Karinjeshwara Temple : ಅನಾದಿಕಾಲದಿಂದಲೂ ಬೆಟ್ಟದಲ್ಲಿ ನೆಲೆಸಿದ್ದಾನೆ ಶಿವ : ದೇವರ ಮೊದಲ ಪ್ರಸಾದ ಮಂಗಗಳಿಗೆ ಮೀಸಲು

0
  • ವಂದನಾ ಕೊಮ್ಮುಂಜೆ

Karinjeshwara Temple : ದೇವಾಲಯಗಳು, ಇದು ಕೇವಲ ನಮ್ಮ ನಂಬಿಕೆಯ ನೆಲಬೀಡುಗಳಲ್ಲ. ಇದರ ಹಿಂದೆ ನಮ್ಮ ಪೂರ್ವಜರ ಜ್ಞಾನನವೂ ಅಡಗಿದೆ. ಹಿಂದಿನ ವಿಜ್ಞಾನವನ್ನು ನಮ್ಮ ಪೂರ್ವಜರು ತಮ್ಮ ಮುಂದಿನ ಪೀಳಿಗೆಗೆ ತಲುಪಿಸಿದ ರೀತಿಯದು. ಆದ್ರೆ ಅದನ್ನು ತಿಳಿದು ಕೊಳ್ಳುವಷ್ಟು ತಿಳುವಳಿಕೆ ಈಗಿನ ಜನಾಂಗಕ್ಕಿಲ್ಲ.

ಇನ್ನು ಹಲವು ದೇವಾಲಯಕ್ಕೆ ಯುಗ ಯುಗದ ಇತಿಹಾಸ ವಿರುತ್ತೆ . ಅಂತಹದೇ ಒಂದು ದೇವಾಲಯವಿದು. ಶಿವನ ದೇವಾಯಲವಾದ ಇದಕ್ಕೆ ಸತ್ಯಯುಗದ ನಂಟು ಇದೆ. ಇಲ್ಲಿರುವ ಕಲ್ಯಾಣಿಗಳು ಯುಗ ಯುಗದ ಕಥೆಯನ್ನು ಹೇಳುತ್ತವೆ.

ಈ ದೇವಾಲಯಕ್ಕೆ ಹೋಗಬೇಕಾದ್ರೆ ಸ್ವಲ್ಪ ಕಷ್ಟ ಪಡಲೇಬೇಕು. ಯಾಕಂದ್ರೆ ಇದು ಇರೋದು ಒಂದು ಬೆಟ್ಟದ ಮೇಲೆ. ಅಂದ್ರೆ ಸಮುದ್ರ ಮಟ್ಟದಿಂದ ಸುಮಾರು 1000 ಅಡಿ ಎತ್ತರದಲ್ಲಿದೆ. ಇಲ್ಲಿಗೆ ಹೋಗೋಕೆ 355 ಮೆಟ್ಟಿಲುಗಳನ್ನು ಹತ್ತಲೇ ಬೇಕು.

Karinjeshwara Temple Dakshin Kannada lord shiva temple

ಇಲ್ಲಿ ಬೆಟ್ಟದ ತುದಿಯಲ್ಲಿ ಶಿವ ನೆಲೆಸಿದ್ದು , ಮತ್ತೊಂದು ಭಾಗದಲ್ಲಿ ತಾಯಿ ಪಾರ್ವತಿ ಹಾಗು ಗಣೇಶನ ಗುಡಿಯನ್ನು ಕಾಣಬಹುದು. ಇಲ್ಲಿ ಬರುವ ಭಕ್ತರು ಕಲ್ಯಾಣಿಯಲ್ಲಿ ಮಿಂದೆದ್ದು ದೇವರಲ್ಲಿ ಭಕ್ತಿಯಿಂದ ಕೈ ಮುಗಿದರೆ ಇಷ್ಟಾರ್ಥ ಈಡೇರಿಸುತ್ತಾನೆ ಆನ್ನೊ ನಂಬಿಕೆ ಭಕ್ತರಲ್ಲಿದೆ
ಇನ್ನು ಈ ಬೆಟ್ಟ ಕ್ಕೆ ಯುಗಯುಗಗಳ ಇತಿಹಾಸವಿದೆ.

Karinjeshwara Temple Dakshin Kannada lord shiva temple

ಸತ್ಯಯುಗದಲ್ಲಿ ಇದನ್ನು ರೌದ್ರಗಿರಿ, ತ್ರೇತಾಯುಗದಲ್ಲಿ ಇದನ್ನು ಗಜೇಂದ್ರ ಗಿರಿ ದ್ವಾಪರದಲ್ಲಿ ಇದನ್ನು ಭೀಮ ಶೈಲ, ಕರೆಯಲಾಗಿತ್ತು. ಹೀಗಾಗಿ ಇದು ನಾಲ್ಕು ಯುಗಗಳ ಸಾಕ್ಷಿಯಾಗಿ ನಿಂತಿದೆ ಅನ್ನುತ್ತೆ ಸ್ಥಳಪುರಾಣ.

Karinjeshwara Temple Dakshin Kannada lord shiva temple

ಇನ್ನು ಇಲ್ಲಿನ ಕಲ್ಯಾಣಿಗಳಿಗೂ ಅದರದೇ ಆದ ಕಥೆ ಇದೆ. ದ್ವಾಪರ ಯುಗದಲ್ಲಿ ಇದೇ ಸ್ಥಳದಲ್ಲಿ ಭಿಮನಿಂದಾಗಿ ಈ ಕಲ್ಯಾಣಿಗಳು ಹುಟ್ಟಿ ಕೊಂಡವು ಅಂತಾರೆ ಭಕ್ತರು. ಅವರ ಪ್ರಕಾರ ಭೀಮನ ಗಧೆ ಬಿದ್ದ ಸ್ಥಳದಲ್ಲಿ ಗಧಾ ತೀರ್ಥ, ಭೀಮನ ಬೆರಳಿನಿಂದಾದ ಅಂಗುಷ್ಟ ತೀರ್ಥ, ಹಾಗು ಅವನು ಬಗ್ಗಿದಾಗ ಆದ ಜಾನು ತೀರ್ಥ ಈಗ ಇಲ್ಲಿರುವ ಕಲ್ಯಾಣಿಗಳು. ಇನ್ನು ಇಲ್ಲಿ ಒಂದು ಕಲ್ಯಾಣಿಯ ವೊಳಗೆ ಇನ್ನೊಂದು ಕಲ್ಯಾಣಿ ಇದ್ದು ಅದನ್ನು ಅರ್ಜುನ ತನ್ನ ಬಾಣದಿಂದ ನಿರ್ಮಿಸಿದ ಅಂತ ಹೇಳಲಾಗುತ್ತೆ.

Karinjeshwara Temple Dakshin Kannada lord shiva temple

ಇನ್ನು ಶಿವರಾತ್ರಿಯಲ್ಲಿ ಇಲ್ಲಿ ವಿಶೇಷವಾಗಿದ್ದು, ಶಿವರಾತ್ರಿನ್ನು 4 ದಿನಗಳ ಕಾಲ ಆಚರಿಸಲಾಗುತ್ತೆ. ಈ ವೇಳೆಯಲ್ಲಿ ಶಿವನ ಉತ್ಸವ ಮೂರ್ತಿ ಯನ್ನು ಬೆಟ್ಟದ ಎರಡನೇ ಭಾಗದಲ್ಲಿರುವ ಪಾರ್ವತಿಯ ದೇವಾಲಯ ಕ್ಕೆ ತರಲಾಗುತ್ತೆ. ನಂತರ 3ನೇ ದಿನ ಮತ್ತೆ ದೇವಾಲಯಕ್ಕೆ ಹಿಂದಿರುಗಿಸ‌ ಲಾಗುತ್ತೆ . ಇದನ್ನು ಶಿವ ಪಾರ್ವತಿಯ (Karinjeshwara Temple) ಸಮಾಗಮ ಅಂತಾರೆ ಭಕ್ತರು.

Karinjeshwara Temple Dakshin Kannada lord shiva temple

ಇನ್ನು ಇಲ್ಲಿಯ ಮತ್ತೊಂದು ವಿಶೇಷ ವೆಂದರೆ ಇಲ್ಲಿರೋ ಮಂಗಗಳು. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಾವು ಕೋತಿಗಳನ್ನು ಕಾಣಬಹುದು. ಇಡೀಯ ದಿನ ಕೆಲವು ಮಂಗಳು ಮಾತ್ರ ಇಲ್ಲಿ ಕಾಣುತ್ತವೆ. ಆದ್ರೆ ಮಧ್ಯಾಹ್ನ ದೇವರ ಆರತಿ ವೇಳೆಗೆ ಸಾವಿರಾರು ಮಂಗಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ.

Karinjeshwara Temple Dakshin Kannada lord shiva temple

ಇಲ್ಲಿ ಈ ಮಂಗಗಳಿಗೆ ಅನ್ನ ಪ್ರಸಾದವನ್ನು ನೀಡುವ ಪದ್ದತಿ ರೂಢಿಯ ಲ್ಲಿದೆ. ಅಂದ ಹಾಗೆ ಈ ದೇವಾಲಯ ಯಾವುದು ಗೊತ್ತಾ ? ಅದು ಮಹತೋಭಾರ ಕಾರಿಜೇಶ್ವರ ದೇವಾಲಯ Karinjeshwara Temple) . ಇದು ಇರೋದು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕಾರಿಂಜ ಎಂಬಲ್ಲಿ.

Karinjeshwara Temple Dakshin Kannada lord shiva temple

ಮಂಗಳೂರಿನಿಂದ ಕೆಲವೇ ಕಿಲೋಮೀಟರ್‌ ದೂರ ಇರುವ ದೇವಾಲ ಯಕ್ಕೆ ಮಂಗಳೂರು, ಧರ್ಮಸ್ಥಳದಿಂದಲೂ ಬಸ್‌ ಸೌಕರ್ಯವಿದೆ . ಪ್ರಕೃತಿ ಮಧ್ಯದಲ್ಲಿ ಈ ದೇವಾಲಯ ವಿರೋದ್ರಿಂದ ಸೂರ್ಯಾಸ್ಥ ಹಾಗೂ ಸೂರ್ಯೋದಯವನ್ನು ನೋಡಿ ಎಂಜಾಯ್‌ ಮಾಡಬಹುದು.

ಇದನ್ನೂ ಓದಿ : Amruteshwari Temple : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ : ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ

ಇದನ್ನೂ ಓದಿ : ಕದ್ರಿಯಲ್ಲಿ ಹರಿಯುತ್ತಿದೆ ಕಾಶಿ ಭಾಗೀರಥಿ ನದಿ ನೀರು : ಇಲ್ಲಿದೆ ಮಂಜುನಾಥನ ಬಗ್ಗೆ ನಿಮಗೆ ತಿಳಿದಿರದ ಸಂಗತಿ

Karinjeshwara Temple Dakshin Kannada lord shiva temple

Leave A Reply

Your email address will not be published.