Post Holi Skin Care: ಹೋಳಿ ಆಡಿದ ನಂತರ ನಿಮ್ಮ ತ್ವಚೆಯ ಆರೈಕೆ ಹೀಗೆ ಮಾಡಿ

ಹೋಳಿ (Holi 2023) ಹಬ್ಬದಂದು ಹೋಳಿಯನ್ನು ಜೋರಾಗಿ ಆಡಲಾಗುತ್ತದೆ. ಪ್ರತಿಯೊಬ್ಬರೂ ಬಣ್ಣಗಳಲ್ಲಿ ಮಿಂದೇಳುತ್ತಾರೆ. ಆದರೆ ಕೆಲವೊಮ್ಮೆ ಈ ಬಣ್ಣಗಳು (Colors) ಚರ್ಮದ (Skin) ಮೇಲೆ ಆಳವಾದ ಪರಿಣಾಮವನ್ನು ಬೀರುತ್ತವೆ. ಚರ್ಮವು ಶುಷ್ಕ ಮತ್ತು ನಿರ್ಜೀವವಾಗುತ್ತದೆ. ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸುವುದರಿಂದ ಮುಖವು ನಿಸ್ತೇಜವಾಗಿರುತ್ತದೆ. ತ್ವಚೆಯ ಗ್ಲೋವಿಂಗ್‌ ಎಲ್ಲೋ ಕಳೆದು ಹೋಗುತ್ತದೆ. ಮೊಡವೆ, ದದ್ದುಗಳಂತಹ ಸಮಸ್ಯೆಗಳ ಸಾಧ್ಯತೆಯೂ ಹೆಚ್ಚುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಬಯಸಿದರೆ, ಕೆಲವು ಪರಿಣಾಮಕಾರಿ ಹೋಮ್‌ ಫೇಸ್ ಪ್ಯಾಕ್‌ (Face pack) ಗಳನ್ನು ಬಳಸಿ. ಈ ಫೇಸ್ ಪ್ಯಾಕ್‌ಗಳ ಸಹಾಯದಿಂದ ಹೋಳಿಯ ಬಣ್ಣಗಳಿಂದ ತ್ವಚೆಯ ಮೇಲೆ ಉಂಟಾಗುವ ತೊಂದರೆಗಳನ್ನು (Post Holi Skin Care) ಹೋಗಲಾಡಿಸಿಕೊಳ್ಳಬಹುದು. ಇದರಿಂದ ನಿಮ್ಮ ತ್ವಚೆಯು ಮೊದಲಿನಂತೆಯೇ ಕಾಂತಿಯುತವಾಗಿ ಮತ್ತು ಹೊಳೆಯುವಂತಾಗುತ್ತದೆ.

ಮೊಸರು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್:
ಹೋಳಿ ಆಡಿದ ನಂತರ, ಮೊಸರು ಮತ್ತು ಜೇನುತುಪ್ಪದ ಮಿಶ್ರಣವನ್ನು ಚರ್ಮಕ್ಕೆ ಲೇಪಿಸಿ. ಇದಕ್ಕಾಗಿ ಮೊಸರಿನಲ್ಲಿ ಎರಡು ಚಮಚ ಜೇನುತುಪ್ಪ ಮತ್ತು ಎರಡು ಚಿಟಿಕೆ ಅರಿಶಿನ ಬೆರೆಸಿ ಪ್ಯಾಕ್ ತಯಾರಿಸಿ. ಈಗ ಈ ಮಿಶ್ರಣವನ್ನು ಮುಖದ ಮೇಲೆ 15 ರಿಂದ 20 ನಿಮಿಷಗಳ ಕಾಲ ಇರಿಸಿ. ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ. ಮೊಸರು ಜೇನುತುಪ್ಪವನ್ನು ಹೀಗೆ ಹಚ್ಚುವುದರಿಂದ ತ್ವಚೆಯು ಹೊಳೆಯುತ್ತದೆ.

ಹಾಲು:
ತ್ವಚೆಯ ಆರೈಕೆಗೆ ಹಾಲನ್ನು ಸಹ ಬಳಸಬಹುದು. ಇದು ಚರ್ಮವನ್ನು ಆಳವಾಗಿ ಶುದ್ಧಗೊಳಿಸುತ್ತದೆ. ಇದರಲ್ಲಿರುವ ಕೊಬ್ಬಿನ ಆಮ್ಲಗಳು ಮತ್ತು ಲ್ಯಾಕ್ಟಿಕ್ ಆಮ್ಲವು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಚರ್ಮವು ಶುಷ್ಕವಾಗಿದ್ದರೆ ಆಗ ಹಸಿ ಹಾಲನ್ನು ಬಳಸಬೇಕು. ಮತ್ತು ಚರ್ಮವು ಎಣ್ಣೆಯುಕ್ತವಾಗಿದ್ದರೆ ಆಗ ಕಾಯಿಸಿದ ಹಾಲನ್ನು ಬಳಸಬೇಕು. ಹಾಲಿನಲ್ಲಿ ಎಫ್ಫೋಲಿಯೇಟಿಂಗ್ ಗುಣವಿದ್ದು ಮುಖದ ಬಣ್ಣವನ್ನು ಹೋಗಲಾಡಿಸುತ್ತದೆ. ಡೆಡ್‌ ಸ್ಕಿನ್ ತೆಗೆದುಹಾಕುವ ಕೆಲಸವನ್ನು ಮಾಡುತ್ತದೆ.

ಐಸ್ ಕ್ಯೂಬ್ ಗಳನ್ನು ಹಚ್ಚಿ:
ಹೋಳಿ ನಂತರ ತ್ವಚೆಯ ಆರೈಕೆಗೆ ಐಸ್ ಕ್ಯೂಬ್ ಗಳನ್ನು ಕೂಡ ಬಳಸಬಹುದು. ಐಸ್ ಕ್ಯೂಬ್‌‌ಗಳನ್ನು ತ್ವಚೆಯ ಮೇಲೆ ಉಜ್ಜುವುದರಿಂದ ರಕ್ತ ಸಂಚಾರ ಸುಧಾರಿಸಿ ತ್ವಚೆಯು ಹೊಳೆಯುತ್ತದೆ.

ಇದನ್ನೂ ಓದಿ : ದಿನಕ್ಕೆ 3 ದಾಳಿಂಬೆ ತಿನ್ನುವುದರಿಂದ ಕಡಿಮೆಯಾಗಲಿದೆ ಅಧಿಕ ರಕ್ತದೊತ್ತಡ

ಪಪ್ಪಾಯಿ ಮತ್ತು ಅಲೋವೆರಾ ಫೇಸ್ ಪ್ಯಾಕ್:
ಪಪ್ಪಾಯಿ ಮತ್ತು ಅಲೋವೆರಾ ಫೇಸ್ ಪ್ಯಾಕ್ ಅನ್ನು ಸಹ ಅನ್ವಯಿಸಬಹುದು. ಇದು ನಿಸ್ತೇಜಗೊಂಡ ಮುಖದ ಮೇಲಿನ ಚರ್ಮವನ್ನು ಸುಧಾರಿಸುತ್ತದೆ. ಅದಕ್ಕಾಗಿ ಅರ್ಧ ಕಪ್ ಪಪ್ಪಾಯಿಯನ್ನು ಒಂದು ಬಟ್ಟಲಿನಲ್ಲಿ ಮ್ಯಾಶ್ ಮಾಡಿ. ಅದಕ್ಕೆ ಎರಡು ಚಮಚ ಅಲೋವೆರಾ ಜೆಲ್ ಅನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಸಿದ್ಧಪಡಿಸಿದ ಮಿಶ್ರಣವನ್ನು ಮುಖದ ಮೇಲೆ ಲೇಪಿಸಿ. 20 ನಿಮಿಷಗಳ ಕಾಲ ಬಿಡಿ. ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಒಣ ತ್ವಚೆಯ ಸಮಸ್ಯೆ ದೂರವಾಗುತ್ತದೆ ಮತ್ತು ಸ್ಕಿನ್ ಟ್ಯಾನಿಂಗ್ ಕೂಡ ದೂರವಾಗುತ್ತದೆ.

ಅಲೋವೆರಾ ಜೆಲ್ ಮತ್ತು ಜೇನುತುಪ್ಪ:
ಅಲೋವೆರಾ ಜೆಲ್‌ನಿಂದ ಚರ್ಮದ ಆರೈಕೆಯನ್ನು ಮಾಡಬಹುದು. ಇದು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಹೋಳಿಯ ಬಣ್ಣವನ್ನು ಚರ್ಮದ ಮೇಲಿಂದ ತೆಗೆದುಹಾಕುತ್ತದೆ. ನೇರವಾಗಿ ಅಲೋವೆರಾ ಜೆಲ್ ಅನ್ನು ಸಹ ಬಳಸಬಹುದು. ಇಲ್ಲದಿದ್ದರೆ ಜೇನುತುಪ್ಪವನ್ನು ಬೆರೆಸಿಯೂ ಸಹ ಉಪಯೋಗಿಸಿಬಹುದು.

ಇದನ್ನೂ ಓದಿ : Carrot Juice Benefits : ಸಂಪೂರ್ಣ ಆರೋಗ್ಯಕ್ಕಾಗಿ ಕುಡಿಯಿರಿ ಕ್ಯಾರೆಟ್‌ ಜ್ಯೂಸ್‌

(Post Holi Skin Care. After playing Holi do skin care with these things.)

Comments are closed.