ಮಂಗಳವಾರ, ಏಪ್ರಿಲ್ 29, 2025
HomeSpecial StoryHistory of Barkur: ಒಂದೊಂದು ಕಲ್ಲುಗಳು ಸಾರುತ್ತವೆ ಬಾರ್ಕೂರಿನ ಇತಿಹಾಸ

History of Barkur: ಒಂದೊಂದು ಕಲ್ಲುಗಳು ಸಾರುತ್ತವೆ ಬಾರ್ಕೂರಿನ ಇತಿಹಾಸ

- Advertisement -

(History of Barkur) ಬಾರ್ಕೂರಲ್ಲಿ ಒಂದೊಂದು ಕಲ್ಲುಗಳು ಕೂಡ ಒಂದೊಂದು ಕತೆಯನ್ನು ಸಾರುತ್ತವೆ. ಇಲ್ಲಿ ಬೇಲಿಗೆ ಇಟ್ಟ ಕಲ್ಲೂ ಕೂಡ ಅದರ ಇತಿಹಾಸವನ್ನು ಹೇಳುತ್ತದೆ. ಮನೆಗಳ ಮೆಟ್ಟಿಲುಗಳು ಕೂಡ ಒಂದೊಂದು ಚರಿತ್ರೆ ಹೇಳುತ್ತದೆ. ಬಟ್ಟೆ ಒಗೆಯುವ ಕಲ್ಲುಗಳಲ್ಲೂ ಶಾಸನವನ್ನು ಬಿಚ್ಚಿಡುತ್ತವೆ. ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರ್ಕೂರಿನ ಇತಿಹಾಸ (History of Barkur) ಇಂದು ಬೀದಿ ಪಾಲಾಗಿದೆ. ಅರಮನೆಗಳು ನಾಶವಾಗಿದೆ. ಅರಮನೆ ಇದ್ದ ಜಾಗ ಪಾಳು ಬಿದ್ದಿದೆ. ಆನೆ, ಕುದುರೆ ಕಟ್ಟಿ ಹಾಕುತ್ತಿದ್ದ ಕಲ್ಲುಗಳು ಈಗ ದನ ಮೇಯಿಸಲು ಕಟ್ಟುವ ಕಲ್ಲುಗಳಾಗಿ ಮಾರ್ಪಾಡಾಗಿವೆ. 365 ದೇವಸ್ಥಾನಗಳಿದ್ದ ಬಾರಕೂರಲ್ಲಿ ಶೇ.75 ರಷ್ಟು ದೇವಸ್ಥಾನಗಳು ನಾಮಾವಶೇಷವಾಗಿವೆ.

ಗತ ಇತಿಹಾಸಗಳನ್ನು ಬದಿಗೆ ಸರಿಸಿ ಈಗ ಬಾರ್ಕೂರು (History of Barkur) ಪುಟ್ಟ ನಗರವಾಗಿದೆ. ಈ ಸಣ್ಣ ಪೇಟೆ ಯನ್ನು ಬಿಟ್ಟು ಸುತ್ತ ಎತ್ತ ಹೋದರೂ ಶಾಸನದ ಕಲ್ಲುಗಳು, ಮಹಾಸತಿ ಕಲ್ಲುಗಳು, ಕೆರೆಗಳು, ದೇವಸ್ಥಾನಗಳು, ಬಾವಿಗಳು ಸಿಗುತ್ತವೆ. ಸುತ್ತ ಕೋಟೆ ಮತ್ತು ಅರಮನೆ ಇದ್ದ ಜಾಗ ಇವತ್ತಿಗೂ ಇದೆ. ಸುಮಾರು 25 ಎಕರೆ ಸ್ಥಳದ ಸುತ್ತ ಆಳವಾದ ಕಂದಕ ಸೃಷ್ಟಿಸಿ ಕೋಟೆ ನಿರ್ಮಿಸಲಾಗಿರುವುದನ್ನು ನಾವು ಇವತ್ತಿಗೂ ಕಾಣಬಹುದು. ಅರಮನೆ ನೆಲಸಮವಾಗಿದ್ದರೂ ಕುದುರೆ, ಆನೆ ಕಟ್ಟುತ್ತಿದ್ದ ಲಾಯದ ಕಲ್ಲುಗಳು ಇವತ್ತಿಗೂ ಉಳಿದಿವೆ. ಸುತ್ತ ಹಸಿರು ಬೆಳೆದಿರುವುದರಿಂದ ಈ ಕಲ್ಲು ದನಗಳನ್ನು ಕಟ್ಟಲು ಉಪಯೋಗವಾಗುತ್ತಿದೆ. ಕೆರೆ ಕಲ್ಲಿನಿಂದ ಸುಂದರವಾಗಿ ಕಟ್ಟಲಾದ ರಾಣಿ ಸ್ನಾನ ಮಾಡುತ್ತಿದ್ದ ಬಾವಿಯಲ್ಲಿ ಈಗಲೂ ನೀರಿದೆ.

History of Barkur: Each stone tells the history of Barkur

ಹಲವು ವರ್ಷದ ಹಿಂದೆ ಇಲ್ಲಿ ಸರ್ಕಾರದವರು ಉತ್ಕನನ ಮಾಡಿದಾಗ ಅರಮನೆಯ ಅಡಿಪಾಯವಿರುವುದನ್ನು ಗುರುತಿಸಲು ಸಾಧ್ಯವಾಗಿದೆ. ಅದರ ಸ್ವಲ್ಪ ದೂರದಲ್ಲಿಯೇ ಇವತ್ತು ಕತ್ತಲೆ ಬಸದಿ ಎಂದು ಕರೆಯಲಾಗುತ್ತಿರುವ ಬಸದಿ ಇದೆ. ಬಾರಕೂರಿನ ಸೋಮನಾಥೇಶ್ವರ ದೇವಾಲಯ ಚಾಲುಕ್ಯ ಶೈಲಿಯಲ್ಲಿದ್ದು, ಈ ಬಸದಿ ಚಾಲುಕ್ಯ ಮತ್ತು ಹೊಯ್ಸಳರ ಜೊತೆಗಿನ ನಂಟನ್ನು ತಿಳಿಸುತ್ತದೆ. ಇಲ್ಲಿ 24 ತೀರ್ಥಂಕರರ ಕಲ್ಲು ಇದೆ. ಅಚ್ಚರಿ ಎಂಬಂತೆ ಬಸದಿಯ ಒಳಗೆ ಶಿವಲಿಂಗವೂ ಇದೆ. ಬಾರಕೂರು ಪೇಟೆ ಸಮೀಪ ಸಿಂಹಾಸನಗುಡ್ಡೆ ಎಂಬ ಪ್ರದೇಶವಿದೆ. ಇಲ್ಲೇ ಬೇತಾಳೇಶ್ವರ ದೇವಸ್ಥಾನವೂ ಕೂಡ ಇದೆ. ಈ ಪ್ರದೇಶದಲ್ಲಿ ತ್ರಿವಿಕ್ರಮನ ಸಿಂಹಾಸನ ಇದ್ದು, ಇದನ್ನು ರಾಜನೊಬ್ಬ ಏರಲು ಬಂದಾಗ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಇದ್ದ ಗೊಂಬೆಗಳು ಕತೆ ಹೇಳುತ್ತಾ ಹೊರಟು ಹೋದಮೇಲೆ ಸಿಂಹಾಸನ ಭೂಗತವಾಯಿತು ಎಂಬುದು ಪ್ರತೀತಿ. ತ್ರಿವಿಕ್ರಮ ಇದ್ದಲ್ಲಿ ಬೇತಾಳ ಇರುವುದರಿಂದ ಬೇತಾಳೇಶ್ವರ ದೇವಸ್ಥಾನ ಕೂಡ ಇಲ್ಲಿದೆ.

