Life threat to Pramod Muthalik: ಪ್ರಮೋದ್‌ ಮುತಾಲಿಕ್‌ ಗೆ ಜೀವ ಬೆದರಿಕೆ : ದೂರು ದಾಖಲು

ಧಾರವಾಡ: (Life threat to Pramod Muthalik) ರಾಜ್ಯ ಸರ್ಕಾರ 10 ಮುಸ್ಲಿಂ ಕಾಲೇಜುಗಳಿಗೆ ಪರವಾನಗಿ ಕೊಡಲು ಮುಂದಾಗಿರುವುದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೇ ಕಾರಣಕ್ಕೆ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಸಂದೇಶವೊಂದು ಬಂದಿದೆ. ಈ ಕುರಿತು ಪ್ರಮೋದ್‌ ಮುತಾಲಿಕ್‌ ಅವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯ ಸರ್ಕಾರ ಮುಸ್ಲಿಂ ಯುವತಿಯರಿಗೆ ಪ್ರತ್ಯೇಕ ಕಾಲೇಜು ನಿರ್ಮಾಣಕ್ಕೆ ಪರವಾನಗಿ ಕೊಡಲು ಮುಂದಾಗಿರುವ ಕಾರಣ ಪ್ರಮೋದ್‌ ಮುತಾಲಿಕ್‌ (Life threat to Pramod Muthalik) ಅವರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದೀಗ ಅವರು ಮುಸ್ಲಿಂ ಕಾಲೇಜುಗಳ ಪರವಾನಗಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಕ್ಕಾಗಿ ಅವರಿಗೆ ಜೀವ ಬೆದರಿಕೆಯ ಸಂದೇಶವೊಂದು ಬಂದಿದೆ. ಅಪರಿಚಿತ ಮೊಬೈಲ್ ನಂಬರ್‌ನಿಂದ ವಾಟ್ಸಪ್ ವಾಯ್ಸ್ ಮೆಸೇಜ್‍ವೊಂದು ಬಂದಿದ್ದು, ಇದರಲ್ಲಿ ಆ ವ್ಯಕ್ತಿ ಪ್ರಮೋದ್ ಮುತಾಲಿಕ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅವಾಚ್ಯ ಶಬ್ಧಗಳನ್ನು ಬಳಸಿದ್ದಲ್ಲದೇ ಅವರಿಗೆ ಜೀವ ಬೆದರಿಕೆಯನ್ನು ಕೂಡ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಮೇಲೆ ಧಾರವಾಡದ ಉಪನಗರ ಪೊಲೀಸ್‌ ಠಾಣೆಯಲ್ಲಿ ಮುತಾಲಿಕ್ ಅವರು ದೂರು ದಾಖಲಿಸಿದ್ದಾರೆ.

ಪ್ರಮೋದ್‌ ಮುತಾಲಿಕ್‌ ಅವರಿಗೆ ಬಂದಿರುವ ವಾಯ್ಸ್‌ ಮೆಸೇಜ್‌ ನಲ್ಲಿ “ಈ ಹಿಂದೆ ಮಸಿ ಬಳಿಸಿಕೊಂಡಿರುವೆ. ಇನ್ನೂ ಮೇಲಾದ್ರೂ ನಮ್ಮ ಸಮುದಾಯದ ಬಗ್ಗೆ ಮಾತನಾಡಬೇಡ. ನಮ್ಮ ಸಮುದಾಯದ ಬಗ್ಗೆ ಮಾತನಾಡೋಕೆ ನೀನು ಯಾರು” ಎಂಬುದಾಗಿ ಹೇಳಿದ್ದು, ನಂತರದಲ್ಲಿ ಅಶ್ಲೀಲ ಪದಗಳನ್ನು ಬಳಕೆ ಮಾಡಿ ಮುತಾಲಿಕ್‍ಗೆ ಆ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಧಾರವಾಡದ ಉಪನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಮೋದ್‌ ಮುತಾಲಿಕ್‌ ಅವರ ಮನೆಯ ಸುತ್ತ ಭದ್ರತೆಯನ್ನು ನೀಡಲಾಗಿದೆ. ಇನ್ನೂ ಜೀವ ಬೆದರಿಕೆಯೊಡ್ಡಿದ ಆರೋಪಿಯ ಶೋಧವನ್ನು ಪೊಲೀಸರು ನಡೆಸುತ್ತಿದ್ದಾರೆ.

ಇದನ್ನೂ ಓದಿ : Muslim Girls College: ರಾಜ್ಯದಲ್ಲಿ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ಇಲ್ಲ: ಶಶಿಕಲಾ ಜೊಲ್ಲೆ ಸ್ಪಷ್ಟನೆ

ಇದನ್ನೂ ಓದಿ : MBBS students: ರಾಜೀವ್‌ ಗಾಂಧಿ ವಿವಿ ಕುಲಸಚಿವರ ನಿರ್ಲಕ್ಷ್ಯ: ಹೈಕೋರ್ಟ್‌ ಮೆಟ್ಟಿಲೇರಿದ MBBS ವಿದ್ಯಾರ್ಥಿಗಳು

(Life threat to Pramod Muthalik) Shri Ram Sena chief Pramod Muthalik has expressed strong opposition to the state government’s proposal to grant licenses to 10 Muslim colleges, and for this reason Muthalik has received a message threatening his life. Pramod Muthalik filed a complaint in the police station.

Comments are closed.