Beautiful lip: ಮೃದುವಾದ, ಕೆಂಪಾದ ಸುಂದರ ತುಟಿ ನಿಮ್ಮದಾಗಬೇಕಾ ? ಈ ಟಿಪ್ಸ್‌ ಫಾಲೋ ಮಾಡಿ

Beautiful lip : ಸರಿಯಾದ ಆಕಾರ, ತಿಳಿ ಗುಲಾಬಿ ಬಣ್ಣದ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಆದರೆ ಇತ್ತೀಚಿನ ದಿನದಲ್ಲಿ ಅಂದದ ತುಟಿಯನ್ನು ಪಡೆಯಲು ಲಿಪ್ ಬಾಮ್ ಅಥವಾ ಲಿಪ್ ಸ್ಟಿಕ್ ಮಾತ್ರ ಹಚ್ಚಿದ್ರೆ ಸಾಲದು. ನೈಸರ್ಗಿಕವಾಗಿಯೇ ನಿಮ್ಮ ತುಟಿಯನ್ನು ಕೆಂಪಗಾಗಿಸಿಕೊಳ್ಳಬಹುದು.

Should a soft, red, beautiful lip be yours  Follow these tips

ಒಣಗಿದ, ಕಪ್ಪನೆಯ ತುಟಿ ನಿಮ್ಮದಾಗಿದ್ರೆ ಒಂದು ಚಮಚ ಜೇನುತುಪ್ಪಕ್ಕೆ ಬ್ರೌನ್ ಶುಗರ್ ಬೆರೆಸಿ ತುಟಿಯ ಮೇಲೆ ಸವರಿಕೊಳ್ಳಿ. ವೃತ್ತಾಕಾರವಾಗಿ ಅದನ್ನು ಸ್ಕ್ರಬ್ ಮಾಡಿ, ಅದೇ ರೀತಿ ಬಿಸಿ ನೀರಿನಿಂದ್ಲೂ ಸವರಿ. ನಂತರ ಸ್ವಚ್ಛವಾದ ಟೂತ್ ಬ್ರಶ್ ತೆಗೆದುಕೊಂಡು ನಿಮ್ಮ ತುಟಿಯ ಒಣ ಚರ್ಮದ ಮೇಲೆ ಆಡಿಸಿ, ನಂತರ ಬಿಸಿ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ: Potato Beauty tips : ಆಲೂಗಡ್ಡೆಯಿಂದ ಅರಳುತ್ತೆ ಬಿಳುಪಾದ ಸುಂದರ ತ್ವಚೆ

Should a soft, red, beautiful lip be yours  Follow these tips

ನಿಮ್ಮ ತುಟಿಗಳನ್ನು ಮೃದುವಾಗಿಸಲು ಕೂಡ ಸುಲಭ ಉಪಾಯವಿದೆ. ಇದಕ್ಕಾಗಿ ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ಆಯಿಲ್ ಅನ್ನು ನೀವು ಬಳಸಬಹುದು. ರಾತ್ರಿ ಮಲಗುವ ಮುನ್ನ ಅದನ್ನು ನಿಮ್ಮ ತುಟಿಗಳಿಗೆ ಸವರಿಕೊಳ್ಳಿ. ಬೆಳಗ್ಗೆ ಎದ್ದು ಬಿಸಿ ನೀರಿನಿಂದ ತೊಳೆದರೆ ನಿಮ್ಮ ತುಟಿ ಮೃದುವಾಗುತ್ತದೆ.

Should a soft, red, beautiful lip be yours  Follow these tips

ಮುಂದಿನ ಹಂತ ನಿಮ್ಮ ತುಟಿಯನ್ನು ಕೊಂಚ ದಪ್ಪಗಾಗಿಸುವುದು. ಕಾಲು ಚಮಚ ದಾಲ್ಚಿನಿ ಪುಡಿಯನ್ನು ಆಲಿವ್ ಆಯಿಲ್ ಜೊತೆ ಬೆರೆಸಿ ನಿಮ್ಮ ತುಟಿಗಳ ಮೇಲೆ ಹಚ್ಚಿಕೊಳ್ಳಿ. ಕೆಲ ನಿಮಿಷಗಳವರೆಗೆ ಹಾಗೇ ಬಿಡಿ. ಹತ್ತಿ ತುಂಡನ್ನು ತೆಗೆದುಕೊಂಡು ಅದನ್ನು ಸ್ಟ್ರಾಬೆರಿ ಅಥವಾ ಚೆರ್ರಿಯ ಫ್ರೆಶ್ ಜ್ಯೂಸ್ ನಲ್ಲಿ ಅದ್ದಿ. ಅದನ್ನು ನಿಮ್ಮ ತುಟಿಗಳ ಮೇಲೆ ಸವರಿಕೊಳ್ಳಿ. ಬೀಟ್ ರೂಟಿನ ತುಂಡನ್ನು ನಿಮ್ಮ ತುಟಿಗಳ ಮೇಲೆ ಸವರಿಕೊಳ್ಳಿ ನಂತರ ಲಿಪ್ ಬಾಮ್ ಹಚ್ಚಿಬಿಟ್ರೆ ನಿಮ್ಮ ತುಟಿ ಕೆಂಪಗೆ ಹೊಳೆಯುತ್ತದೆ.

ಇದನ್ನೂ ಓದಿ: Beauty Secret : ಶ್ರೀಗಂಧದಲ್ಲಿನ ಸೌಂದರ್ಯ ರಹಸ್ಯ ಏನು ಗೊತ್ತಾ ?

(Should a soft, red, beautiful lip be yours Follow these tips)

Comments are closed.