ಭಾನುವಾರ, ಏಪ್ರಿಲ್ 27, 2025
HomeSpecial StoryGod Crocodile : ದೇವರನ್ನು ಕಾಯುತ್ತೆ ಮೊಸಳೆ : ಇದು ತಿರುವನಂತರಪುರದ ಅನಂತ ಪದ್ಮನಾಭ ಸ್ವಾಮಿಯ...

God Crocodile : ದೇವರನ್ನು ಕಾಯುತ್ತೆ ಮೊಸಳೆ : ಇದು ತಿರುವನಂತರಪುರದ ಅನಂತ ಪದ್ಮನಾಭ ಸ್ವಾಮಿಯ ಮೂಲಸ್ಥಾನ

- Advertisement -

ಪ್ರಾಣಿಗಳಲ್ಲಿ ಎರಡು ವಿಧ ಇರುತ್ತೆ ಒಂದು ಮಾಂಸ ಹಾರಿ ಹಾಗು ಸಸ್ಯಹಾರಿಗಳು.. ಮೊಸಳೆ, ಸಿಂಹ . ಹುಲಿ ಮಾಂಸಹಾರಿ ವರ್ಗಕ್ಕೆ ಸೇರಿದ್ರೆ, ಮೊಲ, ಹಸು ಎಲ್ಲ ಸಸ್ಯಾಹಾರಿ ವರ್ಗಕ್ಕೆ ಸೇರುತ್ತೆ. ಹೀಗೆ ಅಂತ ನೀವು ಸ್ಕೂಲು ಕಾಲೇಜುಗಳಲ್ಲಿ ಓದಿರುತ್ತಿರಿ. ಪ್ರಕೃತಿ ಕೂಡಾ ತನ್ನ ಸಮತೋಲನವನ್ನು ಕಾಯ್ದುಕೊಳ್ಳೋಕೆ ಇಂತದೊಂದು ರಚನೆ ಮಾಡಿದೆ. ಆದ್ರೆ ನೀವು ಈ ದೇವಾಲಯಕ್ಕೇ ಭೇಟಿ ನೀಡಿದ್ರೆ ನಿಮಗೆ ಈ ವಾದ ತಪ್ಪು ಅನ್ನಿಸಬಹುದು. ಯಾಕಂದ್ರೆ ಮಾಂಸಾಹಾರಿ ಪ್ರಾಣಿಯಾದ ಮೊಸಳೆಯೊಂದು (God Crocodile) ಇಲ್ಲಿ ಸಸ್ಯಾಹಾರಿಯಾಗಿ ದೇವರನ್ನು ಕಾಯುತ್ತೆ . ಹೌದು ಇದು ಮಹಾವಿಷ್ಣುವಿನ ಪುರಾತನ ದೇವಾಲಯ. ಇದು ಹಲವು ಅಚ್ಚರಿಗಳ ತಾಣ. ಇಲ್ಲಿ ಪ್ರತಿಯೊಂದು ವಸ್ತುವೂ ಪೌರಾಣಿಕ ಕಥೆಯನ್ನು ಹೇಳುತ್ತೆ. ಈ ದೇವಾಲಯ ಭಾರತ ಶ್ರೀಮಂತ ದೇವಾಲಯವೆನಿಸಿಕೊಂಡಿರೋ ಕೇರಳದ ಅನಂತ ಪದ್ಮನಾಭ ದೇವಾಲಯದ (Anantha Padmanabha Swamy Temple) ಮೂಲ ಸ್ಥಾನ.

ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಇರೋ ದೇವಸ್ಥಾನ ಕೊಳದ ಮಧ್ಯದಲ್ಲಿ ಸ್ಥಾಪಿತವಾಗಿದೆ. ಈ ಗರ್ಭಗುಡಿಯ ನಾಲ್ಕೂ ಬದಿಯಲ್ಲಿ ನೀರಿದ್ದು, ಸಣ್ಣ ಸೇತುವೆ ಮೂಲಕ ಇಲ್ಲಿಗೆ ಹೋಗಬಹುದು ಇನ್ನು ಈ ದೇವಾಲಯ ಉಳಿದ ಅನಂತ ಪಧ್ಮನಾಭ ದೇವಾಲಯಗಳಂತಲ್ಲ. ಎಲ್ಲಾ ದೇವಾಲಯಗಳಲ್ಲಿ ಅನಂತ ಪಧ್ಮನಾಭ ಶೇಷ ಶಯನನಾದ್ರೆ, ಇಲ್ಲಿ ಕೂತ ಭಂಗಿಯಲ್ಲಿ ನೆಲೆ ನಿಂತಿದ್ದಾನೆ. ೫ ಹೆಡೆಯ ಸರ್ಪದ ಮೇಲೆ ಕುಳಿತಿರುವ ಈ ಪಧ್ಮನಾಭ ಸ್ವಾಮಿಯ ಸುತ್ತಲೂ ಶ್ರೀ ದೇವಿ ಭೂದೇವಿ ಗರುಡ, ಹನುಮಂತ ಹಾಗೂ ನಾಗಯಕ್ಷಿಗಳ ಮೂರ್ತಿಗಳನ್ನೂ ನಾವು ಕಾಣಬಹುದು.

