ಚಳಿಗಾಲದಲ್ಲಿ ಡ್ಯಾಂಡ್ರಫ್ ಸಮಸ್ಯೆಯು ಬಹುತೇಕ ಎಲ್ಲರಿಗೂ ಕಾಡುತ್ತದೆ. ಚಳಿಗಾಲದಲ್ಲಿ ಒಣ ಚರ್ಮ ಉಂಟಾಗುವ ಸಂಖ್ಯೆಯು ಹೆಚ್ಚಿರೋದ್ರಿಂದ ನಿಮಗೆ ಹೊಟ್ಟಿನ ಸಮಸ್ಯೆ ಇನ್ನಷ್ಟು ಕಾಡುತ್ತದೆ. ಈ ಸಮಸ್ಯೆಯಿಂದ ಪಾರಾಗಬೇಕೆಂದು ಅನೇಕರು ಸಾಕಷ್ಟು ಶಾಂಪೂ, ಕಂಡಿಷನರ್ಗಳ ಮೊರೆ ಹೋಗ್ತಾರೆ. ಆದರೆ ಇದಕ್ಕೆ ನಿಮ್ಮ ಮನೆಯಲ್ಲಿಯೇ ಪರಿಹಾರವಿದೆ. ನೀವು ಮನೆಯಲ್ಲಿನ ಕೆಲ ವಸ್ತುಗಳನ್ನೇ ಬಳಕೆ ಮಾಡಿಕೊಂಡು ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ. (remedies to deal with dandruff)
1 ಚಮಚ ಮೆಂತೆ ಪೌಡರ್ ಹಾಗೂ 1 ಚಮಚ ತ್ರಿಫಲ ಚೂರ್ಣವನ್ನು ಮೊಸರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಿ. ಮಾರನೇ ದಿನ ಬೆಳಗ್ಗೆ ಈ ಮಿಶ್ರಣವನ್ನು ನಿಮ್ಮ ತಲೆಗೆ ಹೇರ್ ಮಾಸ್ಕ್ನಂತೆಯೇ ಬಳಿಸಿ. ಒಂದು ಗಂಟೆಯ ಬಳಿಕ ಶುದ್ಧವಾದ ಬೆಚ್ಚನೆಯ ನೀರಿನಿಂದ ಇದನ್ನು ತೊಳೆಯಿರಿ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಈ ರೀತಿ ಮಾಡಿ.
ಒಂದು ಕಪ್ನಲ್ಲಿ ತೆಂಗಿನ ಎಣ್ಣೆಯನ್ನು 2 ನಿಮಿಷಗಳ ಕಾಲ ಬಿಸಿ ಮಾಡಿ. ಇದಕ್ಕೆ 1 ಚಮಚ ನಿಂಬೆ ರಸವನ್ನು ಸೇರಿಸಿ ಹಾಗೂ ಇದನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ರಾತ್ರಿಯಿಡೀ ಅಥವಾ ತಲೆ ಸ್ನಾನ ಮಾಡುವ 2 ಗಂಟೆಗಳ ಮುನ್ನ ಹಚ್ಚಿಕೊಳ್ಳಿ. ಬಳಿಕ ತಲೆಸ್ನಾನ ಮಾಡಿ. ವಾರಕ್ಕೆ ಒಮ್ಮೆ ಈ ರೀತಿಯಾಗಿ ಮಾಡಿ.
ತೆಂಗಿನ ಎಣ್ಣೆಯಲ್ಲಿ 1 ಚಮಚ ನಿಂಬೆ ಹಾಗೂ 5 ಗ್ರಾಂ ಭಸ್ಮವನ್ನು ಮಿಶ್ರಣ ಮಾಡಿ. ರಾತ್ರಿಯಿಡೀ ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಂಡು ಮಾರನೇ ದಿನ ಬೆಳಗ್ಗೆ ಶಾಂಪೂವಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರ ಈ ರೀತಿ ಮಾಡಿ.
1 ಕಪ್ ಅಲೋವೇರಾ ಜೆಲ್ನ್ನು ಎರಡು ಟೇಬಲ್ ಸ್ಪೂನ್ ಕ್ಯಾಸ್ಟರ್ ಎಣ್ಣೆಯೊಂದಿಗೆ ಸೇರಿಸಿ. ಇದನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ. ಮಾರನೇ ದಿನ ಬೆಳಗ್ಗೆ ಸ್ನಾನ ಮಾಡಿ. ವಾರಕ್ಕೊಮ್ಮೆ ಈ ರೀತಿ ಮಾಡೋದ್ರಿಂದ ನಿಮಗೆ ಡ್ಯಾಂಡ್ರಫ್ ಸಮಸ್ಯೆ ದೂರಾಗಲಿದೆ.
1 ಕಪ್ ಮೆಂತೆ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬಳಿಕ ಇದನ್ನು ಪೇಸ್ಟ್ನಲ್ಲಿ ರುಬ್ಬಿಕೊಳ್ಳಿ ಹಾಗೂ ಇದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿಕೊಳ್ಳಿ. ಈ ಪೇಸ್ಟ್ನ್ನು ನೆತ್ತಿಗೆ ಹಚ್ಚಿಕೊಳ್ಳಿ. 1 ಗಂಟೆಗಳ ಕಾಲ ಹಾಗೆಯೇ ಬಿಡಿ. ಸೌಮ್ಯವಾದ ಶಾಂಪೂವಿನಿಂದ ನಿಮ್ಮ ತಲೆಯನ್ನು ತೊಳೆದುಕೊಳ್ಳಿ. ವಾರದಲ್ಲಿ 2 ದಿನ ಈ ರೀತಿ ಮಾಡಿ.
ಇದನ್ನು ಓದಿ: Onion Juice on Hair : ಕೂದಲ ರಕ್ಷಣೆಗೆ ಈರುಳ್ಳಿ ಬಳಸಿ
ಇದನ್ನೂ ಓದಿ: ಅಕ್ಕಿ ಹಿಟ್ಟಿನಿಂದಲೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದು
Ayurveda remedies to deal with dandruff in winter season