ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯೋಕೆ ಇನ್ಮುಂದೆ ಈ ಕೆಲಸ ಮಾಡುವುದು ಕಡ್ಡಾಯ

Gurha Lakshmi Yojana 6th and 7th installment  : ಕರ್ನಾಟಕ ಸರಕಾರ ಮನೆಯ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ ಹಣವನ್ನ ಜಮೆ ಮಾಡುತ್ತಿದೆ. ‌ ಆದರೆ ಅದೆಷ್ಟೊ ಮಹಿಳೆಯ ಖಾತೆಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಜಮೆ ಆಗಿಲ್ಲ.

Gurha Lakshmi Yojana 6th and 7th installment  : ಕರ್ನಾಟಕ ಸರಕಾರ ಮನೆಯ ಯಜಮಾನಿಯರ ಬ್ಯಾಂಕ್ ಖಾತೆಗೆ (Bank Account)  ಪ್ರತೀ ತಿಂಗಳು 2000 ರೂಪಾಯಿ ಹಣವನ್ನ ಜಮೆ ಮಾಡುತ್ತಿದೆ. ‌ ಆದರೆ ಅದೆಷ್ಟೊ ಮಹಿಳೆಯ ಖಾತೆಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಜಮೆ ಆಗಿಲ್ಲ. ಇಂತಹ ಮಹಿಳೆಯರಿಗಾಗಿಯೇ ರಾಜ್ಯ ಸರಕಾರ ಹೊಸ ರೂಲ್ಸ್‌ ಜಾರಿ ಮಾಡಿದೆ. ಈ ಕೆಲಸವನ್ನು ಕೂಡಲೇ ಮಾಡಿದ್ರೆ ಮುಂದಿನ ಕಂತಿನ ಗೃಹಲಕ್ಷ್ಮೀ ಹಣ ಸುಲಭವಾಗಿ ಪಡೆಯಬಹುದಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ತಲುಪುತ್ತಿಲ್ಲ. ಜೊತೆಗೆ ಅರ್ಜಿ ಸಲ್ಲಿಸಿದ ಸಾವಿರಾರ ಮಹಿಳೆಯರು ಇಂದಿಗೂ ಒಂದೇ ಒಂದು ಕಂತಿನ ಹಣವನ್ನೂ ಪಡೆದುಕೊಂಡಿಲ್ಲ. ಯಾವ ಕಾರಣಕ್ಕೆ ಇಂತಹ ಮಹಿಳೆಯರಿಗೆ ಹಣ ಸಿಗುತ್ತಿಲ್ಲ ಅನ್ನೋದು ಚಿಂತೆಯಾಗಿದೆ.

Karnataka News Gurha Lakshmi Yojana 6th and 7th installment this work is mandatory
Image Credit to Original Source

ರಾಜ್ಯ ಸರಕಾರ ಈಗಾಗಲೇ ಗೃಹಲಕ್ಷ್ಮೀ ಯೋಜನೆಯನ್ನು ಪ್ತತೀ ಯಜಮಾನಿಗೂ ತಲುಪಿಸಬೇಕು ಅನ್ನೋ ಉದ್ದೇಶದಿಂದಲೇ ಅದಾಲತ್‌ ನಡೆಸಲಾಗಿದೆ. ಅಧಿಕಾರಿಗಳನ್ನು ಮನೆ ಮನೆಗೆ ಕಳುಹಿಸಿ ಸರ್ವೆ ಕಾರ್ಯವನ್ನೂ ನಡೆಸಲಾಗಿತ್ತು. ಜೊತೆಗೆ ಆಧಾರ್‌ ಸೀಡಿಂಗ್‌ (Aadhaar Seeding Process), ರೇಷನ್‌ ಕಾರ್ಡ್‌ ಈ ಕೆವೈಸಿ (Ration Card ekyc) ಕಾರ್ಯವನ್ನೂ ಮಾಡಿಸಲಾಗಿತ್ತು.

ಆದರೂ ಹಲವು ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಯಾಗಿಲ್ಲ. ಬಹುತೇಕ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಅರ್ಹತೆ ಪಡೆಯಲು ಸಾಧ್ಯವಾಗದೇ ಇರೋದಕ್ಕೆ ತಾಂತ್ರಿಕ ಕಾರಣ ಎನ್ನಲಾಗಿತ್ತು. ಆದ್ರೀಗ ಮತ್ತೊಂದು ಕಾರಣ ಪತ್ತೆಯಾಗಿದ್ದು, ಸರಕಾರ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಲು ಮತ್ತೊಂದು ಅವಕಾಶವನ್ನು ಮಾಡಿಕೊಟ್ಟಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಹೊಸ ರೂಲ್ಸ್‌ : ಅನರ್ಹರ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ? ಚೆಕ್‌ ಮಾಡಿ

ರಾಜ್ಯದ ಕಾಂಗ್ರೆಸ್‌ ಸರಕಾರ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುವ ಸಂದರ್ಭದಲ್ಲಿಯೇ ಹಲವು ಕಂಡಿಷನ್‌ಗಳನ್ನು ನೀಡಿತ್ತು. ಅದರಲ್ಲಿ ಪ್ರಮುಖವಾಗಿ ಇರುವುದು ಆದಾಯ ತೆರಿಗೆ ಪಾವತಿದಾರರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗೋದಿಲ್ಲ ಅನ್ನೋದು. ಆದರೆ ಯೋಜನೆಗೆ ಅರ್ಜಿ ಸಲ್ಲಿಸಿದ ಬಹುತೇಕ ಮಹಿಳೆಯರನ್ನು ಆದಾಯ ತೆರಿಗೆ ಪಾವತಿಯ ನೆಪದಲ್ಲಿಯೇ ರಿಜಕ್ಟ್‌ ಮಾಡಲಾಗಿದೆ.

Karnataka News Gurha Lakshmi Yojana 6th and 7th installment this work is mandatory
Image Credit to Original Source

ಕೆಲವು ಮಹಿಳೆಯರು ಆದಾಯ ತೆರಿಗೆ ಪಾವತಿ ಮಾಡದೇ ಇದ್ದರೂ ಕೂಡ ಅಂತಹ ಮಹಿಳೆಯರನ್ನ ಇದೇ ಕಾರಣದ ನೆಪವೊಡ್ಡಿ ಅರ್ಜಿಯನ್ನು ತಿರಸ್ಕಾರ ಮಾಡಿರುವುದು ಬಯಲಾಗಿದೆ. ಹೀಗಾಗಿ ಇಂತಹ ಮಹಿಳೆಯರು ಆದಾಯ ತೆರಿಗೆ ಪಾವತಿ ಮಾಡುತ್ತಿಲ್ಲ ಅನ್ನೋ ದೃಢೀಕರಣವನ್ನು ಶಿಶು ಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಕೆ ಮಾಡಬೇಕು.

ಇದನ್ನೂ ಓದಿ : 30 ವರ್ಷದ ಹೋಮ್‌ ಲೋನ್‌ 15 ವರ್ಷದಲ್ಲೇ ತೀರಿಸಿ : ಜೊತೆಗೆ 32 ಲಕ್ಷ ರೂಪಾಯಿ ಬಡ್ಡಿ ಉಳಿಸಿ

ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ದೃಢೀಕರಣ ಸಲ್ಲಿಕೆ ಮಾಡಿದ ನಂತರದಲ್ಲಿ ಅಧಿಕಾರಿಗಳು ನಿಮ್ಮ ಪತ್ರವನ್ನು ಪರಿಶೀಲನೆ ಮಾಡುತ್ತಾರೆ. ಒಂದೊಮ್ಮೆ ನೀವು ಅರ್ಹರೇ ಆಗಿದ್ರೆ ಗೃಹಲಕ್ಷ್ಮೀ ಯೋಜನೆಯ ಐಟಿ ಪಾವತಿದಾರರ ಲಿಸ್ಟ್‌ನಿಂದ ನಿಮ್ಮ ಹೆಸರನ್ನು ತೆಗೆದು ಹಾಕುತ್ತಾರೆ. ನಂತರ ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಬಹುದಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಪಡೆಯಲು NPCI ಕಡ್ಡಾಯ : ಸರಕಾರದಿಂದ ಜಾರಿಯಾಯ್ತು ಹೊಸ ರೂಲ್ಸ್‌

Karnataka News Gurha Lakshmi Yojana 6th and 7th installment this work is mandatory

Comments are closed.