ಭಾನುವಾರ, ಏಪ್ರಿಲ್ 27, 2025
HomeNationalಸಪ್ತಪದಿ ತುಳಿಯದಿದ್ದರೆ ಹಿಂದೂ ವಿವಾಹ ಮಾನ್ಯವಲ್ಲ: ಹೈಕೋರ್ಟ್ ಆದೇಶ

ಸಪ್ತಪದಿ ತುಳಿಯದಿದ್ದರೆ ಹಿಂದೂ ವಿವಾಹ ಮಾನ್ಯವಲ್ಲ: ಹೈಕೋರ್ಟ್ ಆದೇಶ

- Advertisement -

ನವದೆಹಲಿ : ಹಿಂದೂ ವಿವಾಹ (Hindu Marriage ) ಪದ್ದತಿಯಲ್ಲಿ ಸಪ್ತಪದಿ (Saptapadi ) ಮಹತ್ವವನ್ನು ಪಡೆದುಕೊಂಡಿದೆ. ಪತ್ನಿಯ ಕೈ ಹಿಡಿದು ಏಳು ಹೆಜ್ಜೆಗಳನ್ನು ಶಾಸ್ತ್ರೋಕ್ತವಾಗಿ ಹಾಕುವ ಮೂಲಕ ಮದುವೆ ಎಂಬ ಬಂಧಕ್ಕೆ ಹೆಣ್ಣು ಮತ್ತು ಗಂಡು ಒಳಪಡುತ್ತಾರೆ. ಇದೀಗ ಸಪ್ತಪದಿಗೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ (Allahabad High Court Orders) ಮಹತ್ವದ ಆದೇಶ ಹೊರಡಿಸಿದೆ.

ವಿಚ್ಛೇದನ ಪಡೆದ ಪತ್ನಿ ತನಗೆ ವಿಚ್ಛೇದನ ನೀಡದೆ ಎರಡನೇ ಮದುವೆ ಮಾಡಿಕೊಂಡಿದ್ದಾಳೆ ಎಂದು ವ್ಯಕ್ತಿಯೋರ್ವ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಅಲಹಬಾದ್‌ ಹೈಕೋರ್ಟ್‌ ಸಪ್ತಪದಿ ವಿಚಾರದ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸಿದೆ.

Hindu Marriage Not Valid Without Saptapadi Allahabad High Court Orders
Image credit to Original Source

ಅಲ್ಲದೇ ಮದುವೆಯ ಸಂದರ್ಭದಲ್ಲಿ ಸಪ್ತಪದಿ ತುಳಿಯದೇ ಇತರ, ಶಾಸ್ತ್ರೋಕ್ತ ವಿಧಿ ವಿಧಾನಗಳನ್ನು ಪೂರೈಸದ ಹಿಂದೂ ವಿವಾಹ ವಿವಾಹಕ್ಕೆ ಮಾನ್ಯವಲ್ಲ ಎಂದು ಅಲಹಾಬಾದ್‌ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೇ ಪತ್ನಿ ವಿರುದ್ದ ದಾಖಲಿಸಿದ್ದ ಪ್ರಕರಣವನ್ನೇ ಹೈಕೋರ್ಟ್‌ ರದ್ದುಗೊಳಿಸಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಹಾಗಾದ್ರೆ ಗುಡ್‌ನ್ಯೂಸ್‌, ಸರಕಾರದಿಂದ ಹೊಸ ರೂಲ್ಸ್‌

ಅಷ್ಟಕ್ಕೂ ಏನಿದು ಪ್ರಕರಣ ?

ಸ್ಮೃತಿ ಸಿಂಗ್‌ ಅವರು ಎರಡನೇ ಮದುವೆ ಆಗಿದ್ದಾರೆ ಎಂದು ಆಕೆಯ ಮೊದಲ ಪತಿ ಸತ್ಯಂ ಪೊಲೀಸರಿಗೆ ದೂರು ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದ್ರೀಗ ಸತ್ಯಂ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ ಸ್ಮೃತಿ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ.

ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು ಸಪ್ತಪದಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ್ದಾರೆ. ಮದುವೆ ಅನ್ನುವ ಬಂಧದಲ್ಲಿ ʼಸಾಂಪ್ರದಾಯಿಕ’ ಎಂಬ ಪದವು ವಿಧಿ ಮತ್ತು ಸರಿಯಾದ ರೀತಿಯಲ್ಲಿ ಮದುವೆ ಆಗಬೇಕು ಅನ್ನುವುದನ್ನು ಸೂಚಿಸುತ್ತದೆ. ಆದರೆ ಸಾಂಪ್ರದಾಯಿಕವಾಗಿ ಆಗದ ಮದುವೆಯನ್ನು ಎನಿಸಿಕೊಳ್ಳುವುದಿಲ್ಲ.

