ಸಾಲಿಗ್ರಾಮದ ಶ್ರೀಗುರು ಕೋಚಿಂಗ್‌ ಅಕಾಡೆಮಿ : ಕರ್ನಾಟಕ ಸಿಇಟಿ ಚಾಪ್ಟರ್‌ ವಾಯ್ಸ್‌ ಸಲ್ಯೂಷನ್ಸ್‌ ಪುಸ್ತಕ ಬಿಡುಗಡೆ

ಕೋಟ : CET Chapterwise Solution : ಸಾಲಿಗ್ರಾಮದ ಶ್ರೀಗುರು ಕೋಚಿಂಗ್‌ ಅಕಾಡೆಮಿ ಸಿಇಟಿ, ನೀಟ್‌ ಸೇರಿದಂತೆ ಹಲವು ವೃತ್ತಿಪರ ಕೋರ್ಸ್‌ಗಳಿಗೆ ತರಬೇತಿಯನ್ನು ನೀಡುವ ಮೂಲಕ ಮನೆ ಮಾತಾಗಿದೆ. ಉಡುಪಿ ಜಿಲ್ಲೆಯ ಪ್ರತಿಷ್ಠಿತ ಕೋಚಿಂಗ್‌ ಅಕಾಡೆಮಿ ಎನಿಸಿಕೊಂಡಿರುವ ಶ್ರೀಗುರು ಕೋಚಿಂಗ್‌ ಅಕಾಡೆಮಿ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸಿಇಟಿ ಚಾಪ್ಟರ್‌ ವಾಯ್ಸ್‌ ಸಲ್ಯೂಷನ್ಸ್‌ ಪುಸ್ತಕವನ್ನು ಸಿದ್ದಪಡಿಸಿದೆ.

ವಿದ್ಯಾರ್ಥಿಗಳ ತರಬೇತಿಗೆ ಪೂರಕವಾಗಿರುವ ಈ ವಿಶಿಷ್ಟ ಪುಸ್ತಕವನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮಾಜಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ ಅವರು ಅನಾವರಣ ಗೊಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಗುರು ಕೋಚಿಂಗ್‌ ಅಕಾಡೆಮಿಯ ಪ್ರಾಂಶುಪಾಲರಾದ ಹರೀಶ್‌ ವಹಿಸಿದ್ದರು. ಅಕಾಡೆಮಿಯ ಗಣಿತಶಾಸ್ತ್ರ ಉಪನ್ಯಾಸಕ ಸುಜಯ್‌ ಕೋಟೆಗಾರ್‌, ರಸಾಯನ ಶಾಸ್ತ್ರ ಉಪನ್ಯಾಸಕ ಸಂದೀಪ್‌ ಗಾಣಿಗ, ಭೌತಶಾಸ್ತ್ರ ಉಪನ್ಯಾಸಕ ರವಿಕುಮಾರ್‌ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ಪರ್ಧಾತ್ಮಕ ಯುಗದಲ್ಲಿ ಶ್ರೀಗುರು ಕೋಚಿಂಗ್‌ ಸೆಂಟರ್‌ ಹಲವು ವರ್ಷಗಳಿಂದಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವ ಮೂಲಕ ವೃತ್ತಿಪರ ಕೋರ್ಸುಗಳಿಗೆ ಪ್ರವೇಶಾವಕಾಶವನ್ನು ನೀಡುವ ಕಾರ್ಯವನ್ನು ಮಾಡುತ್ತಿದೆ. ಸಾಲಿಗ್ರಾಮದಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ಸಾಸ್ತಾನದಲ್ಲಿ ಸಂಸ್ಥೆಯು ಶಾಖೆಯನ್ನು ಹೊಂದಿದೆ. 8ನೇ ತರಗತಿಯಿಂದ ಹಿಡಿದು 12 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ನೀಟ್‌, ಸಿಇಟಿ ಸೇರಿದಂತೆ ಹಲವು ಕೋರ್ಸುಗಳಿಗೆ ತರಬೇತಿ ನೀಡುತ್ತಿದ್ದು, ಉತ್ತಮ ಫಲಿತಾಂಶ ನೀಡಿದ ಉಡುಪಿ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ : Karnataka Education Department : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ ಶಿಕ್ಷಣ ಇಲಾಖೆ

ಇದನ್ನೂ ಓದಿ : KCET Counselling 2023 : ಕೆಸಿಇಟಿ ಕೌನ್ಸೆಲಿಂಗ್ 2023 : ಆಯ್ಕೆಯ ಪ್ರವೇಶ, ಕಾಲೇಜು ಹಂಚಿಕೆ ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

Comments are closed.