ಭಾನುವಾರ, ಏಪ್ರಿಲ್ 27, 2025
Homekarnatakaಒರಳು ಕಲ್ಲಿನಿಂದ ಉಕ್ಕುತ್ತೆ ಪವಾಡದ ನೀರು– ಜನರ ಕಷ್ಟಕ್ಕೆ ದಾರಿ ತೋರುತ್ತಾನೆ ಇಲ್ಲಿನ ಕಮಂಡಲ ಗಣಪತಿ...

ಒರಳು ಕಲ್ಲಿನಿಂದ ಉಕ್ಕುತ್ತೆ ಪವಾಡದ ನೀರು– ಜನರ ಕಷ್ಟಕ್ಕೆ ದಾರಿ ತೋರುತ್ತಾನೆ ಇಲ್ಲಿನ ಕಮಂಡಲ ಗಣಪತಿ ದೇವರು

- Advertisement -

Kamandala Ganapathi Temple  : ದೇವಾಲಯಗಳು ವಿಸ್ಮಯದ ಗೂಡು . ಇಲ್ಲಿ ನಡೆಯುವ ವಿಚಿತ್ರಗಳು ವಿಜ್ಞಾನಕ್ಕೂ ಸವಾಲಾಗಿ ನಿಲ್ಲುವಂತವುಗಳು ಎಂದರೆ ತಪ್ಪಾಗಲ್ಲ . ದೇವರನ್ನು ನಂಬಿರುವವರು ಇದನ್ನು ದೇವರ ಶಕ್ತಿ ಎಂದರೆ ವಿಜ್ಞಾನ ಇದನ್ನು ಪೂರ್ವಜರ ಜ್ಞಾನ ಎಂದು ನಂಬುತ್ತಾರೆ. ಹೌದು ಇಂತಹ ದೇವಾಲಯಗಳು ನಮ್ಮ ಕರ್ನಾಟಕದಾದ್ಯಂತ ಹಲವಾರಿದೆ. ಅದರಲ್ಲಿ ಈ ದೇವಾಲಯವೂ ಒಂದು. ಇಲ್ಲಿ ನಡೆಯುವ ಪವಾಡ ಒಂದು ಬಾರಿ ಎಲ್ಲರನ್ನೂ ಚಕಿತರಾಗುವಂತೆ ಮಾಡುತ್ತೆ. ಇಲ್ಲಿ ಉಕ್ಕುವ ನೀರು ಭಕ್ತರ ಕೋರಿಕೆ ನಿಜವಾಗುತ್ತೋ ಇಲ್ಲವೋ ಅಂತ ಹೇಳುತ್ತಂತೆ.

Kamandala Ganapathi Temple is precisely located on Siddaramata Road in Kesave village of Koppa taluk Chikkamgalore district
Image Credit to Original Source

ಸುತ್ತಲೂ ಹಸಿರಿನ ಸಿರಿ . ನಡುವೆ ಭಕ್ತರನ್ನು ಕಾಯೋಕೆ ಅಂತಾನೆ ನಿಂತಿರುವ  ಗಣಾಧಿಪತಿ . ಆತನ ಮುಂದೆಯೇ ಒರಳು ಕಲ್ಲಿನಲ್ಲಿ ಉಕ್ಕಿ ಮಾಯವಾಗುವ ನೀರು . ಇದೇ ಪ್ರತಿದಿನ ಈ  ಕಮಂಡಲ ಗಣಪತಿ ದೇವಾಲಯದಲ್ಲಿ ಕಾಣುವ ವಿಸ್ಮಯ. ಇಲ್ಲಿ ನೆಲೆನಿಂತಿರುವ ಗಣೇಶ ಸ್ವತ: ತಾಯಿ ಪಾರ್ವತಿಯಿಂದಲೇ ಪ್ರತಿಷ್ಠಾಪಿಸಲ್ಪಟ್ಟವನು ಅಂತ ಇಲ್ಲಿ ನಂಬಲಾಗುತ್ತೆ . ಇಲ್ಲಿ ನಡೆಯುವ ನೀರಿನ ವಿಸ್ಮಯ ಭಕ್ತರನ್ನು ದೇವರೆಡೆಗೆ ಬಾಗುವಂತೆ ಮಾಡುತ್ತೆ.

Kamandala Ganapathi Temple is precisely located on Siddaramata Road in Kesave village of Koppa taluk Chikkamgalore district
Image Credit to Original Source

ಹೌದು, ಇಲ್ಲಿ ಗಣೇಶನ ಎದುರಲ್ಲೇ ಒಂದು ಒರಳು ಕಲ್ಲು ಸ್ಥಾಪಿತವಾಗಿದೆ. ಇದರಿಂದ ದಿನಕ್ಕೆ ಹಲವು ಬಾರಿ ನೀರು ಉಕ್ಕುತ್ತದೆ. ಮುಖ್ಯವಾಗಿ ದೇವಾಲಯದ ಬಾಗಿಲನ್ನು ತೆರೆಯುವಾಗ, ದೇವರಿಗೆ ಪೂಜೆ ಮಾಡುವಾಗ ಹಾಗೂ ಭಕ್ತರ ಹರಕೆ ಸಂದರ್ಭದಲ್ಲಿ ನೀರು ಇಲ್ಲಿಂದ ಉಕ್ಕುತ್ತೆ . ಭಕ್ತರು ತಮ್ಮ ಹರಕೆಯನ್ನು ಸಲ್ಲಿಸುವಾಗ ಒಂದು ನಾಣ್ಯವನ್ನು ಅಲ್ಲಿ ಹಾಕುತ್ತಾರೆ.

ಇದನ್ನೂ ಓದಿ : ನೀರಲ್ಲಿ ಉಷ್ಣದೇಹಿಯಾಗಿ ಕುಳಿತಿದ್ದಾನೆ ಗುಡ್ಡಟ್ಟು ವಿನಾಯಕ – ಜಲಾಭಿಷೇಕ ಮಾಡಿದ್ರೆ ಕಷ್ಟಗಳು ಪರಿಹಾರ

ಆಗ ಒರಳು ಕಲ್ಲಿನಿಂದ ನೀರು ಚಿಮ್ಮೋಕೆ ಆರಂಭವಾಗುತ್ತಂತೆ. ಒಂದು ವೇಳೆ ಕಾರ್ಯ ಆಗದಿದ್ರೆ ಇಲ್ಲಿ ನೀರು ಉಕ್ಕೋದಿಲ್ಲ ಅಂತಾರೆ ಭಕ್ತರು. ಇನ್ನು ದೇವಾಲಯದ ಬಾಗಿಲನ್ನು ಹಾಕುವಾಗ ನೀರು ಉಕ್ಕಿದರೆ ಪ್ರಪಂಚದಲ್ಲಿ ಏನೋ ಬದಲಾವಣೆ ಆಗುತ್ತೆ ಅನ್ನೋದು ಇಲ್ಲಿನ ನಂಬಿಕೆ.

Kamandala Ganapathi Temple is precisely located on Siddaramata Road in Kesave village of Koppa taluk Chikkamgalore district
Image Credit to Original Source

ಇನ್ನು ಇಲ್ಲಿನ ಸ್ಥಳ ಪುರಾಣಗಳ ಪ್ರಕಾರ ಪಾರ್ವತಿ ದೇವಿಯೇ ಇಲ್ಲಿ ಈ ಗಣೇಶನ ವಿಗ್ರಹವನ್ನು ಸ್ಥಾಪಿಸಿದರಂತೆ ಶನಿ ದೇವರ ಕಾಟವನ್ನು ತಾಳಲಾರದ ಮಾತೆ ಪಾರ್ವತಿ ಇಲ್ಲಿ ಬಂದು ತಪ್ಪಸ್ಸು ಮಾಡಿದರಂತೆ ಹಾಗೂ ಇಲ್ಲಿಯೇ ವಿಘ್ನ ವಿನಾಷಕನ ವಿಗ್ರಹ ಪ್ರತಿಷ್ಠಾಪಿಸಿದರಂತೆ. ಇನ್ನು ಇಲ್ಲಿ ಉದ್ಬವಿಸುವ ನೀರಿನಲ್ಲಿ ಜೌಷಧೀಯ ಗುಣ ಇದೆ ಎಂದು ನಂಬಲಾಗುತ್ತೆ. ಈ ನೀರಿನಲ್ಲಿ ಸ್ನಾನ ಮಾಡಿದ್ರೆ ಚರ್ಮ ವ್ಯಾಧಿ ದೂರವಾಗುತ್ತೆ ಹಾಗೂ ಶನಿ ದೋಷ ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ . ಇನ್ನು ಈ ನೀರನ್ನು ಮಕ್ಕಳು ಸೇವಿಸಿದ್ರೆ ಮಕ್ಕಳ ಬುದ್ದಿಶಕ್ತಿ ಕೂಡ ಹೆಚ್ಚುತ್ತೆ ಅನ್ನೋ ನಂಬಿಕೆ ಇಲ್ಲಿದೆ.

