ಸೋಮವಾರ, ಏಪ್ರಿಲ್ 28, 2025
HomeSpecial StoryLife StyleSkin Care : ನಿಮ್ಮ ತ್ವಚೆ ಸುಂದರ ಮತ್ತು ಯೌವನದಿಂದ ಕೂಡಿರಲು ಈ ರೀತಿ ಮಾಡಿ

Skin Care : ನಿಮ್ಮ ತ್ವಚೆ ಸುಂದರ ಮತ್ತು ಯೌವನದಿಂದ ಕೂಡಿರಲು ಈ ರೀತಿ ಮಾಡಿ

- Advertisement -

ವಯಸ್ಸಾದಂತೆ ತ್ವಚೆ(Skin Care) ತನ್ನ ಅಂದವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಅದರ ಪರಿಣಾಮ ನೆರಿಗೆಗಳು ಮತ್ತು ಸುಕ್ಕುಗಳು ಮುಖ ಮತ್ತು ಕುತ್ತಿಗೆಯ ಮೇಲೆ ಕಾಣಿಸುತ್ತಾ ಹೋಗುತ್ತದೆ. ಕೆಲವೊಂದು ಸಲ ಸುಕ್ಕುಗಟ್ಟಿದ ತ್ವಚೆಯು ಜಾಸ್ತಿ ವಯಸ್ಸಾದಂತೆ ಕಾಣಿಸುತ್ತದೆ. ಹೀಗಾಗಲು ಕಾರಣ ಅನಾರೋಗ್ಯಕರ ಆಹಾರ ಮತ್ತು ಜೀವನ ಶೈಲಿ. ಪ್ರತಿಯೊಬ್ಬರೂ ವಯಸ್ಸಾದರೂ ಸಹ ಸುಂದರವಾಗಿ ಕಾಣಬೇಕೆಂದೇ ಬಯಸುತ್ತಾರೆ. ಸುಕ್ಕುಗಳಿಲ್ಲದ, ಸುಂದರ, ಕೋಮಲ ತ್ವಚೆ ತಮ್ಮದಾಗಿರಬೇಕೆಂದೇ ಆಶಿಸುತ್ತಾರೆ. ನಿಮಗೂ ಆ ರೀತಿಯ ಆಸೆ, ಕನಸುಗಳಿದ್ದರೆ ನಾವು ಹೇಳುವ ಸರಳ ಟಿಪ್ಸ್‌ ಪಾಲಿಸಿ ನಿಮ್ಮ ಚರ್ಮವನ್ನು ಗಟ್ಟಿಯಾಸಿ.

ಇದನ್ನೂ ಓದಿ : Ice cubes For Glowing Skin : ತ್ವಚೆಯ ಸಮಸ್ಯೆಗಳಿಗೆ ಐಸ್‌ ಕ್ಯೂಬ್‌ ಉಪಯೋಗಿಸಿದ್ದೀರಾ ? ಐಸ್‌ ಕ್ಯೂಬ್‌ ಉಪಯೋಗಿಸಿ ಬೇಸಿಗೆಯಲ್ಲಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ

  • ಅಲೋವೆರಾ ಜೆಲ್‌:
    ಅಲೋವೆರಾದಲ್ಲಿರುವ ಮಾಲಿಕ್‌ ಆಸಿಡ್‌ ತ್ವಚೆಯನ್ನು ಪುನಶ್ಚೇತನಗೊಳಿಸಲು ಬಹಳ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಅಲೋವೆರಾವನ್ನು ಬಳಸುವುದರಿಂದ ತ್ವಚೆಗೆ ಬಿಗಿತವನ್ನು ನೀಡಲು ಸಹಾಯಮಾಡಿ ವಯಸ್ಸಿನ ಚಿಹ್ನೆ ಮರೆಮಾಚುತ್ತದೆ. ಅಲೋವೆರಾ ಜೆಲ್‌ ಅನ್ನು ಸ್ವಲ್ಪ ತೆಗೆದುಕೊಳ್ಳಿ ವೃತ್ತಾಕಾರವಾಗಿ ನಿಮ್ಮ ತ್ವಚೆಯ ಮೇಲೆ ಕೆಲವು ನಿಮಿಷಗಳ‌ವರೆಗೆ ಮಸ್ಸಾಜ್‌ ಮಾಡಿ. 15 ನಿಮಿಷ ಬಿಡಿ ನಂತರ ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಪ್ರತಿನಿತ್ಯ ಮಾಡುವುದರಿಂದ ನಿಮ್ಮ ತ್ವಚೆ ಕಾಂತಿಯುತವಾಗಿ ಕಂಗೊಳಿಸುತ್ತದೆ.
  • ಆಂಟಿ ಒಕ್ಸಿಡೆಂಟ್‌ ಆಹಾರ ಸೇವಿಸಿ :
    ಆಂಟಿ ಒಕ್ಸಿಡೆಂಟ್‌ ಹೇರಳವಾಗಿರುವ ಆಹಾರಗಳ ಸೇವಿಸನೆಯು ತ್ವಚೆ ಕಳೆಗುಂದುವುದನ್ನು ತಪ್ಪಿಸಲು ಸಹಾಯಮಾಡುತ್ತದೆ. ಆಂಟಿ ಒಕ್ಸಿಡೆಂಟ್‌ ಹಾನಿಗೊಳಗಾದ ಜೀವಕೋಶಗಳನ್ನು ಸುಧಾರಿಸಿ, ಹೊಸ ಜೀವಕೋಶಗಳು ಉತ್ಪತ್ತಿಯಾಗಲು ಬಹಳ ಪ್ರಯೋಜನಕಾರಿಯಾಗಿದೆ. ಆಂಟಿ ಒಕ್ಸಿಡೆಂಟ್‌ ಆಹಾರಗಳು ಆರೋಗ್ಯ ಪೂರ್ಣ ತ್ವಚೆ ಪಡೆಯಲು ಉತ್ತಮ ದಾರಿಯಾಗಿದೆ.
  • ರೆಟಿನಾಲ್‌ ಕ್ರೀಮ್‌ ಬಳಸಿ :
    ರೆಟಿನಾಲ್‌ ಕ್ರೀಮ್‌ಗಳು ವಯಸ್ಸಿನ ಚಿಹ್ನೆ ಕಾಣಿಸುವ ತ್ವಚೆಯನ್ನು ಎದುರಿಸಲು ಹೆಸರುವಾಸಿಯಾಗಿದೆ. ಬಾಹ್ಯ ತ್ವಚೆ ತೆಳುವಾಗಿದ್ದರೆ ತ್ವಚೆ ಬಿಗಿತವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ರೆಟಿನಾಲ್‌ ಕ್ರೀಮ್‌ಗಳು ಬಾಹ್ಯ ತ್ವಚೆ ದಪ್ಪಗಾಗುವಂತೆ ಮಾಡಿ ಸುಕ್ಕುಗಳನ್ನು ಹೋಗಲಾಡಿಸಲು ಸಹಾಯಮಾಡುತ್ತದೆ.
  • ಮಸ್ಸಾಜ್‌ ಮಾಡಿಕೊಳ್ಳಿ :
    ತ್ವಚೆ ಬಿಗಿಯಾಗಿ ಮತ್ತು ಸುಕ್ಕುಗಳನ್ನು ಇಲ್ಲವಾಗಿಸಲು ಮಸ್ಸಾಜ್‌ನಿಂದ ಉತ್ತಮ ಪರಿಣಾಮ ಸಾಧ್ಯ. ಮಸ್ಸಾಜ್‌ ರಕ್ತ ಪರಿಚಲನೆಯನ್ನು ಹೆಚ್ಚಿಸಿ ವಯಸ್ಸಿನ ಚಿಹ್ನೆ ತಡೆಯುತ್ತದೆ.
  • ದೇಹದ ತೂಕ ಗಮನಿಸಿ:
    ಯಾವಾಗ ತ್ವಚೆ ಗಡಸುತನವನ್ನು ಕಳೆದುಕೊಳ್ಳುವುದೋ ಅದರ ಅರ್ಥ ಸ್ನಾಯುಗಳು ದುರ್ಬಲಗೊಂಡಿವೆ ಎಂದು. ತ್ವಚೆ ಕಳೆಗುಂದುವುದನ್ನು ತಪ್ಪಿಸಲು ಒಳ್ಳೆಯ ದಾರಿಯೆಂದರೆ ಸ್ನಾಯುಗಳ ಬಲವರ್ಧನೆಗೊಳಿಸುವುದು. ದೇಹ ತೂಕ ಗಮನದಲ್ಲಿರಿಸಕೊಂಡು ವ್ಯಾಯಾಮ ಮಾಡಿ. ಮುಖ ಮತ್ತು ಕುತ್ತಗೆಯ ಸ್ನಾಯುಗಳು ಬಲವಾಗಲು ಸಹಾಯಮಾಡುತ್ತದೆ.
  • ಸವತೆಕಾಯಿ :
    ಸವತೆಕಾಯಿ ನೀರಿನ ಆಗರವೆನ್ನಬಹುದು. ಇದು ತ್ವಚೆ ಪುನಶ್ಚೇತನಗೊಳಿಸಲು ಬಹಳ ಪ್ರಯೋಜನಕಾರಿ. ಇದು ನೈಸರ್ಗಿಕ ಟೋನರ್‌ ಆಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಸವತೆಕಾಯಿಯ ಜ್ಯೂಸ್‌ ತೆಗೆದು ಅದನ್ನು ಮುಖ, ಕುತ್ತಿಗೆ ಮತ್ತು ಎದೆಯ ಭಾಗಗಳಿಗೆ ಹಚ್ಚಿ. ಕೆಲವು ನಿಮಿಷ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಪ್ರತಿದಿನ ಮಾಡುವುದರಿಂದ ಚರ್ಮದ ಮೇಲೆ ಉತ್ತಮ ಪರಿಣಾಮ ಬೀರುವುದು.

ಇದನ್ನೂ ಓದಿ: Yoga For Migraine: ಮೈಗ್ರೇನ್ ಆಗೋದು ಏಕೆ? ಈ ಆಸನಗಳನ್ನು ಮಾಡಿದರೆ ಮೈಗ್ರೇನ್ ಬರೋದಿಲ್ಲ

(Skin Care Do you want your skin to look tight and younger follow these tips)

RELATED ARTICLES

Most Popular