ಸೋಮವಾರ, ಏಪ್ರಿಲ್ 28, 2025
HomeSpecial StoryLife StyleGhee Benefits : ತುಪ್ಪ ಚಳಿಗಾಲದಲ್ಲಿ ಕಾಡುವ ಒಣ ತ್ವಚೆಗೆ ದಿವ್ಯೌಷಧಿ

Ghee Benefits : ತುಪ್ಪ ಚಳಿಗಾಲದಲ್ಲಿ ಕಾಡುವ ಒಣ ತ್ವಚೆಗೆ ದಿವ್ಯೌಷಧಿ

- Advertisement -

ಇನ್ನೇನು ಚಳಿಗಾಲ (Winter) ಬಂದೇ ಬಿಟ್ಟಿತು. ಶುಷ್ಕ ವಾತಾವರಣ (Dry wheather) ತ್ವಚೆಯ ಮೇಲೆ ಭಾರಿ ಪರಿಣಾಮ ಬೀರುವುದು. ಒಡೆದ ತುಟಿ ಮತ್ತು ಕೈ– ಕಾಲುಗಳು, ಒಣ ತ್ವಚೆ ಇನ್ನಿಲ್ಲದಂತೆ ಕಾಡುತ್ತದೆ. ಆದರೆ ನಿಮಗೆ ನೆನಪಿರಬಹುದು ಚಳಿಗಾಲದಲ್ಲಿ ಹಿರಿಯರು ತುಪ್ಪ (Ghee) ವನ್ನು ಹೆಚ್ಚೆಚ್ಚು ಸೇವಿಸಿ ಎಂದು ಹೇಳುವುದನ್ನು. ಚಳಿಗಾಲದಲ್ಲಿ ಕಾಡುವ ಒಣ ತ್ವಚೆ ಸಮಸ್ಯೆಯನ್ನು ತುಪ್ಪ (Ghee Benefits) ದೂರಮಾಡಬಲ್ಲದು. ತುಪ್ಪ ತ್ವಚೆಯ ಶುಷ್ಕತೆಯನ್ನು ಸಹ ದೂರಮಾಡಬಲ್ಲದು. ಮಾರುಕಟ್ಟೆಯಲ್ಲಿ ಹಲವಾರು ಲಿಪ್‌ ಬಾಮ್‌, ಲೋಷನ್‌ಗಳು ಲಭ್ಯವಿದ್ದರೂ, ಮನೆಯಲ್ಲಿಯೇ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

ತುಪ್ಪದ ಪ್ರಯೋಜನಗಳು :

  • ತುಪ್ಪದಿಂದ ದೇಹಕ್ಕೆ ಅನೇಕ ಪ್ರಯೋಜನಗಳಿದೆ. ಒಮೆಗಾ–3 ಫ್ಯಾಟಿ ಆಸಿಡ್‌, ವಿಟಿಮಿನ್‌ A, B12, D, E, K ಮತ್ತು ಆಂಟಿಒಕ್ಸಿಡೆಂಟ್‌ ಗಳು ತುಪ್ಪದಲ್ಲಿದೆ.
  • ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಹೈಡ್ರೇಟ್‌ ಮಾಡಿ ನೈಸರ್ಗಿಕವಾಗಿ ತ್ವಚೆಗೆ ಹೊಳಪು ನೀಡುತ್ತದೆ.
  • ಕಪ್ಪು ಕಲೆಗಳನ್ನು ದೂರಮಾಡುತ್ತದೆ.
  • ಕಣ್ಣಿ ಸುತ್ತ ಕಾಣಿಸುವ ಡಾರ್ಕ್‌ ಸರ್ಕಲ್‌ ದೂರಮಾಡುತ್ತದೆ.
  • ತುಟಿಗಳು ಒಡೆಯುವುದನ್ನು ತಡೆಯುತ್ತದೆ.
  • ಸಣ್ಣ ಗಾಯಗಳನ್ನು ಗುಣಪಡಿಸುತ್ತದೆ.

ಇದನ್ನೂ ಓದಿ : Iodine Deficiency : ಅಯೋಡಿನ್‌ ಕೊರತೆ ನಿವಾರಿಸುವ 5 ಸೂಪರ್‌ ಫುಡ್‌ಗಳು ಯಾವುದು ಗೊತ್ತಾ

ಒಣ ತ್ವಚೆ ಸಮಸ್ಯೆಗೆ ಪರಿಹಾರಗಳು :

  • ತುಪ್ಪ, ಕಡ್ಲೆಹಿಟ್ಟು , ಅರಿಶಿನದ ಫೇಸ್‌ ಪ್ಯಾಕ್‌ :
    ತುಪ್ಪ, ಕಡ್ಲೆಹಿಟ್ಟು , ಅರಿಶಿನ ಈ ಮೂರು ಪದಾರ್ಥಗಳನ್ನು ಸೇರಿಸಿ ಫೇಸ್‌ಪ್ಯಾಕ್‌ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ನಂತರ ನೀರಿನಿಂದ ತೊಳೆಯಿರಿ. ಈ ಫೇಸ್‌ಪ್ಯಾಕ್‌ ಡೆಡ್‌ ಸ್ಕಿನ್‌ ಮತ್ತು ಡಾರ್ಕ್‌ ಸ್ಪಾಟ್‌ (ಕಪ್ಪು ಕಲೆ)ಗಳನ್ನು ನಿವಾರಿಸಿ, ತ್ವಚೆಯನ್ನು ಹೈಡ್ರೇಟ್‌ ಆಗಿರಿಸುತ್ತದೆ.
  • ತುಪ್ಪ, ಕಡ್ಲೆಹಿಟ್ಟು, ಹಾಲು ಮತ್ತು ಸಕ್ಕರೆಯ ಸ್ಕ್ರಬ್‌ :
    ತುಪ್ಪ, ಕಡ್ಲೆಹಿಟ್ಟು, ಹಾಲು ಮತ್ತು ಸಕ್ಕರೆ ಇವೆಲ್ಲವನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಇದನ್ನು ತ್ವಚೆಯ ಮೇಲೆ ಲೇಪಿಸಿ. ವೃತ್ತಾಕಾರವಾಗಿ ಮತ್ತು ನಿಧಾನವಾಗಿ ಮಸ್ಸಾಜ್‌ ಮಾಡಿ. ಈ ನೈಸರ್ಗಿಕ ಸ್ಕ್ರಬ್‌ ತ್ವಚೆಯ ಪಿಗ್ಮೆಂಟೇಶನ್‌ ಅಥವಾ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.
  • ತುಪ್ಪ, ತೆಂಗಿನ ಎಣ್ಣೆಯ ಕ್ರೀಮ್‌:
    ತುಪ್ಪವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನಂತರ ಕೈಗಳಿಗೆ ಹಚ್ಚಿ. ಈ ಕ್ರೀಮ್‌ ತ್ವಚೆಯನ್ನು ಆಳದಿಂದ ಪೋಷಿಸಿ, ಒರಟಾದ ಕೈಗಳನ್ನು ನಯವಾಗಿಸುತ್ತದೆ.
  • ತುಪ್ಪ, ಅಲೋವೆರಾ ಜೆಲ್‌ನ ಮಾಯಿಶ್ಚರೈಸರ್:
    ತುಪ್ಪ, ಅಲೋವೆರಾ ಜೆಲ್‌ ಸೇರಿಸಿ ಮಾಯಿಶ್ಚರೈಸರ್ ತಯಾರಿಸಿಕೊಳ್ಳಿ. ಅದನ್ನು ಮೊಣಕೈ–ಮೊಣಕಾಲು ಸೇರಿದಂತೆ ಕೈ–ಕಾಲುಗಳಿಗೆ ಮತ್ತು ಹಿಮ್ಮಡಿಗಳಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ನೀರಿನಿಂದ ತೊಳೆಯಿರಿ. ಇದು ನಿಮ್ಮ ತ್ವಚೆಯನ್ನು ಮಾಯ್ಚರೈಸ್‌ ಮಾಡಿ, ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ : Custard Apple Benefits : ಈ ಋತುವಿನ ಹಣ್ಣು ‘ಸೀತಾಫಲ’ ತಿನ್ನುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ

(Ghee Benefits use ghee to tackle dryness this winter)

RELATED ARTICLES

Most Popular