇದಾಗಿದ್ದು ತ್ರಿಕೋನಾಕಾರದಲ್ಲಿದೆ. ಆದ್ದರಿಂದಲೇ ಇಲ್ಲಿ ಬರುವ ಬರುವ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ. ಇದು ದೊಡ್ಡದಾದ ದೇವಾಲಯ ಅನ್ನಿಸಿಕೊಳ್ಳದಿದ್ರು ಪ್ರಕೃತಿಯ ನಡುವಿನಲ್ಲಿರೋ ವಿಶೇಷವಾದ ಹಾಗೂ ಸುಂದರವಾದ ದೇವಾಲಯ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Bhima wife Hadimba Devi Temple In Manali A demon guards this town

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular