ಸೋಮವಾರ, ಏಪ್ರಿಲ್ 28, 2025
HomekarnatakaMani Chennakeshwa : ಗುಂಡ್ಮಿ ಶ್ರೀ ಮಾಣಿಚನ್ನಕೇಶವ ದೇವರಿಗೆ ಸ್ವರ್ಣಲೇಪಿತ ರಜತ ಮುಖವಾಡ ಸಮರ್ಪಣೆ

Mani Chennakeshwa : ಗುಂಡ್ಮಿ ಶ್ರೀ ಮಾಣಿಚನ್ನಕೇಶವ ದೇವರಿಗೆ ಸ್ವರ್ಣಲೇಪಿತ ರಜತ ಮುಖವಾಡ ಸಮರ್ಪಣೆ

- Advertisement -

ಕೋಟ : ಪ್ರಸಿದ್ದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಗುಂಡ್ಮಿಯ ಶ್ರೀ ಮಾಣಿ ಚೆನ್ನಕೇಶವ (Mani Chennakeshwa) ದೇವರಿಗೆ ಸ್ವರ್ಣ ಲೇಪಿತ ರಜತ ಮುಖವಾಡವನ್ನು ಸಮರ್ಪಣೆ ಮಾಡಲಾಗಿದೆ. ಬೆಂಗಳೂರಿನ ಉದ್ಯಮಿ ಗುಂಡ್ಮಿಯ ಶಂಕರ ನಾರಾಯಣ ನಾವರ ಅವರ ಪುತ್ರ ರಾಘವೇಂದ್ರ ನಾವಡ ಅವರು ನೀಡಿದ ಸ್ವರ್ಣ ಲೇಪಿತ ರಜತ ಮುಖವಾಡವನ್ನು ದೇವರಿಗೆ ಸಮರ್ಪಿಸಲಾಯಿತು.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗುಂಡ್ಮಿಯಲ್ಲಿರುವ ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನ ಕರಾವಳಿ ಪ್ರಮುಖ ಕಾರಣೀಕ ಸ್ಥಳವೂ ಹೌದು. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಾಣಿ ಚೆನ್ನಕೇಶವ ದೇವರು ಭಕ್ತರ ಸಂಕಷ್ಟಗಳನ್ನು ಪರಿಹಾರ ಮಾಡುತ್ತಿದ್ದಾನೆ. ಇದೀಗ ದೇವಸ್ಥಾನದಲ್ಲಿ ಕಾರ್ತೀಕ ದೀಪೋತ್ಸವ ಅದ್ದೂರಿಯಾಗಿ ನಡೆದಿದ್ದು, ಇದೇ ವೇಳೆಯಲ್ಲಿಯೇ ದೇವರಿಗೆ ಸ್ವರ್ಣ ಲೇಪಿತ ರಜತ ಮುಖವಾಡವನ್ನು ಅರ್ಪಿಸಲಾಗಿದೆ.

ಉದ್ಯಮಿ ಗುಂಡ್ಮಿ ಶಂಕರನಾರಾಯಣ ನಾವಡ, ಗುಂಡ್ಮಿ ಮಾಣಿ ಚೆನ್ನಕೇಶವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಳ್ಳ, ದೇವಸ್ಥಾನದ ಪೂಜಾ ಅರ್ಚಕರಾದ ಮೋಹನ್ ಶಾಸ್ತ್ರಿ, ದೇವಳದ ಕೋಶಾಧಿಕಾರಿ ಶ್ರೀಧರ ಶಾಸ್ತ್ರಿ, ವೇದಮೂರ್ತಿ ಚಂದ್ರಶೇಖರ್ ಉಪಾಧ್ಯ, ದೇವಳದ ಟ್ರಸ್ಟಿ ಮಂಜುಳ ಚಂದ್ರಶೇಖರ್ ಉಪಾಧ್ಯ, ಗುಂಡ್ಮಿ ರಥಬೀದಿ ಗೆಳೆಯರ ಸಂಚಾಲಕ ಸುಧೀಂದ್ರ ಕಾರಂತ್, ಅರ್ಚಕ ಪ್ರತಿನಿಧಿ ಅನಂತರಾಮ ಬಾಯಿರಿ, ದೇವಳದ ತಂತ್ರಿಗಳಾದ ಬಲರಾಮ್ ಸ್ವಾಮೀಯಾಜಿ ಹಾಗೂ ಇಂದು ನಡೆಯುವ ದೀಪೋತ್ಸವದ ಸೇವಾಕರ್ತರಾದ ಬೆಂಗಳೂರು ಜಲಜಾಕ್ಷಿ ಹೊಳ್ಳ ಮತ್ತು ಮಕ್ಕಳು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ತೆಂಗಿನಕಾಯಿ ನೀಡಿದ್ರೆ ಒಲಿತಾನೆ ರಾಮಭಂಟ : ವಾಯುಪುತ್ರನನ್ನು ನಂಬಿದ್ರೆ ಎಲ್ಲಾ ಕಾರ್ಯಸಿದ್ಧಿ

ಇದನ್ನೂ ಓದಿ : ಶಿವ ಕೈಲಾಸದಲ್ಲಿ ನಡೆಯುತ್ತೆ ಇಂದಿಗೂ ವಿಸ್ಮಯ : ಕೈಲಾಸದ ಒಳಗೆ ಏನು ನಡೆಯುತ್ತೆ ಗೊತ್ತಾ?

( Gundmi : A gold plated silver mask dedicated to Mani Chennakeshwa God)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular