HD Chowdaiah Death: ಮಂಡ್ಯದ ಮಾಜಿ ಶಾಸಕ ಡಾ. ಹೆಚ್ ಡಿ ಚೌಡಯ್ಯ ವಿಧಿವಶ

ಮಂಡ್ಯ: ಮಂಡ್ಯದ ಮಾಜಿ ಶಾಸಕ ಡಾ. ಹೆಚ್ ಡಿ ಚೌಡಯ್ಯ( HD Chowdaiah)(94) ಇಂದು ಕೊನೆಯುಸಿರೆಳೆದರು. ಮಂಡ್ಯದಲ್ಲಿರುವ ತಮ್ಮ ಹೊಳಲು ನಿವಾಸದಲ್ಲಿ ಮುಂಜಾನೆ 2.15ರ ವೇಳೆಗೆ ಚೌಡಯ್ಯ ವಿಧಿವಶರಾಗಿದ್ದಾರೆ. (HD Chowdaiah death) 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ ಹಾಗೂ 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಕಾವೇರಿ ಹೋರಾಟದಲ್ಲೂ ಮಾದೇಗೌಡ ಜೊತೆ ಸಕ್ರಿಯವಾಗಿ ಭಾಗಿ ಆಗಿದ್ದರು. ಹಲವಾರು ದಿನಗಳಿಂದ ಅನಾರೋಗ್ಯ ಸಮಸ್ಯೆ ಕಾಡಿದ್ದು, ಇಂದು ತಮ್ಮ ಬಂಧು ಬಳಗವನ್ನು ಅಗಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಚೌಡಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಚೌಡಯ್ಯ ಒಬ್ಬ ಮಾಜಿ ಶಾಸಕ, ಶಿಕ್ಷಣ ತಜ್ಞ ಹಾಗೂ ದಕ್ಷ ಆಡಳಿತ ಅಧಿಕಾರಿ ಆಗಿದ್ದರು. 4 ಬಾರಿ ಶಾಸಕರಾಗಿ ಹಾಗೂ 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಚೌಡಯ್ಯ ಒಬ್ಬ ಆದರ್ಶ ವ್ಯಕ್ತಿಯಾಗಿದ್ದರು. ಅವರ ನಿಧನ ವಾರ್ತೆ ಬಹಳ ನೋವುಂಟು ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಜನರಿಗೆ ತಮ್ಮ ಸೇವೆ ಸಲ್ಲಿಸಿದ್ದಾರೆ . ಅಂತಹ ವ್ಯಕ್ತಿಯ ಮರಣದಿಂದ ಪ್ರಾಮಾಣಿಕ ವ್ಯಕ್ತಿಯನ್ನು ಕಳಕೊಂಡಿದ್ದೇವೆ. ಅವರ ಕುಟುಂಬಕ್ಕೆ,ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಚೌಡಯ್ಯ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.
ಒಕ್ಕಲಿಗರ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ
ಪತ್ನಿ ದೊಡ್ಡ ಲಿಂಗಮ್ಮ ಅಗಲಿದ ನಂತರ ಚೌಡಯ್ಯ ತೀವ್ರವಾಗಿ ಕುಗ್ಗಿದ್ದರು. ಇವರಿಗೆ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. 1928ರಲ್ಲಿ ಜನಿಸಿದ ಚೌಡಯ್ಯ, ಬಿಎಸ್ಸಿ ಅಗ್ರಿಕಲ್ಚರ್ ಪದವಿ ಹೊಂದಿದ್ದರು. ಮುಂದೆ ತಾಲೂಕು ಅಧ್ಯಕ್ಷ ಹಾಗೂ ಬೋರ್ಡ್ ಮೆಂಬರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿಂದ ಮುಂದೆ ರಾಜಕೀಯ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಬಳಿಕ ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ ಹಾಗೂ 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇಂದು ಚೌಡಯ್ಯ ತಮ್ಮ ಅಪಾರ ಸಂಖ್ಯೆಯಲ್ಲಿ ಬಂಧು ಮಿತ್ರರನ್ನು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಪಿಎಸ್ ಈ ಅಧ್ಯಕ್ಷರಾಗಿ 1989ರಲಿ ಚೌಡಯ್ಯ ಅಧಿಕಾರ ವಹಿಸಿದ್ದರು. ನಂತರ 31 ವರ್ಷಗಳ ಸುದೀರ್ಘ ಸೇವೆಯನ್ನು ಇಲ್ಲಿ ಸಲ್ಲಿಸಿದ್ದಾರೆ. ಇವರ ಅಂತ್ಯಕ್ರಿಯೆ ಹೊಳಲು ನಿವಾಸದಲ್ಲಿ ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ. ಒಕ್ಕಲಿಗರ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ಜರುಗಲಿದೆ.

ಇದನ್ನೂ ಓದಿ:ಬಾಲಿವುಡ್‌ನ ಖ್ಯಾತ ಹಿರಿಯ ಗಾಯಕ ಬಪ್ಪಿ ಲಹರಿ ವಿಧಿವಶ
(Former Mandya MLA Dr. HD Chowdaiah died at the age of 94)

Comments are closed.