ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಹಾಗಾದ್ರೆ ಗುಡ್‌ನ್ಯೂಸ್‌, ಸರಕಾರದಿಂದ ಹೊಸ ರೂಲ್ಸ್‌

ಗೃಹಲಕ್ಷ್ಮೀ ಯೋಜನೆಯ (Gruha lakshmi Scheme) ಬ್ಯಾಂಕ್‌ ಖಾತೆಗೆ ಜಮೆ (DBT) ಆಗಬೇಕು ಅಂತಾ ಬಹುತೇಕ ಗೃಹಿಣಿಯರು ನಿರೀಕ್ಷೆಯಲ್ಲಿದ್ದಾರೆ. ಆದರೆ ಶೇ. 65ರಷ್ಟು ಮಹಿಳೆಯರು ಮಾತ್ರವೇ ಯೋಜನೆಯ ಲಾಭವನ್ನು ಪಡೆದಿದ್ದು, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರೂ ಸೇರಿದಂತೆ ಶೇ.35ರಷ್ಟು ಮಹಿಳೆಯರಿಗೆ ಇನ್ನೂ ಹಣ ಸಿಕ್ಕಿಲ್ಲ.

ಕರ್ನಾಟಕ ಸರಕಾರ ಗೃಹಲಕ್ಷ್ಮೀ ಯೋಜನೆಯ (Gruha lakshmi Scheme) ಬ್ಯಾಂಕ್‌ ಖಾತೆಗೆ ಜಮೆ (DBT) ಆಗಬೇಕು ಅಂತಾ ಬಹುತೇಕ ಗೃಹಿಣಿಯರು ನಿರೀಕ್ಷೆಯಲ್ಲಿದ್ದಾರೆ. ಆದರೆ ಶೇ. 65ರಷ್ಟು ಮಹಿಳೆಯರು ಮಾತ್ರವೇ ಯೋಜನೆಯ ಲಾಭವನ್ನು ಪಡೆದಿದ್ದು, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರೂ ಸೇರಿದಂತೆ ಶೇ.35ರಷ್ಟು ಮಹಿಳೆಯರಿಗೆ ಇನ್ನೂ ಹಣ ಸಿಕ್ಕಿಲ್ಲ.

ಗೃಹಲಕ್ಷ್ಮೀ ಯೋಜನೆಯ (Gruha lakshmi Scheme)  ಮೂಲಕ ಮನೆಯ ಯಜಮಾನಿಗೆ ಪ್ರತೀ ತಿಂಗಳು 2000 ರೂಪಾಯಿ ನೀಡುವ ಯೋಜನೆ ಇದಾಗಿದೆ. ಕರ್ನಾಟಕದಲ್ಲಿನ ಎಲ್ಲಾ ಮಹಿಳೆಯರು ಈ ಯೋಜನೆಯನ್ನು ಪಡೆಯುವಂತೆ ಸರಕಾರ ಘೋಷಣೆಯನ್ನು ಮಾಡಿತ್ತು. ಆದರೆ ನಾನಾ ಕಾರಣಗಳಿಂದಾಗಿ ಈ ಯೋಜನೆ ಅರ್ಹ ಫಲಾನುಭವಿಗಳಿಗೂ ಧಕ್ಕಿಲ್ಲ.

Gruha Lakshmi Scheme Karnataka Government New Rules Updates Still If Not Get Money
Image Credit to Original Source

ಈಗಾಗಲೇ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವ ಬಹುತೇಕ ಮಹಿಳೆಯರ ಬ್ಯಾಂಕ್‌ ಖಾತೆಗೆ (Bank Account) ಈಗಾಗಲೇ ಮೊದಲ ಕಂತಿನ ಹಣ ಜಮೆ ಆಗಿದೆ. ಆದ್ರೆ ಹಣ ಜಮೆ ಆಗದ ಮಹಿಳೆಯರು ಇಂದಿಗೂ ಬ್ಯಾಂಕ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಲೆದಾಡುತ್ತಿದ್ದಾರೆ. ಈ ನಡುವಲ್ಲೇ ಸರಕಾರ ಯೋಜನೆಗೆ ಹೊಸ ನಿಯಮ ಜಾರಿಗೆ ತಂದಿದೆ.

ಇದನ್ನೂ ಓದಿ : ದೀಪಾವಳಿಗೆ ಭರ್ಜರಿ ಗಿಫ್ಟ್‌ : ಪ್ರತೀ ಕುಟುಂಬಕ್ಕೂ ತಲಾ 2000ರೂ. ಘೋಷಣೆ

ಗೃಹಲಕ್ಷ್ಮೀ (Gruha lakshmi Scheme) ಮೊದಲ ಕಂತಿನ ಹಣ ಬಂದಿಲ್ಲ ಯಾಕೆ ?

ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಲು ಇನ್ನೂ ಕೆಲವು ನಿಯಮಗಳನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಅರ್ಜಿ ಸಲ್ಲಿಸುವ ಗೃಹಿಣಿಯರ ಮೊಬೈಲ್‌ ಸಂಖ್ಯೆ, ಆಧಾರ್‌ ಕಾರ್ಡ್‌ (Adhar Card), ಬ್ಯಾಂಕ್‌ ಖಾತೆಯ ಕೆವೈಸಿ (Bank Account KYC), ಆಧಾರ್‌ ಸೀಡಿಂಗ್‌ ( Adhar Seeding) ಜೊತೆಗೆ ಪಡಿತರ ಚೀಟಿಯಲ್ಲಿನ (Ration Card) ಲೋಪದೋಷಗಳನ್ನು ಸರಿಪಡಿಸಿಕೊಂಡಿರಬೇಕು.

ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಹಾಗೂ ಪಡಿತರ ಚೀಟಿಯಲ್ಲಿನ ಹೆಸರುಗಳು ಹೊಂದಾಣಿಕೆ ಆಗಿರಬೇಕು. ಅರ್ಜಿದಾರರ ಹೆಸರು ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಹಲವರ ಖಾತೆಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ 2000 ರೂಪಾಯಿ ಜಮೆ ಆಗಿಲ್ಲ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿಯನ್ನು ನೀಡಿದ್ದಾರೆ.

Gruha Lakshmi Scheme Karnataka Government New Rules Updates Still If Not Get Money
Image Credit to Original Source

ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ಜಮೆ ಆಗದೇ ಇರುವುದಕ್ಕೆ ಮಹಿಳೆಯ ಬ್ಯಾಂಕ್‌ ಖಾತೆಯ ಕೆವೈಸಿ ಆಗದಿರುವುದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಸರ್ವರ್‌ ಸಮಸ್ಯೆ, ಅರ್ಜಿಯಲ್ಲಿನ ತಾಂತ್ರಿಕ ಕಾರಣದಿಂದಾಗಿ ಮೊದಲ ಕಂತಿನ ಹಣ ಸಿಕ್ಕಿಲ್ಲ. ಆದರೆ ಎರಡನೇ ಕಂತಿನ ಹಣ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ ಎಂದು ಅವರು ಘೋಷಿಸಿದ್ದಾರೆ.

ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

ಜತೆಗೆ ತಾಂತ್ರಿಕ ದೋಷ (technical Issues), ಸರ್ವರ್ ಸಮಸ್ಯೆ (Server Problem) ಮತ್ತಿತರ ಕಾರಣಗಳಿಂದ ಎಲ್ಲ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ. ಎರಡನೇ ಕಂತಿನ ಹಣವನ್ನು ಶೀಘ್ರದಲ್ಲೇ ಜಮಾ ಮಾಡಲಾಗುವುದು ಮತ್ತು ಮೊದಲ ಕಂತಿನ ಹಣ ಜಮಾ ಆಗದೇ ಇರುವವರ ಖಾತೆಗೆ ಎರಡು ಕಂತುಗಳು ಸೇರಿ ನಾಲ್ಕು ಸಾವಿರ ರೂಪಾಯಿ ಸಿಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ (Minister Lakshmi Hebbalkar ) ಹೇಳಿದರು.

ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಏನು ಮಾಡಬೇಕು ?

ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೇ ಇರುವುದಕ್ಕೆ ಹಲವು ಕಾರಣಗಳನ್ನು ಸರಕಾರ ತಿಳಿಸಿದೆ. ಅದ್ರಲ್ಲೂ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಸಮಸ್ಯೆಯ ಪರಿಹಾರಕ್ಕಾಗಿ ಈಗಾಗಲೇ ಆಶಾ ಕಾರ್ಯಕರ್ತರು (Asha Worker) ಹಾಗೂ ಅಂಗನವಾಡಿ ಶಿಕ್ಷಕಿಯರು (Anganavadi Workers) ಮತ್ತು ಸಹಾಯಕಿಯರ ನೆರವು ಪಡೆಯಲಾಗುತ್ತಿದೆ.

ಗೃಹಲಕ್ಷ್ಮೀ ಯೋಜನೆಯ ( Gruha lakshmi Scheme ) ಹಣ ಇನ್ನೂ ಬ್ಯಾಂಕ್‌ ಖಾತೆಗೆ ಜಮೆ ಆಗದೇ ಇರುವವರು ಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಮನೆಗೆ ಬಂದಾಗ ಸೂಕ್ತ ಮಾಹಿತಿಯನ್ನು ನೀಡಬೇಕು. ಅವರು ಎದುರಾಗಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.

ಇದನ್ನೂ ಓದಿ : ಹೊಸ ಪಡಿತರ ಚೀಟಿ : ಸರಕಾರದಿಂದ ಗುಡ್‌ನ್ಯೂಸ್‌

ಈ ಮಹಿಳೆಯರಿಗೆ ಸಿಗೋದೇ ಇಲ್ಲ ಗೃಹಲಕ್ಷ್ಮೀ ಯೋಜನೆಯ ಹಣ !

ರಾಜ್ಯ ಸರಾಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯ (Gruha lakshmi Scheme) ಹಣ ಬಹುತೇಕರ ಬ್ಯಾಂಕ್‌ ಖಾತೆಗೆ ಜಮೆ ಆಗಿದ್ದರೂ ಕೂಡ, ಕೆಲವೊಂದು ಮಹಿಳೆಯರಿಗೆ ಪ್ರತೀ ತಿಂಗಳು 2000 ರೂಪಾಯಿ ಪಡೆಯುವ ಭಾಗ್ಯವಿಲ್ಲ. ಪ್ರಮುಖವಾಗಿ ಆದಾಯ ತೆರಿಗೆ ಪಾವತಿ ಮಾಡುವ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಿಲ್ಲ. ಜೊತೆಗೆ ಅರ್ಜಿ ಸಲ್ಲಿಸುವ ಮಹಿಳೆಯರ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರು ಆಗಿದ್ದರೆ, ಈ ಯೋಜನೆಯ ಲಾಭ ಸಿಗೋದಿಲ್ಲ.

ಪಡಿತರ ಚೀಟಿ, ಆಧಾರ್‌ ಕಾರ್ಡ್ ಹಾಗೂ ಬ್ಯಾಂಕ್‌ ಖಾತೆಯ ನಡುವೆ ಲಿಂಕ್‌ ಆಗಿರದ ಮಹಿಳೆಯರಿಗೆ ಈ ಭಾಗ್ಯವಿಲ್ಲ. ಜೊತೆಗೆ ಪಡಿತರ ಚೀಟಿಯಲ್ಲಿ ಪುರುಷರು ಮನೆಯ ಯಜಮಾನ ಆಗಿದ್ದರೆ ಅಂತಹ ಗೃಹಿಣಿಯರಿಗೆ ಈ ಯೋಜನೆಯ ಲಾಭ ಸಿಗೋದಿಲ್ಲ ಎಂದು ಸರಕಾರ ಈ ಹಿಂದೆಯೇ ತಿಳಿಸಿತ್ತು. ಈ ಕುರಿತು ತಿದ್ದಪಡಿಗೆ ಸರಕಾರ ಅವಕಾಶವನ್ನೂ ಕಲ್ಪಿಸಿದೆ.

Gruha Lakshmi Scheme Karnataka Government New Rules Updates for Still If Not Get Money

 

Comments are closed.