Egg Pulav: 15 ನಿಮಿಷದಲ್ಲಿ ತಯಾರಿಸಿ ರುಚಿ ರುಚಿಯಾದ ಮೊಟ್ಟೆ ಪಲಾವ್‌

(Egg Pulav) ಬಾಯಲ್ಲಿ ನೀರೂರಿಸುವ ಖಾದ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಫಟಾಫಟ್ ಎಂದು ತಯಾರಿಸಲಾಗುವ ಖಾದ್ಯಗಳು ನಮ್ಮ ಜಂಜಾಟಗಳಿಂದ ಕೂಡಿದ ಜೀವನ ಶೈಲಿಗೆ ಅತ್ಯಂತ ಸಹಕಾರಿ.ಬೆಳಗಿನ ಉಪಾಹಾರಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲದೇ ಹೆಚ್ಚಿನ ದಿನಗಳು ಬ್ರೆಡ್ ಜಾಮ್‌ನಲ್ಲಿಯೇ ಕಳೆದುಹೋಗುತ್ತವೆ. ಇಂತಹ ಗಡಿಬಿಡಿಯ ಸಂದರ್ಭದಲ್ಲಿ ಕಡಿಮೆ ಸಮಯದಲ್ಲಿ ರುಚಿಯಾದ ಸ್ವಾದಿಷ್ಟವಾದ ಒಂದು ಅದ್ಭುತ ರೆಸಿಪಿಯನ್ನು ಮಾಡುವುದು ಹೇಗೆ ಎಂದು ತಿಳಿಯೋಣ. ಇಲ್ಲಿ ನಾವು ತಿಳಿಸಲು ಹೊರಟಿರುವುದು ಒಂದು ಅದ್ಭುತ ರುಚಿಯನ್ನು ಕೊಡುವ ಮೊಟ್ಟೆ ಪಲಾವ್‌ ರೆಸಿಪಿ ಬಗ್ಗೆ. ಹಾಗಿದ್ದರೆ ಮೊಟ್ಟೆ ಪಲಾವ್‌ ರೆಸಿಪಿ ಮಾಡುವುದು ಹೇಗೆ ಎಂದು ತಿಳಿಯೋಣ.

ಮೊಟ್ಟೆ ಪಲಾವ್‌(Egg Pulav) ತಯಾರುಸಲು ಬೇಕಾಗುವ ಸಾಮಾಗ್ರಿಗಳು:
*ಅನ್ನ – 2 ಕಪ್
*ಮೊಟ್ಟೆ- 2
*ಹೆಚ್ಚಿಟ್ಟುಕೊಂಡ ಈರುಳ್ಳಿ- 2
*ಬೆಳ್ಳುಳ್ಳಿ- 4 ಎಸಳು
*ಹೆಚ್ಚಿಟ್ಟುಕೊಂಡ ಟೊಮೇಟೊ – 2
*ಹೆಚ್ಚಿದ ಹಸಿ ಮೆಣಸಿನಕಾಯಿ- 2
*ಅರಿಶಿನ ಪುಡಿ- 1/2
*ಖಾರದ ಪುಡಿ- 1 ಟೀ.ಚಮಚ
*ಕರಿ ಮೆಣಸಿನ ಪುಡಿ – 1 ಟೀ.ಚಮಚ
*ಗರಂ ಮಸಾಲ ಪುಡಿ- 1 ಟೀ.ಚಮಚ
*ಉರಿದ ಎಳ್ಳಿನ ಪುಡಿ – 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
(ತರಕಾರಿಗಳನ್ನು ಕೂಡ ಬಳಸಿಕೊಳ್ಳಬಹುದು)

ತಯಾರಿಸುವ ವಿಧಾನ :
ಮೊದಲಿಗೆ ಒಂದು ಬಾಣಲೆಯನ್ನು ತೆಗೆದು ಒಲೆಯ ಮೇಲೆ ಇಡಿ. ಬಾಣಲೆ ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ನಂತರ ಕತ್ತರಿಸಿಟ್ಟುಕೊಂಡ ಈರುಳ್ಳಿಯನ್ನು ಸೇರಿಸಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿಯನ್ನು ಸೇರಿಸಿ ಹುರಿದುಕೊಳ್ಳಿ. ನಂತರ ಮೊಟ್ಟೆಯನ್ನು ಒಡೆದು ಬಾಣಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮೊಟ್ಟೆಯನ್ನು ಬೇಯಿಸಿ. ಈಗ ಉಪ್ಪು, ಕಾಳು ಮೆಣಸಿನ ಪುಡಿ, ಅರಿಶಿನ ಪುಡಿ, ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಟೊಮೇಟೊ ಹಾಕಿ ಮಿಶ್ರಣ ಮಾಡಿ 3-4 ನಿಮಿಷಗಳ ಕಾಲ ಬೇಯಿಸಿ. ನಂತರ ಈ ಮಿಶ್ರಣಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಗರಂ ಮಸಾಲ ಪುಡಿಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಬೆಂಕಿಯನ್ನು ಆರಿಸಿ. ಕೊನೆಯಲ್ಲಿ ಈ ಖಾದ್ಯದ ಮೇಲೆ ಎಳ್ಳು ಪುಡಿಯನ್ನು ಚಿಮುಕಿಸಿ. ಬಿಸಿಯಾಗಿರುವಾಗಲೆ ಬಡಿಸಿ.ಇದೀಗ ರುಚಿ ರುಚಿಯಾದ ಮೊಟ್ಟೆ ಪುಲಾವ್ ನಿಮ್ಮ ಮುಂದೆ ಸಿದ್ಧವಾಗಿರುತ್ತದೆ. ಇದನ್ನು ಸಾರಿನ ಜೊತೆಗೆ ಅಥವಾ ಸಾರಿಲ್ಲದೆ ಬೇಕಾದರು ಸೇವಿಸಬಹುದು.

ಇದನ್ನೂ ಓದಿ : Protein Dosa:ತೂಕ ಇಳಿಸಲು ಆರೋಗ್ಯಕರ ಟೇಸ್ಟಿ ಪ್ರೋಟಿನ್‌ ದೋಸೆ

ಇದನ್ನೂ ಓದಿ : Peas Paratha: ಚಳಿಗಾಲದ ಬೆಳಗ್ಗಿನ ತಿಂಡಿಗೆ ಮಾಡಿ ಬಿಸಿ ಬಿಸಿ ಬಟಾಣಿ ಪರಾಠ

ಈ ಎಗ್ ಪಲಾವ್ ಆರೋಗ್ಯಕಾರಿಯಾಗಿರುತ್ತದೆ. ಇದರಲ್ಲಿ ಕ್ಯಾಲೊರಿಗಳ ಪ್ರಮಾಣ ಅಧಿಕವಾಗಿರುವುದಿಲ್ಲ. ಕಬ್ಬಿಣಾಂಶ, ಪ್ರೋಟೀನ್ ಮತ್ತು ಇನ್ನಿತರ ಪೋಷಕಾಂಶಗಳನ್ನು ಹೊಂದಿರುವ ಈ ಖಾದ್ಯವು ಊಟದ ಸಮಯದಲ್ಲಿ ಸೇವಿಸಲು ಹೇಳಿ ಮಾಡಿಸಿದೆ. ಒಂದು ಪ್ಲೇಟ್ ರುಚಿಕರ ಎಗ್ ಪುಲಾವ್‍ನಲ್ಲಿ ವಿಟಮಿನ್ ಎ ಮತ್ತು ಸಿ ಗಳಿಂದ ಸಮೃದ್ಧವಾಗಿರುತ್ತದೆ.

(Egg Pulav) Who doesn’t like a mouth watering dish? Especially the dishes prepared as Fatafat are very helpful in our busy life style. Most of the days are spent in bread jam without much time for breakfast.

Comments are closed.