ಬುಧವಾರ, ಏಪ್ರಿಲ್ 30, 2025
HomeSpecial StoryLife StyleHomemade Moisturizer Cream:ಮನೆಯಲ್ಲಿಯೇ ತಯಾರಿಸಿ ಮಾಯಿಶ್ಚರೈಸರ್ ಕ್ರೀಮ್ : ಇಲ್ಲಿದೆ ಟಿಪ್ಸ್

Homemade Moisturizer Cream:ಮನೆಯಲ್ಲಿಯೇ ತಯಾರಿಸಿ ಮಾಯಿಶ್ಚರೈಸರ್ ಕ್ರೀಮ್ : ಇಲ್ಲಿದೆ ಟಿಪ್ಸ್

- Advertisement -

(Homemade Moisturizer Cream)ತ್ವಚೆಯು ಒಡೆಯ ಬಾರದು ಎಂದು ಕೆಲವರು ಎಣ್ಣೆಯನ್ನು ಹಚ್ಚಿದರೆ ಇನ್ನು ಕೆಲವರು ಅಂಗಡಿಯಿಂದ ಖರಿದೀಸಿದ ಮಾಯಿಶ್ಚರೈಸರ್ ಕ್ರೀಮ್ ಅನ್ನು ಹಚ್ಚುತ್ತಾರೆ. ದುಪ್ಪಟ್ಟು ಹಣವನ್ನು ಕೊಟ್ಟು ಮಾಯಿಶ್ಚರೈಸರ್ ಕ್ರೀಮ್ ಅನ್ನು ಖರೀದಿ ಮಾಡುವ ಬದಲು ಮನೆಯಲ್ಲಿಯೇ ತಯಾರಿಸಬಹುದು. ಈ ಮಾಯಿಶ್ಚರೈಸರ್ ಕ್ರೀಮ್ ತಯಾರಿಸಲು ಎನೆಲ್ಲಾ ಬಳಸುತ್ತಾರೆ ಮತ್ತು ಹೇಗೆ ತಯಾರಿಸುವುದು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Homemade Moisturizer Cream : ಬೇಕಾಗುವ ಸಾಮಗ್ರಿಗಳು :

ಅಲವೇರಾ ಜೆಲ್
ಗ್ಲಿಸರಿನ್
ಬಾದಾಮಿ ಎಣ್ಣೆ
ವಿಟಮಿನ್ ಇ ಕ್ಯಾಪ್ಸೂಲ್

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ 3ರಿಂದ 4 ಚಮಚ ಅಲವೇರಾ ಜೆಲ್, ಒಂದು ಚಮಚ ಗ್ಲಿಸರಿನ್, ಒಂದು ಚಮಚ ಬಾದಾಮಿ ಎಣ್ಣೆ, ಎರಡು ವಿಟಮಿನ್ ಇ ಕ್ಯಾಪ್ಸೂಲ್ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಅದು ದಪ್ಪ ಹದ ಬರುತ್ತಿದ್ದ ಹಾಗೆ ಒಂದು ಸಣ್ಣ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಡಬ್ಬಿಯಲ್ಲಿ ಶೇಖರಿಸಿದ ಮಾಯಿಶ್ಚರೈಸರ್ ಕ್ರೀಮ್ ಅನ್ನು ಪ್ರಿಡ್ಜನಲ್ಲಿ ಇಟ್ಟು ಕೊಂಡು ಪ್ರತಿನಿತ್ಯ ಬಳಕೆ ಮಾಡಬಹುದು.

ಫೆಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು:
ಗ್ರೀನ್ ಟಿ ಬ್ಯಾಗ್
ಮೊಸರು
ಅರಿಶಿಣ
ಬಾದಾಮಿ ಎಣ್ಣೆ

ಇದನ್ನೂ ಓದಿ:Tulsi leaves:”ತುಳಸಿ ಎಲೆ”ಯಿಂದ ಡ್ಯಾಂಡ್ರಫ್ ಸಮಸ್ಯೆ ನಿವಾರಣೆ

ಇದನ್ನೂ ಓದಿ:Lip Balm:ಮನೆಯಲ್ಲೇ ಕುಳಿತು ಲಿಪ್ ಬಾಲ್ಮ್ ತಯಾರಿಸಿ

ಇದನ್ನೂ ಓದಿ:Hair Pack : ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ ? ಹಾಗಾದರೆ ಮನೆಯಲ್ಲೇ ಮಾಡಿ ಈ ಹೆರ್‌ ಪ್ಯಾಕ್

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಒಂದು ಚಮಚ ಗ್ರೀನ್ ಟಿ ಬ್ಯಾಗ್, ಒಂದು ಚಮಚ ಮೊಸರು, ಒಂದು ಪಿಂಚ್ ಅರಿಶಿಣ, ಒಂದು ಚಮಚ ಬಾದಾಮಿ ಎಣ್ಣೆಯನ್ನು ಹಾಕಿಕೊಂಡು ಕಲಸಿಕೊಂಡು ಪೇಸ್‌ಪ್ಯಾಕ್‌ ತಯಾರಿಸಿಕೊಳ್ಳಬೇಕು. ಈ ಪೇಸ್‌ಪ್ಯಾಕ್‌ ಅನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಬಿಟ್ಟು ತಣ್ಣಿರಿನಲ್ಲಿ ಮುಖವನ್ನು ತೊಳೆಯಬೇಕು. ಹೀಗೆ ವಾರದಲ್ಲಿ ಎರಡು ಬಾರಿ ಈ ಫೆಸ್ ಪ್ಯಾಕ್‌ ತಯಾರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಇರುವ ಕಲೆಯನ್ನು ಕಡಿಮೆ ಮಾಡಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

how to prepare Homemade Moisturizer Cream: Here are the tips

RELATED ARTICLES

Most Popular