T20 World Cup 2022: ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ಸ್ ಆಸೀಸ್‌ಗೆ ಮೊದಲ ಪಂದ್ಯದಲ್ಲೇ ಶಾಕ್ ಕೊಟ್ಟ ಕಿವೀಸ್

ಸಿಡ್ನಿ: Australia vs Newzealnd : ಟಿ20 ವಿಶ್ವಕಪ್ ಟೂರ್ನಿಯ (T20 world cup 2022 ) ಸೂಪರ್-12 ಹಂತದ ಆರಂಭಿಕ ಪಂದ್ಯದಲ್ಲೇ ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ, ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ವಿರುದ್ಧ 89 ರನ್’ಗಳ ಹೀನಾಯ ಸೋಲು ಅನುಭವಿಸಿದೆ (New Zeeland beat Australia). ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವಚಾಂಪಿಯನ್ನರಿಗೆ ಶಾಕ್ ಕೊಟ್ಟ ಕಿವೀಸ್ ಟಿ20 ವಿಶ್ವಕಪ್’ನಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ಕಾಂಗರೂಗಳ ದಾಳಿಯನ್ನು ಚಿಂದಿ ಉಡಾಯಿಸಿ 20 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭರ್ತಿ 200 ರನ್ ಕಲೆ ಹಾಕಿತು. ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಡೆವೋನ್ ಕಾನ್ವೆ ಕೇವಲ 56 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಒಳಗೊಂಡ ಅಜೇಯ 92 ರನ್ ಸೇರಿಸಿ ಕಿವೀಸ್’ನ ಬೃಹತ್ ಮೊತ್ತಕ್ಕೆ ಕಾರಣರಾದರು. ಕಾನ್ವೆ ಮತ್ತು ಫಿನ್ ಅಲೆನ್ ಮೊದಲ ವಿಕೆಟ್’ಗೆ 25 ಎಸೆತಗಳಲ್ಲಿ 56 ರನ್ ಸೇರಿಸಿ ನ್ಯೂಜಿಲೆಂಡ್’ಗೆ ಸ್ಫೋಟಕ ಆರಂಭ ತಂದುಕೊಟ್ಟರು. 16 ಎಸೆತಗಳನ್ನೆದುರಿಸಿ ಫಿನ್ ಅಲೆನ್ 5 ಬೌಂಡರಿ, 3 ಸಿಕ್ಸರ್’ಗಳ ನೆರವಿನಿಂದ 42 ರನ್ ಸಿಡಿಸಿದರು.

ನಂತರ ಗುರಿ ಬೆನ್ನಟ್ಟಿದ ಆಸೀಸ್, ನ್ಯೂಜಿಲೆಂಡ್ ಬೌಲರ್’ಗಳ ಮಾರಕ ದಾಳಿಗೆ ತತ್ತರಿಸಿ 17.1 ಓವರ್’ಗಳಲ್ಲಿ 111 ರನ್’ಗಳಿಗೆ ಆಲೌಟಾಯಿತು. ಗ್ಲೆನ್ ಮ್ಯಾಕ್ಸ್’ವೆಲ್ ಗಳಿಸಿ 28 ರನ್’ಗಳ ಆಸೀಸ್ ಪರ ಟಾಪ್ ಸ್ಕೋರ್. ನ್ಯೂಜಿಲೆಂಡ್ ಪರ ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ವೇಗಿ ಟಿಮ್ ಸೌಥೀ 6 ರನ್ನಿಗೆ 3 ವಿಕೆಟ್ ಪಡೆದರೆ, ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 31 ರನ್ನಿತ್ತು 3 ವಿಕೆಟ್ ಕಬಳಿಸಿದರು. ಎಡಗೈ ವೇಗಿ ಟ್ರೆಂಟ್ ಬೌಲ್ಟ್ 24 ರನ್ನಿಗೆ 2 ವಿಕೆಟ್ ಉರುಳಿಸಿದರು.

ಮೊದಲ ಪಂದ್ಯದಲ್ಲೇ ಸೋತಿರುವ ಆಸ್ಟ್ರೇಲಿಯಾ ಗ್ರೂಪ್-1ರ ತನ್ನ 2ನೇ ಲೀಗ್ ಪಂದ್ಯದಲ್ಲಿ ಮಂಗಳವಾರ (ಅಕ್ಟೋಬರ್ 25) ಶ್ರೀಲಂಕಾ ತಂಡವನ್ನು ಎದುರಿಸಲಿದೆ. ನ್ಯೂಜಿಲೆಂಡ್ ತನ್ನ 2ನೇ ಪಂದ್ಯವನ್ನು ಬುಧವಾರ (ಅಕ್ಟೋಬರ್ 26) ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.

ಇದನ್ನೂ ಓದಿ : MCA Election : ಕ್ರಿಕೆಟ್ ರಾಜಕೀಯದಲ್ಲಿ ಬಿಜೆಪಿ ನಾಯಕನ ವಿರುದ್ಧ ಸೋತ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ

ಇದನ್ನೂ ಓದಿ : IND vs PAK Playing XI : ಪಾಕಿಸ್ತಾನ ವಿರುದ್ಧದ ಮೆಗಾ ಮ್ಯಾಚ್‌ಗೆ ಕೌಂಟ್‌ಡೌನ್, ಹೀಗಿರಲಿದೆ ಭಾರತದ ಪ್ಲೇಯಿಂಗ್ XI

T20 world cup 2022 Australia vs Newzealnd Australia Beat Buy 89 runs AUS vs NZ

Comments are closed.