ಸೋಮವಾರ, ಏಪ್ರಿಲ್ 28, 2025
HomeSpecial StoryIndian Air Force Day:ಭಾರತೀಯ ವಾಯುಪಡೆಯ ದಿನ: ಮಹತ್ವ ಮತ್ತು ಇತಿಹಾಸ

Indian Air Force Day:ಭಾರತೀಯ ವಾಯುಪಡೆಯ ದಿನ: ಮಹತ್ವ ಮತ್ತು ಇತಿಹಾಸ

- Advertisement -

(Indian Air Force Day)ಭಾರತೀಯ ವಾಯುಪಡೆ ಯೋಧರಿಗೆ ಗೌರವವನ್ನು ಸಲ್ಲಿಸುವ ಸಂಕೇತವಾಗಿ ವಾಯುಪಡೆಯ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ವಾಯು ಪ್ರದೇಶವನ್ನು ಸುರಕ್ಷಿತವಾಗಿ ಕಾಯುವುದಲ್ಲದೆ, ಭಾರತೀಯ ವಾಯುಪಡೆ ಹಲವಾರು ಸಂದರ್ಭದಲ್ಲಿ ಪ್ರಕೃತಿ ವಿಕೋಪಗಳಾದಾಗ ತಮ್ಮ ಜೀವವನ್ನು ಪಣಕಿಟ್ಟು ಕಾರ್ಯಾಚರಣೆ ನಡೆಸಿ ಹಲವಾರು ಜನರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿದ್ದಾರೆ. ಈ ಭಾರಿ 90ನೇ ಭಾರತೀಯ ವಾಯುಪಡೆಯ ದಿನವನ್ನು ಆಚರಿಸಲಾಗುತ್ತಿದೆ.

ಇದರ ಇತಿಹಾಸವನ್ನು ಅವಲೋಕಿಸಿ ನೋಡುವುದಾದರೆ.ಬ್ರಿಟಿಷ್‌ ಆಡಳಿತವಿರುವಾಗಲೇ (Indian Air Force Day)ಭಾರತಕ್ಕೆ ವಾಯುಪಡೆ ಆರಂಭವಾಯಿತು. ಮೊದಲು ಭಾರತ ಬ್ರಿಟಿಷ್ ಆಡಳಿತದಲ್ಲಿ ಇರುವಾಗ ಅಕ್ಟೋಬರ್‌8,1932 ಭಾರತೀಯ ವಾಯುಪಡೆಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ಜಪಾನಿನ ಆಕ್ರಮಣವನ್ನು ತಡೆಯುವ ಪ್ರಯತ್ನದಲ್ಲಿ ಭಾರತೀಯ ವಾಯುಪಡೆಗಳನ್ನು ಬಳಸಿಕೊಳ್ಳಲಾಗಿತ್ತು. 1947 ರಲ್ಲಿ ಸ್ವಾತಂತ್ರ್ಯವನ್ನು ಪಡೆದ ನಂತರ ಭಾರತೀಯ ವಾಯುಪಡೆಗೆ ರಾಯಲ್‌ ಇಂಡಿಯನ್‌ ಎರ್‌ಪೋರ್ಸ್ ಎಂಬ ಹೆಸರನ್ನು ಇಡಲಾಯಿತು.

1950 ರಿಂದ ಭಾರತೀಯ ವಾಯು ಸೇನೆ ಪಾಕಿಸ್ತಾನದೊಂದಿಗೆ ನಾಲ್ಕು ಯುದ್ದಗಳಲ್ಲಿ ತೊಡಗಿಸಿಕೊಂಡಿದೆ. ಕಾಂಗೋ ಬಿಕ್ಕಟ್ಟು , ಗೋವಾದ ಸ್ವಾಧೀನ, ಎರಡನೇ ಕಾಶ್ಮೀರ ಯುದ್ಧ, ಬಾಂಗ್ಲಾದೇಶ ವಿಮೋಚನ ಯುದ್ದ,ಬಾಲಾಕೋಟ್‌ ವೈಮಾನಿಕ ದಾಳಿ ಹೀಗೆ ಹಲವಾರು ಸಂದರ್ಭಗಳಲ್ಲಿ ಭಾರತೀಯ ವಾಯುಸೇನೆ ತನ್ನ ಪಾತ್ರವನ್ನು ವಹಿಸಿದೆ.

ಇದನ್ನೂ ಓದಿ:BUS FIRE ACCIDENT : ಖಾಸಗಿ ಬಸ್ ಹೊತ್ತಿ ಉರಿದು 11 ಮಂದಿ ದುರ್ಮರಣ

ಇದನ್ನೂ ಓದಿ:CM Basavaraj Bommai : CM ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿಗೆ ಅಂತರಾಷ್ಟ್ರೀಯ ಬಿಸಿನೆಸ್‌ ಅವಾರ್ಡ್‌

ಇದನ್ನೂ ಓದಿ:Hindu gods:ಹಿಂದೂ ದೇವರನ್ನು ಆರಾಧಿಸಲಾರೆ ಎಂದ ಆಪ್​ ಸಚಿವ : ಬಿಜೆಪಿ ನಾಯಕರಿಂದ ತರಾಟೆ

ಇತ್ತೀಚಿನ ನಮ್ಮ ಭಾರತೀಯ ವಾಯು ಸೇನೆ ಅತ್ಯಂತ ಪ್ರಬಲವಾಗಿದೆ. ಮೊದಲೆಲ್ಲಾ ಭಾರತೀಯ ವಾಯುಪಡೆ ಜೆಟ್‌ ಗಳನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿತ್ತು. ಈ ದಿನಗಳಲ್ಲಿ ನಮ್ಮ ದೇಶಗಳಲ್ಲೇ ತಯಾರಿಸುವಷ್ಟು ಸಮರ್ಥವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಭಾರತೀಯ ವಾಯು ಸೇನೆ ನಮ್ಮ ದೇಶದಲ್ಲಿ ತಯಾರಿಸುವ ಜೇಟ್‌ ಅನ್ನು ಬೇರೆ ದೇಶಗಳಿಗೆ ನೀಡುವಂತಾದರು ಆಶ್ಚರ್ಯ ಪಡಬೇಕಿಲ್ಲ.

Indian Air Force Day: Significance and History

RELATED ARTICLES

Most Popular