History of Barkur: Each stone tells the history of Barkur

ಭೂತಾಳ ಪಾಂಡ್ಯ ಎನ್ನುವ ರಾಜ ಇಲ್ಲಿ ಆಳುತ್ತಿದ್ದ ಎಂಬುದು ನಂಬಿಕೆ. ತುಳುನಾಡಿನಲ್ಲಿ ಮೊದಲೇ ಇದ್ದ ಅಳಿಯಕಟ್ ಅಥವಾ ಮಾತೃ ಸಂಸ್ಕೃತಿಯನ್ನು ಕಾನೂನು ಮೂಲಕ ಜಾರಿ ಮಾಡಿದಾತ ಭೂತಾಳ ಎನ್ನುವ ಮಾಹಿತಿ ಇದೆ. ಸಂಸ್ಕೃತದ ʼಭೂತಾಳ ಪಾಂಡ್ಯ ಚರಿತಂʼ ಕೃತಿಯ 13ನೇ ಅಧ್ಯಾಯದಲ್ಲಿ ಭೂತಾಳ ಪಾಂಡ್ಯ ಕ್ರಿ.ಶ. 77ರಲ್ಲಿ ಬಾರಕೂರಲ್ಲಿ ಆಳ್ವಿಕೆ ನಡೆಸುತ್ತಿದ್ದ ಎನ್ನುವುದಕ್ಕೆ ಉಲ್ಲೇಖಗಳು ಕೂಡ ಇವೆ. ಮಹಿಷಾಸುರ ಆತನ ಆರಾಧ್ಯದೈವವಾಗಿದ್ದು, ಬಾರಕೂರಲ್ಲಿ ಮಹಿಷಾಸುರನ ದೇವಸ್ಥಾನವನ್ನು ನಿರ್ಮಿಸಿದ್ದಾನೆ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಪಾಂಡ್ಯ ವಂಶ 259 ವರ್ಷ ಆಡಳಿತ ನಡೆಸಿದೆ ಎಂದು `ಭೂತಾಳ ಪಾಂಡ್ಯ ಚರಿತಂ ‘ ಹೇಳುತ್ತದೆ. ಭೂತಾಳ ಪಾಂಡ್ಯನನ್ನು ಹೊರತುಪಡಿಸಿದರೆ ಬಾರಕೂರಿನ ಇತಿಹಾಸದಲ್ಲಿ ಅಳುಪರ ಆಡಳಿತವೇ ಹೆಚ್ಚಾಗಿ ಕಾಣುತ್ತದೆ.

History of Barkur: Each stone tells the history of Barkur

ಏಳನೇ ಶತಮಾನದ ಆರಂಭದಲ್ಲಿ ಅಳುವರಸ ಎಂಬ ರಾಜ ಬಾರ್ಕೂರಲ್ಲಿ ಆಳ್ವಿಕೆ ನಡೆಸಲು ಆರಂಭಿಸಿದ. ಈತ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿಯ ಸಂಬಂಧಿಕ. ಇಲ್ಲಿಂದ ಅಳುಪರ ಆಳ್ವಿಕೆ ಆರಂಭ ಗೊಂಡಿದ್ದು 800 ಕ್ಕೂ ಅಧಿಕ ವರ್ಷ ಆಳುಪರು ಆಳ್ವಿಕೆ ನಡೆಸಿದ್ದಾರೆ. ಆರಂಭದಲ್ಲಿ ಚಾಲುಕ್ಯರ ಸಂಬಂಧವಿದ್ದ ಅಳುಪರು ಬಳಿಕ ಹೊಯ್ಸಳರ ಜತೆ ಸಂಬಂಧ ಬೆಳೆಸಿದರು. ಅದರ ಪರಿಣಾಮವಾಗಿ ಬಾರ್ಕೂರಿನಲ್ಲಿ ಜೈನಬಸದಿಗಳು ನಿರ್ಮಾಣಗೊಂಡವು. ಹೊಯ್ಸಳ ದೊರೆ ವಿಷ್ಣುದೇವ ಜೈನ ಧರ್ಮಬಿಟ್ಟು ವೈಷ್ಣವ ಧರ್ಮ ಸ್ವೀಕರಿಸಿ ದಾಗ ಬಾರ್ಕೂರಲ್ಲೂ ವೈಷ್ಣವ ದೇವಾಲಯಗಳು ರಚನೆಯಾದವು.

History of Barkur: Each stone tells the history of Barkur

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದಾಗ ಅವರ ಸ್ಥಾನಿಕ ದೊರೆಗಳಾಗಿ ಹೊಯ್ಸಳರು ಆಳ್ವಿಕೆ ಮಾಡಿದ್ದರು. ನಂತರ ಕೆಳದಿ, ಇಕ್ಕೇರಿ ದೊರೆಗಳು, ಹೈದರಾಲಿ, ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ಬ್ರಿಟಿಷರ ಆಳ್ವಿಕೆಗೆ ಬಾರ್ಕೂರು ಸಾಮ್ರಾಜ್ಯ ಒಳಗಾಯಿತು. ಪ್ರತಿ ಜಾತಿ ಸಮುದಾಯಕ್ಕೆ ಸಂಬಂಧಿಸಿದ ದೇವಸ್ಥಾನಗಳು ಬಾರ್ಕೂರಲ್ಲಿದ್ದವಂತೆ. ತುಳುನಾಡಿನ ಎಲ್ಲ ಜಾತಿಗಳ ಮೂಲ ಬಾರ್ಕೂರಾಗಿತ್ತು. ಇಲ್ಲಿ 365 ದೇವಸ್ಥಾನಗಳಿದ್ದು, ಪ್ರತಿ ದಿನ ಜಾತ್ರೆ ನಡೆಯುತ್ತಿತ್ತು. ರಾಜಪರಿವಾರ ದಿನಕ್ಕೊಂದು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದರು ಎನ್ನಲಾಗಿದೆ. ಈಗ ಶೇ.75 ಕ್ಕೂ ಅಧಿಕ ದೇವಾಲಯಗಳು ನಾಶವಾಗಿವೆ.

History of Barkur: Each stone tells the history of Barkur

ಬಟ್ಟೆ ವಿನಾಯಕ, ಮಹಾಲಿಂಗೇಶ್ವರ, ಪಂಚಲಿಂಗೇಶ್ವರ, ಚಿಪ್ಪಿ ಹನುಮಂತ, ಕಾಳಭೈರವೇಶ್ವರ, ಭುವನೇಶ್ವರಿ, ರೇವಂತ, ಕಚ್ಚೂರು ಮಾಲ್ತಿದೇವಿ, ಬಬ್ಬುಸ್ವಾಮಿ, ಕೊರಗ ತನಿಯ, ಬೇತಾಳೇಶ್ವರ, ಆಂಜನೇಯ, ಸರಸ್ವತಿ ನಾರಾಯಣಿ, ವೇಣುಗೋಪಾಲಕೃಷ್ಣ, ತರಡೇಶ್ವರ, ತಮಟೇಶ್ವರ, ಸೋಮೇಶ್ವರ, ಮಹಿಷಾಸುರ, ಕಚ್ಚೂರು ನಾಗೇಶ್ವರ, ಕಾಳಿಕಾಂಬಾ, ವೀರಭದ್ರ, ಸೋಮನಾಥೇಶ್ವರ, ಬನಶಂಕರಿ, ಸಿದ್ಧನಾಥ ಸಿದ್ಧೇಶ್ವರ, ಬಾಲಯಕ್ಷಿಣಿ ಅಮ್ಮನವರು, ರಸದಬಾವಿ ನಾಗಯಕ್ಷ ದೇವರು, ರಸದಬಾವಿ ಸುಬ್ರಾಯ ದೇವರು, ಮಹಾಲಕ್ಷ್ಮೀ, ಕುಲಮಾಹಾಸ್ತ್ರೀ ಅಮ್ಮ, ಮಹಾ ಗಣಪತಿ, ಕಪಿ ಲೇಶ್ವರ, ಜನಾರ್ದನ, ಸುಬ್ರಹ್ಮಣ್ಯ, ಪಡಸಾಲೆ ವಿಶ್ವನಾಥ, ದುರ್ಗಪರಮೇಶ್ವರಿ, ವೆಂಕಟೇಶ್ವರ, ನಾಗಬ್ರಹ್ಮ ಇವುಗಳು ನಾಶವಾಗಿ ಬಾರ್ಕೂರಿನಲ್ಲಿ ಈಗ ಉಳಿದಿರುವ ದೇವಾಲಯವಾಗಿವೆ.

History of Barkur: Each stone tells the history of Barkur

ಇನ್ನೂ ಬಾರ್ಕೂರಿನಲ್ಲಿ ಹತ್ತು ಕೆರೆಗಳಿದ್ದು, ಕೋಟೆಕೇರಿ, ಮೂಡುಕೇರಿ, ಚೌಳಿಕೇರಿ, ಪಡಸಾಲೆ ಕೇರಿ, ಹೊಸಕೇರಿ, ಬಳೆಗಾರಕೇರಿ (ಪಟಗಾ ರಕೇರಿ), ಮಣಿಗಾರ ಕೇರಿ, ಭಂಡಾರಕೇರಿ, ರಂಗನ ಕೇರಿ, ಬೆಳಚಿಕೇರಿ ಕೆರೆಗಳಾಗಿವೆ.

ಇದನ್ನೂ ಓದಿ : Elephant shaped tree : ಸೆಲ್ಫಿ ಕೇಂದ್ರವಾಯ್ತು ಹುಬ್ಬಳ್ಳಿಯ ಆನೆ ಆಕೃತಿಯ ಮರ

(History of Barkur) Each stone in Barkur also tells a story. Even the stone placed in the fence here tells its history. Even the stairs of the houses tell a story. Inscriptions are also revealed on the washing stones. The history of Barkur, which was once the capital of Tulu Nadu, has been lost today.

RELATED ARTICLES

Most Popular