ಸೋಮವಾರ, ಏಪ್ರಿಲ್ 28, 2025
HomeSpecial StoryBoss Gifts Mercedes Benz SUV: ಪ್ರಾಮಾಣಿಕತೆಗೆ ಮೆಚ್ಚಿ ದುಬಾರಿ ಮರ್ಸಿಡಿಸ್ ಎಸ್ ಯುವಿ ಉಡುಗೊರೆಯಾಗಿ...

Boss Gifts Mercedes Benz SUV: ಪ್ರಾಮಾಣಿಕತೆಗೆ ಮೆಚ್ಚಿ ದುಬಾರಿ ಮರ್ಸಿಡಿಸ್ ಎಸ್ ಯುವಿ ಉಡುಗೊರೆಯಾಗಿ ನೀಡಿದ ಕೇರಳದ ಉದ್ಯಮಿ

- Advertisement -

ಸಾಮಾನ್ಯವಾಗಿ ಉದ್ಯೋಗಿಗಳ ಪ್ರಾಮಾಣಿಕತೆಯನ್ನು ಮೆಚ್ಚಿ ಮಾಲೀಕರು ಚಿನ್ನದ ನಾಣ್ಯ, ಮೊಬೈಲ್, ದುಬಾರಿ ವಾಚು ಕೊಟ್ಟಿದ್ದನ್ನು ಕೇಳಿದ್ದೇವೆ. ಇದು ಸಾಮಾನ್ಯವಾಗಿ ಉದ್ಯೋಗಿಗಳ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರತಿಫಲವಾಗಿ ನೀಡಲಾಗುತ್ತದೆ. ಆದರೆ ಕೇರಳದ ರಿಟೈಲ್ ಚೈನ್ ಮಾಲೀಕರು ಇತ್ತೀಚೆಗೆ ತಮ್ಮ ವಿಶ್ವಾಸಾರ್ಹ ಸಿಬ್ಬಂದಿಗೆ ಹೊಚ್ಚಹೊಸ ಬೆಂಜ್ ಜಿಎಲ್ ಎ (Benz GLA) ಕ್ಲಾಸ್ 220ಡಿ, ಸುಮಾರು ₹ 45 ಲಕ್ಷ ಮೌಲ್ಯದ ಎಸ್ ಯುವಿ( Mercedes Benz SUV GLA class 220D) ಅನ್ನು ಉಡುಗೊರೆಯಾಗಿ ನೀಡಿದ್ದಾರೆ.(Boss gifts Mercedes Benz SUV)
ಪ್ರಸ್ತುತ ಭಾರೀ ಸುದ್ದಿಯಲ್ಲಿರುವ ಮುಖ್ಯಸ್ಥ ಎಕೆ ಶಾಜಿ, ಅವರು ಕೇರಳದಲ್ಲಿ ಮೈ ಜಿ (myG)ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಚಿಲ್ಲರೆ ವ್ಯಾಪಾರಿ ಆಗಿದ್ದರೆ.
ಅವರ ‘ಪ್ರತಿಭಾನ್ವಿತ’ ಸಿಬ್ಬಂದಿ ಸಿಆರ್ ಅನಿಶ್, ಅವರು ಕಳೆದ 22 ವರ್ಷಗಳಿಂದ ಅವರಿಗೆ “ಆಧಾರದ ಸ್ತಂಭ” ಆಗಿದ್ದಾರೆ. ಮೈಜಿ ಸ್ಥಾಪನೆಯಾಗುವ ಮುಂಚೆಯೇ ತಮ್ಮ ಉದ್ಯೋಗದಾತರೊಂದಿಗೆ ಸಂಬಂಧ ಹೊಂದಿದ್ದ ಅನೀಶ್, ಸಂಸ್ಥೆಯ ಮಾರ್ಕೆಟಿಂಗ್, ನಿರ್ವಹಣೆ ಮತ್ತು ವ್ಯಾಪಾರ ಅಭಿವೃದ್ಧಿ ಘಟಕಗಳು ಸೇರಿದಂತೆ ಕಂಪನಿಯಲ್ಲಿ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಪ್ರಸ್ತುತ ಮೈಜಿಯ ಮುಖ್ಯ ವ್ಯಾಪಾರ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ.
ಶಾಜಿ ಹಂಚಿಕೊಂಡ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ತಮ್ಮ ವಿಶ್ವಾಸಾರ್ಹ ಉದ್ಯೋಗಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮತ್ತು ಅವರಿಗೆ ಅಪಾರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. “ನಾನು ಮೈಜಿಯನ್ನು ಪ್ರಾರಂಭಿಸುವ ಮೊದಲು ಕಳೆದ 22 ವರ್ಷಗಳಿಂದ ಅನಿ ನನ್ನೊಂದಿಗೆ ಇದ್ದಾನೆ. ಅವರು ನನಗೆ ಬಲವಾದ ಆಧಾರಸ್ತಂಭವಾಗಿದ್ದಾರೆ. ಅವರು ನನ್ನನ್ನು ಎಂದಿಗೂ ನಿರಾಶೆಗೊಳಿಸಿಲ್ಲ. ಅವರ ಸಹೋದರ ವಾತ್ಸಲ್ಯ ಮತ್ತು ಕೆಲಸದ ಕಡೆಗೆ ಅಪಾರ ಗಮನ ಮತ್ತು ಸಮರ್ಪಣೆ ನನಗೆ ತುಂಬಾ ಬೆಂಬಲ ನೀಡಿತು. ನಾನು ಅನೀಶ್ ಅವರನ್ನು ಪಾಲುದಾರ ಎಂದು ಪರಿಗಣಿಸಿದ್ದೇನೆ.ಮತ್ತು ಉದ್ಯೋಗಿ ಎಂಬಂತೆ ಕಂಡಿಲ್ಲ” ಎಂದು ಶಾಜಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. “ಬಾಸ್ ಇದ್ದರೆ ಇಂಥವರು ಇರಬೇಕು”, “ನನ್ನ ಬಾಸ್ ಒಂದು ಕಪ್ ನೀರೂ ಕೊಟ್ಟಿಲ್ಲ”, “ಯುಪಿಯನ್ನು ಕೇರಳದಲ್ಲಿ ಕಾಪಿ ಮಾಡಬೇಡಿ :ಯೋಗಿ ಆದಿತ್ಯನಾಥ್”, ಎಂಬಿತ್ಯಾದಿ ಕಾಮೆಂಟ್ ಗಳು ಸಾಕಷ್ಟು ಲೈಕ್ಸ್ ಪಡೆದಿವೆ.
ಶಾಜಿ ತಮ್ಮ ಉದ್ಯೋಗಿಗೆ ಕಾರನ್ನು ಉಡುಗೊರೆಯಾಗಿ ನೀಡಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ, ಅವರು ತಮ್ಮ ಆರು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೇ ಕೆಲವು ಉದ್ಯೋಗಿಗಳಿಗೆ ವಿದೇಶ ಪ್ರವಾಸಕ್ಕೆ ಟಿಕೆಟ್ ಮಾಡಿಸಿದ್ದರಂತೆ.

ಇದನ್ನು ಓದಿ: Viral News Kerala Model : ಕೇರಳದ ಕೂಲಿಕಾರ್ಮಿಕ ಮಾಡೆಲ್ ಆದರು! ಇದು ನಿಜಕ್ಕೂ ಕುತೂಹಲದ ಕಥೆ
( Kerala Boss gifts Mercedes SUV to his employee)

RELATED ARTICLES

Most Popular