Surya Temple : ಮಣ್ಣಿಗೆ ಒಲಿತಾನೆ ಶಿವ : ಮಣ್ಣಿನ ಗೊಂಬೆಯ ಹರಕೆಯಿಂದ ಈಡೇರುತ್ತೆ ಅಭೀಷ್ಟ

Surya Temple : ಯಾವುದೇ ಕೆಲಸ ಆಗಬೇಕಾದ್ರೆ ದೇವರ ಕರುಣೆ ಆಶೀರ್ವಾದ ಬೇಕು . ಅದನ್ನು ಪಡೆಯೋಕೆ ಅಂತಾನೆ ಭಕ್ತರು ಪೂಜೆ ಪ್ರಾರ್ಥನೆ ಮಾಡುತ್ತಾರೆ. ತಮ್ಮ ಅಭಿಷ್ಟಗಳು ಈಡೇರಲಿ ಅಂತಾನೇ ಹರಕೆ ಕೂಡಾ ಹೊರುತ್ತಾರೆ . ಅದ್ಯಾವಾಗ ಅಂದುಕೊಂಡ ಕಾರ್ಯ ಈಡೇರುತ್ತೋ ಆಗ ತಾವು ಮನಸಲ್ಲಿ ಅಂದುಕೊಂಡ ರೀತಿ ಹರಕೆ ತೀರಿಸುತ್ತಾರೆ.

ಅದು ದುಡ್ಡು ಆಗಿರಬಹುದು ಅಥವಾ ಬೇರೆ ಬೇರೆ ರೀತಿ ವಸ್ತು ಆಗಿರಬಹುದು. ತಮ್ಮ ಮನಸ್ಸಿಗೆ ಅನಿಸಿದ್ದನ್ನು ದೇವರಿಗೆ ಆರ್ಪಿಸೋದು ವಾಡಿಕೆ. ಆದರೆ ದೇವಾಲಯದಲ್ಲಿ ಈ ಹರಕೆ ರೂಪ ತುಂಬಾ ಭಿನ್ನ. ಇಲ್ಲಿಯ ದೇವರಿಗೆ ಹರಕೆಯ ರೂಪದಲ್ಲಿ ನೀಡೋದು ಏನು ಗೊತ್ತಾ “ಮಣ್ಣು “.ನಿಮಗೆ ಆಶ್ವರ್ಯವಾಗಿರಬಹುದು ಆದ್ರೂ ಇದೇ ಸತ್ಯ. ಇಲ್ಲಿ ನೆಲೆಸಿರೋ ದೇವರಿಗೆ ಮಣ್ಣು ಹಾಗು ಮಣ್ಣಿನಿಂದ ಮಾಡಿದ ವಸ್ತುಗಳೇ ಪ್ರಿಯ. ಇಲ್ಲಿ ನೆಲೆಸಿರೋದು ಭಕ್ತರನ್ನು ಬಿಡದೇ ಕಾಯುವ ಶಿವ. ಎಲ್ಲರಿಗೆ ಗೊತ್ತಿರುವಂತೆ ಶಿವ ಎಂದಿಗೂ ಬೇಡಿ ಬಂದ ಭಕ್ತರನ್ನು ಕೈ ಬಿಡೋದಿಲ್ಲ. ಇಲ್ಲೂ ಹಾಗೇ ಭಕ್ತರು ಏನಾದ್ರೂ ಹರಕೆ ಹೊತ್ರೆ ಈಡೇರಿಲ್ಲ ಅನ್ನೋ ಮಾತೇ ಇಲ್ಲ . ಹೀಗಾಗಿಯೇ ಭಕ್ತರು ಬಂದು ತಮ್ಮ ಅಭೀಷ್ಟವನ್ನು ಈಡೇರಿಸು ಅಂತ ದೇವರಿಗೆ ಕೈ ಮುಗಿಯುತ್ತಾರೆ.

