Karnataka Corona Updates : ಕರ್ನಾಟಕದಲ್ಲಿ ಇಂದು ಕೊರೊನಾ ಪ್ರಕರಣಗಳಲ್ಲಿ ಇಳಿಕೆ

ಬೆಂಗಳೂರು : ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳ ಕಾಲ ಏರಿಕೆಯನ್ನು ಕಂಡಿದ್ದು, ಹೆಮ್ಮಾರಿ ಆತಂಕವನ್ನು ಸೃಷ್ಟಿಸಿತ್ತು. ಆದ್ರೆ ಹಲವು ತಿಂಗಳ ಬಳಿಕ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಸೋಂಕು ಇಳಿಕೆಯನ್ನು ಕಂಡಿದೆ. ಕರ್ನಾಟಕದಲ್ಲಿಂದು ಹೊಸದಾಗಿ 504 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 20 ಮಂದಿಯನ್ನು ಬಲಿ ಪಡೆದಿದೆ, ಅದ್ರಲ್ಲೂ 893 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,73,899 ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ 37.746 ಸೋಂಕಿತರು ಸಾವನ್ನಪ್ಪಿದ್ದು, 29,23 370 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡಾ 0.48 ರಷ್ಟಿದ್ದು, ರಾಜ್ಯದಲ್ಲಿ ಒಟ್ಟು 12,804 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: Covid -19 Updates : ಭಾರತದಲ್ಲಿಂದು 26,041 ಹೊಸ ಕೋವಿಡ್‌ ಪ್ರಕರಣ, 276 ಮಂದಿ ಸಾವು

ರಾಜ್ಯದಲ್ಲಿ ಕೊರೊನಾ ಟೆಸ್ಟಿಂಗ್‌ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಇಂದು 1,03,800 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿದೆ. ಇನ್ನು ಸಿಲಿಕಾನ್‌ ಸಿಟಿಯಲ್ಲಿಯೂ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ ಕಂಡಿದ್ದು, ಬೆಂಗಳೂರಲ್ಲಿಂದು 181 ಜನರಿಗೆ ಸೋಂಕು ತಗುಲಿದ್ದು, ಐದು ಮಂದಿಯನ್ನು ಬಲಿ ಪಡೆದಿದೆ. ಕೊರೊನಾ ಸೋಂಕಿನಿಂದ 265 ಗುಣಮುಖರಾಗಿದ್ರೆ, 7394 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: Corona Updates : ಭಾರತದಲ್ಲಿ 24 ಗಂಟೆಯಲ್ಲಿ31,382 ಮಂದಿಗೆ ಸೋಂಕು, 318 ಬಲಿ

ಬಳ್ಳಾರಿ 3, ಬೆಳಗಾವಿ 4, ಬೀದರ್ 1, ಚಾಮರಾಜನಗರ 4, ದಾವಣಗೆರೆ 2, ಕಲ್ಬುರ್ಗಿ 1, ರಾಯಚೂರು 1, ಬೆಂಗಳೂರು ನಗರ 181, ದಕ್ಷಿಣಕನ್ನಡ 83, ಕೊಡಗು 26, ಮೈಸೂರು 47, ಉಡುಪಿ 24 ಹೊಸ ಪ್ರಕರಣ ವರದಿಯಾಗಿವೆ. ಇನ್ನೂ ಕೊರೊನಾದಿಂದಾಗಿ ರಾಜ್ಯದಲ್ಲಿ ಇಂದು 20 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

(Reduction in corona cases in Karnataka)

Comments are closed.