Vastu Tips:ಸಾಲದ ಸುಳಿಯಲ್ಲಿ ಸಿಲುಕಿದ್ದೀರೇ..?ಹಾಗಿದ್ದಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿ

Vastu Tips: ಕೆಲವೊಮ್ಮೆ ಸಮಯ – ಸಂದರ್ಭಗಳು ಯಾವ ರೀತಿ ಎದುರಾಗುತ್ತದೆಯೆಂದರೇ ಸಾಲ ಪಡೆದುಕೊಳ್ಳುವುದು ತೀರಾ ಅನಿವಾರ್ಯವಾಗಿಬಿಡುತ್ತದೆ. ಸಾಲ ತೆಗೆದುಕೊಳ್ಳುವುದು ಸುಲಭ. ಆದರೆ ಅದನ್ನು ತೀರಿಸುವುದು ಇದೆಯಲ್ಲ.ಅದು ಎಲ್ಲರಿಂದಲೂ ಸಾಧ್ಯವಾಗುವ ಕೆಲಸವಲ್ಲ. ಸಾಕಷ್ಟು ತೊಂದರೆಗಳಿಂದಾಗಿ ಅನೇಕರಿಗೆ ಸಾಲವನ್ನು ತೀರಿಸಲು ಆಗೋದೇ ಇಲ್ಲ. ಎಷ್ಟೇ ಕಷ್ಟ ಪಟ್ಟು ಪ್ರಯತ್ನಿಸಿದರೂ ಸಹ ಸಾಲ ಮಾತ್ರ ಹೆಮ್ಮರದಂತೆ ಬೆಳೆಯುತ್ತಲೇ ಹೋಗುತ್ತದೆ ಆದರೆ ಇಂತಹ ಆರ್ಥಿಕ ಸಂಕಷ್ಟಗಳಿಗೆ ವಾಸ್ತು ಶಾಸ್ತ್ರವು ನಿಮಗೆ ಪರಿಹಾರ ನೀಡಬಲ್ಲುದು.

ವಾಸ್ತು ಶಾಸ್ತ್ರದ ಪ್ರಕಾರ ಸಾಲವನ್ನು ತೀರಿಸಲು ಎಲ್ಲಾ ದಿನಗಳೂ ಸೂಕ್ತವಲ್ಲ. ನೀವು ಸಾಲದ ಬಡ್ಡಿಯನ್ನು ಕಟ್ಟುತ್ತಿದ್ದರೆ ಯಾವಾಗಲೂ ಮಂಗಳವಾರದಂದೇ ಮರುಪಾವತಿ ಮಾಡಲು ಪ್ರಯತ್ನಿಸಿ. ಯಾರಲ್ಲಾದರೂ ಸಾಲದ ರೂಪದಲ್ಲಿ ಪಡೆದ ಹಣವನ್ನು ಮಂಗಳವಾರ ತೀರಿಸಲು ಆರಂಭಿಸದ್ದಲ್ಲಿ ನಿಮ್ಮ ಸಾಲ ಬೇಗನೇ ತೀರಲಿದೆ.

ಮನೆಯ ವಾಸ್ತು ಕೂಡ ನೀವು ಸಾಲವನ್ನು ತೀರಿಸಲು ಶಕ್ತರಿದ್ದಿರೋ ಇಲ್ಲವೋ ಎಂಬುದನ್ನು ಸೂಚಿಸುತ್ತದೆ. ಯಾರ ಮನೆಯಲ್ಲಿ ಸ್ನಾನ ಗೃಹ ಹಾಗೂ ಶೌಚಾಲಯಗಳು ದಕ್ಷಿಣ ದಿಕ್ಕಿನಲ್ಲಿ ಇರುತ್ತದೆಯೋ ಅಂತಹ ಮನೆಯವರಿಗೆ ಸಾಲವನ್ನು ತೀರಿಸಲು ಆಗುವುದಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಮನೆಯ ದಕ್ಷಿಣ ದಿಕ್ಕಿನಲ್ಲಿ ಸ್ನಾನ ಗೃಹ ಹಾಗೂ ಶೌಚಾಲಯಗಳನ್ನು ನಿರ್ಮಿಸಲು ಹೋಗಲೇಬೇಡಿ.

ಇವೆಲ್ಲವನ್ನು ಹೊರತುಪಡಿಸಿ ಮನೆಯಿರಲಿ ಅಥವಾ ಅಂಗಡಿಯೇ ಇರಲಿ ನೀವು ಈಶಾನ್ಯ ದಿಕ್ಕಿನಲ್ಲಿ ಗಾಜುಗಳನ್ನು ಇರಿಸಿದಿರಿ ಎಂದರೆ ಆದಷ್ಟು ಬೇಗ ಸಾಲದ ಸುಳಿಯಿಂದ ಬಚಾವಾಗುತ್ತೀರಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದರೆ ಈ ಗಾಜುಗಳು ಕೆಂಪು , ಸಿಂಧೂರ ಹಾಗೂ ಕಡುಕೆಂಪು ಬಣ್ಣದಲ್ಲಿ ಮಾತ್ರ ಇರಬಾರದು ಎಂಬುದನ್ನು ನೆನಪಿಟ್ಟುಕೊಳ್ಳಿ. ಇವುಗಳನ್ನು ಹೊರತುಪಡಿಸಿ ಬೇರೆ ಬಣ್ಣದ ಗಾಜುಗಳು ಈಶಾನ್ಯ ದಿಕ್ಕಿನಲ್ಲಿ ಇರಿಸಿದಲ್ಲಿ ನೀವು ಖಂಡಿತವಾಗಿಯೂ ಸಾಲದಿಂದ ಬಚಾವಾಗುತ್ತೀರಿ. ವಾಸ್ತು ಶಾಸ್ತ್ರದ ಪ್ರಕಾರ ಯಾರು ಕೆಂಪು ಬಣ್ಣದ ವಾಲೆಟ್​ಗಳನ್ನು ಬಳಕೆ ಮಾಡುತ್ತಾರೋ ಅವರಿಗೆ ಹಣದ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ .

ಇದನ್ನು ಓದಿ : Prashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್ ಹತ್ಯೆ

ಇದನ್ನೂ ಓದಿ : ಶಾಸಕರೊಬ್ಬರ ಮರ್ಸಿಡಿಸ್ ಕಾರಿನಲ್ಲಿ ಬಾಲಕಿಯ ಮೇಲೆ ಬಾಲಕರಿಂದ ಸಾಮೂಹಿಕ ಅತ್ಯಾಚಾರ

Vastu Tips: Under the burden of debt? Adopt THESE remedies to improve financial condition

Comments are closed.