turmeric on skin : ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ

ಬಹುತೇಕ ಮಹಿಳೆಯರು ತ್ವಚೆಯ ಆರೋಗ್ಯದ ರಕ್ಷಣೆಗಾಗಿ ರಾಸಾಯನಿಕಗಳನ್ನು ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ಮನೆ ಮದ್ದುಗಳ ಮೇಲೆಯೇ ನಂಬಿಕೆಯನ್ನು ಇಡುತ್ತಾರೆ. ತ್ವಚೆಯ ಆರೋಗ್ಯದ ರಕ್ಷಣೆಯಲ್ಲಿ ಬಳಕೆ ಮಾಡುವ ಸಾಮಾನ್ಯ ವಸ್ತು ಅಂದರೆ ಅರಿಶಿಣವೇ ಆಗಿದೆ. ಅರಿಶಿಣವನ್ನು(turmeric on skin) ಕೇವಲ ಮಸಾಲೆ ಪದಾರ್ಥವನ್ನಾಗಿ ಮಾತ್ರವಲ್ಲದೇ ತ್ವಚೆಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲು ಬಳಕೆ ಮಾಡಲಾಗುತ್ತದೆ. ಅಲ್ಲದೇ ಅರಿಶಿಣವು ನಿಮ್ಮ ಮುಖದ ಕಾಂತಿಯನ್ನೂ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಅನೇಕರು ಅರಿಶಿಣವನ್ನು ಫೇಸ್​ ಪ್ಯಾಕ್​ ರೂಪದಲ್ಲಿ ಬಳಕೆ ಮಾಡುತ್ತಾರೆ. ಇದು ಒಳ್ಳೆಯದೇ .ಆದರೆ ಅರಿಶಿಣವನ್ನು ನೀವು ಯಾವುದ್ಯಾವುದೋ ವಸ್ತುಗಳ ಜೊತೆಯಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ನಿಮಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ.

ಅರಿಶಿಣವನ್ನುಬಳಸುವ ವೇಳೆ (turmeric on skin) ನಾವು ಮಾಡುವ ಸಾಮಾನ್ಯ ತಪ್ಪುಗಳು

ಅನಾವಶ್ಯಕ ವಸ್ತುಗಳನ್ನು ಸೇರಿಸುವುದು : ಅರಿಶಿಣದಲ್ಲೇ ಅಗಾಧ ಪ್ರಮಾಣದ ಔಷಧೀಯ ಅಂಶಗಳು ಇರೋದ್ರಿಂದ ನೀವು ಇದರ ಜೊತೆಯಲ್ಲಿ ಬೇರೆ ಯಾವುದೇ ಪದಾರ್ಥವನ್ನು ಸೇರಿಸುವ ಮುನ್ನ ಯೋಚಿಸುವುದು ಉತ್ತಮ. ರೋಸ್​ವಾಟರ್, ಹಾಲು ಹಾಗೂ ನೀರನ್ನು ಸಾಮಾನ್ಯವಾಗಿ ಅರಿಶಿಣದ ಜೊತೆಯಲ್ಲಿ ಮಿಶ್ರಣ ಮಾಡುತ್ತಾರೆ. ಇದನ್ನು ಹೊರತುಪಡಿಸಿ ಇನ್ನಿತರ ಯಾವುದೇ ಅನಗತ್ಯ ವಸ್ತುಗಳನ್ನು ಸೇರಿಸಿದರೂ ಸಹ ಅದು ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ನೀಡಲಿದೆ.

ಹೆಚ್ಚು ಕಾಲ ಅರಿಶಿಣವನ್ನು ಇಡುವುದು: ನೀವು ಎಲ್ಲೆಲ್ಲಿ ಅರಿಶಿಣವನ್ನು ಹಚ್ಚುತ್ತಿರೋ ಅಲ್ಲೆಲ್ಲಾ ಅದು ಹಳದಿ ಬಣ್ಣವನ್ನು ಬಿಡುತ್ತದೆ. ಸಾಮಾನ್ಯವಾಗಿ ಫೇಸ್​ಪ್ಯಾಕ್​ನ್ನು 20 ನಿಮಿಷದ ಒಳಗೆಯೇ ತೆಗೆಯುವಂತೆ ಹೇಳಲಾಗುತ್ತದೆ. ಇದು ಅರಿಶಿಣದ ಫೇಸ್​ಪ್ಯಾಕ್​ಗಳಿಗೂ ಅನ್ವಯವಾಗುತ್ತದೆ. ನೀವು ಅತೀ ಹೆಚ್ಚು ಸಮಯ ಮುಖದ ಮೇಲೆ ಅರಿಶಿಣದ ಫೇಸ್​ಪ್ಯಾಕ್​ ಇಟ್ಟುಕೊಂಡಲ್ಲಿ ಅದು ಮುಖದ ಮೇಲೆ ಹಳದಿ ಬಣ್ಣವನ್ನು ಬಿಡುತ್ತದೆ.

ಸರಿಯಾಗಿ ಮುಖ ತೊಳೆಯದೇ ಇರುವುದು : ಫೇಸ್​ಪ್ಯಾಕ್​ ಹಚ್ಚುವುದರಲ್ಲೇ ಮಗ್ನರಾಗುವ ನಾವು ಮುಖವನ್ನು ತೊಳೆದುಕೊಳ್ಳುವುದರತ್ತ ಹೆಚ್ಚು ಗಮನ ನೀಡಲು ಹೋಗುವುದೇ ಇಲ್ಲ. ನೀವು ಮುಖದಿಂದ ಅರಿಶಿಣ ಫೇಸ್​ಪ್ಯಾಕ್​ ತೆಗೆದ ತಕ್ಷಣವೇ ಬೆಚ್ಚನೆಯ ನೀರಿನಲ್ಲಿ ಮುಖದ ಒಂದು ಮೂಲೆಯನ್ನೂ ಬಿಡದೇ ಸರಿಯಾಗಿ ತೊಳೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಫೇಸ್​ಪ್ಯಾಕ್​ ಹಚ್ಚುವ ವೇಳೆ ನಿಮ್ಮ ಕುತ್ತಿಗೆ ಭಾಗವನ್ನು ಬಿಡುವಂತಿಲ್ಲ..!

ಇದನ್ನೂ ಓದಿ : Diet Tips : ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದೀರೇ..? ಹಾಗಾದರೆ ಈ ಆಹಾರಗಳ ಸೇವನೆ ಇಂದಿನಿಂದಲೇ ತ್ಯಜಿಸಿ

ಇದನ್ನು ಓದಿ : Beer Drinking: ನೀವೂ ಬಿಯರ್ ಕುಡೀತೀರಾ? ಬಿಯರ್‌ನಿಂದ ದೇಹಕ್ಕೆ ಉಪಯೋಗವೂ ಇದೆ, ಹಾನಿಯೂ ಇದೆ

Mistakes to avoid while using turmeric on skin

Comments are closed.