ಮೊದಲೇ ಹೇಳಿದಂತೆ ಇಲ್ಲಿ ಹರಕೆ ಸಂಪ್ರದಾಯ ಎಲ್ಲದಕ್ಕಿಂತ ಭಿನ್ನ. ಇಲ್ಲಿ ಹರಕೆ ಈಡೇರಿದ ನಂತರ ಹರಕೆಯ ಮಣ್ಣಿನ ಗೊಂಬೆಯನ್ನು ಸಮರ್ಪಿಸಲಾಗುತ್ತೆ. ಉದಾಹರಣೆಗೆ ನೀವು ಮನೆ ಕಟ್ಟಿಸಲು ಹರಕೆ ಹೊತ್ತಿದ್ರೆ, ಮನೆ ನಿರ್ಮಾಣವಾದ ನಂತರ ಮನೆಯ ಮಣ್ಣಿನ ಪ್ರತಿಕೃತಿಯನ್ನು ದೇವರಿಗೆ ಅರ್ಪಿಸಬೇಕು. ಮಣ್ಣಿನ ಆಕೃತಿಯನ್ನು ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ ಹಾಗೂ ಐದು ರೂಪಾಯಿ ಕಾಣಿಕೆಯ ಜೊತೆಗೆ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸುವ ಮೂಲಕ ಹರಕೆ ಒಪ್ಪಿಸಬಹುದು. ಇದೇ ರೀತಿ ಸಂತಾನ ಕ್ಕಾಗಿ ತೊಟ್ಟಿಲು ಮಗು, ಮದುವೆಗಾಗಿ ಗಂಡು-ಹೆಣ್ಣಿನ ಗೊಂಬೆ, ಹರಕೆ ಒಪ್ಪಿಸುವ ಪದ್ಧತಿ ಇಲ್ಲಿದೆ.

ಕಾರು, ಬಸ್ಸು, ವಿಮಾನ, ದೋಣಿ, ಹೆಲಿಕಾಫ್ಟರ್, ಕಟ್ಟಡ, ಕೈ-ಕಾಲು, ಹೃದಯ, ಕಿಡ್ನಿ, ಕಂಪ್ಯೂಟರ್, ಮೇಜು, ಕುರ್ಚಿ, ದನ, ಕರು, ನಾಯಿ, ಕೋಳಿ ಇತ್ಯಾದಿ ಮಣ್ಣಿನ ಹರಕೆಗಳನ್ನು ದೇವರಿಗೆ ಸಮರ್ಪಿಸಿರುವುದನ್ನು ಕಾಣಬಹುದು. ಇಲ್ಲಿ ವ್ಯಕ್ತಿಯೊಬ್ಬ ಎಷ್ಟು ಹರಕೆ ಬೇಕಾದ್ರೂ ಹೇಳಬಹುದು. ಆದ್ರೆ ಹರಕೆ ತೀರಿಸುವ ಗೊಂಬೆಯಲ್ಲಿ ಯಾವುದೇ ಬಿರುಕಿಬಾರದು. ಇನ್ನು ಈ ಮಣ್ಣಿನ ಹರಕೆಯನ್ನು ಹಾಕೋಕೆ ಅಂತಾನೆ ದೇವಾಲಯದ ಬಳಿ ಒಂದು ಬನ ಕೂಡಾ ಇದೆ. ಅದರಲ್ಲೇ ಈ ಮಣ್ಣಿನ ಹರಕೆಯನ್ನು ಹಾಕಲಾಗುತ್ತೆ. ಸುಮಾರು ವರ್ಷ ಗಳಿಂದ ಈ ಪದ್ದತಿ ನಡೆದು ಬರುತ್ತಿದ್ದು . ಇದರ ಆರಂಭದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಇನ್ನು ಈ ದೇವಾಲಯದ ಬಗ್ಗೆ ಒಂದು ಐತಿಹ್ಯವಿದೆ . ಈ ಪ್ರದೇಶದಲ್ಲಿ ಭೃಗು ಮಹರ್ಷಿಯ ಶಿಷ್ಯರೊಬ್ಬರು ತಪಸ್ಸು ಮಾಡುತ್ತಿದ್ದು, ಅವರ ತಪಸ್ಸಿ ಗೊಲಿದ ಶಿವ ಪಾರ್ವತಿ, ಪ್ರತ್ಯಕ್ಷವಾಗಿ ಲಿಂಗ ರೂಪದಲ್ಲಿ ಇಲ್ಲಿ ನೆಲೆಯಾದರು.

ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆಗಳು ಹಾಗೂ ಶಿಲಾಪಾದಗಳೂ ಇವೆ., ದೇವರೊಲಿದ ಪುಣ್ಯಕ್ಷೇತ್ರ (Surya Temple) , ಕಾಲಾಂತರದಲ್ಲಿ ಕಾಡಾಗಿ ಪರಿವರ್ತನೆ ಗೊಂಡಿತು. ನಂತರ ಸೊಪ್ಪು ಕಡಿಯುವ ಮಹಿಳೆಯ ಮೂಲಕ ಊರಿನ ಮುಖ್ಯಸ್ಥರ, ಗ್ರಾಮಸ್ಥರ ಗಮನಕ್ಕೆ ಬಂದು, ಇದರ ಸಮೀಪದಲ್ಲಿ ದೇವಾಲಯ ನಿರ್ಮಾಣ ಮಾಡಿದರು ಎಂಬುದು ಭಕ್ತರ ಮಾತು. ಇಂದಿಗೂ ಲಿಂಗ ರೂಪಿ ಶಿಲೆಗಳಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಇನ್ನು ಈ ದೇವಾಲಯಕ್ಕೆ ಬರೋ ಭಕ್ತರ ಅನುಕೂಲಕ್ಕಾಗಿ ಅಲ್ಲೇ ಮಣ್ಣಿನ ಗೊಂಬೆಗಳನ್ನು ಕೂಡಾ ನೀಡಲಾಗುತ್ತೆ. ಅದಕ್ಕೆ ನಿಗದಿತ ಮೊತ್ತ ನೀಡಿ ಅದನ್ನು ಕೊಂಡು ದೇವರಿಗೆ ಸಲ್ಲಿಸಬಹುದು. ಇದರಿಂದ ಭಕ್ತರಿಗೆ ಉತ್ತಮ ಮಣ್ಣಿನ ಪ್ರತಿಕೃತಿಗಾಗಿ ಅಲೆದಾಡು ತಪ್ಪುತ್ತೆ ಅನ್ನೋದು ಇಲ್ಲಿನ ಜನರ ಮಾತು.

ಅಂದ ಹಾಗೆ ಈ ವಿಭಿನ್ನ ಹರಕೆ ಸಂಪ್ರದಾಯವಿರೋದು ಧರ್ಮಸ್ಥಳದಿಂದ ಕೆಲವೇ ಕಿಲೋಮೀಟರ್ ದೂರವಿರುವ ಸೂರ್ಯ ಸದಾಶಿವರುದ್ರ ದೇವಾಲಯದಲ್ಲಿ (Surya Temple). ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಕೃತಿಯ ನಡುವೆ ಇರುವ ಸಣ್ಣ ಹಳ್ಳಿ ಸುರ್ಯ ಎಂಬಲ್ಲಿ ಶತಮಾನ ಗಳಿಂದ ನೆಲೆ ನಿಂತಿದ್ದಾನೆ ಶಿವ. ಉಜಿರೆಯಿಂದ 4 ಕಿ.ಮೀ ಹಾಗೂ ತಾಲೂಕು ಕೇಂದ್ರ ಬೆಳ್ತಂಗಡಿಯಿಂದ ಪೂರ್ವಕ್ಕೆ 8 ಕಿ.ಮೀ ದೂರದಲ್ಲಿ ದೆ ಈ ದೇವಾಲಯ . ಈ ದೇವಾಲಯಕ್ಕೆ ಹೋಗಲು ಉಜಿರೆ ವರೆಗೆ ಬಸ್ ಸೌಲಭ್ಯವಿದ್ದು, ನಂತರ ಅಲ್ಲಿಂದ ಜೀಪು, ಆಟೋದ ವ್ಯವಸ್ಥೆ ಇದೆ.

ಒಟ್ಟಾರೆ ಪ್ರಕೃತಿಯ ನಡುವೆ ನೆಲೆ ನಿಂತಿರುವ ಈ ಶಿವ (Surya Temple) ನನ್ನು ನೋಡೋಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ ಒಂದು ವೇಳೆ ನಿಮಗೂ ಯಾವುದಾದರೂ ಅಭಿಷ್ಟಗಳಿದ್ರೆ, ಒಂದುಸಾರಿ ಈ ಶಿವನ ದರ್ಶನ ಪಡೆಯಿರಿ.

ಇದನ್ನೂ ಓದಿ : Temple inspired Parliament House : ಪಾರ್ಲಿಮೆಂಟ್ ಭವನದ ವಿನ್ಯಾಸಕ್ಕೆ ಸ್ಪೂರ್ತಿಯಾದ ದೇಗುಲ

ಇದನ್ನೂ ಓದಿ : Karya Siddhi Anjaneya : ತೆಂಗಿನಕಾಯಿ ನೀಡಿದ್ರೆ ಒಲಿತಾನೆ ರಾಮಭಂಟ : ವಾಯುಪುತ್ರನನ್ನು ನಂಬಿದ್ರೆ ಎಲ್ಲಾ ಕಾರ್ಯಸಿದ್ಧಿ

(Surya Temple Unique Tradition god Shiva Clay Doll in Dakshina Kannada Near Dharamsthala )

Comments are closed.