ಇನ್ನು ದೇವಾಲಯದ ಮೂರ್ತಿಗಳಲ್ಲೂ ಒಂದು ವಿಶೇಷವಿದೆ. ಇದು ಮಣ್ಣು, ಕಲ್ಲು, ಮರ , ಅಥವಾ ಯಾವುದೇ ಲೋಹದಿಂದ ತಯಾರಾದ ಮೂರ್ತಿಗಳಲ್ಲ . ಬದಲಾಗಿ 64 ಬಗೆಯ ಪ್ರಾಣಿ ಜನ್ಯ, ಸಸ್ಯ ಜನ್ಯ ಕಡುಶರ್ಕರಗಳಿಂದ ಇದು ತಯಾರಿಸಲಾಗಿದೆಯಂತೆ. ಇಂದಿಗೂ ಹಲವಾರು ಬಗೆಯ ರೋಗಗಳನ್ನು ನಾಶ ಮಾಡುವ ಶಕ್ತಿ ಈ ಮೂರ್ತಿಗೆ ಇದೆ ಅನ್ನೋದು ಭಕ್ತರ ನಂಬಿಕೆ. ಈ ಮೂರ್ತಿಗಳು ಪ್ರಕೃತಿ ಜನ್ಯವಾದ್ರಿಂದ ಇಲ್ಲಿ ದೇವರಿಗೆ ಅಭಿಷೇಕ ಮಾಡುವ ಪದ್ದತಿ ಇಲ್ಲ ಅಂತಾರೆ ಭಕ್ತರು

ಇನ್ನು ಈ ದೇವಾಲಯ ಕೇರಳದ ಪ್ರಸಿದ್ಧ ಅನಂತ ಪಧ್ಮನಾಭ ಸ್ವಾಮಿ ದೇವಾಲಯದ ಮೂಲ ಸ್ಥಾನ ಅನ್ನುತ್ತೆ ಇಲ್ಲಿನ ಸ್ಥಳ ಪುರಾಣ. ಇದಕ್ಕೆ ಒಂದು ಪೌರಾಣಿಕ ಕಥೆ ಇದೆ. ಸಾವಿರಾರು ವರ್ಷದ ಹಿಂದೆ ಬಿಲ್ವ ಮಂಗಲ ಎಂಬ ಋಷಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಅವರು ಮಹಾವಿಷ್ಣುವಿನ ಪರಮ ಭಕ್ತರಾಗಿದ್ರು. ಒಂದು ಬಾರಿ ಮಾಹಾವಿಷ್ಣುವು ಕೃಷ್ಣನ ರೂಪದಲ್ಲಿ ಬಂದು ಋಷಿಯನ್ನು ಪರೀಕ್ಷೆ ಮಾಡೋಕೆ ನಿಲ್ಲುತ್ತಾರೆ. ಅವರು ಬಾಲಕ ರೂಪ ಧರಿಸಿ ಋಷಿಯ ಬಳಿ ಬರುತ್ತಾರೆ. ಋಷಿ ಆ ಬಾಲಕನಿಗೆ ಆಶ್ರಯ ನೀಡುತ್ತಾರೆ. ಆಗ ಆ ಬಾಲಕ ತನಗೆ ಅವಮಾನವಾದಾಗ ಇಲ್ಲಿಂದ ತೆರಳೂದಾಗಿ ಹೇಳುತ್ತಾನೆ.

ದಿನದಿಂದ ದಿನಕ್ಕೆ ಬಾಲಕನ ತುಂಟಾಟ ಜಾಸ್ತಿ ಆಗುತ್ತೆ. ಆಗ ಬಿಲ್ವ ಮಂಗಲ ಋಷಿ ಆತನನ್ನು ತಮ್ಮ ಗುಹೆಯಿಂದ ಹೊರ ದಬ್ಬುತ್ತಾರೆ. ಆಗ ಬಾಲಕ ಹತ್ತಿರದ ಸುರಂಗದ ಬಳಿ ಮಾಯವಾಗುತ್ತಾನೆ. ಇದನ್ನು ನೋಡಿದ ಋಷಿಗಳು ಬಾಲಕನ ನಿಜವನ್ನು ಅರಿತು ಆ ಸುರಂಗ ಮಾರ್ಗದಲ್ಲಿ ಮುನ್ನಡೆಯುತ್ತಾರೆ. ಅದು ಅನಂತ ಕಾಡು ಎಂಬಲ್ಲಿ ಬಂದು ಸೇರುತ್ತೆ. ಅಲ್ಲಿ ಮತ್ತೆ ಪ್ರತ್ಯಕ್ಷನಾಗುವ ಕೃಷ್ಣ ಮರದ ಪೊಟರೆಯೊಳಗೆ ಸೇರಿಕೊಳ್ಳುತ್ತಾನೆ. ಪೊಟರೆಯೊಳಗೆ ಋಷಿ ಇಣುಕಿ ನೋಡಿದಾಗ ಅಲ್ಲಿ ಶೇಷಶಯನನಾದ ಅನಂತ ಪಧ್ಮನಾಭ ಸ್ವಾಮಿ ಮೂರ್ತಿ ಸಿಗುತ್ತೆ. ಅದನ್ನು ಅಲ್ಲೇ ಪ್ರತಿಷ್ಠಾಪನೆ ಮಾಡುತ್ತಾರೆ. ಅದೇ ಇಂದು ತಿರುವನಂತಪುರದ ಅನಂತ ಪಧ್ಮನಾಭ ಸ್ವಾಮಿ ದೇವಾಲಯವಾಗಿದೆ ಅನ್ನೋ ನಂಬಿಕೆ ಇಲ್ಲಿದೆ.

ಈ ನಂಬಿಕೆಯಂತೆ ಇಲ್ಲಿಯ ದೇವಾಲಯ ಪಕ್ಕದ ಸುರಂಗವು ತಿರುವನಂತಪುರದ ಅನಂತ ಪಧ್ಮನಾಭ ಸ್ವಾಮಿ ದೇವಾಲಯಕ್ಕೆ ಹೋಗುತ್ತೆ ಅಂತಾರೆ ಇಲ್ಲಿನ ದೇವಾಲಯದ ಮಂದಿ . ಇದಕ್ಕೆ ಸಾಕ್ಷಿಯೆಂಬಂತೆ ತಿರುವನಂತಪುರದ ಅನಂತ ಪಧ್ಮನಾಭ ಸ್ವಾಮಿ ದೇವಾಲಯದ ಬಳಿ ತುಳು ಲಿಪಿಯ ಶಾಸನ ಲಭ್ಯವಾಗಿರೋದು.

ದೇವರನ್ನು ಆರಾಧಿಸುತ್ತೆ ಬಬಿಯಾ ಮೊಸಳೆ (God Crocodile)

ಈ ದೇವಾಲದ ಮತ್ತೊಂದು ಅಚ್ಚರಿ ಅಂದ್ರೆ ಇಲ್ಲಿರೋ ದೇವರ ಮೊಸಳೆ. ಸಾಮಾನ್ಯವಾಗಿ ಮೊಸಳೆಗಳು ಮಾಂಸಹಾರಿಗಳು. ಆದ್ರೆ ಈ ಮೊಸಳೆ ಯಾವತ್ತು ಯಾವುದೇ ಪ್ರಾಣಿಯನ್ನು ಬೇಟೆಯಾಡಿಲ್ಲ. ದೇವಾಲಯದ ಕೊಳದಲ್ಲೇ ವಾಸ ಮಾಡುವ ಈ ಮೊಸಳೆ ಇವತ್ತಿನವರೆಗೆ ಕೊಳದ ಒಂದು ಮೀನನ್ನೂ ತಿಂದಿಲ್ಲವಂತೆ. ಇದು ತಿನ್ನೋದು ಕೇವಲ ದೇವರ ಪ್ರಸಾದವನ್ನು ಮಾತ್ರ. ಈ ಮೊಸಳೆಗೆ ಬಬಿಯಾ ಅಂತ ಹೆಸರಿಡಲಾಗಿದೆ. ಈ ಮೊಸಳೆಗೆ ದಿನಕ್ಕೆ ಎರಡು ಬಾರಿ ಪ್ರಸಾದ ನೀಡಲಾಗುತ್ತೆ. ದೇವರ ಪೂಜೆಯ ನಂತ್ರ ಅರ್ಚಕರು “ಬಬಿಯಾ” ಎಂದು ಮೊಸಳೆಯನ್ನು ಕರೆಯುತ್ತಾರೆ. ಕೂಡಲೇ ಕೊಳದಿಂದ ದಡದ ಬಳಿ ಬರುವ ಮೊಸಳೆ ಅರ್ಚಕರು ನೀಡುವ ಪ್ರಸಾದವನ್ನು ಸ್ವೀಕರಿಸುತ್ತೆ. ಇಲ್ಲಿ ಬರುವ ಭಕ್ತರು ಮೊಸಳೆ ಇರುವ ಕೊಳದಲ್ಲೇ ಸ್ನಾನ ಮಾಡುತ್ತಾರೆ. ಆದ್ರೆ ಇವತ್ತಿನ ವರೆಗೂ ಬಬಿಯಾ ಯಾರಿಗೂ ಹಾನಿ ಮಾಡಿಲ್ಲ ಅಂತಾರೆ ಭಕ್ತರು

ಈ ಮೊಸಳೆಯ ಬಗ್ಗೆಯೂ ಇಲ್ಲಿ ಒಂದು ಕಥೆ ಇದೆ. ಸ್ವಾತಂತ್ರಪೂರ್ವದಲ್ಲಿ ಬ್ರಿಟೀಷ್ ಅಧಿಕಾರಿಯೊಬ್ಬರು ಇಲ್ಲಿದ್ದ ಮೊಸಳೆಯನ್ನು ಕೊಂದಿದ್ರಂತೆ. ನಂತರ ಕೆಲವು ನಿಮಿಷದಲ್ಲಿ ಅವರು ಹಾವೊಂದು ಕಚ್ಚಿ ಮೃತ ಪಟ್ಟಿದ್ರು. ಇದಾದ ಕೆಲವೇ ದಿನಗಳಲ್ಲಿ ಈ ಕೊಳದಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಂಡಿತ್ತಂತೆ. ಹೀಗೆ ಹಲವಾರು ವರ್ಷಗಳಿಂದ ಇಲ್ಲಿಒಂದೇ ಒಂದು ಮೊಸಳೆ ಕಂಡು ಬರೋದು. ಒಂದು ಮೊಸಳೆ ಸಾವನ್ನಪ್ಪಿದ್ರೆ ಅಲ್ಲಿಗೆ ಇನ್ನೊಂದು ಮೊಸಳೆ ಬರುತ್ತೆ. ಆದ್ರೆ ಒಂದು ಮೊಸಳೆ ಮಾತ್ರ ಇಲ್ಲಿ ಇರೋದು. ಈ ಮೊಸಳೆ ಎಲ್ಲಿಂದ ಬಂತು ಅನ್ನೋದೆ ನಿಗೂಢ ಅಂತಾರೆ ಭಕ್ತರು

ಇದನ್ನೂ ಓದಿ : Tirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

ಇಂತಹ ಅಚ್ಚರಿಯ ಅನಂತ ಪಧ್ಮನಾಭ ಸ್ವಾಮಿಯ ದೇವಾಲಯ (Anantha Padmanabha Swamy Temple) ಇರೋದು ಕೇರಳ ಕಾಸರಗೋಡು ಜಿಲ್ಲೆಯ ಕುಂಬ್ಲೆ ತಾಲೂಕಿನ ಅನಂತಪುರದಲ್ಲಿ. ಬೆಂಗಳೂರಿನಿಂದ 363 ಕಿಲೋ ಮೀ. ಹಾಗೂ ಮಂಗಳೂರಿನಿಂದ 40 ಕಿಲೋ ಮೀ ದೂರದಲ್ಲಿದೆ ಈ ದೇವಾಲಯ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುವ ದಾರಿಯಲ್ಲಿ ಕುಂಬ್ಲೆ ಸಿಟಿ ಸಿಗುತ್ತೆ. ಅಲ್ಲಿಂದ ಅನಂತಪುರ ದೇವಾಲಯಕ್ಕೆ ಸಾರಿಗೆ ವ್ಯವಸ್ಥೆಇದೆ. ಇದರಲ್ಲಿ ನೀವು ದೇವಾಲಯಕ್ಕೆ ತೆರಳಬಹುದು

ಇದನ್ನೂ ಓದಿ : ನಂದಿ (ಬಸವಣ್ಣ)ಗೂ ಮಾಸ್ಕ್‌ : ಕೊರೊನಾ ಭಯವಲ್ಲ, ಇದು ಪ್ರದೋಷ ಪೂಜೆಯ ಸಂಪ್ರದಾಯ

ಇದನ್ನೂ ಓದಿ : ನದಿಯಲ್ಲಿ ನೆಲೆಯೂರಿದ ದುರ್ಗಾಪರಮೇಶ್ವರಿ : ಆದಿ ಕಟೀಲು ದೇವಸ್ಥಾನದ ನಿಮಗೆ ಗೊತ್ತಾ …!

God Crocodile Origin Anantha Padmanabha Swamy Temple

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular