ಸೀಬೆ ಹಣ್ಣು ಕೇವಲ ತಿನ್ನಲು ಮಾತ್ರ ರುಚಿಯಾದ ಹಣ್ಣಲ್ಲ. ಇದರಿಂದ ಸ್ಕಿನ್ ಉತ್ತಮ ಪೋಷಣೆ ದೊರೆಯುತ್ತದೆ. ತಿನ್ನುವುದರ ಜೊತೆಗೆ ಸೀಬೆ ಹಣ್ಣನ್ನು ಫೇಸ್ ಮಾಸ್ಕ್ ಬಳಸಿದರೆ ಅದರಿಂದ ಮತ್ತೆ ಹೊಸ ಸ್ಕಿನ್ ಕೇರ್ ಉತ್ಪನ್ನಗಳತ್ತ ಮುಖ ಮಾಡೋದೆ ಮರೆತು ಬಿಡೋದು ಗ್ಯಾರಂಟಿ. ತ್ವಚೆಯ ಕಾಂತಿ ಕೂಡ ಹೆಚ್ಚುತ್ತದೆ.

ತ್ವಚೆಯ ಕಾಂತಿ : ಗುಲಾಬಿ ಬಣ್ಣದ ಸೀಬೆ ಕಾಯಿ ಕಾಂತಿಯನ್ನು ಹೆಚ್ಚಿಸಲು ಮತ್ತು ತಾಜಾತನಕ್ಕೆ ಸಹಾಯ ಮಾಡುತ್ತದೆ. ತ್ವಚೆಯ ಕಾಂತಿಯನ್ನು ಪಡೆಯಲು ಮತ್ತು ಸತ್ತ ಚರ್ಮದ ಕೋಶಗಳನ್ನು ನಿವಾರಿಸಲು ಫೇಸ್ ಸ್ಕ್ರಬ್ ತಯಾರಿಸಿ. ಸ್ವಲ್ಪ ಸೀಬೆಕಾಯಿ ತಿರುಳನ್ನು ಜಜ್ಜಿ ಮೊಟ್ಟೆಯ ಹಳದಿ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ, ನಂತರ ಬೆಚ್ಚಗಿನ ನೀರಿನಿಂದ ಮಸಾಜ್ ಮಾಡಿ. ಹಣ್ಣಿನ ಬೀಜಗಳು ಕಲ್ಮಶಗಳನ್ನು ನಿವಾರಿಸಲು ಅತ್ಯುತ್ತಮ ಎಕ್ಸ್ ಫೋಲಿಯೇಟರ್ ಆಗಿ ಕೆಲಸ ಮಾಡುತ್ತದೆ, ಇದು ಚರ್ಮದ ಟೋನ್ ಅನ್ನು ನೀಡುತ್ತದೆ.
ಇದನ್ನೂ ಓದಿ: Beauty Secret : ಶ್ರೀಗಂಧದಲ್ಲಿನ ಸೌಂದರ್ಯ ರಹಸ್ಯ ಏನು ಗೊತ್ತಾ ?

ಚರ್ಮ ಹೊಳೆಯುತ್ತದೆ : ಕೆಂಪು ಸೀಬೆಹಣ್ಣಿನ ತಿರುಳು ತೆಗೆದು ಮ್ಯಾಶ್ ಮಾಡಿ ಅದಕ್ಕೆ ಮೊಟ್ಟೆಯ ಹಳದಿ ಭಾಗ ಸೇರಿಸಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಇದನ್ನು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಡೆಡ್ ಸ್ಕಿನ್ ನಿವಾರಣೆಯಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ಬ್ಲ್ಯಾಕ್ ಹೆಡ್: ಸೀಬೆ ಎಲೆಗಳ ಮತ್ತೊಂದು ಪ್ರಯೋಜನ ಎಂದರೆ ಬ್ಲ್ಯಾಕ್ ಹೆಡ್ಸ್ ನಿವಾರಿಸುವ ಒಂದು DIY ಸ್ಕ್ರಬ್ ಆಗಿ ಕಾರ್ಯ ನಿರ್ವಹಿಸುತ್ತದೆ. ಎಲೆಗಳನ್ನು ಚೆನ್ನಾಗಿ ತೊಳೆದು ಬ್ಲೆಂಡ್ ಮಾಡಿ, ನೀರಿನೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಬ್ಲ್ಯಾಕ್ ಹೆಡ್ಸ್ ನಿವಾರಿಸಲು ಈ ಸ್ಕ್ರಬ್ ಅನ್ನು ಮೂಗಿನ ಮೇಲೆ ಹಚ್ಚಿಕೊಳ್ಳಿ. ಸೀಬೆ ಎಲೆಗಳೂ ಅಲರ್ಜಿಗಳಿಂದ ರಕ್ಷಿಸುತ್ತವೆ, ಆದ್ದರಿಂದ ಇದು ಫ್ಲೂ ಸೀಸನ್‌ಗೆ ಹೇಳಿ ಮಾಡಿಸಿದ೦ತಿದೆ
ಇದನ್ನೂ ಓದಿ: Beauty tips : ತಿಂದು ಎಸೆಯುವ ಬಾಳೆಹಣ್ಣಿನ ಸಿಪ್ಪೆಯಿಂದ ಅರಳುತ್ತೆ ಮುಖದ ಕಾಂತಿ

ಸೀಬೆ ಹಣ್ಣಿನ ಫೇಸ್ ಮಾಸ್ಕ್ : ಬೇಕಾಗುವ ಸಾಮಾಗ್ರಿಗಳು : ಸೀಬೆ ಕಾಯಿ ತಿರುಳಿ. ಸಿಹಿರಹಿತ ಮೊಸರು, ಬಾಳೆಹಣ್ಣು, ಜೇನು. ಎಲ್ಲಾ ಸಾಮಾಗ್ರಿಗಳನ್ನು ಒಂದು ಬೌಲ್‌ನಲ್ಲಿ ಸೇರಿಸಿ ದಪ್ಪನೆ ಪೇಸ್ಟ್ ತಯಾರಿಸಿಕೊಳ್ಳಿ. ಸುಮಾರು 30 ನಿಮಿಷ ನಿಮ್ಮ ಮುಖಕ್ಕೆ ಹಚ್ಚಿ. ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹಗುರವಾದ ಮಾಯಿಶ್ಚರೈಸರ್ ಬಳಸಿ. ಇದರಿಂದ ಸ್ಕಿನ್ ತುಂಬಾ ಆರೋಗ್ಯಯುತವಾಗಿರುತ್ತದೆ.
(The secret of radiance in the seibe fruit: The skin glows with a seibe face mask)