ಆಲದ ನೆರಳಲ್ಲಿ ನೆಲೆ ನಿಂತಿದ್ದಾನೆ ಬಸ್ರೂರು ತುಳುವೇಶ್ವರ – ಪ್ರಕೃತಿಯೇ ಇಲ್ಲಿ ಶಿವನಿಗೆ ದೇವಾಲಯ

Basrur Tuluveshwar Temple : ದೇವರು ಎಲ್ಲ ಕಡೆ ಇರುತ್ತಾನೆ, ಅದರೆ ಮನುಜರಾದವರು ಭಕ್ತಿಯ ಕುರುಹಿಗಾಗಿ ದೇವಾಲಯನ್ನು ಕಟ್ಟಿ ಪೂಜಿಸುತ್ತಾರೆ. ಇಲ್ಲಿ ದೇವರ ಬಿಂಬವನ್ನು ಕಂಡು ಕಣ್ಣು ತುಂಬಿಕೊಂಡು , ಭಗವಂತನೇ ಬಂದಿದ್ದಾನೆ ಅನ್ನೋ ರೀತಿಯಲ್ಲಿ ಸಂತೋಷ ಗೊಳ್ಳುತ್ತಾರೆ.

Basrur Tuluveshwar Temple : ದೇವರು ಎಲ್ಲ ಕಡೆ ಇರುತ್ತಾನೆ, ಅದರೆ ಮನುಜರಾದವರು ಭಕ್ತಿಯ ಕುರುಹಿಗಾಗಿ ದೇವಾಲಯನ್ನು ಕಟ್ಟಿ ಪೂಜಿಸುತ್ತಾರೆ. ಇಲ್ಲಿ ದೇವರ ಬಿಂಬವನ್ನು ಕಂಡು ಕಣ್ಣು ತುಂಬಿಕೊಂಡು , ಭಗವಂತನೇ ಬಂದಿದ್ದಾನೆ ಅನ್ನೋ ರೀತಿಯಲ್ಲಿ ಸಂತೋಷ ಗೊಳ್ಳುತ್ತಾರೆ. ಅದರಂತೆ ಭಗವಂತನೂ ಕೂಡಾ ಭಕ್ತರ ಕಷ್ಟವನ್ನು ಪರಿಹರಿಸೋಕೆ ಅಂತಾನೆ ಅಲ್ಲಿ ನೆಲೆಸಿರುತಾನೆ ಅನ್ನೋದ್ರಲ್ಲಿ ಎರಡು ಮಾತಿಲ್ಲ . ಆದ್ರೆ ಈ ಬಸ್ರೂರು ತುಳುವೇಶ್ವರ ದೇವಾಲಯದಲ್ಲಿ ಮಾತ್ರ ದೇವರಿಗೆ ಪ್ರಕೃತಿಯೇ ಆಲಯವಾಗಿ ತನ್ನ ಸೇವೆ ಮಾಡುತ್ತಿದೆ.

Basrur Tuluveshwar Temple is nestled in the shade of a banyan tree – nature itself is a temple to Shiva here
Image Credit to Original Source

ಹೌದು ಇದು ಕುಂದಾಪುರದಲ್ಲಿರೋ ತುಳುವೇಶ್ವರ ದೇವಾಲಯ . ಈ ದೇವರಿಗೆ ಪ್ರಕೃತಿಯೇ ಗುಡಿ . ಇಲ್ಲಿ ಆಲದ ಮರವೊಂದು ದೇವರಿಗೆ ನೆರಳಾಗಿ ನಿಂತಿದೆ ಅಂದ್ರೆ ನೀವು ಆಶ್ಚರ್ಯ ಪಡುತ್ತೀರ . ಹಾಗೆಂದ ಮಾತ್ರಕ್ಕೆ ಈ ಶಂಕರನನ್ನು ಯಾರೋ ಆಲದ ಮರದ ಬುಡದಲ್ಲಿ ಸ್ಥಾಪಿಸಿದ್ರು ಅಂತಲ್ಲ. ಅಥವಾ ಮೊದಲಿನಿಂದಲೇ ಆಲದ ಮರದ ಬುಡದಲ್ಲೇ ಈ ದೇವಾಲಯ ಇದ್ದುದಲ್ಲ. ಬದಲಾಗಿ ಈ ರೀತಿ ವೈಚಿತ್ರ್ಯ ನಿರ್ಮಿತವಾದದ್ದು ಸುಮಾರು 200 ವರ್ಷಗಳ ಹಿಂದೆ.

ಇದನ್ನೂ ಓದಿ : ಇದು ಹನುಮನ ಮೊದಲ ದೇವಾಲಯ – ಇಲ್ಲಿ ತೀರ್ಥ ಸೇವಿಸಿದ್ರೆ ಸರ್ಪದೋಷ ಪರಿಹಾರ

ಹೌದು 200  ವರ್ಷಗಳಿಗಿಂತ ಹಿಂದೆ ಈ ತುಳುವೇಶ್ವರನಿಗೂ ದೇವಾಲಯವಿತ್ತು. ಈ ದೇವಾಲಯಕ್ಕೆ ಸುಮಾರು 2000 ಕ್ಕೂ ಹೆಚ್ಚಿನ ಇತಿಹಾಸವಿತ್ತು. ತುಳುವರು ಅನ್ನೋ ಜನಾಂಗ ಇಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಬರುತ್ತಿದ್ದರು. ಆದ್ರೆ ಅನಿವಾರ್ಯ ಕಾರಣಗಳಿಂದ ಇಲ್ಲಿ ಪೂಜೆ ನಿಂತು ಹೋಯಿತು. ಹಾಗೂ ಇಲ್ಲಿ ಇದ್ದ ದೇವಾಲಯ ಶಿಥಿಲಾವಸ್ಥೆಗೆ ತಲುಪಿ ಕಟ್ಟಡ ನಾಶವಾಯಿತು. ಅದರ ಅವಶೇಷವನ್ನು ಇಂದಿಗೂ ನಾವು ಕಾಣಬಹುದು.

Basrur Tuluveshwar Temple is nestled in the shade of a banyan tree – nature itself is a temple to Shiva here
Image Credit to Original Source

ಆದಾದ ನಂತರ ಕೆಲವೇ ವರ್ಷಗಳಲ್ಲಿ ಆ ಶಿವಲಿಂಗದ ಸುತ್ತಲು ಆಲದ ಮರವೊಂದು ಬೆಳೆಯಲು ಆರಂಭವಾಯಿತು . ಇದೀಗ ದೇವರ ನೆರಳಾಗಿ ಆ ಆಲದ ಮರ ಬೆಳೆದು ನಿಂತಿದೆ. ಅಲ್ಲೇ ತುಳುವೇಶ್ವರನಿಗೆ ಜನರು ಪೂಜೆ ಮಾಡುತ್ತಾರೆ. ಈ ಆಲದ ಮರದ ಬುಡದಲ್ಲಿ 6 ರಿಂದ 8 ಜನರಿಗೆ ನಿಲ್ಲುವಷ್ಟು ಜಾಗವಿದೆ. ಇನ್ನು ಈ ಕುರಿತಂತೆ ಅರಿತಿರುವ ಕೆಲವು ಭಕ್ತರು, ಈ ಆಲದ ಮರವನ್ನು ತೆರವು ಗೊಳಿಸಿ , ಇದರ ಜೀರ್ಣೋಧಾರ ಮಾಡುವ ಯೋಚನೆ ಮಾಡಿದ್ದರಂತೆ .

