ನವದೆಹಲಿ : ಭಾರತದಲ್ಲಿ ಕೆಲವು ಪತಿ, ತನ್ನ ಪತ್ನಿಯನ್ನು ಕೀಳಾಗಿ ನೋಡ್ತಾರೆ ಅನ್ನೋ ಆರೋಪವಿದೆ. ನಿತ್ಯವೂ ಡೈವೋರ್ಸ್ ಪ್ರಕರಣವೂ ಹೆಚ್ಚುತ್ತಿದೆ. ಆದರೆ ಪತ್ನಿಯನ್ನು ದೇವತೆಯಂತೆ ನೋಡುವವರೂ ನಮ್ಮ ಜೊತೆಯಲ್ಲಿದ್ದಾರೆ. ಇಲ್ಲೋರ್ವ ಪತಿರಾಯ ತನ್ನ ಮೃತ ಪತ್ನಿಯ ಹೆಸರಲ್ಲಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮಾತ್ರವಲ್ಲ ಪ್ರೀತಿಯ ಪತ್ನಿಗೆ ಪೂಜೆ ಸಲ್ಲಿಸಿ ಅಪರೂಪದ ಪ್ರೇಮವನ್ನು ಮೆರೆಯುತ್ತಿದ್ದಾರೆ.
ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಸಂಪಖೇಡಾ ಗ್ರಾಮದ ನಾರಾಯಣ್ ಸಿಂಗ್ ರಾಥೋಡ್ ಅವರ ಪತ್ನಿ ಗೀತಾ ಬಾಯಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದರು. ಆದರೆ ಪತ್ನಿಯ ನೆನಪು ನಾರಾಯಣ್ ಸಿಂಗ್ ಅವರನ್ನು ಕಾಡುತ್ತಲೇ ಇತ್ತು. ಇದೇ ಕಾರಣಕ್ಕೆ ತನ್ನ ಪುತ್ರರ ಸಹಕಾರದಿಂದ ಪತ್ನಿಗಾಗಿ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಶಾಜಾಪುರ ಜಿಲ್ಲಾ ಕೇಂದ್ರದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿರುವ ಈ ಪತ್ನಿಯ ದೇವಾಲಯದಲ್ಲಿ ನಿತ್ಯವೂ ಪತ್ನಿಯನ್ನು ದೇವತೆಯ ಸ್ವರೂಪದಲ್ಲಿ ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲಾ ದೇವಾಲಯದಲ್ಲಿ ನಿತ್ಯವೂ ಪತ್ನಿಯ ಗುಣಗಾನವೂ ನಡೆಯುತ್ತಿದೆ.
ಇದನ್ನೂ ಓದಿ: ಪ್ರತಿದಿನ ಸ್ನಾನ ಮಾಡದ ಪತ್ನಿ : ಇದೇ ಕಾರಣ ವಿಚ್ಛೇದನ ನೀಡಿದ ಪತಿ
ಪತ್ನಿ ಗೀತಾ ಸಾವಿನಪ್ಪಿದ ಮೂರನೇ ದಿನ, ಕುಟುಂಬವು ರಾಜಸ್ಥಾನದ ಅಲ್ವಾರ್ ಮೂಲದ ಶಿಲ್ಪಿಯೊಬ್ಬರನ್ನು ಸಂಪರ್ಕಿಸಿತ್ತು. ಗೀತಾ ವಿಗ್ರಹವನ್ನು ರಚಿಸುವಂತೆ ಕೇಳಿಕೊಂಡಿತ್ತು. ಅಂತೆಯೇ ಸುಮಾರು ಎರಡು ತಿಂಗಳಲ್ಲಿ ಗೀತಾ ಅವರ ವಿಗ್ರಹ ನಿರ್ಮಾಣವಾಗಿತ್ತು. ವಿಗ್ರಹ ಸುಮಾರು ಮೂರು ಅಡಿ ಉದ್ದವಿದ್ದು, ಆಕರ್ಷಣೀಯವಾಗಿದೆ. ದೇವಸ್ಥಾನದಲ್ಲಿ ಗೀತಾ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೊದಲು ಕುಟುಂಬದ ಸದಸ್ಯರು ಎಲ್ಲಾ ಆಚರಣೆಗಳನ್ನು ಮಾಡಿದರು. ಈಗ ಅವರು ಪ್ರತಿ ದಿನ ಮೂರ್ತಿಯನ್ನು ಪೂಜಿಸುತ್ತಿದ್ದಾರೆ.
ಇದನ್ನೂ ಓದಿ: ಮದುವೆಯಲ್ಲಿ ಬೋಳಿಸುತ್ತಾರೆ ವಧುವಿನ ಕೂದಲು ! ಇಲ್ಲಿನ ಜನರದ್ದು ವಿಚಿತ್ರ ಸಂಪ್ರದಾಯ
ರಾಥೋಡ್ ಅವರ ಹಿರಿಯ ಮಗ ಲಕ್ಕಿ ಅವರಿಗೆ ತಾಯಿ ತಮ್ಮ ಜೊತೆಯಲ್ಲಿಯೇ ಇದ್ದಾರೆಂಬ ಭಾವನೆಯಿದೆ ಎನ್ನುತ್ತಿದ್ದಾರೆ. ಈ ದೇವಸ್ಥಾನ ಮತ್ತು ಅದರ ವಿಗ್ರಹವನ್ನು ನಿರ್ಮಿಸಿದ ನಂತರ ನನ್ನ ತಾಯಿಯ ಮೇಲಿನ ಪ್ರೀತಿ ಯಾವಾಗಲೂ ನಮ್ಮಲ್ಲಿ ಉಳಿಯುತ್ತದೆ. ನಾವು ಪ್ರತಿದಿನ ದೇವಸ್ಥಾನದಲ್ಲಿ ವಿಧಿಗಳನ್ನು ಮಾಡುತ್ತೇವೆಂದು ಹೇಳಿದ್ದಾರೆ.
(Temple building in memory of dead wife: Rare husband who worships forever!)