- ಅಂಚನ್ ಗೀತಾ
Ghee Health Benefits : ತುಪ್ಪ ಅಂದ್ರೆ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ. ಪ್ರತಿಯೊಂದು ಮನೆಯಲ್ಲೂ ತುಪ್ಪದ ಬಳಕೆ ಮಾಡಲಾಗುತ್ತೆ. ನಮ್ಮಆಹಾರ ಪದ್ದತಿಯಲ್ಲಂತೂ ತುಪ್ಪ ಪ್ರಮುಖ ಪಾತ್ರವಹಿಸುತ್ತದೆ.

ತುಪ್ಪ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ, ಮೂಳೆಗಳ ಆರೋಗ್ಯಕ್ಕೂ ಬೆಸ್ಟ್, ಬುದ್ದಿಮತ್ತೆ ಹೆಚ್ಚಲು ಕೂಡ ತುಪ್ಪ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಕೇಶರಾಶಿ ಯ ಆರೈಕೆಗೆ ತುಪ್ಪ ಪ್ರಮುಖ ಪಾತ್ರವಹಿಸೋದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಹಾಗಾದ್ರೆ ಕೂದಲಿಗೆ ತುಪ್ಪದ ಪ್ರಯೋಜನವೇನು ನೋಡೊಣ.

ಕೂದಲ ಹೊಟ್ಟು ನಿವಾರಣೆ, ಕೂದಲ ಬೆಳವಣಿಗೆ, ಒಣ ಕೂದಲನ್ನು ತೇವಾಂಶವಾಗಿಸುವುದು ಸೇರಿದಂತೆ ಸಾಕಷ್ಟು ಆರೈಕೆ ತುಪ್ಪ ಮಾಡುತ್ತದೆ. ಹಾಗದ್ರೆ ತುಪ್ಪದ ಬಳಕೆ ಹೇಗಿರಬೇಕು.

ತುಪ್ಪವನ್ನು ಚೆನ್ನಾಗಿ ಕಾಯಿಸಿ ಬೆಚ್ಚಗಿರುವಾಗ ಕೂದಲ ಬುಡ ಸೇರಿದಂತೆ ಕೂದಲಿಗೆ ಲೇಪಿಸಿ, ಕನಿಷ್ಠ ಅರ್ಧ ಗಂಟೆ ಬಿಟ್ಟು ನಂತರ ಶಾಂಪೂವಿನಿಂದ ಚೆನ್ನಾಗಿ ತೊಳೆಯಿರಿ. ಹೀಗೆ ಮಾಡಿದ ಬಳಿಕ ನಿಮ್ಮಕೂದಲಿನ ಸೌಂದರ್ಯವನ್ನು ನೋಡಿ ನೀವೆ ಬೆರಗಾಗ್ತಿರಾ.

ಇನ್ನು ಕೂದಲ ಬೆಳವಣಿಗೆಗೆ ತುಪ್ಪ ಬೇಕೆ ಬೇಕು. ಕೆಲವೊಮ್ಮೆ ಕೂದಲು ಉದುರುವಿಕೆ ಸಹಿಸಲು ಕಷ್ಟ ಸಾಧ್ಯ. ಇನ್ನು ಸಹಿಸಬೇಡಿ ತುಪ್ಪ ಬಳಸಿ. ತುಪ್ಪದಲ್ಲಿ ರುವ ಒಮೆಗಾ -3, ಕೊಬ್ಬಿನಾಮ್ಲ, ವಿಟಮಿನ್ಸ್ ಹಾಗೂ ಮಿನರಲ್ಸ್ ಗಳು ಕೂದಲು ಬೆಳೆಯುವಂತೆ ಮಾಡಲು ಸಹಕಾರಿ.
ಇದನ್ನೂ ಓದಿ : Banana Beauty Tips : ಸೌಂದರ್ಯವನ್ನು ಇಮ್ಮಡಿಗೊಳಿಸುವ ಬಾಳೆಹಣ್ಣು
ಇದನ್ನೂ ಓದಿ : Adi Mudra : ಈ ಮುದ್ರೆ ಮಾಡಿ ಖಿನ್ನತೆಯಿಂದ ದೂರವಿರಿ
Ghee Health Benefits