ಸೋಮವಾರ, ಏಪ್ರಿಲ್ 28, 2025
HomeSpecial StoryLife StyleDiwali Laxmi Puja 2022 : ದೀಪಾವಳಿಗೆ ಸೂರ್ಯ ಗ್ರಹಣದ ಕರಿನೆರಳು : ಲಕ್ಷ್ಮೀ ಪೂಜೆ...

Diwali Laxmi Puja 2022 : ದೀಪಾವಳಿಗೆ ಸೂರ್ಯ ಗ್ರಹಣದ ಕರಿನೆರಳು : ಲಕ್ಷ್ಮೀ ಪೂಜೆ ಮಾಡುವುದಾದರೂ ಎಂದು

- Advertisement -

ಹಿಂದೂಗಳ ಅತಿ ದೊಡ್ಡ ಅಷ್ಟೇ ಸಂಭ್ರಮ ಸಡಗರದ ಹಬ್ಬ ದೀಪಾವಳಿ (Diwali 2022). ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇದು ಸಂಭ್ರಮದ ಬೆಳಕಿನ ಹಬ್ಬ. ಕತ್ತಲೆ ಹೋಗಲಾಡಿಸಿ ಬೆಳಕು ನೀಡುವ ಹಬ್ಬ ಎಂದೇ ಇದು ಜನಪ್ರಿಯ. ಮೂರು ದಿನಗಳ ಕಾಲ, ಮೊದಲನೇ ದಿನ ನರಕ ಚತುರ್ದಶಿ, ಎರಡನೇ ದಿನ ಲಕ್ಷ್ಮೀ ಪೂಜೆ ಹಾಗೂ ಮೂರನೇ ದಿನ ಗೋಪಾಡ್ಯ ಎಂದು ಆಚರಿಸಲಾಗುತ್ತದೆ. ದೀಪಾವಳಿಯಲ್ಲಿ ಅಮವಾಸ್ಯೆಯಂದು ಮಾಡುವ ಲಕ್ಷ್ಮೀಪೂಜೆ ವಿಶೇಷ ಆಚರಣೆಯಾಗಿದೆ (Diwali Laxmi Puja 2022). ಎಲ್ಲಾ ಮನೆಗಳಲ್ಲೂ, ಅಂಗಡಿಗಳಲ್ಲೂ ಲಕ್ಷ್ಮೀ ಪೂಜೆ ಮಾಡುತ್ತಾರೆ. ಸಿರಿ–ಸಂಪತ್ತಿಗಾಗಿ, ವ್ಯಾಪಾರದ ವೃದ್ಧಿಗಾಗಿ ಲಕ್ಷ್ಮೀ ದೇವಿಯನ್ನು ಅಂದು ಪೂಜಿಸುತ್ತಾರೆ. ಮತ್ತು ಅದು ಶುಭವನ್ನು ತರುತ್ತದೆ ಎಂದೂ ನಂಬಲಾಗುತ್ತದೆ.

ದೀಪಾವಳಿಯ ಲಕ್ಷ್ಮೀ ಪೂಜೆಯನ್ನು ಹಿಂದೂ ಪಂಚಾಗದ ಪ್ರಕಾರ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಪ್ರತಿವರ್ಷ ಇದು ದೀಪಾವಳಿಯ ಎರಡನೇ ದಿನದ ಆಚರಣೆಯಾಗಿತ್ತು. ಆದರೆ ಈ ವರ್ಷ ಸೂರ್ಯ ಗ್ರಹಣವಿರುವುದರಿಂದ ಮತ್ತು ಅಮವಾಸ್ಯೆ ತಿಥಿಯು ಅಕ್ಟೋಬರ್‌ 25, 2022 ರಂದು ಸಂಜೆ 05:27 ಕೊನೆಗೊಳ್ಳುವುದರಿಂದ ಲಕ್ಷ್ಮೀ ಪೂಜೆಯನ್ನು ನರಕ ಚತುರ್ದಶೀಯಂದೇ ಆಚರಿಸಲಾಗುತ್ತಿದೆ.