ಇದನ್ನೂ ಓದಿ : Weather Update Today : ಮುಂದಿನ 6 ದಿನಗಳ ಕಾಲ ಬಾರೀ ಮಳೆ, ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಇನ್ನು ಇದನ್ನು ಬ್ರಾಹ್ಮಿ ನದಿಯ ಉಗಮ ಸ್ಥಾನ ಅಂತ ಹೇಳಲಾಗುತ್ತೆ . ಇಲ್ಲಿ ನೀರಿನ ರುಚಿ ಸಾಮಾನ್ಯ ನೀರಿಗಿಂತ ಭಿನ್ನವಾಗಿದ್ದು , ತುಳಸಿ ತೀರ್ಥ ದ ರುಚಿಯನ್ನು ಹೊಂದಿದೆ ಎಂದಲೂ ಹೇಳಬಹುದಾಗಿದೆ. ಇದಕ್ಕೆ ಕಾರಣ ಇಲ್ಲಿನ ಸುತ್ತ ಮುತ್ತಲೂ ತುಳಸೀ ಗಿಡಗಳು ಹೆಚ್ಚಾಗಿ ಕಾಣಬರೋದ್ರಿಂದ ಇದಕ್ಕೆ ಈ ರುಚಿ ಬಂದಿರಬಹುದು ಅಂತ ನಂಬಲಾಗುತ್ತೆ. ಇದು ಅತ್ಯಂತ ಶುದ್ಧ ನೀರು ಅಂತ ಪರೀಕ್ಷೆಯಿಂದ ತಿಳಿದು ಬಂದಿದೆ.

Kamandala Ganapathi Temple is precisely located on Siddaramata Road in Kesave village of Koppa taluk Chikkamgalore district
Image Credit to Original Source

ಅಂದಹಾಗೆ ಈ ವಿಸ್ಮಯ ಕಾರಿ ದೇವಾಲಯ ವಿರೋದು ಚಿಕ್ಕಮಗಳೂರು ಜಿಲ್ಲೆಯಲ್ಲಿ . ಚಿಕ್ಕಮಗಳೂರಿನ ಕೊಪ್ಪತಾಲೋಕಿನ ಕೆಸವಿ ಗ್ರಾಮದ ಕಾಡಿನಲ್ಲಿನ ನೆಲೆ ನಿಂತಿದ್ದಾನೆ ಈ ದೇವರು . ಕಮಂಡಲ ಗಣಪತಿ ಅಂತಾನೇ ಕರೆಸಿಕೊಳ್ಲುವ ಈ ವಿನಾಯಕ ದೇವಾಲಯಕ್ಕೆ ತೆರಳೋಕೆ ಶಿವಮೊಗ್ಗದಿಂದ 86 ಹಾಗೂ ಬೆಂಗಳೂರಿನಿಂದ 320  ಕಿಲೋ ಮೀಟರ್ ಪ್ರಯಾಣ ಬೆಳಸ ಬೇಕು .ಇನ್ನು ಕೊಪ್ಪ ದಿಂದ ಸುಮಾರು 4 ಕಿಲೋ ಮೀಟರ್ ದೂರವಿದೆ.

ಇದನ್ನೂ ಓದಿ : Horoscope Today : ದಿನಭವಿಷ್ಯ – 10 ಫೆಬ್ರವರಿ 2024 : ಈ 2 ರಾಶಿಯವರಿಗಿದೆ ಶನಿದೇವರ ವಿಶೇಷ ಕೃಪೆ

ಭದ್ರ ವನ್ಯಜೀವಿ ತಾಣಕ್ಕೆ ಹೋಗೋಕೆ ಇಲ್ಲಿಂದ 68 ಕಿಲೋ ಮೀಟರ್ ಕ್ರಮಿಸಬೇಕಾತ್ತೆ. ಸಾಧಾರಣ ವಾಗಿ ಇಲ್ಲಿಗೆ ಬರುವ ಪ್ರಯಾಣಿಕರು ತಪ್ಪದೇ ಇಲ್ಲಿಗೆ ಬಂದು ಹೋಗುತ್ತಾರೆ . ಸಾಮಾನ್ಯವಾಗಿ ಬಾನುವಾರದಂದು ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತಾಧಿಗಳು ಇಲ್ಲಿಗೆ ಬರುತ್ತಾರೆ .

Kamandala Ganapathi Temple is precisely located on Siddaramata Road in Kesave village of Koppa taluk Chikkamgalore district  5kms from Koppa bus stand

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular