ಮಂಗಳವಾರ, ಏಪ್ರಿಲ್ 29, 2025
HomeSpecial StoryLife StyleBenefits Of Saffron : ತ್ವಚೆಯ ಆರೋಗ್ಯ ಕಾಪಾಡಲು ಬಳಸಿ ‘ಕೇಸರಿ’

Benefits Of Saffron : ತ್ವಚೆಯ ಆರೋಗ್ಯ ಕಾಪಾಡಲು ಬಳಸಿ ‘ಕೇಸರಿ’

- Advertisement -

ಕೇಸರಿಯನ್ನು ನೀವು ಅಡುಗೆ ಮನೆಯಲ್ಲಿ ನೋಡಿರ್ತಿರಾ. ಸಿಹಿ ಖಾದ್ಯಗಳನ್ನು ತಯಾರಿಸುವಾಗ, ಬಾದಾಮಿ ಹಾಲು ಮಾಡುವಾಗ ಕೇಸರಿ (Saffron) ಬಳಕೆ ಮಾಡೋದನ್ನು ಕಂಡಿರುತ್ತೀರಾ. ಗರ್ಭಿಣಿಯರಿಗೆ ಹೆಚ್ಚಾಗಿ ಕೇಸರಿ ಹಾಲು ಕುಡಿಯುವಂತೆ ಹಿರಿಯರು ಹೇಳುತ್ತಾರೆ. ಸಣ್ಣದಾದ ಎಸಳನ್ನು ಹೊಂದಿರುವ ಈ ಕೇಸರಿ ದಳವು (Benefits Of Saffron) ಅಡುಗೆ ಮನೆಯಲ್ಲಿ ಇಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಅಂದರೆ ಅದರ ಲಾಭ ಎಷ್ಟಿರಬಹುದು ಎಂಬುದನ್ನು ನೀವೇ ಆಲೋಚಿಸಿ. ಈ ಕೇಸರಿಯನ್ನು ನೀವು ಕೇವಲ ಆಹಾರದ ರೂಪದಲ್ಲಿ ಮಾತ್ರವಲ್ಲ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಬಳಕೆ ಮಾಡಬಹುದಾಗಿದೆ. ಕೇಸರಿಯಲ್ಲಿರು ಕಾರ್ಟೋನೈಡ್​ ಎಂಬ ಅಂಶವು ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ .

Benefits Of Saffron : ತ್ವಚೆಯ ಆರೋಗ್ಯ ಕಾಪಾಡಲು ಕೇಸರಿ ಬಳಕೆ ಹೇಗೆ ?

ಸಾಮಾನ್ಯವಾಗಿ ತ್ವಚೆಗೆ ಬಳಕೆ ಮಾಡುವ ಫೇರ್​ನೆಸ್ ಕ್ರೀಮ್​ಗಳಲ್ಲಿ ಕೇಸರಿಯನ್ನು ಬಳಕೆ ಮಾಡಲಾಗುತ್ತದೆ. ಆದರೆ ಕೇಸರಿಯನ್ನು )Saffron) ನೀವು ಮನೆ ಮದ್ದಿನ ರೂಪದಲ್ಲಿಯೇ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ. ಅರ್ಧ ಕಪ್​ ಹಾಲಿಗೆ ಒಂದೆರಡು ಎಸಳು ಕೇಸರಿಯನ್ನು ಮಿಶ್ರಣ ಮಾಡಿ.ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಇದನ್ನು ನೀವು ಮುಖಕ್ಕೆ ಲೇಪಿಸಿಕೊಂಡು 15 ನಿಮಿಷಗಳ ಕಾಲ ಮುಖವನ್ನು ಹಾಗೆಯೇ ಬಿಡಿ. ಇದು ಒಣಗಿದ ಬಳಿಕ ಶುದ್ಧವಾದ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಯ ಕಾಂತಿಯು ಹೆಚ್ಚಲಿದೆ. ನಿಮ್ಮ ತ್ವಚೆಗೆ ಜೇನುತುಪ್ಪ ಹೊಂದುವುದಿಲ್ಲ ಎಂದಾದಲ್ಲಿ ನೀವು ಕೇವಲ ಹಾಲು ಮತ್ತು ಕೇಸರಿಯನ್ನು ಮಾತ್ರ ಬಳಕೆ ಮಾಡಬಹುದು. ಕೇಸರಿ ಹಾಗೂ ಹಾಲು ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೀಗಾಗಿ ಕೇವಲ ಇವರೆಡರ ಮಿಶ್ರಣ ಕೂಡ ನಿಮಗೆ ಉತ್ತಮ ಲಾಭ ನೀಡಲಿದೆ.

ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ..!

ಬಹುತೇಕ ಮಹಿಳೆಯರು ತ್ವಚೆಯ ಆರೋಗ್ಯದ ರಕ್ಷಣೆಗಾಗಿ ರಾಸಾಯನಿಕಗಳನ್ನು ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ಮನೆ ಮದ್ದುಗಳ ಮೇಲೆಯೇ ನಂಬಿಕೆಯನ್ನು ಇಡುತ್ತಾರೆ. ತ್ವಚೆಯ ಆರೋಗ್ಯದ ರಕ್ಷಣೆಯಲ್ಲಿ ಬಳಕೆ ಮಾಡುವ ಸಾಮಾನ್ಯ ವಸ್ತು ಅಂದರೆ ಅರಿಶಿಣವೇ ಆಗಿದೆ. ಅರಿಶಿಣವನ್ನು(turmeric on skin) ಕೇವಲ ಮಸಾಲೆ ಪದಾರ್ಥವನ್ನಾಗಿ ಮಾತ್ರವಲ್ಲದೇ ತ್ವಚೆಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲು ಬಳಕೆ ಮಾಡಲಾಗುತ್ತದೆ. ಅಲ್ಲದೇ ಅರಿಶಿಣವು ನಿಮ್ಮ ಮುಖದ ಕಾಂತಿಯನ್ನೂ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಅನೇಕರು ಅರಿಶಿಣವನ್ನು ಫೇಸ್​ ಪ್ಯಾಕ್​ ರೂಪದಲ್ಲಿ ಬಳಕೆ ಮಾಡುತ್ತಾರೆ. ಇದು ಒಳ್ಳೆಯದೇ .ಆದರೆ ಅರಿಶಿಣವನ್ನು ನೀವು ಯಾವುದ್ಯಾವುದೋ ವಸ್ತುಗಳ ಜೊತೆಯಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ನಿಮಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ.

ಅನವಶ್ಯಕ ವಸ್ತುಗಳನ್ನು ಸೇರಿಸುವುದು : ಅರಿಶಿಣದಲ್ಲೇ ಅಗಾಧ ಪ್ರಮಾಣದ ಔಷಧೀಯ ಅಂಶಗಳು ಇರೋದ್ರಿಂದ ನೀವು ಇದರ ಜೊತೆಯಲ್ಲಿ ಬೇರೆ ಯಾವುದೇ ಪದಾರ್ಥವನ್ನು ಸೇರಿಸುವ ಮುನ್ನ ಯೋಚಿಸುವುದು ಉತ್ತಮ. ರೋಸ್​ವಾಟರ್, ಹಾಲು ಹಾಗೂ ನೀರನ್ನು ಸಾಮಾನ್ಯವಾಗಿ ಅರಿಶಿಣದ ಜೊತೆಯಲ್ಲಿ ಮಿಶ್ರಣ ಮಾಡುತ್ತಾರೆ. ಇದನ್ನು ಹೊರತುಪಡಿಸಿ ಇನ್ನಿತರ ಯಾವುದೇ ಅನಗತ್ಯ ವಸ್ತುಗಳನ್ನು ಸೇರಿಸಿದರೂ ಸಹ ಅದು ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ನೀಡಲಿದೆ.

ಹೆಚ್ಚು ಕಾಲ ಅರಿಶಿಣವನ್ನು ಇಡುವುದು: ನೀವು ಎಲ್ಲೆಲ್ಲಿ ಅರಿಶಿಣವನ್ನು ಹಚ್ಚುತ್ತಿರೋ ಅಲ್ಲೆಲ್ಲಾ ಅದು ಹಳದಿ ಬಣ್ಣವನ್ನು ಬಿಡುತ್ತದೆ. ಸಾಮಾನ್ಯವಾಗಿ ಫೇಸ್​ಪ್ಯಾಕ್​ನ್ನು 20 ನಿಮಿಷದ ಒಳಗೆಯೇ ತೆಗೆಯುವಂತೆ ಹೇಳಲಾಗುತ್ತದೆ. ಇದು ಅರಿಶಿಣದ ಫೇಸ್​ಪ್ಯಾಕ್​ಗಳಿಗೂ ಅನ್ವಯವಾಗುತ್ತದೆ. ನೀವು ಅತೀ ಹೆಚ್ಚು ಸಮಯ ಮುಖದ ಮೇಲೆ ಅರಿಶಿಣದ ಫೇಸ್​ಪ್ಯಾಕ್​ ಇಟ್ಟುಕೊಂಡಲ್ಲಿ ಅದು ಮುಖದ ಮೇಲೆ ಹಳದಿ ಬಣ್ಣವನ್ನು ಬಿಡುತ್ತದೆ.

ಸರಿಯಾಗಿ ಮುಖ ತೊಳೆಯದೇ ಇರುವುದು :ಫೇಸ್​ಪ್ಯಾಕ್​ ಹಚ್ಚುವುದರಲ್ಲೇ ಮಗ್ನರಾಗುವ ನಾವು ಮುಖವನ್ನು ತೊಳೆದುಕೊಳ್ಳುವುದರತ್ತ ಹೆಚ್ಚು ಗಮನ ನೀಡಲು ಹೋಗುವುದೇ ಇಲ್ಲ. ನೀವು ಮುಖದಿಂದ ಅರಿಶಿಣ ಫೇಸ್​ಪ್ಯಾಕ್​ ತೆಗೆದ ತಕ್ಷಣವೇ ಬೆಚ್ಚನೆಯ ನೀರಿನಲ್ಲಿ ಮುಖದ ಒಂದು ಮೂಲೆಯನ್ನೂ ಬಿಡದೇ ಸರಿಯಾಗಿ ತೊಳೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಫೇಸ್​ಪ್ಯಾಕ್​ ಹಚ್ಚುವ ವೇಳೆ ನಿಮ್ಮ ಕುತ್ತಿಗೆ ಭಾಗವನ್ನು ಬಿಡುವಂತಿಲ್ಲ..!

ಇದನ್ನು ಓದಿ : almond with honey benefits : ಬಾದಾಮಿ ಹಾಗೂ ಜೇನುತುಪ್ಪ ಸೇವನೆ ಹಿಂದಿದೆ ಆರೋಗ್ಯದ ಗುಟ್ಟು

ಇದನ್ನೂ ಓದಿ : Health Tips : ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ವಾಸಿಯಾಗಲಿದೆ ಈ ಮಾರಕ ಕಾಯಿಲೆ..!

The Benefits Of Saffron For Skin

RELATED ARTICLES

Most Popular