ಒಮ್ಮೆ ಈ ವೆಜ್ ಬಿರಿಯಾನಿ ತಿಂದ್ರೆ ಮತ್ತೆ ಮತ್ತೆ ಮಾಡದೆ ಬಿಡಲ್ಲ

ದಿನಾಲೂ ಅನ್ನ, ಸಾಂಬಾರು ಪಲ್ಯ ತಿಂದು ತಿಂದು ಬೇಜಾರಾಗಿದ್ದರೆ ಒಮ್ಮೆ ಈ ವೆಜ್ ಬಿರಿಯಾನಿ ಟ್ರೈ ಮಾಡಿ. ವೆಜ್‌ ಬಿರಿಯಾನಿ ನಾ ಅಂತ ಕೇಳ್‌ ಬೇಡಿ. ಈಗ ನಾವು ಹೇಳಿರೋ ವೆಜ್‌ ಬಿರಿಯಾನಿನ ತಟ್‌ ಅಂತ ತಯಾರಿಸ ಬಹುದು. ಅಲ್ಲದೇ ರುಚಿ ಕೂಡ ಸಖತ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿಗಳು : ಕ್ಯಾರೆಟ್-2, ಬೀನ್ಸ್ -10, ಆಲೂಗಡ್ಡೆ-2, ಹಸಿಮೆಣಸು-4, ಮೊಸರು 1 ಕಪ್, ಪನ್ನೀರು-1/4 ಕಪ್, ಉಪ್ಪು, ರುಚಿಗೆ ತಕ್ಕಷ್ಟು, ಗರಂ ಮಸಾಲ-1 ಟೀ ಸ್ಪೂನ್, ಖಾರದ ಪುಡಿ-1 ಚಮಚ, ಧನಿಯಾ ಪುಡಿ-2 ಚಮಚ, ಬಿರಿಯಾನಿ ಮಸಾಲ-3 ಚಮಚ, ಚಿಟಿಕೆ ಅರಿಶಿನ, ಉಪ್ಪು-4 ಟೇಬಲ್ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಚಕ್ಕೆ-ಸಣ್ಣ ತುಂಡು, ಲವಂಗ-2, ಏಲಕ್ಕಿ-2, ಈರುಳ್ಳಿ-1 ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು, ಶುಂಠಿ, ಬೆಳ್ಳುಳ್ಳಿ ಪೇಸ್ಟ್-1 ಚಮಚ, ಪುದೀನಾ ಸ್ವಲ್ಪ, ಕೊತ್ತಂಬರಿಸೊಪ್ಪು ಸ್ವಲ್ಪ, ಅಕ್ಕಿ-2 ಕಪ್.

ಇದನ್ನೂ ಓದಿ: Carrot Halwa : ಕ್ಯಾರೆಟ್ ಹಲ್ವಾ ತಟ್ಟನೇ ಮನೆಯಲ್ಲೇ ಮಾಡಬಹುದು

ಮಾಡುವ ವಿಧಾನ : ಮೊದಲಿಗೆ ತರಕಾರಿಗಳನ್ನು ತೊಳೆದು ಸಣ್ಣಗೆ ಕತ್ತರಿಸಿಕೊಳ್ಳಿ. ನಂತರ ಪನ್ನಿರ್ ಅನ್ನು ಹೆಚ್ಚಿಟ್ಟುಕೊಳ್ಳಿ. ಒಂದು ಬೌಲ್ ಗೆ ½ ಕಪ್ ಮೊಸರು, ಖಾರದ ಪುಡಿ, ಗರಂ ಮಸಾಲ, ಬಿರಿಯಾನಿ ಪುಡಿ, ಸ್ವಲ್ಪ ಉಪ್ಪು, ಅರಿಶಿನ, ಜೀರಿಗೆ, ಧನಿಯಾ ಪುಡಿ 2 ಹಸಿಮೆಣಸು, ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಇದಕ್ಕೆ ತರಕಾರಿ, ಪನ್ನೀರ್ ಹಾಕಿ ಮಿಕ್ಸ್ ಮಾಡಿ ½ ಗಂಟೆಗಳ ಕಾಲ ಹಾಗೇಯೇ ಬಿಡಿ. ಅಕ್ಕಿಯನ್ನು ತೊಳೆದು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಕುಕ್ಕರ್ ಗೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ. ನಂತರ ಈರುಳ್ಳಿ ಸೇರಿಸಿ ಫ್ರೈ ಮಾಡಿಕೊಳ್ಳಿ.

ಇದನ್ನೂ ಓದಿ: ಅನ್ನದಿಂದಲೂ ತಯಾರಿಸಬಹುದು ʼರಸಗುಲ್ಲ’ ! ಈ ರೆಸಿಪಿ ನಿಮಗೆ ಗೊತ್ತಾ..?

ಶುಂಠಿ ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಮ್ಯಾರಿನೆಟ್ ಮಾಡಿಟ್ಟುಕೊಂಡ ತರಕಾರಿಯನ್ನು ಕುಕ್ಕರ್ ಗೆ ಸೇರಿಸಿ 5 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಉಳಿದ ½ ಕಪ್ ಮೊಸರು ಸೇರಿಸಿ ಮಿಕ್ಸ್ ಮಾಡಿ. 4 ಲೋಟ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಅಕ್ಕಿಯನ್ನು ಸೇರಿಸಿ 2 ವಿಷಲ್ ಕೂಗಿಸಿಕೊಂಡು ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ವೆಜ್ ಬಿರಿಯಾನಿ ಸವಿಯಲು ಸಿದ್ಧ.

(veg Biriyani)

Comments are closed.