ಸೋಮವಾರ, ಏಪ್ರಿಲ್ 28, 2025
HomeSpecial StoryDubai Kannada Association : ದುಬೈ ಕನ್ನಡ ಸಂಘ : ಕೆಲಸ ಹುಡುಕುವ ಅನಿವಾಸಿ ಕನ್ನಡಿಗರಿಗೆ...

Dubai Kannada Association : ದುಬೈ ಕನ್ನಡ ಸಂಘ : ಕೆಲಸ ಹುಡುಕುವ ಅನಿವಾಸಿ ಕನ್ನಡಿಗರಿಗೆ ಆತ್ಮ ಸ್ಥೈರ್ಯ ತುಂಬಿದ ಜಾಬ್ ಗೈಡೆನ್ಸ್ ಸೆಷನ್

- Advertisement -

ಅಬುಧಾಬಿ : ತಾಯಿನಾಡಿನಿಂದ ಕೆಲಸ ಅರಸಿ ಸಪ್ತ ಸಾಗರದಾಚೆ ಅರಬರ ಮರಳು ಭೂಮಿ ಮಾಯಾನಗರಿ ದುಬೈ ನಗರಕ್ಕೆ ಬಂದ ಕನ್ನಡಿಗರಿಗೆ ಕೆಲಸ ಲಭಿಸಲು ಅಗತ್ಯವಿರುವ ಅನೇಕ ಮಾಹಿತಿಯ ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರವು ಹೆಮ್ಮೆಯ ದುಬೈ ಕನ್ನಡ ಸಂಘದ (Dubai Kannada Association) ವತಿಯಿಂದ ದಿನಾಂಕ ಜುಲೈ 30ರಂದು ಯೂನಿಕ್ ವರ್ಲ್ಡ್ ಎಜುಕೇಶನ್ ಸೆಂಟರಿನ ಕಾನ್ಫೆರೆನ್ಸ್ ಹಾಲಿನಲ್ಲಿ ನಡೆಯಿತು. ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಿಂದ ಹಲವು ಉದ್ಯೋಗಾರ್ಥಿಗಳು ಆಗಮಿಸಿ ಕಾರ್ಯಾಗಾರದ ಸದುಪಯೋಗಪಡೆದುಕೊಂಡರು.

ಕಾರ್ಯಾಗಾರದಲ್ಲಿ ಇಂಟರ್ವ್ಯೂ ಹೇಗೆ ಎದುರಿಸಬೇಕು, ಯಾವ ಯಾವ ಸ್ಥಳಗಳಲ್ಲಿ ಉದ್ಯೋಗ ಹುಡುಕಬೇಕು, ಮುಂತಾದ ಕೆಲಸ ಸೇರಲು ಬೇಕಾದ ಹಲವು ರೀತಿಯ ಉಪಯುಕ್ತ ಸಲಹೆಗಳು ಮತ್ತು ಮಾಹಿತಿಯನ್ನು ನೀಡಿದರು, ಉದ್ಯೋಗ ಮಾರ್ಗದರ್ಶಿಗಳಾಗಿ ಮತ್ತು ಪ್ರೇರಕ ಭಾಷಣಕಾರರಾಗಿ ಪಾನ್ ವರ್ಲ್ಡ್ ಎಜುಕೇಶನ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಯುತ ರಾಘವೇಂದ್ರ ಬೆಂಗಳೂರು, ಬಿಸ್ನೆಸ್ ಕನ್ಸಲ್ಟೆಂಟ್ ಶ್ರೀಯುತ ಮೆರ್ವಿನ್ ಮಂಗಳೂರು, ಇನ್ಫೋ ಸ್ಕಿಲ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಕೌಂಸೆಲೆರ್ ಶ್ರೀಮತಿ ನಸ್ರಿನ್ ಮಂಗಳೂರು ಹಾಗೂ ಹೆಲ್ತ್ ಕೇರ್ ಎಚ್ ಆರ್ ಶ್ರೀಮತಿ ರಕ್ಷಿತಾ ಮಂಡ್ಯ ಅವರು ಆಗಮಿಸಿದ್ದರು.

ಇದನ್ನೂ ಓದಿ : Israeli army : 3 ಶಂಕಿತ ಪ್ಯಾಲೇಸ್ಟಿನಿಯನ್ ಉಗ್ರರನ್ನು ಹತ್ಯೆಗೈದ ಸೇನೆ

ಯುಎಇ ರಾಷ್ಟ್ರ ಗೀತೆ, ಭಾರತದ ರಾಷ್ಟ್ರ ಗೀತೆ ಮತ್ತು ಕರ್ನಾಟಕ ರಾಜ್ಯ ಗೀತೆ ಹಾಡುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಹೆಮ್ಮೆಯ ಕನ್ನಡ ಸಂಘದ ಉಪಾಧ್ಯಕ್ಷರಾದ ಹಾದಿಯ ಮಂಡ್ಯ ಅವರು ವಹಿಸಿ ನಿರೂಪಣೆಯನ್ನು ಸಂಘದ ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು ಅವರು ನೆರವೇರಿಸಿದರು. ಕಾರ್ಯಕ್ರಮದ ಸಂಯೋಜಕರಾಗಿ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು, ಸಂಘದ ಉಪಸಮಿತಿ ಸದಸ್ಯರಾದ ಚೇತನ್ ಬೆಂಗಳೂರು, ನಜೀರ ಮಂಡ್ಯ, ಹಾದಿ ಕುಂದಾಪುರ, ಪ್ರತಾಪ್ ಮಡಿಕೇರಿ ಮತ್ತು ರಜನಿ ಬೆಂಗಳೂರು ಅವರು ಕಾರ್ಯ ನಿರ್ವಹಿಸಿದರು.

Dubai Kannada Association : Job guidance session for non-resident Kannada job seekers

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular