Idli recipe: ಮೃದುವಾದ, ರುಚಿಯಾದ ತಟ್ಟೆ ಇಡ್ಲಿ ರೆಸಿಪಿ

ಮೃದುವಾದ ತಟ್ಟೆ ಇಡ್ಲಿ ನೆನೆಸಿಕೊಂಡರೆ ಯಾರ ಬಾಯಲ್ಲಿ ಆದ್ರು ನೀರು ಬರುತ್ತೆ. ಅದರಲ್ಲೂ ಬೆಳಗಿನ ಉಪಹಾರಕ್ಕೆ ತಟ್ಟೆ ಇಡ್ಲಿ ಇದ್ರೇ ಅಂತೂ ಮುಗಿದೇ ಹೋಯಿತು ಸ್ವರ್ಗ ಸುಖ. ಆದ್ರೇ ಹೆಚ್ಚಿನವರಿಗೆ ರುಚಿಯಾದ, ಮೃದುವಾದ ತಟ್ಟೆ ಇಡ್ಲಿಯನ್ನು ಮಾಡಲು ಬರುವುದಿಲ್ಲಾ. ಆದರಿಂದ ನಾವು ಈ ತಟ್ಟೆ ಇಡ್ಲಿ ಹೇಗೆ ತಯಾರಿಸುವುದು ಅಂತ ಹೇಳುತ್ತೆವೆ.

ತಟ್ಟೆ ಇಡ್ಲಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು : ಉದ್ದಿನ ಬೇಳೆ – 1 ಕಪ್ (4 ಗಂಟೆ ನೆನೆಸಿದ್ದು), ಮೆಂತ್ಯೆ ಬೀಜ – ಮುಕ್ಕಾಲು ಚಮಚ (4 ಗಂಟೆ ನೆನೆಸಿದ್ದು), ತೆಳು ಅವಲಕ್ಕಿ – ಮುಕ್ಕಾಲು ಕಪ್, ದೋಸೆ ಅಕ್ಕಿ – ಎರಡೂವರೆ ಕಪ್ (4 ಗಂಟೆ ನೆನೆಸಿದ್ದು), ಉಪ್ಪು – ರುಚಿಗೆ ತಕ್ಕಷ್ಟು.

ಇದನ್ನೂ ಓದಿ: Capsicum Bath Recipe : ಒಮ್ಮೆ ಆದ್ರೂ ಟ್ರೈ ಮಾಡಿ ʼಕ್ಯಾಪ್ಸಿಕಂ ಬಾತ್ʼ

ತಟ್ಟೆ ಇಡ್ಲಿ ಮಾಡುವ ವಿಧಾನ : 1 ಕಪ್ ಉದ್ದಿನಬೇಳೆಯನ್ನು 4 ಗಂಟೆ ನೀರಿನಲ್ಲಿ ನೆನೆಸಿ, ನಂತರ ಚೆನ್ನಾಗಿ ತೊಳೆದು, ನೀರು ಬಸಿದು ಇಡಿ. ಮಿಕ್ಸಿ ಜಾರಿಗೆ ನೆನೆಸಿದ ಉದ್ದಿನ ಬೇಳೆ, ಮುಕ್ಕಾಲು ಚಮಚ ನೆನೆಸಿದ ಮೆಂತ್ಯೆ ಬೀಜ ಹಾಕಿ ನುಣ್ಣಗೆ ರುಬ್ಬಿ. ನುಣ್ಣಗೆ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ತೆಗೆದಿಡಿ.

ನಂತರ ಅದೇ ಮಿಕ್ಸಿ ಜಾರಿಗೆ ಮುಕ್ಕಾಲು ಕಪ್ ತೊಳೆದ ತೆಳು ಅವಲಕ್ಕಿ, ಎರಡೂವರೆ ಕಪ್ ನೆನೆಸಿದ ಅಕ್ಕಿ ಸ್ವಲ್ಪ ಹಾಕಿ ತರಿ ತರಿಯಾಗಿ ರುಬ್ಬಿ. ಈಗ ಇದನ್ನು ಅದೇ ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ 12 ಗಂಟೆಗಳ ಕಾಲ ಹುಳಿಯಾಗಲು ಬಿಡಿ. ಇದು ಹುಳಿಯಾದ ಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ.

ಇದನ್ನೂ ಓದಿ: Food : ಮೃದುವಾದ ಮೆಂತ್ಯೆ ದೋಸೆ ಮಾಡಿ ಸವಿಯಿರಿ

ಈಗ ತಟ್ಟೆ ಇಡ್ಲಿ ಮಾಡುವ ತಟ್ಟೆಗಳಿಗೆ ಎಣ್ಣೆ ಸವರಿ, ಮಾಡಿಟ್ಟಿರುವ ಹಿಟ್ಟನ್ನು ಹಾಕಿ. ನಂತರ ಇದನ್ನು ಸ್ಟ್ಯಾಂಡಿಗೆ ಹಾಕಿ, ಇಡ್ಲಿ ಪಾತ್ರೆಗೆ ನೀರು ಹಾಕಿ 12 ರಿಂದ 13 ನಿಮಿಷ ದೊಡ್ಡ ಉರಿಯಲ್ಲಿ ಹಬೆಯಲ್ಲಿ ಬೇಯಿಸಿ. ತಣ್ಣಗಾದ ಮೇಲೆ ಬದಿಯಿಂದ ನಿಧಾನವಾಗಿ ಇಡ್ಲಿಗಳನ್ನು ತೆಗೆಯಿರಿ. ಮೃದುವಾದ ರುಚಿಯಾದ ಇಡ್ಲಿಗಳನ್ನು ತೆಂಗಿನ ಕಾಯಿ ಚಟ್ನಿ ಮತ್ತು ಸಾಂಬಾರಿನ ಜೊತೆ ಸವಿಯಲು ಸಿದ್ದ.

(Soft, tasty Thatte idli recipe)

Comments are closed.