ಭಾನುವಾರ, ಏಪ್ರಿಲ್ 27, 2025
HomeSpecial StoryLife StyleCoffee Beauty : ಕುಡಿಯೋದಕ್ಕೆ ಮಾತ್ರವಲ್ಲ ಒಂದು ಕಪ್‌ ಕಾಫಿ ಹೆಚ್ಚಿಸುತ್ತೆ ನಿಮ್ಮ ಸೌಂದರ್ಯ !

Coffee Beauty : ಕುಡಿಯೋದಕ್ಕೆ ಮಾತ್ರವಲ್ಲ ಒಂದು ಕಪ್‌ ಕಾಫಿ ಹೆಚ್ಚಿಸುತ್ತೆ ನಿಮ್ಮ ಸೌಂದರ್ಯ !

- Advertisement -

Coffee Beauty: ಒಂದು ಕಪ್ ಕಾಫಿ ಇಲ್ಲದೆ ಅನೇಕರಿಗೆ ದಿನದ ಆರಂಭವೇ ಆಗೋದಿಲ್ಲ. ಈ ಕಾಫಿ ಕುಡಿಯಲು ಮಾತ್ರ ಅಲ್ಲ ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ ಅಂದ್ರೆ ನಂಬ್ತೀರಾ. ಒಂದು ಕಪ್‌ ಕಾಫಿ ಚರ್ಮ, ಕೂದಲಿನ ಸೌಂದರ್ಯವನ್ನುಹೆಚ್ಚಿಸುತ್ತದೆ.

Coffee Beauty : Coffee powder beauty tips

ಬೆವರಿನ ವಾಸನೆ ಗುಡ್‌ಬೈ ಹೇಳಿ : ಕಾಫಿ ಪುಡಿಯನ್ನು ನೀರಿನಲ್ಲಿ ನೆನೆಸಿಡಿ. ಕೆಲ ಸಮಯದ ನಂತ್ರ ಬೆವರು ಅತಿ ಹೆಚ್ಚಾಗಿ ಬರುವ ಜಾಗಕ್ಕೆ ಇದನ್ನು ಹಚ್ಚಿ. ಬೆವರಿನ ವಾಸನೆ ಮಂಗಮಾಯವಾಗುತ್ತದೆ.

ಇದನ್ನೂ ಓದಿ: Beauty Tips with Carrott : ಕ್ಯಾರೆಟ್‌ಗೂ ಸೌಂದರ್ಯಕ್ಕೂ ಇದೆ ನಂಟು : ಅದೇನು ಗೊತ್ತಾ ?

Coffee Beauty : Coffee powder beauty tips

ದೂರವಾಗುತ್ತೆ ಡಾರ್ಕ್‌ ಸರ್ಕಲ್‌ : ಸಕ್ಕರೆ ಹಾಕದೆ ಕಾಫಿ ಪುಡಿಯನ್ನು ನೀರಿಗೆ ಹಾಕಿ ಕುದಿಸಿ. ನಂತ್ರ ಅದನ್ನು ಕಣ್ಣಿನ ಕೆಳಭಾಗದಲ್ಲಿರುವ ಕಪ್ಪು ಕಲೆ ಮೇಲೆ ಹಚ್ಚಿಕೊಳ್ಳಿ. ಕೆಲವೇ ಸಮಯದಲ್ಲಿ ಪರಿಣಾಮ ಕಾಣಬಹುದು. ಇದು ಕಪ್ಪು ಕಲೆ ಜೊತೆ ಕಣ್ಣಿನ ಊತವನ್ನು ಕಡಿಮೆ ಮಾಡುತ್ತದೆ. ಹೆಚ್ಚುತ್ತೆ ಚರ್ಮದ ಕಾಂತಿ : ಕಾಫಿ ಪುಡಿಗೆ ಆಲಿವ್ ಆಯಿಲ್ ಜೊತೆ ಜೇನುತುಪ್ಪ ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಚರ್ಮಕ್ಕೆ ಹಾಕಿ ಸ್ಕ್ರಬ್ ಮಾಡಿ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಆಲಿವ್ ಆಯಿಲ್ ಇಲ್ಲವಾದ್ರೆ ಬೇರೆ ಎಣ್ಣೆಯನ್ನು ಬಳಸಬೇಡಿ. ವಾರದಲ್ಲಿ ಎರಡು ಬಾರಿ ಸ್ಕ್ರಬ್ ಬಳಸಬಹುದು.

Coffee Beauty : Coffee powder beauty tips

ಕಡಿಮೆಯಾಗುತ್ತೆ ಬ್ಲ್ಯಾಕ್ಹೆಡ್ : ಚರ್ಮ ಎಣ್ಣೆಯುಕ್ತವಾಗಿದ್ದರೆ ಬ್ಲ್ಯಾಕ್ಹೆಡ್ ಗಳು ಹೆಚ್ಚಾಗಿರುತ್ತವೆ. ಮೂಗು ಮತ್ತು ಹಣೆ ಮೇಲೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾಫಿಯನ್ನು ಹೆಚ್ಚಾಗಿ ಬಳಸಿದ್ರೆ ಬ್ಲ್ಯಾಕ್ಹೆಡ್ ಗಳು ಕಡಿಮೆಯಾಗುತ್ತವೆ. ಕಾಫಿ ಚರ್ಮದಲ್ಲಿರುವ ಎಣ್ಣೆಯನ್ನು ಕಡಿಮೆ ಮಾಡುತ್ತದೆ. ಮಾಲಿನ್ಯದಿಂದ ಚರ್ಮವನ್ನು ರಕ್ಷಿಸುತ್ತದೆ.

ಇದನ್ನೂ ಓದಿ: Curd Beauty Tips : ಮೊಸರು ಆರೋಗ್ಯಕ್ಕಷ್ಟೇ ಅಲ್ಲಾ ಮುಖದ ತ್ವಚೆಗೂ ಉತ್ತಮ

Coffee Beauty : Coffee powder beauty tips

ಕೂದಲಿಗೆ ನೀಡುತ್ತೆ ಹೊಳಪು : ಕಾಫಿ ಚರ್ಮದ ಜೊತೆ ಕೂದಲಿಗೆ ಬಹಳ ಒಳ್ಳೆಯದು. ಹೊಳಪುಳ್ಳ ಹಾಗೂ ಮೃದು ಕೂದಲಿಗೆ ಕಾಫಿ ಪ್ರಯೋಜನಕಾರಿ. ಒಂದು ದೊಡ್ಡ ಚಮಚ ಕಾಫಿ ಪುಡಿಯನ್ನು ನೀರಿಗೆ ಬೆರೆಸಿ ಆ ನೀರಿನಲ್ಲಿ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.

(Coffee Beauty : Coffee powder beauty tips)

RELATED ARTICLES

Most Popular