KGF Chapter 2 Vs Beast : ಕೆಜಿಎಫ್ ಚಾಪ್ಟರ್ -2 Vs ಬೀಸ್ಟ್ : ಇದರಲ್ಲಿ ಗೆಲ್ಲೋರು ಯಾರು?

ಆರ್ ಆರ್ ಆರ್ ಸಿನಿಮಾದ ನಂತರ ಭಾರತೀಯ ಚಿತ್ರರಂಗ ತಿರುಗಿನೋಡುವಂತೆ ಮಾಡುವ ಎರಡು ಸಿನಿಮಾ ಅಂದರೆ ಕನ್ನಡದ ನಟ ಯಶ್ ಅಭಿನಯದ ಕೆ.ಜಿಎಫ್ ಚಾಪ್ಟರ್ 2 ಮತ್ತು ತಮಿಳುನಟ ವಿಜಯ್ ಅವರ ಬೀಸ್ಟ್ (KGF Chapter 2 Vs Beast). ಅದರಲ್ಲೂ ಕೆಜಿಎಫ್ ಹವಾ ಸಿಕ್ಕಾಪಟ್ಟೆ ಜೋರಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇದು ಬಾಲಿವುಡ್ ಚಿತ್ರರಂಗವನ್ನೂ ಚಿಂತೆಗೀಡುಮಾಡುವ ರೀತಿ ಸದ್ದು ಮಾಡುತ್ತಿದೆ. ಹೀಗಾಗಿ,ಹಲವು ಸಿನಿಮಾಗಳು ಈಗಾಗಲೇ ಕೆಜಿಎಫ್ ಸಿನಿಮಾ ಬಿಡುಗಡೆ ಕಾರಣದಿಂದ ಮುಂದೂಡಲಾಗಿದೆ.

ಇಂತಿಪ್ಪ, ಕೆಜಿಎಫ್ ಚಾಪ್ಟರ್ -2 ತಮಿಳಿನ ಬೀಸ್ಟ್ ಸಿನಿಮಾ ಮುಂದೆ(KGF Chapter 2 Vs Beast) ಯಾವ ರೀತಿ ಕಮಾಲ್ ಮಾಡಲಿದೆ ಅನ್ನೋ ಕುತೂಹಲ ಈಗ ಎಲ್ಲರಲ್ಲಿ ಹೆಚ್ಚಾಗಿದೆ. ಬೀಸ್ಟ್ ಸಿನಿಮಾ ಏಪ್ರಿಲ್ 13ರಂದು ತೆರೆಕಾಣಲು ಸಿದ್ಧಗೊಂಡಿದ್ದರೆ,ಕೆಜಿಎಫ್ ಚಾಪ್ಟರ್ -2 ಮರುದಿನ ಅಂದರೆ ಏಪ್ರಿಲ್ 14ರಂದು ತೆರೆಕಾಣುತ್ತಿದೆ. ಈಗಿರುವ ಹವಾಮಾನದ ಪ್ರಕಾರ ಕೆಜಿಎಫ್-2 ತಮಿಳುನಾಡು, ಕೇರಳ ಹೊರತುಪಡಿಸಿ ಮಿಕ್ಕೆಲ್ಲೆಡೆ ತನ್ನ ಪ್ರಭುತ್ವ ಸ್ಥಾಪಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ವಿಜಯ್ ಅವರ ಬೀಸ್ಟ್ ಸಿನಿಮಾದ ಅಲೆ ಇದೆಯಂತೆ. ಅವರ ಸಿನಿಮಾ ತಮಿಳು ಭಾಷೆಯಲ್ಲಿ ತಯಾರಾಗಿರುವುದರಿಂದ ತಮಿಳುನಾಡಿನಲ್ಲಿ,ಕೇರಳದಲ್ಲಿ ಒಂದಷ್ಟು ಅಭಿಮಾನಿಗಳ ಇರುವುದರಿಂದ ಅಲ್ಲಿ ಬೀಸ್ಟ್ ಅಲೆ ಹೆಚ್ಚಾಗಿದೆಯಂತೆ. ಆದರೆ, ಕೆಜಿಎಫ್-2 ಸಿನಿಮಾಕ್ಕೆ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಯಶ್ ಹೋದಬಂದಲೆಲ್ಲಾ ಅಭಿಮಾನಿಗಳು ಸಾಗರದಂತೆ ಸೇರುತ್ತಿರುವುದೇ ಇದಕ್ಕೆ ಸಾಕ್ಷಿ.

ಇದನ್ನೂ ಓದಿ : Pushpa-2 Samantha : ಪುಷ್ಪ-2 ಗೆ ಸಮಂತಾ ಸ್ಪೆಷಲ್ ಎಂಟ್ರಿ : ಸುಕುಮಾರನ್ ಹೇಳಿದ್ದೇನು ಗೊತ್ತಾ

ಈ ಕಾರಣಕ್ಕೋ ಏನೋ, ಬೀಸ್ಟ್ ಸಿನಿಮಾವನ್ನು ಇತರೆ ರಾಜ್ಯಗಳಲ್ಲಿ ಪ್ರಮೋಟ್ ಮಾಡುತ್ತಿಲ್ಲ. ತಮಿಳುನಾಡು, ಕೇರಳ ರಾಜ್ಯದಲ್ಲಿ ವಿಜಯ್ ಚಿತ್ರಕ್ಕೆ ಪ್ರಮೋಷನ್ ನ ಅಗತ್ಯ ಕಾಣುತ್ತಿಲ್ಲ. ಹೀಗಾಗಿ, ಕೆಜಿಎಫ್ ಗೆ ಇಲ್ಲಿನ ಸ್ಪಂದನೆ ಅಷ್ಟಾಗಿ ಇಲ್ಲ. ಆದರೆ, ಇತರೆ ರಾಜ್ಯಗಳಲ್ಲಿ ಕೆಜಿಎಫ್ ಚಾಪ್ಟರ್-2 ಚಿತ್ರತಂಡ ಸರಿಯಾಗಿಯೇ ಪ್ರಮೋಷನ್ ಮಾಡುತ್ತಿದೆ. ಅಲ್ಲಿನ ಜನರಲ್ಲೂ ಕೂಡ ಬಹಳ ಕುತೂಹಲ ಮೂಡಿದೆ. ಇದಕ್ಕೆ ಕಾರಣ, ಕೆಜಿಎಫ್ ಚಾಪ್ಟರ್ 1 ಸೂಪರ್ ಡೂಪರ್ ಹಿಟ್ ಆಗಿದ್ದು. ಮುಖ್ಯವಾಗಿ, ಕೆಜಿಎಫ್ ಚಾಪ್ಟರ್ -2 ನಲ್ಲಿ ಬಾಲಿವುಡ್ ಒಳಗೊಂಡಂತೆ ವಿವಿಧ ಭಾಷೆಯ ಖ್ಯಾತ ನಟರು ತಾರಾಗಣದಲ್ಲಿ ಇರುವುದು.

ಕೇವಲ ಬಾಯಿಮಾತಿನ ಮೂಲಕ ಸಿನಿಮಾ ಓಡಬೇಕು ಅನ್ನೋದಾದರೆ ಬೀಸ್ಟ್ ಕೇರಳ, ತಮಿಳುನಾಡಿನ ಹೊರತಾಗಿ ಮಿಕ್ಕ ರಾಜ್ಯಗಳ ಚಿತ್ರಮಂದಿರಗಳಲ್ಲಿ ತಳಊರುವುದು ಅನುಮಾನ ಅನ್ನೋ ಲೆಕ್ಕಾಚಾರವೂ ಇದೆ. ಪ್ರಸ್ತುತ ಕೆಜಿಎಫ್ ಚಾಪ್ಟರ್-2 ಮುಂದೆ ಬೀಸ್ಟ್ ಸಿನಿಮಾ ಮಕಾಡೆ ಮಲಗುವ ಸಾಧ್ಯತೆಗಳು ಹೆಚ್ಚು ಎನ್ನಲಾಗುತ್ತಿದೆ. ಎರಡೂ ಸಿನಿಮಾಗಳ ನಿರ್ಮಾಣ, ಬಾಕ್ಸ್ ಆಫೀಸ್ ನ ಕಲಕ್ಷನ್ ಮೇಲೆಯೇ ಸೋಲು, ಗೆಲುವು ನಿರ್ಧಾರವಾಗುವುದು. ಅಲ್ಲಿಯ ತನಕ ಕಾಯಬೇಕು.

ಇದನ್ನೂ ಓದಿ : KGF 2 trailer New Record : ದಾಖಲೆಗಳನ್ನು ಭೇಟೆಯಾಡಿದ ರಣಬೇಟೆಗಾರ : 17 ಮಿಲಿಯಮ್ಸ್ ವೀವ್ಸ್ ಪಡೆದ ಕೆಜಿಎಫ್-2 ಟ್ರೇಲರ್

(KGF Chapter 2 Vs Beast Who will win the race Kannada actor Yash or Tamil actor Vijay)

Comments are closed.