ರಾಮ ಸೇತುವಿನ ಬಗ್ಗೆ ನಿಮಗೆ ತಿಳಿಯದ ರಹಸ್ಯ ! ಸಂಶೋಧನೆಯಿಂದ ತಿಳಿದು ಬಂದಿದ್ದೇನು ?

ಶ್ರೀರಾಮ ಈ ಹೆಸರು ಭಾರತದಲ್ಲಿ ಭಕ್ತಿ ಭಾವದ ಸಂಕೇತದ ಜೋತೆಗೆ ವಿವಾದದ ಕೇಂದ್ರಬಿಂದು ಕೂಡ ಆಗಿದೆ. ಶ್ರೀರಾಮಚಂದ್ರ ಇದ್ದ ಬಗ್ಗೆ ಅವನ ಆಳ್ವಿಕೆಯ ಬಗ್ಗೆ ಸಾಕಷ್ಟು ವಾದಪ್ರತಿವಾದಗಳು ನಡೆಯುತ್ತೆ. ರಾಮ ನಿಂದ ನಿರ್ಮಿತವಾದ ಸೇತುವೆ ಈ ರಾಮ ಸೇತು ಅಂತ ವಿಷಯದ ಬಗ್ಗೆಯು ಸಾಕಷ್ಟು ಚರ್ಚೆಗಳು ಆಗಿವೆ.

ತಮಿಳುನಾಡಿನ ರಾಮೇಶ್ವಂ ನಿಂದ ಧನುಷ್‌ ಕೋಟಿಯಿಂದ ಶ್ರೀಲಂಕದ ತಲೈಮನಾರ್‌ ವರೆಗು ಇರುವ ಸೇತುವೆಯ ಆಕಾರದ ಭೂಮಿಯೇ ರಾಮ ಸೇತು. ಇದಕ್ಕೆ Adam Bridge ಅಂತಾನು ಕರಿತ್ತಾರೆ. ಕೆಲ ಪುರಾತನ ಹಾಗು ಮಧ್ಯಪ್ರಾಚಿ ಉಲ್ಲೇಖಗಳ ಪ್ರಖಾರ ಆಕಾಶದಿಂದ ಭೂಮಿಗೆ ಬಂದ ಮೊದಲ ಮಾನವ ಆಡಮ್‌. ಅವನು ಆಗಸದಿಂದ ನೇರವಾಗಿ ಶ್ರೀಲಂಕದ ಬೆಟ್ಟ ಒಂದರ ಮೇಲೆ ಬಿದ್ದನಂತೆ. ಆ ಬೆಟ್ಟವನ್ನು ಆಡಮ್‌ ಪರ್ವತ ಅಂತ ಕರಿತಾರೆ. ಅಲ್ಲಿಂದ ಅವನು ಕಿರಿದಾದ ಕಾಲುದಾರಿಯ ಮೂಲಕ ಭಾರತಕ್ಕೆ ಬಂದನಂತೆ. ಆಡಮ್‌ ಹಿಂದೂ ಮಹಾಸಾಗರವನ್ನು ದಾಟಿದ ಆ ಕಿರು ಹಾದಿಯನ್ನೆ. ಆಡಮ್‌ ಬ್ರಿಜ್‌ ಅಂತ ಕರಿತಾರೆ.

ಇದನ್ನೂ ಓದಿ: ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

ಇಸ್ರೋ, ಭಾರತೀಯ ಪುರಾತತ್ವ ಇಲಾಖೆ, ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯ ಹಾಗೂ ನಾಸ ಕೂಡ ಹುಡುಕೋದಕ್ಕೆ ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಯಾರಿಂದಲೂ ಸ್ಪಷ್ಟವಾಗಿ ಉತ್ತರ ಇವತ್ತಿನವರೆಗೂ ಸಿಕ್ಕಿಲ್ಲಾ. ಆದರೆ ಇವರೆಲ್ಲಾರ ಸಂಶೋಧನೆಗಳಿಂದ ಬೆಳಕಿಗೆ ಬಂದ ವಿಷಯ ವೆಂದರೆ ಸುಮಾರು ಒಂದು ಲಕ್ಷ ಇಪತೈದು ವರ್ಷಗಳ ಹಿಂದೆಯೇ ರಾಮೇಶ್ವರಂ ಇತ್ತು ಎನ್ನುವುದು. ಈ ರಾಮ ಸೇತುವಿನ ನಿರ್ಮಾಣ ಸುಮಾರು ಐದನೂರರಿಂದ ಆರುನೂರು ವರ್ಷಗಳಹಿಂದೆ ಅಷ್ಟೆ ಆಗಿದೆ ಎಂದು ಬೆಳಕಿಗೆ ಬಂದಿದೆ.

ಆದರೆ ಪ್ರೋಫೆಸರ್‌ ಎಸ್. ಎನ್‌ ರಾಮಸ್ವಾಮಿ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಈ ಸೇತುವೆಯ ವಯಸ್ಸು ಮೂರುಸಾವಿರದ ಐದುನೂರು ವರ್ಷ ಎಂದು ತಿಳಿಸಲಾಗಿದೆ. ಕೆಲವು ಸಂಶೋಧಕರು ಇವು ಮರಳು ದಿಬ್ಬಗಳಂತ ಸಣ್ಣ ಸಣ್ಣ ದ್ವಿಪಗಳು ಸೇರಿ ಈ ರೀತಿಯ ರಚನೆ ಯಾಗಿದೆ ಎಂದು ಹೇಳಿದ್ದಾರೆ. ಆದರೆ ರಾಮಾಯಣದಲ್ಲಿ ಈ ಸೇತುವೆಯ ಬಗ್ಗೆ ಸ್ಪಷ್ಟವಾದ ಉಲ್ಲೇಖ ಇದೆ. ಲಂಕೆಯ ರಾವಣ ಸೀತಾಮಾತೆಯನ್ನು ಅಫಹರಣ ಮಾಡಿದಾಗ. ಶ್ರೀರಾಮ ರಾವಣನ ವಿರುದ್ಧ ಯುದ್ಧ ಘೋಷಿಸಿ ಲಂಕೆಗೆ ತೆರಳಲು ನಿರ್ಮಿಸಿದ ಸೇತುವೆಯೇ ಈ ರಾಮ ಸೇತು. ಅಲ್ಲಿ ರಚಿಸಲಾದ ಸೇತುವೆಗೆ ಬಳಸಿದ ಪ್ರತಿ ಒಂದು ಕಲ್ಲುಗಳಲ್ಲಿ ಶ್ರೀರಾಮ ಅಂತ ಬರೆಯಲಾಗಿತ್ತು. ಈ ರೀತಿ ಬರೆದ್ದರಿಂದ ಕಲ್ಲುಗಳು ನೀರಿನ ಮೇಲೆ ತೇಲುತ್ತವೆ ಅಂತೆಲ್ಲಾ ಸಾಕಷ್ಟು ಕತೆಗಳಿವೆ.

ಇದನ್ನೂ ಓದಿ: Tirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

ಈ ರಾಮ ಸೇತುವನ್ನು ಎಲ್ಲಿಂದ ಎಲ್ಲಿಗೆ ನೋಡಿದರು ಒಂದೇ ಅಳತೆಯಲ್ಲಿ ಇರುವಂತೆ ಕಾಣುತ್ತದೆ. ಸುಮಾರು ಮೂವತ್ತು ಕಿಲೋಮಿಟರ್‌ ಉದ್ದ ಇರುವ ಈ ಸೇತುವೆ ಅದಕ್ಕೆ ತಕಷ್ಟೇ ಅಗಲವಿದೆ. ಕೆಲ ಸಂಶೋಧಕರ ಪ್ರಕಾರ ಈ ಸೇತುವೆ ಮೂವತ್ತು ಇಷ್ಟು ಒಂದು ಆಧಾರದಲ್ಲಿ ನಿರ್ಮಿಸಲಾಗಿದೆಯಂತೆ. ಉಪಗ್ರಹಗಳಲ್ಲಿ ತೆಗೆದ ಫೋಟೋಗಳಲ್ಲಿ ಕೂಡ ಈ ಸೇತುವೇ ಮಾನವನ ನಿರ್ಮಾಣದಂತೆ ಕಾಣುತ್ತೆ. ಈ ಸೇತುವೆ ಇರುವ ಕೆಲವು ಕಡೆ ಈಗಲು ಜನ ನಡೆದಾಡಬಹುದು. ಈ ಸೇತುವೆ ಇರುವ ಕೆಲವು ಕಡೆ ಸಮುದ್ರದ ಆಳ ಮೂವತ್ತು ಅಡಿಗಳಿಷ್ಟೀದ್ರೇ ಇನ್ನೂ ಕೆಲವು ಕಡೆ ಕೇವಲ ಮೂರು ಅಡಿಗಳಷ್ಟು ನೀರು ನಿಂತಿದೆ. ಹೀಗಾಗಿಯೇ ಪುರಾತನ ಕಾಲದಲ್ಲಿ ಇಲ್ಲೂಂದು ಸೇತುವೆ ಇತ್ತು. ಪ್ರಕೃತಿ ವೈಪರಿತ್ಯದಿಂದ ಈರೀತಿಯಾಗಿದೆ ಎನ್ನುವುದು ಸ್ಪಷ್ಟವಾಗಿದೆ.

( Adam bridge & Rama sethu)

Comments are closed.