ಲಕ್ಷ್ಮೀ ಪೂಜೆಯ ಮುಹೂರ್ತ :
ಸಾಮಾನ್ಯವಾಗಿ ಎಲ್ಲಾ ವ್ಯಾಪಾರಸ್ತರು ವ್ಯಾಪಾರದ ವೃದ್ಧಿಗಾಗಿ ಮಾಡುವ ಲಕ್ಷ್ಮೀ ಪೂಜೆಯನ್ನು ಈ ವರ್ಷ ದೀಪಾವಳಿ ಮೊದಲನೇ ದಿನ ನರಕ ಚತುರ್ದಶೀಯಂದೇ ಪೂಜಿಸಲಾಗುತ್ತಿದೆ. ಲಕ್ಷ್ಮೀ ಪೂಜೆಯ ಶುಭ ಮುಹೂರ್ತವು ಪ್ರದೋಷ ಕಾಲದಲ್ಲಿ ನಡೆಯಲಿದೆ. ಅಕ್ಟೋಬರ್‌ 24ರಂದು ಸಂಜೆ 07:26 ರಿಂದ 08:39 ರ ನಡುವಿನ ಕಾಲವು ಶುಭವಾಗಿರುತ್ತದೆ.

ಇದನ್ನೂ ಓದಿ : Diwali 2022 : ಈ ದೀಪಾವಳಿಗೆ ನಿಮ್ಮ ಮನೆಯನ್ನು ಹೀಗೆ ಸಿಂಗರಿಸಿ ; ಇವು ಬಜೆಟ್‌- ಫ್ರೆಂಡ್ಲಿ ಐಡಿಯಾಗಳು

ಲಕ್ಷ್ಮೀ ಪೂಜೆಗೆ ಬೇಕಾದ ಸಾಮಗ್ರಿಗಳು :
ಲಕ್ಷ್ಮೀ ಪೂಜೆಯಲ್ಲಿ ರಂಗೋಲಿಗೆ ಮಹತ್ವದ ಸ್ಥಾನವಿದೆ. ಲಕ್ಷ್ಮೀ ಪೂಜೆಗೆ ಬೇಕಾಗುವ ಸಾಮಗ್ರಿಗಳೆಂದರೆ ಲಕ್ಷ್ಮೀ ದೇವಿಯ ಫೋಟೋ ಅಥವಾ ವಿಗ್ರಹ ಅದರ ಜೊತೆಗೆ ಗಣಪತಿ ಮತ್ತು ಸರಸ್ವತಿಯ ಫೋಟೋ ಸಹ ಇರುವುದು, ಎಲೆ, ಅಡಿಕೆ, ಅರಿಶಿಣ, ಕುಂಕುಮ, ಅಕ್ಷತೆ, ಹೂವು (ಕೆಂಪು ಮತ್ತು ಹಳದಿಯ ಹೂವಿನ ಹಾರ), ಸುಗಂಧ ದ್ರವ್ಯದ ಕಲಶ, ಸಿಹಿ ತಿಂಡಿ ಮತ್ತು ಹಣ (ಬೆಳ್ಳಿಯ ನಾಣ್ಯ ಮತ್ತು ನೋಟು). ಲಕ್ಷ್ಮೀ ಪೂಜೆಯಲ್ಲಿ ಸಕ್ಕರೆ ತುಪ್ಪದ ಬಟ್ಟಲನ್ನು ದೇವಿಗೆ ಸಮರ್ಪಿಸುವುದು ವಿಶೇಷವಾಗಿದೆ.

ಇದನ್ನೂ ಓದಿ : Diwali And Solar Eclipse : ದೀಪಾವಳಿಯ ದಿನವೇ ಖಂಡಗ್ರಾಸ ಸೂರ್ಯಗ್ರಹಣ: ಆಚರಣೆ ಮಾಡುವುದು ಹೇಗೆ?

(Diwali Laxmi Puja 2022 Shubh Muhurat of laxmi puja 2022)

RELATED ARTICLES

Most Popular