(Knee Pain Tips)ದೇಹದಲ್ಲಿ ಕ್ಯಾಲ್ಸಿಯಂ ಅಥವಾ ಕಬ್ಬಿಣ ಅಂಶ ಕಡಿಮೆಯಗುವುದರಿಂದ ಮತ್ತು ವಯಸ್ಸಾದವರಲ್ಲಿ ಸಾಮಾನ್ಯವಾಗಿ ಮಂಡಿನೋವು ಕಾಣಿಸಿಕೊಳ್ಳುತ್ತದೆ. ಮಂಡಿನೋವು ಒಮ್ಮೆ ಬಂತೆಂದರೆ ಕಡಿಮೆ ಆಗುವುದಿಲ್ಲ. ವಿಪರೀತವಾದ ಮಂಡಿ ನೋವಿನಿಂದ ಎತ್ತರವಾದ ಮೆಟ್ಟಿಲುಗಳನ್ನು ಹತ್ತಲು ಕಷ್ಟವಾಗುತ್ತದೆ. ಈ ಮಂಡಿ ನೋವು ಕಡಿಮೆ ಮಾಡಿಕೊಳ್ಳುವುದಕ್ಕೆ ಈ ಕೆಳಗೆ ಮಾಹಿತಿ ನೀಡಿದ ಪಾನಿಯಾವನ್ನು ಮಾಡಿ ಕುಡಿಯಿರಿ. ಪಾನಿಯಾವನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬ ಮಾಹಿತಿ ಕುರಿತು ತಿಳಿದುಕೊಳ್ಳೋಣ.
(Knee Pain Tips)ಬೇಕಾಗುವ ಸಾಮಾಗ್ರಿಗಳು:
ಮೆಂತ್ಯೆ ಪುಡಿ
ಶುಂಠಿ
ತುಳಸಿ ಎಲೆ
ಮೆಣಸಿನಕಾಳು
ಮಾಡುವ ವಿಧಾನ
ಪಾತ್ರೆಯಲ್ಲಿ ನೀರು ಹಾಕಿಕೊಂಡು ಕುದಿ ಬರುತ್ತಿದ್ದ ಹಾಗೆ ಮಿಕ್ಸಿ ಜಾರಿಯಲ್ಲಿ ಪುಡಿ ಮಾಡಿಕೊಂಡ ಮೆಂತ್ಯೆ ಪುಡಿ, ಚಿಕ್ಕದಾಗಿ ಕತ್ತರಿಸಿಕೊಂಡ ಅರ್ಧ ಶುಂಠಿ, ಐದು ಎಸಳು ತುಳಸಿ ಎಲೆ ,ತರಿ ತರಿಯಾಗಿ ಪುಡಿಮಾಡಿಕೊಂಡ ಮೆಣಸಿನ ಕಾಳನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದನ್ನು ಲೋಟದಲ್ಲಿ ಸೊಸಿಕೊಳ್ಳಬೇಕು ಬಿಸಿ ಆರಿದ ನಂತರ ಜೇನುತುಪ್ಪ ಬೆರೆಸಿ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಪ್ರತಿದಿನ ಈ ಪಾನಿಯಾವನ್ನು ಕುಡಿದರೆ ಕೈಕಾಲು ಜೋಮು ಹಿಡಿಯುವುದು, ಮಂಡಿ,ಸೊಂಟ, ಕೀಲು ನೋವು ಕಡಿಮೆ ಆಗುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಹಾಲು
ಅರಿಶಿಣ
ಹುರಿಗಡಲೆ
ಇದನ್ನೂ ಓದಿ:Curry Leaves: ರುಚಿಗೆ ಅಷ್ಟೇ ಅಲ್ಲ ಅರೋಗ್ಯಕ್ಕೂ ಉತ್ತಮ ಕರಿಬೇವಿನ ಎಲೆಗಳು
ಇದನ್ನೂ ಓದಿ:Home Remedy:ಮಂಡಿ,ಸೊಂಟ, ಭುಜ ನೋವು ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಮನೆಮದ್ದು ಮಾಹಿತಿ
ಇದನ್ನೂ ಓದಿ:Mango Candy Recipe:ಹುಳಿ ಮಾವಿನ ಕಾಯಿಯ ಮ್ಯಾಂಗೋ ಕ್ಯಾಂಡಿ ಮನೆಯಲ್ಲೇ ತಯಾರಿಸಿಕೊಳ್ಳಿ
ಮಾಡುವ ವಿಧಾನ
ಪಾತ್ರೆಯಲ್ಲಿ ಒಂದು ಲೋಟ ಹಾಕಿ ಕಾಯಿಸಬೇಕು ಅದಕ್ಕೆ ಕಾಲು ಚಮಚ ಅರಿಶಿಣ,ಒಂದು ಚಮಚ ಪುಡಿಮಾಡಿಕೊಂಡ ಹುರಿಗಡಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಲೋಟಕ್ಕೆ ಹಾಕಿಕೊಂಡು ರಾತ್ರಿ ಊಟ ಆದ ನಂತರ ಮಲಗುವ ಮುನ್ನ ಬಿಸಿಯಾಗಿ ಕುಡಿಯಬೇಕು. ಹೀಗೆ ಪ್ರತಿದಿನ ಇದನ್ನು ಸೇವನೆ ಮಾಡುವುದರಿಂದ ಮಂಡಿ ನೋವು ಕಡಿಮೆ ಆಗುತ್ತದೆ.
ಬಟ್ಟೆಯಲ್ಲಿ ಸ್ವಲ್ಪ ಅಕ್ಕಿ ಹಿಟ್ಟು, ಮೂರು ಚಮಚ ತುರಿದ ಶುಂಠಿ, ಒಂದು ಚಮಚ ಎಲಕ್ಕಿ ಪುಡಿ, ಒಂದು ಚಮಚ ಲವಂಗ ಪುಡಿ, ಒಂದು ಚಮಚ ಕಲ್ಲು ಉಪ್ಪು ಸೇರಿಸಿ ಗಂಟು ಕಟ್ಟಿ ಇಟ್ಟುಕೊಳ್ಳಬೇಕು. ನಂತರ ಎಳ್ಳೆಣ್ಣೆಯನ್ನು ಬಿಸಿ ಮಾಡಿಕೊಂಡು ಮಂಡಿ ನೋವಿರುವ ಕಡೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿದರೆ ನೋವು ಕಡಿಮೆ ಆಗುತ್ತದೆ. ಕರ್ಪೂರವನ್ನು ಪುಡಿಮಾಡಿಕೊಂಡು ತೆಂಗಿನ ಎಣ್ಣೆಯನ್ನು ಬೇರೆಸಿ ಮಂಡಿಯ ಮೇಲೆ ಹಚ್ಚಿಕೊಂಡು ಮಸಾಜ್ ಮಾಡಿದರೆ ಮಂಡಿ ನೋವು ಕಡಿಮೆ ಆಗುತ್ತದೆ.
ಇದನ್ನೂ ಓದಿ:Nail Wrap Problem Tips:ಉಗುರು ಸುತ್ತು ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ
Knee Pain Tips Try this drink if you have extreme knee pain