(Idagunji ganapathi) ಇಂದು ನಾನು ನಿಮಗೆ ತಿಳಿಸಲು ಹೊರಟಿರುವುದು ಕರ್ನಾಟಕದ ಒಂದು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರದ ಬಗ್ಗೆ. ಇದಕ್ಕೆ ೧೫೦೦ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಕರ್ನಾಟಕದ ಕಡಲ ತೀರದ ಪ್ರಸಿದ್ದ ಗಣಪತಿ ದೇವಾಲಯಗಳಲ್ಲಿ ಇದು ಒಂದು. ಈ ದೇವಾಲಯದ ಸುತ್ತ ಇರುವ ಪ್ರಶಾಂತತೆ ನಿಜಕ್ಕೂ ಒಂದು ಅದ್ಭುತ ಅನುಭವ ಕೊಡುತ್ತದೆ.
ಇಲ್ಲಿ ವಿನಾಯಕನನ್ನು ಭಕ್ತಿ ಭಾವದಿಂದ ಪೂಜೆ ಮಾಡಲಾಗುತ್ತದೆ. ಮಹತೋಭಾರ ಶ್ರೀ ವಿನಾಯಕ (Idagunji ganapathi) ಅಂತಲೇ ಇಲ್ಲಿನ ಗಣಪತಿ ದೇವರನ್ನು ಕರೆಯುತ್ತಾರೆ. ಇಲ್ಲಿರುವ ವಿನಾಯಕ ಮೂರ್ತಿಯು ನಿಂತಿರುವ ದ್ವಿ ಭುಜ ಭಂಗಿಯಲ್ಲಿದ್ದು, ಸುಮಾರು ೮೮ ಸೆ.ಮೀ ಅಗಲವನ್ನು ಹೊಂದಿದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಹಾಗೂ ಎಡ ಕೈಯಲ್ಲಿ ಮೋದಕವನ್ನು ಹಿಡಿದಿದ್ದಾನೆ. ಎಲ್ಲಾ ಗಣಪತಿ ದೇವಾಲಯದಲ್ಲಿ ಗಣಪತಿಯ ಪಕ್ಕದಲ್ಲಿ ಆತನ ವಾಹನ ಇಲರಾಯನನ್ನು ನಾವು ನೋಡುತ್ತೇವೆ. ಆದರೆ ಇಲ್ಲಿ ಮೂರ್ತಿಯ ಪಕ್ಕದಲ್ಲಿ ಅದನ್ನು ನೋಡಲು ಸಿಗುವುದಿಲ್ಲ. ಇನ್ನೂ ಎಲ್ಲಾ ದೇವರಿಗೂ, ದೇವಾಲಯಕ್ಕೂ ಇರುವಂತೆ ಈ ದೇವಾಲಯಕ್ಕೂ ಒಂದು ಪೌರಾಣಿಕ ಹಿನ್ನಲೆಯಿದೆ. ಅದೇನು ಅನ್ನೊದನ್ನ ಹೇಳ್ತೀನಿ ಬನ್ನಿ.
ಪುರಾಣಗಳ ಪ್ರಕಾರ, ದ್ವಾಪರ ಯುಗದ ಅಂತ್ಯಕಾಲ ಅಂದರೆ ಕಲಿಯುಗದ ಆರಂಭದ ಕಾಲ. ಈ ಕಾಲದಲ್ಲಿ ಭೂಮಿಯ ಮೇಲಿರುವ ರಾಕ್ಷಸನ್ನು ಸಂಹಾರ ಮಾಡಲೆಂದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಈ ದೇವಾಲಯದ ಅರಣ್ಯ ಪ್ರದೇಶಕ್ಕೆ ಬಂದರು. ಸಾಧು ಸಂತರಿಗೆ ಅವರ ಯಜ್ಞ ಯಾಗಾದಿಗಳಿಗೆ ಸಹಾಯವಾಗಲೆಂದು ಚಕ್ರತೀರ್ಥ ಹಾಗೂ ಬ್ರಹ್ಮ ತೀರ್ಥ ಎಂಬ ಎರಡು ಕೆರೆಗಳನ್ನು ನಿರ್ಮಾಣ ಮಾಡಿದರು. ಕೆಲ ಕಾಲಗಳ ನಂತರ ರಾಕ್ಷಸರ ಅಟ್ಟಹಾಸ ಜೋರಾಗತೊಡಗಿತು. ಇದರಿಂದ ವಾಲಿಖೀಲ್ಯ ಎಂಬ ಮುನಿಗಳ ತಪಸ್ಸಿಗೆ ವಿಘ್ನಗಳು ಎದುರಾಗುತ್ತದೆ. ನಂತರ ಮುನಿಗಳು ನಾರದರನ್ನು ಪ್ರಾರ್ಥಿಸಿ ತಮ್ಮ ತಪಸ್ಸಿಗೆ ಆದ ವಿಘ್ನಗಳನ್ನು ನಿವಾರಣೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ಆಗ ನಾರದರು ಗಣೇಶನ ತಾಯಿಯಾದ ಪಾರ್ವತಿ ಬಳಿ ಬಂದು ಬಾಲ ಗಣೇಶನನ್ನು ಭೂಲೋಕಕ್ಕೆ ಕಳುಹಿಸಿಕೊಡುವಂತೆ ಬೇಡಿಕೊಂಡರು. ಪಾರ್ವತಿಯ ಒಪ್ಪಿಗೆ ಮೇರೆಗೆ ಬಾಲ ಗಣೇಶನನ್ನು ಭೂಲೋಕಕ್ಕೆ ಕರೆತಂದು ಮುನಿಗಳ ಮುಖಾಂತರ ಇಲ್ಲಿ ನೆಲಗೊಳ್ಳುವಂತೆ ಮಾಡುತ್ತಾರೆ. ನಂತರ ಗಣೇಶನ ಆಶೀರ್ವಾದದಿಂದ ವಾಲಿಖೀಲ್ಯ ಮುನಿಗಳು ತಪಸ್ಸನ್ನಾಚರಿಸಿ ಸಿದ್ದಿ ಪಡೆದುಕೊಂಡರು. ಅಲ್ಲದೇ ನಾರದರು ಇಲ್ಲಿ ದೇವತೀರ್ಥ ಎಂಬ ಇನ್ನೊಂದು ಕೆರೆಯನ್ನು ಕೂಡ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಈ ರೀತಿಯಾಗಿ ಬಾಲ ಗಣಪ ಈ ಕ್ಷೇತ್ರದಲ್ಲಿ ನೆಲೆಗೊಂಡಿರುವುದಾಗಿ ಪುರಾಣಗಳು ಉಲ್ಲೇಖಿಸುತ್ತವೆ.

ಸುಮಾರು ಐದನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯ ತುಂಬಾ ವಿಶಾಲವಾಗಿದ್ದು, ಗರ್ಭಗುಡಿಯಲ್ಲಿ ಸುಂದರವಾದ ಕಪಪು ಶಿಲೆಯಿಂದ ನಿರ್ಮಿಸಿದ ವಿಘ್ನರಾಜ ಪೀಠದ ಮೇಲೆ ನಿಂತಿದ್ದಾನೆ. ಆಭರಣ ಭೂಷಿತನಾದ ಗಣಪನ ಬಲಗೈಯಲ್ಲಿ ಪದ್ಮವನ್ನು ಹಿಡಿದು, ಎಡಗೈಯಲ್ಲಿ ಮೋದಕ ತುಂಬಿದ ಪಾತ್ರೆಯನ್ನು ಹಿಡಿದಿದ್ದಾನೆ. ಸೊಂಡಿಲಿನಿಂದ ಮೋದಕವನ್ನು ತಿನ್ನುತ್ತಿರುವ ಗಣೇಶನ ಹೊಟ್ಟೆಯಲ್ಲಿ ನಾಗರಾಜನಿಲ್ಲ. ಇನ್ನೂ ಈ ಬಾಲ ಗಣಪನ ಇನ್ನೊಂದು ವಿಶೇಷವೇನೆಂದರೆ ವಿಗ್ರಹವು ಎರಡು ಸಾವಿರ ವರ್ಷದಷ್ಟು ಪುರಾತನವಾದದ್ದು, ಮತ್ತು ಇದು ಏಕದಂತನಲ್ಲ, ಮೂರ್ತಿಗೆ ಎರಡು ದಂತಗಳು ಇವೆ. ಸಾಮಾನ್ಯವಾಗಿ ಗಣೇಶನಿಗೆ ಒಂದು ದಂತವಿರುತ್ತದೆ. ಆದರೆ ಇಲ್ಲಿನ ಗಣೇಶನಿಗೆ ಎರಡು ದಂತಗಳೂ ಇವೆ.

ಅಪರೂಪವಾದ ದೇವಾಲಯದಲ್ಲಿ ರಥಸಪ್ತಮಿಯ ಶುಭ ಗಳಿಗೆಯಂದು ವಿಶೇಷ ಜಾತ್ರೆ ನಡೆಯುತ್ತದ. ಸಾಗರೋಪಾದಿಯಲ್ಲಿ ಬರುವ ಭಕ್ತರು ಬಾಲ ಗಣಪತಿಯ ಆಶೀರ್ವಾದ ಪಡೆದು ಪುನೀತರಾಗುತ್ತಾರೆ ಮತತು ಅವರ ಎಲ್ಲಾ ಇಚ್ಚೆಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ಇಲ್ಲಿ ವಿಶೇಷವಾಗಿ ತುಲಾಭಾರ ಸೇವೆ, ಗಣ ಹೋಮ, ಮೂಢ ಗಣಪತಿ ಹಾಗೂ ರಂಗಪೂಜೆಗಳು ನಡೆಯುತ್ತದೆ. ಬೆಳಿಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯ ತನಕ ಹಾಗೂ ಮಧ್ಯಾಹ್ನ ಮೂರು ಗಂಟೆಯಿಂದ ರಾತ್ರಿ ಎಂಟೂವರೆಯ ತನಕ ಭಕ್ತರಿಗೆ ಅವಕಾಶವಿರುತ್ತದೆ.
ಹಾಗಿದ್ದರೆ ನಾನು ಪರಿಚಯಿಸುತ್ತಿರುವ ದೇವಾಲಯ ಯಾವುದೆಂದು ನಿಮಗೆ ತಿಳಿದಿರಬಹುದು. ಇದು ಸಾಕಷ್ಟು ಮಂದಿಗೆ ಚಿರಪರಿಚಿತ. ಇಡಗುಂಜಿ ಗಣಪತಿ ಎಂದರೆ ಯಾರಿಗೆ ತಾನೇ ಪರಿಚಯ ಇಲ್ಲ ಹೇಳಿ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೬ ರಿಂದ ಏಳು ಕಿ.ಮೀ. ದೂರದ ಪೂರ್ವ ದಿಕ್ಕಿನಲ್ಲಿದೆ. ಇದೇ ಇಡಗುಂಜಿ ಮಹಾಗಣಪತಿಯ ದೇವಾಲಯ.
ಇದನ್ನೂ ಓದಿ : Indrani Shakthi peeta: ಉಡುಪಿಯ ಶಕ್ತಿ ಪೀಠಗಳಲ್ಲೊಂದಾದ ಇಂದ್ರಾಣಿ ಶಕ್ತಿಪೀಠದ ಬಗ್ಗೆ ಒಂದಿಷ್ಟು ಮಾಹಿತಿ ನಿಮ್ಮ ಮುಂದೆ…
ಇನ್ನೂ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಊಟದ ವ್ಯವಸ್ಥೆ ಕೂಡ ಇದೆ. ದೂರದ ಊರುಗಳಿಂದ ಬಂದು ಉಳಿಯುವವರಿಗೆ ಅಥಿತಿ ಗೃಹದ ವ್ಯವಸ್ಥೆ ಕೂಡ ಇದೆ. ಇಲ್ಲಿಗೆ ತಲುಪಬೇಕಾದರೆ ಭಟ್ಕಳ ಮತ್ತು ಹೊನ್ನಾವರದಿಂದ ಖಾಸಗಿ ಹಾಗೂ ಸರ್ಕಾರಿ ಬಸ್ ಎರಡರ ವ್ಯವಸ್ಥೆ ಕೂಡ ಇದೆ. ಭಟ್ಕಳದಿಂದ ಮೂವತ್ತೆರಡು ಕಿ.ಮೀ. ಆದರೆ ಹೊನ್ನಾವರದಿಂದ ಹದಿನೈದು ಕಿ. ಮೀ. ದೂರದಲ್ಲಿ ಈ ದೇವಾಲಯವಿದೆ.
ರೈಲ್ವೇ ಮಾರ್ಗವಾಗಿ ಬಂದರೆ ಹತ್ತಿರದಲ್ಲಿ ಹೊನ್ನಾವರ(ಕೊಂಕಣ ರೈಲ್ವೇ) ಅಥವಾ ಮುರುಡೇಶ್ವರ ರೈಲ್ವೇ ನಿಲ್ದಾಣವಿದೆ.
(Idagunji ganapathi) Today I am going to tell you about a famous Hindu religious center in Karnataka. It has a history of more than 1500 years. This is one of the famous Ganapati temples on the coast of Karnataka. The serenity surrounding this temple is truly an amazing experience.