Reverse Shampoo Method : ರಿವರ್‍ಸ ಶಾಂಪೂ ಎಂದರೆ ನಿಮಗೆ ಗೊತ್ತಾ? ನೀವು ತಿಳಿದುಕೊಳ್ಳಲೇ ಬೇಕಾದ ಹೇರ್‌ಕೇರ್‌ ಟ್ರೆಂಡ್‌ ಇದು!‌‌

ವಿವಿಧ ಹೇರ್‌ಕೇರ್‌ ಟ್ರೆಂಡ್‌(Haircare Trend)ಗಳ ಜನಪ್ರಿಯವಾಗುತ್ತಿರುವ ಸಮಯದಲ್ಲಿ ರಿವರ್‍ಸ ಶಾಂಪೂ ಪದ್ಧತಿ ಎಂಬುದು ಸದ್ಯದ ಹಾಟ್‌ ಟಾಪಿಕ್‌. ನಿಮಗೆ ಈ ಹೇರ್‌ಕೇರ್‌ ಪದ್ಧತಿಯ(Reverse Shampoo Method) ಬಗ್ಗೆ ತಿಳಿದಿಲ್ಲವೆಂದರೆ ಇದನ್ನೊಮ್ಮೆ ಓದಿ. ಇಲ್ಲಿ ರಿವರ್‍ಸ ಶಾಂಪೂವಿನ ಬಳಕೆ, ಅದರ ಪ್ರಯೋಜನಗಳು ಮತ್ತು ಅದರ ಮಿತಿಗಳನ್ನು ತಿಳಿಯಿರಿ.

ರೆವರ್‍ಸ ಶಾಂಪೂ ಪದ್ಧತಿ ಎಂದರೆ ಕಂಡೀಷನರ್‌ ಅನ್ನು ಮೊದಲು ಕೂದಲಿಗೆ ಹಚ್ಚಿ ಕನಿಷ್ಟ 10 ನಿಮಿಷಗಳ ವರೆಗೆ ಹಾಗೇ ಬಿಟ್ಟು ನಂತರ ನೀರಿನಿಂದ ತೊಳೆಯುವುದು. ನಂತರ ಶಂಪೂವಿನಿಂದ ಕೂದಲನ್ನು ಸ್ವಚ್ಛಗೊಳಿಸುವುದು.

ಇದನ್ನೂ ಓದಿ : Hair Growth Oils: ಕೂದಲಿನ ಸಮಸ್ಯೆಗಳಿಗೆ ಅದ್ಭುತ ಪವಾಡ ಬೀರುವ ಈ 4 ಎಣ್ಣೆಗಳನ್ನು ಟ್ರೈ ಮಾಡಿ ನೋಡಿ

ರಿವರ್‍ಸ ಶಾಂಪೂ ಪದ್ಧತಿಯಿಂದ ಆಗುವ ಪ್ರಯೋಜನಗಳು :

  • ಇದು ಕೂದಲು ಮತ್ತು ಕೂದಲಿನ ಸ್ಕಾಪ್ಲ್‌ ಹೈಡ್ರೇಟ್‌ ಆಗಿರಲು ಸಹಕರಿಸುತ್ತದೆ. ಇದು ಕೂದಲು ಒಳಗಿನಿಂದಲೇ ಪೋಷಣೆ ಸಿಗುವಂತೆ ಮಾಡುತ್ತದೆ.
  • ಸಾಂಪ್ರದಾಯಿಕ ಕೂದಲು ಸ್ವಚ್ಛಗೊಳಿಸುವ ವಿಧಾನಗಳು, ನಿಮ್ಮ ಸ್ಕಾಲ್ಪ್‌(ನೆತ್ತಿ) ಯಲ್ಲಿ ಕಂಡೀಷನರ್‌ನ ಶೇಷಗಳು ಉಳಿಯುವಂತೆ ಮಾಡಬಹುದು. ಅದು ಕೂದಲಿನ ಆರೋಗ್ಯಕ್ಕೆ
    ಉತ್ತಮವಲ್ಲ. ಕಂಡೀಷನರ್‌ನ ನಂತರ ಶಾಂಪೂದಿಂದ ತೊಳೆಯುವುದು ನಿಮ್ಮ ಕೂದಲು ಸಂಪೂರ್ಣವಾಗಿ ಸ್ವಚ್ಛವಾಗಿದೆ ಎಂದು ಎರಡು ಬಾರಿ ಪರಿಶೀಲಿಸಲು ಸಹಾಯ ಮಾಡುತ್ತದೆ.
  • ಇದು ಆಯಲಿ ಹೇರ್‌ನ ರಿಸ್ಕ್‌ ಕಡಿಮೆ ಮಾಡಬಹುದು.

ರೆವರ್‍ಸ ಶಾಂಪೂ ವಿಧಾನದ ಮಿತಿಗಳು:
ರಿವರ್‍ಸ ಶಾಂಪೂ ವಿಧಾನವು ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಇದು ಒರಟಾದ ಕೂದಲಿಗೆ ಕಡಿಮೆ ಪರಿಣಾಮಕಾರಿಯಾಗಬಹುದು. ಅದೇನೇ ಇದ್ದರೂ ನೀವು ರಿವರ್‍ಸ ಶಾಂಪೂ ವಿಧಾನ ಪ್ರಯತ್ನಿಸಬಹುದು ಮತ್ತು ನೀವೇ ಫಲಿತಾಂಶಗಳನ್ನೂ ನಿರೀಕ್ಷಿಸಬಹುದು.

ಇದನ್ನೂ ಓದಿ : Summer Hairstyle: ಬೇಸಿಗೆಗೆ ಯಾವ ರೀತಿಯ ಹೇರ್‌ ಸ್ಟೈಲ್‌ ಇದ್ದರೆ ಬೆಸ್ಟ್‌ ಅಂತೀರಾ?

(Reverse Shampoo Method DO you know this new haircare trend)

Comments are closed.