ಇದನ್ನೂ ಓದಿ : ಇದು ಶೃಂಗೇರಿ ಶಾರದೆ ಮೂಲ ಕ್ಷೇತ್ರ – ನಿಂತ ಭಂಗಿಯಲ್ಲೇ ಪೂಜಿಸಲ್ಪಡುತ್ತಾಳೆ ತಾಯಿ

ಆದರೆ ಆಗ ಕೇಳಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಆಲದ ಮರವನ್ನು ತೆರಲುಗೊಳಿಸಬಾರದು ಹಾಗೂ ದೇವರು ಆತನಿಗೆ ಬೇಕಾದಾಗ ಆಲಯ ನಿರ್ಮಿಸುವ ಸೂಚನೆ ನೀಡುತ್ತಾನೆ ಅನ್ನೋ ಉತ್ತರ ಬಂತಂತೆ . ಅಂದಿನಿಂದ ಇದರ ಜೀರ್ಣೋದ್ದಾರದ ಯೋಜನೆಯನ್ನು ಕೈ ಬಿಡಲಾಯಿತು .ಇನ್ನು ಇಲ್ಲಿನ ಮತ್ತೊಂದು ವಿಶೇಷವೆಂದರೆ ಆಲದ ಮರದ ಬುಡದಲ್ಲಿರುವ ಒಂದು ನಾಗರ ಹಾವು.

Basrur Tuluveshwar Temple is nestled in the shade of a banyan tree – nature itself is a temple to Shiva here
Image Credit to Original Source

ಇಲ್ಲಿ ಹಲವು ವರ್ಷಗಳಿಂದ ಈ ಹಾವು ವಾಸವಾಗಿದ್ದು, ಇಲ್ಲಿ ಏನಾದ್ರೂ ಅಪಚಾರ, ಅಶುದ್ಧಿಯಾದ್ರೆ ಆಲದ ಮರದ ಬಿಲದಿಂದ ಹೊರಬರುತ್ತೆ. ಹೀಗಾಗಿ ಇಲ್ಲಿ ಬರುವ ಭಕ್ತರು ನಿಯಮ ನಿಷ್ಠೆಗಳನ್ನು ಪಾಲಿಸುತ್ತಾರಂತೆ. ಇನ್ನು ಈ ದೇವಾಲಯ ಎಲ್ಲಿದೆ ಅನ್ನೋದನ್ನು ಹೇಳೋದಾದ್ರೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ರಾವುತಕೇರಿಯಲ್ಲಿ ಈ ದೇವಾಲಯ ಸ್ಥಿತವಾಗಿದೆ.

ಇದನ್ನೂ ಓದಿ : ರಾಜ್ಯ ಕಾಯೋ ರೂಪದಲ್ಲಿ ನೆಲೆನಿಂತಿದ್ದಾಳೆ ರಾಜ ರಾಜೇಶ್ವರಿ- ನಿಂಬೆ ದೀಪ ಬೆಳಗಿದ್ರೆ ಮನೆಮನಗಳಲ್ಲಿ ನೆಮ್ಮದಿ ಶಾಂತಿ

ಪರಶು ರಾಮರ ಸೃಷ್ಟಿ ಅನ್ನಿಸಿಕೊಂಡಿರುವ ಈ ಕರಾವಳಿಯಲ್ಲಿ ಈ ದೇವಾಲಯ ನೆಲೆ ನಿಂತಿರೋದು ವಿಶೇಷ. ಗ್ರಾಮೀಣ ಭಾಗದಲ್ಲಿ ಇರೋ ದೇವಾಲಯ ಆಗಿದ್ದರಿಂದ ಸಾಕಷ್ಟು ಮಂದಿ ಇಲ್ಲಿ ಬರೋದಿಲ್ಲ. ಇಂತಹ ಇತಿಹಾಸವಿರೋ ದೇವಾಲಯಕ್ಕೆ ತೆರಳಿದ್ರೆ ,ಮಾತ್ರ ಇಂತಹ ಸುಂದರ ಕ್ಷೇತ್ರಗಳು.

Basrur Tuluveshwar Temple is nestled in the shade of a banyan tree – nature itself is a temple to Shiva here

Comments are closed.