ಕಾನೂನಿನ ದೃಷ್ಟಿಯಲ್ಲಿ ವಿವಾಹವು ಸಾಂಪ್ರದಾಯಿಕವಾಗಿ ಆಗದೇ ಇದ್ದರೆ ಅಂತಹ ವಿವಾಹವನ್ನು ಹಿಂದೂ ಕಾನೂನಿನ ಅಡಿಯಲ್ಲಿ ವಿವಾಹ ಎಂದು ಕರೆಯಿಸಿಕೊಳ್ಳುವುದಿಲ್ಲ. ಅದ್ರಲ್ಲೂ ಸಪ್ತಪದಿ ಆಚರಣೆಯು ವಿವಾಹದಲ್ಲಿ ಮಹತ್ವವಾದುದು. ಸತ್ಯಂ ಪ್ರಕರಣದಲ್ಲಿ ಸಾಕ್ಷಾಧಾರಗಳ ಕೊರತೆಯಿದ್ದು, ನ್ಯಾಯಾಲಯ ಈ ಪ್ರಕರಣವನ್ನು ರದ್ದುಗೊಳಿಸಿದೆ.

Hindu Marriage Not Valid Without Saptapadi Allahabad High Court Orders
Image credit to Original Source

ನ್ಯಾಯಾಲಯವು ಹಿಂದೂ ವಿವಾಹ ಕಾಯಿದೆ, 1955 ರ ಸೆಕ್ಷನ್ 7 ರ ಮೇಲೆ ಅವಲಂಬಿತವಾಗಿದೆ. ಹಿಂದೂ ವಿವಾಹವನ್ನು ಸಾಂಪ್ರದಾಯಿಕ ವಿಧಿಗಳು ಮತ್ತು ಆಚರಣೆಗಳ ಪ್ರಕಾರ ನಡೆಸಬಹುದು ಎಂದು ಕಾನೂನು ಹೇಳಿದೆ. ಅಲ್ಲದೇ ವಿವಾಹದ ವಿಧಿ ವಿಧಾನಗಳು ಮತ್ತು ಸಮಾರಂಭದಲ್ಲಿ ಸಪ್ತಪದಿ ( ವಧು ಮತ್ತು ವರರು ಅಗ್ನಿಯ ಸುತ್ತಲೂ ಏಳು ಹೆಜ್ಜೆಗಳನ್ನು ಜಂಟಿಯಾಗಿ ಇಡುವುದು). ಈ ಏಳನೇ ಹೆಜ್ಜೆ ಹಾಕಿದಾಗ ಮದುವೆ ಪೂರ್ಣಗೊಳ್ಳುತ್ತದೆ ಎಂದು ಕಾನೂನು ಹೇಳುತ್ತದೆ.

ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

ಇನ್ನು ಸತ್ಯಂ ಅವರು ತನ್ನ ಪತ್ನಿ ಎರಡನೇ ಮದುವೆ ಆಗಿದ್ದಾಳೆ ಎಂದು ಆರೋಪಿಸಿ ಉನ್ನತ ಪೊಲೀಸ್‌ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು. ಸರ್ಕಲ್ ಆಫೀಸರ್ ಸದರ್ ಮಿರ್ಜಾಪುರ್ ಅವರು ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿದರು ಮತ್ತು ಸ್ಮೃತಿ ವಿರುದ್ಧ ಎರಡನೇ ಹೆಂಡತಿಯ ಆರೋಪಗಳು ಸುಳ್ಳು ಎಂದು ಕಂಡುಬಂದಿದೆ. ಸತ್ಯಂ ನಂತರ ಸೆಪ್ಟೆಂಬರ್ 20, 2021 ರಂದು ತನ್ನ ಹೆಂಡತಿಯ ವಿರುದ್ಧ ತನ್ನ ಎರಡನೇ ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದಾರೆಂದು ದೂರನ್ನು ದಾಖಲಿಸಿದರು.

ಏಪ್ರಿಲ್ 21, 2022 ರಂದು, ಮಿರ್ಜಾಪುರದ ಮ್ಯಾಜಿಸ್ಟ್ರೇಟ್ ಸ್ಮೃತಿ ಅವರನ್ನು ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತ್ತು. ಈ ಪ್ರಕರಣದ ವಿಚಾರಣೆಯ ನಡುವಲ್ಲೇ ಸ್ಮೃತಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿದಾರರ ಪತ್ನಿ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ನೀಡಿರುವ ದೂರು ಮತ್ತು ಸಮನ್ಸ್ ಸತ್ಯಂ ಅವರ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಆದೇಶವೇ ಹೊರತು ಬೇರೇನೂ ಅಲ್ಲ ಎಂದಿದ್ದಾರೆ.

Hindu Marriage Not Valid Without Saptapadi Allahabad High Court Orders

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular