ಶನಿವಾರ, ಜೂನ್ 21, 2025
HomeSpecial StoryLife StyleInternational Yoga Day : ಯೋಗದಲ್ಲಿದೆ ಆರೋಗ್ಯ: ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್‌ 21ರಂದೇ...

International Yoga Day : ಯೋಗದಲ್ಲಿದೆ ಆರೋಗ್ಯ: ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್‌ 21ರಂದೇ ಆಚರಿಸುವುದೇಕೆ ?

ನಮ್ಮ ಪೂರ್ವಜರು ಉತ್ತಮ ಜೀವನ ನಡೆಸಲು ಯೋಗವೇ ಆಧಾರ ಎಂದು ಹೇಳಿದ್ದಾರೆ. ಯೋಗದಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಲಾಭವಿದೆ. ಇದರ ಮಹತ್ವವನ್ನು ಅರಿತು, ಪ್ರತಿ ವರ್ಷ ಜೂನ್‌ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

- Advertisement -

ಭಾರತದಲ್ಲಿ ಯೋಗ ಪದ್ಧತಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆರೋಗ್ಯಕರ ದೇಹವನ್ನು ಹೊಂದಲು ಯೋಗ (International Yoga Day 2025) ಎಷ್ಟು ಅವಶ್ಯಕ ಅನ್ನೋದನ್ನು ಪೂರ್ವಜರು ಈ ಹಿಂದೆಯೇ ಕಂಡುಕೊಂಡಿದ್ದರು. ಪ್ರತಿದಿನ ಯೋಗ (Happy International Yoga Day 2025) ಮಾಡುವುದರಿಂದ ದೈಹಿಕ ಆರೋಗ್ಯ ಸುಧಾರಿಸುವುದಲ್ಲದೆ, ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ.

ಇಂದಿನ ಒತ್ತಡ, ಧಾವಂತದ ದಿನಗಳಲ್ಲಿ ದೇಹ ಮತ್ತು ಮನಸ್ಸಿಗೆ ಸರಿಯಾದ ವಿಶ್ರಾಂತಿಯನ್ನು ನೀಡುವುದು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಯೋಗ ನಮಗೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಯೋಗವು ನಮ್ಮ ದೇಹವನ್ನು ಬಲಿಷ್ಠ ಮತ್ತು ಆರೋಗ್ಯಕರವಾಗಿಸುತ್ತದೆ.

ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಹೃದಯದ ಕಾಯಿಲೆ, ಬೊಜ್ಜು, ಆತಂಕ, ಒತ್ತಡ ಮುಂತಾದವುಗಳನ್ನು ದೂರವಿಡುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುವುದರಿಂದ ದೇಹದಲ್ಲಿ ಚೈತನ್ಯ ತುಂಬಿರುವಂತೆ ನೋಡಿಕೊಳ್ಳುತ್ತದೆ. ಯೋಗಾಭ್ಯಾಸವು ಕೇವಲ ವ್ಯಾಯಾಮವಲ್ಲ ಅದು ಆರೋಗ್ಯಕರ ಜೀವನಶೈಲಿಯಾಗಿದೆ.

International yoga day 2025 why every year we celebrate yoga day on june 21 in Kannada News
Credit : Narendra Modi/ Twitter

ಈ ಕಾರಣಕ್ಕಾಗಿಯೇ ಪ್ರತಿವರ್ಷ ಜೂನ್‌ 21 ರಂದು ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಯೋಗ ದಿನ ಯಾವಾಗ ಪ್ರಾರಂಭವಾಯಿತು, ಇದನ್ನು ಏಕೆ ಆಚರಿಸಲಗುತ್ತದೆ ಮತ್ತು ಈ ವರ್ಷದ ಥೀಮ್‌ ಏನು ಎಂಬುದನ್ನು ತಿಳಿಯೋಣ.

International Yoga Day 2025 : 2025ರ ಯೋಗ ದಿನದ ಥೀಮ್‌

ಪ್ರತಿವರ್ಷ ಯೋಗ ದಿನವನ್ನು ವಿಶೇಷ ಥೀಮ್‌ನೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ ಥೀಮ್‌ ‘ಒಂದು ಭೂಮಿ, ಒಂದು ಆರೋಗ್ಯ’ ಎನ್ನುವುದಾಗಿದೆ. ಈ ಧ್ಯೇಯವಾಕ್ಯದ ಅರ್ಥವೇನೆಂದರೆ ನಮ್ಮೆಲ್ಲರ ಆರೋಗ್ಯವು ಈ ಭೂಮಿಯ ಆರೋಗ್ಯಕ್ಕೆ ಸಂಬಂಧಿಸಿದೆ ಎಂದಾಗಿದೆ. ನಮ್ಮ ಭೂಮಿ ಆರೋಗ್ಯಕರವಾಗಿದ್ದರೆ ಮಾನವರು ಸಹ ಆರೋಗ್ಯವಾಗಿರುತ್ತಾರೆ.

Also Read : Ghee Avalakki Recipe : ಮಳೆಗಾಲದ ಸಂಜೆ ಸ್ನಾಕ್‌ಗೆ ಟ್ರೈ ಮಾಡಿ ತುಪ್ಪದ ಅವಲಕ್ಕಿ

ಯೋಗ ದಿನ ಯಾವಾಗ ಪ್ರಾರಂಭವಾಯಿತು ?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್‌ 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್‌ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾಪಿಸಿದರು. ಅದೇ ವರ್ಷ ಡಿಸೆಂಬರ್‌ ತಿಂಗಳಿನಲ್ಲಿ ವಿಶ್ವಸಂಸ್ಥೆಯ ಇದನ್ನು ಅನುಮೋದಿಸಿತು. 2015ರ ಜೂನ್‌ 21, ರಂದು ಮೊಟ್ಟ ಮೊದಲ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ಯೋಗ ದಿನವನ್ನು ಜೂನ್‌ 21ಕ್ಕೆ ಆಚರಿಸಲು ಕಾರಣವೇನು ?

ಈಗ ಜೂನ್ 21 ರಂದೇ ಯೋಗ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲೂ ಬಂದಿರಬಹುದು. ಏಕೆಂದರೆ ಜೂನ್ 21ರಿಂದ ಸೂರ್ಯನು (ಭೂಮಿಯಿಂದ ನೋಡಿದಾಗ) ಸ್ವಲ್ಪ ಸ್ವಲ್ಪವಾಗಿಯೇ ಭೂಮಿಯ ದಕ್ಷಿಣಗೋಳಾರ್ಧದ ಕಡೆಗೆ ಸಾಗುವಂತೆ ಕಾಣಿಸುತ್ತದೆ. ಅಂದರೆ ಈ ದಿನದಿಂದ ದಕ್ಷಿಣಾಯಣ ಪ್ರಾರಂಭ ಎಂದು ಹೇಳಲಾಗುತ್ತದೆ.

ಈ ದಿನವನ್ನು ಗ್ರೀಷ್ಮ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಅಷ್ಟೇ ಅಲ್ಲದೇ, ಯೋಗಿ, ಆದಿಯೋಗಿ ಎಂದೂ ಕರೆಯಲ್ಪಡುವ ಭಗವಾನ್ ಶಿವನು ದಕ್ಷಿಣಾಯಣದ ಪ್ರಾರಂಭದ ದಿನದಂದು ಸಪ್ತರ್ಷಿಗಳಿಗೆ ಯೋಗವನ್ನು ಕಲಿಸಲು ಪ್ರಾರಂಭಿಸಿದನು ಎಂದು ಧಾರ್ಮಿಕವಾಗಿ ನಂಬಲಾಗಿದೆ. ಈ ಕಾರಣದಿಂದ ಜೂನ್ 21 ಅನ್ನು ಯೋಗ ದಿನಕ್ಕಾಗಿ ಆಯ್ಕೆ ಮಾಡಲಾಗಿದೆ.

Also Read : Coconut Rice Recipe : ಚಿತ್ರಾನ್ನದಷ್ಟೇ ರುಚಿಕರವಾದ ತೆಂಗಿನಕಾಯಿ ರೈಸ್‌ ರೆಸಿಪಿ ಒಮ್ಮೆ ಟ್ರೈ ಮಾಡಿ

International yoga day 2025 why every year we celebrate yoga day on june 21 in Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular