Virat Kohli 72nd Century : ವಿರಾಟ್ ಕೊಹ್ಲಿ 72ನೇ ಅಂತಾರಾಷ್ಟ್ರೀಯ ಶತಕ, ಪಾಂಟಿಂಗ್ ದಾಖಲೆ ಮುರಿದ ಕಿಂಗ್


ಛಟ್ಟೋಗ್ರಾಮ್ : ರನ್ ಮಷಿನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 72ನೇ ಶತಕ (Virat Kohli 72nd Century) ಬಾರಿಸಿದ್ದಾರೆ.ಆತಿಥೇಯ ಬಾಂಗ್ಲಾದೇಶ ವಿರುದ್ಧ (India Vs Bangladesh ODI series) ಛಟ್ಟೋಗ್ರಾಮ್’ನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳನ್ನು ದಾಖಲಿಸಿದವರ ಸಾಲಿನಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು.

ಆಸೀಸ್ ಮಾಜಿ ನಾಯಕ ಪಾಂಟಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 71 ಶತಕಗಳನ್ನು ದಾಖಲಿಸಿದ್ದು, ಕೊಹ್ಲಿ 72ನೇ ಶತಕದ ಮೂಲಕ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 100 ಶತಕಗಳನ್ನು ಬಾರಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. 71ನೇ ಶತಕಕ್ಕಾಗಿ 3 ವರ್ಷಗಳ ಕಾಲ ಕಾದಿದ್ದ ವಿರಾಟ್ ಕೊಹ್ಲಿ, ಕಳೆದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರ ನೀಗಿಸಿಕೊಂಡಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಹಳೆಯ ಫಾರ್ಮ್’ಗೆ ಮರಳಿದ್ದಾರೆ.

ಇದನ್ನೂ ಓದಿ : Ishan Kishan Double Century : ಏಕದಿನ ಕ್ರಿಕೆಟ್ ನಲ್ಲಿ ಇಶಾನ್ ಕಿಶನ್ ದಾಖಲೆಯ ದ್ವಿಶತಕ

ಇದನ್ನೂ ಓದಿ : India Women Vs Aus Women T20 : ಮೊದಲ ಟಿ20ಯಲ್ಲಿ ಆಸೀಸ್ ವನಿತೆಯರ ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಹೀನಾಯ ಸೋಲು

ಇದನ್ನೂ ಓದಿ : BCCI selection committee: ಬಿಸಿಸಿಐ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರೇಸ್; ಕನ್ನಡಿಗ ವೆಂಕಟೇಶ್ ಪ್ರಸಾದ್ ಆಯ್ಕೆ ಬಹುತೇಕ ಖಚಿತ

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ 782 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳಲ್ಲಿ 100 ಶತಕಗಳನ್ನು ಬಾರಿಸಿದ್ರೆ, ವಿರಾಟ್ ಕೊಹ್ಲಿ 536 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳಲ್ಲಿ 72 ಶತಕಗಳನ್ನು ಬಾರಿಸಿದ್ದಾರೆ. ರಿಕಿ ಪಾಂಟಿಂಗ್ 668 ಇನ್ನಿಂಗ್ಸ್’ಗಳಿಂದ 71 ಶತಕಗಳನ್ನು ಸಿಡಿಸಿದ್ದಾರೆ. ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕರ 63 ಶತಗಳೊಂದಿಗೆ 4ನೇ ಸ್ಥಾನದಲ್ಲಿದ್ರೆ, ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಜಾಕ್ ಕಾಲೀಸ್ 62 ಶತಕಗಳನ್ನು ಸಿಡಿಸಿ 5ನೇ ಸ್ಥಾನದಲ್ಲಿದ್ದಾರೆ.

Virat Kohli 72nd Century : Virat Kohli 72nd international century, Ponting record breaking king

Comments are closed.