Health Tips – Life Style : ಮುಂಜಾನೆ ಕಣ್ಣು ಬಿಟ್ಟ ಕ್ಷಣ ಬೆಡ್ ಟೀ ಕುಡಿಯೋ ಅಭ್ಯಾಸ ಹಲವರಿಗಿದೆ. ಇನ್ನು ರಾತ್ರಿ ಮಲಗುವವರೆಗೂ ನಿರಂತರವಾಗಿ ಚಹಾ (Tea) ಕುಡಿಯುವ ಮಂದಿ ಹಲವರಿದ್ದಾರೆ. ಟೀ ಕುಡಿಯುವ ಅಭ್ಯಾಸ ಇಲ್ಲದವರು ತೀರಾ ವಿರಳಾತಿ ವಿರಳ. ಆದರೆ ಚಹಾ ಜೊತೆ ಸ್ನಾಕ್ಸ್ ತಿಂದ್ರೆ (snacks with tea) ಎಷ್ಟೆಲ್ಲಾ ಸಮಸ್ಯೆಗಳಿವೆ ಗೊತ್ತಾ ?
ಚಹಾ ಕುಡಿಯುವ ವೇಳೆಯಲ್ಲಿ ಹಲವರಿಗೆ ಏನಾದರೊಂದು ತಿಂಡಿ ಇರಲೇ ಬೇಕು. ಸ್ಯಾಕ್ಸ್ ಇದ್ರೆ ಮಾತ್ರ ಚಹಾ ಕುಡಿಯೋದಕ್ಕೆ ಮಜಾ ಅನ್ನುವವರು ಹಲವರು. ಆದರೆ ಚಹಾದ ಜೊತೆಗೆ ಸ್ನ್ಯಾಕ್ಸ್ (Snaks) ತೆಗೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಂತೆ.
ಸಮಾನ್ಯವಾಗಿ ಪುಲ್ ಟೆನ್ಶನ್ ಇರುವಾಗ ಟೀ ಕುಡಿಯುವುದರಿಂದ ರಿಲ್ಯಾಕ್ಸ್ ಆಗುತ್ತೆ ಅಂತಾ ಹೇಳುವವರು ಹಲವರು. ಆದರೆ ಪುಲ್ ಟೆನ್ಶನ್ ಇರುವಾಗ ಯಾವುದೇ ಕಾರಣಕ್ಕೂ ಟೀ ಕುಡಿಯಲೇ ಬಾರದು. ಟೀಯಲ್ಲಿ ಕೆಫಿನ್ ಅಂಶವಿದ್ದು, ಇದು ಮೆದುಳನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತದೆ. ಜೊತೆಗೆ ಆಯಾಸವನ್ನು ಹೋಗಲಾಡಿಸುತ್ತದೆ.
ಇದನ್ನೂ ಓದಿ : ನಿಮ್ಮ ವಯಸ್ಸು 35 ವರ್ಷವೇ? ಹಾಗಾಗಿ ಈಗಲೇ ಈ ಕೆಲಸ ಬಿಡಿ, ಇಲ್ಲದಿದ್ದರೆ ವೃದ್ಧಾಪ್ಯದಲ್ಲಿ ಈ ಸಮಸ್ಯೆ ಗ್ಯಾರಂಟಿ
ಚಹಾ ಸೇವಿಸುತ್ತಿದ್ದಂತೆಯೇ ಮನಸಿಗೆ ಸಂತೋಷವೂ ದೊರೆಯುತ್ತದೆ. ಆದರೆ ಅತಿಯಾಗಿ ಚಹಾ ಕುಡಿಯುವುದು ಉತ್ತಮ ಅಭ್ಯಾಸವಲ್ಲ, ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿ. ಅದ್ರಲ್ಲೂ ಚಹಾದ ಜೊತೆಗೆ ಕೆಲವೊಂದು ಆಹಾರಗಳನ್ನು ಅವಾಯ್ಡ್ ಮಾಡುವುದು ತೀರಾ ಉತ್ತಮ. ಚಹಾದ ಜೊತೆ ತಿಂಡಿ ಸೇವನೆ ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ.

ಚಹಾದ ಜೊತೆ ಹಣ್ಣುಗಳನ್ನು ತಿನ್ನಬೇಡಿ :
ಕೆಲವರು ಬೆಳಗಿನ ಉಪಹಾರದ ಸಮಯದಲ್ಲಿ ಹಣ್ಣುಗಳನ್ನು ತಿನ್ನುವ ಅಭ್ಯಾಸವಿದೆ. ಆದರೆ ಬಿಸಿ ಚಹಾದ ಜೊತೆಯಲ್ಲಿ ಕಣ್ಣುಗಳ ಸೇವನೆ ಮಾಡಲೇ ಬಾರದು. ಚಹಾದ ಜೊತೆಗೆ ಹಣ್ಣುಗಳನ್ನು ಸೇವನೆ ಮಾಡಿದಾಗ ಅಸ್ವಸ್ಥತೆ ಸಮಸ್ಯೆ ಎದುರಾಗಲಿದೆ.

ಫ್ರಿಜ್‌ನಲ್ಲಿ ಇಟ್ಟಿರುವ ಆಹಾರದ ಜೊತೆ ಟೀ ಕುಡಿಯಬೇಡಿ :
ಬಹುತೇಕರು ಚಹಾ ಕುಡಿಯುವ ವೇಳೆಯಲ್ಲಿ ಪ್ರೀಜ್ಜ್‌ನಲ್ಲಿ ಇಟ್ಟಿರುವ ಆಹಾರವನ್ನು ಸೇವನೆ ಮಾಡುತ್ತಾರೆ. ಆದರೆ ಚಹಾ ಕುಡಿಯುವ ವೇಳೆಯಲ್ಲಿ ಐಸ್ ಕ್ರೀಂ, ಬಟಾಣಿ, ಸ್ವೀಟ್ ಕಾರ್ನ್ ಮುಂತಾದವುಗಳನ್ನು ನೇರವಾಗಿ ಪ್ರಿಜ್ಜ್‌ನಿಂದ ತೆಗೆದು ಕೂಡಲೇ ಸೇವನೆ ಮಾಡಬಾರದು.

ನಿಂಬೆ ರಸ ಚಹಾದೊಂದಿಗೆ ಬೇಡವೇ ಬೇಡ :
ನಿಂಬೆ ರಸದಲ್ಲಿರುವ ಸಿಟ್ರಿಕ್ ಆಸ್ಕೋರ್ಬಿಕ್ ಆಮ್ಲವು ಚಹಾದಲ್ಲಿನ ಕೆಫೀನ್‌ನೊಂದಿಗೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಕರುಳಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೇ ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಚಹಾ ಕುಡಿಯುವ ಒಂದು ಗಂಟೆ ಮೊದಲು ಅಥವಾ ನಂತರ ನಿಂಬೆ ರಸ ಮತ್ತು ಸಿಟ್ರಿಕ್ ಆಹಾರಗಳನ್ನು ತೆಗೆದುಕೊಳ್ಳಬೇಡಿ.
ಇದನ್ನೂ ಓದಿ : ಸ್ನಾನ ಮಾಡಿದ ತಕ್ಷಣವೇ ಟವೆಲ್ ಸುತ್ತಿಕೊಳ್ಳಬೇಡಿ ! ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ

ಮೊಸರಿನಿಂದ ಸಿದ್ದಪಡಿಸಿದ ತಿಂಡಿಯೊಂದಿಗೆ ಚಹಾ ಕುಡಿಯಬೇಡಿ :
ಚಹಾ ಕುಡಿಯುವ ವೇಳೆಯಲ್ಲಿ ಯಾವುದೇ ಕಾರಣಕ್ಕೂ ಮೊಸರಿನಿಂದ ತಯಾರಿಸಿದ ಆಹಾರವನ್ನು ಸೇವನೆ ಮಾಡಬೇಡಿ. ಮೊಸರು ತಿಂದ ಕೂಡಲೇ ಚಹಾ ಕುಡಿಯುವುದು ಕೂಡ ಉತ್ತಮ ಅಭ್ಯಾಸವಲ್ಲ. ಮೊಸರು ತಿನ್ನುವುದರಿಂದ ಜೀರ್ಣಾಂಗದಲ್ಲಿ ಒಳ್ಳೆಯ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗುತ್ತವೆ. ಟೀ ಕುಡಿದ ಒಳ್ಳೆಯ ಬ್ಯಾಕ್ಟಿರಿಯಾಗಳು ಸಾಯುವುದರಿಂದ ಅನಾರೋಗ್ಯ ಸಮಸ್ಯೆ ಎದುರಾಗಲಿದೆ.

ಚಹಾದ ಜೊತೆಗೆ ಬಚ್ಚಿ ಬೋಂಡಾ ತಿನ್ನಬೇಡಿ :
ಮಳೆಗಾಲ, ಚಳಿಗಾಲದಲ್ಲಂತೂ ಚಹಾ ಕುಡಿಯುವ ವೇಳೆಯಲ್ಲ ಬೋಂಡಾ, ಬಜ್ಜಿ ಇರಬೇಕು ಅಂತಾ ಅನಿಸೋದಕ್ಕೆ ಶುರುವಾಗುತ್ತೆ. ಚಹಾ ಕುಡಿಯುವಾಗ ಕೈಯಲ್ಲೊಂದು ಬೋಂಡಾ, ಬಜ್ಜಿ ತಿನ್ನುವವರೇ ಹೆಚ್ಚು. ಆದರೆ ಚಹಾ ಕುಡಿಯುವ ವೇಳೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡಬಾರದಂತೆ. ಈದರಿಂದ ಕರುಳಿನ ಕ್ಯಾನ್ಸರ್ ಮತ್ತು ಕರುಳಿನಲ್ಲಿ ಹುಣ್ಣುಗಳಂತಹ ಸಮಸ್ಯೆ ಉಂಟಾಗಲಿದೆಯಂತೆ.

ಚಹಾದ ಜೊತೆಗೆ ಅರಶಿನದಿಂದ ತಯಾರಿಸಿದ ಆಹಾರ ತಿನ್ನ ಬೇಡಿ
ಚಹಾ ಕುಡಿಯುವಾಗ ಅರಿಶಿನ ಹೊಂದಿರುವ ಆಹಾರವನ್ನು ತೆಗೆದುಕೊಳ್ಳಬೇಡಿ. ಅರಿಶಿನದಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಇತರ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ತರುತ್ತವೆ. ಇದು ರಕ್ತನಾಳಗಳಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಅವುಗಳನ್ನು ಚಹಾದೊಂದಿಗೆ ತೆಗೆದುಕೊಳ್ಳುವುದರಿಂದ ಅರಿಶಿನ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಇದರೊಂದಿಗೆ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದಂತಹ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಯಿದೆ.
Health Tips Lifestyle Are there all these problems because of having snacks with tea