Cucumber Face Mask : ಬೇಸಿಗೆಯ ಸ್ಕಿನ್‌ ಪ್ರಾಬ್ಲಮ್‌ಗಳಿಗೆ ಬಳಸಿ ಸವತೆಕಾಯಿ ಫೇಸ್‌ ಮಾಸ್ಕ್‌

ಬಿರು ಬಿಸಿಲು, ಬೆವರಿನಿಂದಾಗಿ ಬೇಸಿಗೆಯಲ್ಲಿ ಚರ್ಮದ ಸಮಸ್ಯೆಗಳು (Skin Problems) ಕಾಣಿಸಿಕೊಳ್ಳುವುದು ಸಾಮಾನ್ಯ. ಸೂರ್ಯನ ಹಾನಿಕಾರಕ ಕಿರಣಗಳು, ಧೂಳು ಮತ್ತು ಕೊಳಕು ಬೇಸಿಗೆಯಲ್ಲಿ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೆವರುವಿಕೆಯಿಂದಾಗಿ, ಧೂಳು ಚರ್ಮದ ಮೇಲೆ ಅಂಟಿಕೊಳ್ಳುತ್ತದೆ ಮತ್ತು ಅದು ಪಿಗ್ಮೆಂಟೇಶನ್ ರೀತಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದಲ್ಲದೇ ಬೇಸಿಗೆಯ ಕಾಡುವ ಮೊಡವೆ, ಚರ್ಮದ ರಂಧ್ರಗಳು ಮುಚ್ಚುವಂತೆ ಮಾಡುತ್ತದೆ. ಇದರಿಂದಾಗಿ ಚರ್ಮವು ಉಸಿರಾಡುವುದಿಲ್ಲ. ಮುಖದ ಕಾಂತಿ ಎಲ್ಲೋ ಮಾಯವಾಗಿಬಿಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಸೌಂದರ್ಯವರ್ಧಕ ಉತ್ಪನ್ನವನ್ನು ಬಳಸುವ ಬದಲು, ಸೌತೆಕಾಯಿಯನ್ನು (Cucumber Face Mask) ತ್ವಚೆಯ ಆರೈಕೆಗೆ ಉಪಯೋಗಿಸಿಕೊಳ್ಳಬಹುದು. ತ್ವಚೆಯ ಆರೈಕೆಯಲ್ಲಿ ಸವತೆಕಾಯಿ ಬಳಸುವುದು ಹೇಗೆ ಇಲ್ಲಿದೆ ಓದಿ.

  1. ಸೌತೆಕಾಯಿ ಮತ್ತು ಜೇನುತುಪ್ಪದ ಮಾಸ್ಕ್‌:
    ಸೌತೆಕಾಯಿಯನ್ನು ಸಿಪ್ಪೆ ತೆಗೆದು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
    ಈಗ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ.
    ಈ ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನಯವಾದ ಪೇಸ್ಟ್ ಮಾಡಿ.
    ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸುಮಾರು 25 ನಿಮಿಷಗಳ ಕಾಲ ಬಿಡಿ.
    ಈಗ ಅದನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಹತ್ತಿ ಬಟ್ಟೆಯಿಂದ ನಿಧಾನವಾಗಿ ಒರೆಸಿ
    ಬೇಸಿಗೆಯಲ್ಲಿ ತ್ವಚೆಯಲ್ಲಿ ಉಂಟಾಗುವ ಉರಿ ದೂರವಾಗಿ ತ್ವಚೆಯೂ ಕಾಂತಿಯುತವಾಗುತ್ತದೆ.
  2. ಸೌತೆಕಾಯಿ ಮತ್ತು ಮೊಸರಿನ ಫೇಸ್ ಮಾಸ್ಕ್:
    ಸೌತೆಕಾಯಿಯನ್ನು ಸಿಪ್ಪೆ ತೆಗೆದು ಮ್ಯಾಶ್ ಮಾಡಿ.
    ಈಗ ಅದಕ್ಕೆ ಒಂದು ದೊಡ್ಡ ಚಮಚ ಮೊಸರು ಸೇರಿಸಿ.
    ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಪೇಸ್ಟ್ ಅನ್ನು ಮುಖದ ಮೇಲೆ ಸುಮಾರು 15 ನಿಮಿಷಗಳ ಕಾಲ ಇರಿಸಿ.
    ಅದರ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.
    ಸ್ವಚ್ಛವಾದ ಬಟ್ಟೆಯಿಂದ ಮುಖವನ್ನು ಒರೆಸಿ.
    ಈ ಮಾಸ್ಕ್ ಬೇಸಿಗೆಯಲ್ಲಿ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ.
  3. ಸೌತೆಕಾಯಿ ಮತ್ತು ಅಲೋವೆರಾ ಮಾಸ್ಕ್:
    ಸೌತೆಕಾಯಿಯನ್ನು ಸಿಪ್ಪೆ ತೆಗೆದು ಪೇಸ್ಟ್ ಮಾಡಿಕೊಳ್ಳಿ.
    ಈಗ ಅದಕ್ಕೆ ಒಂದು ಚಮಚ ಅಲೋವೆರಾ ಜೆಲ್ ಸೇರಿಸಿ.
    ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಸುಮಾರು 20 ರಿಂದ 25 ನಿಮಿಷಗಳ ಕಾಲ ಬಿಡಿ.
    ನಂತರ ಅದನ್ನು ಉಗುರುಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ ಮತ್ತು ಮುಖವನ್ನು ಒಣಗಿಸಿ.
    ಈ ಮಾಸ್ಕ್ ತ್ವಚೆಯ ಮೇಲಿನ ಕೆಂಪು ಮತ್ತು ದದ್ದುಗಳನ್ನು ಹೋಗಲಾಡಿಸುತ್ತದೆ ಮತ್ತು ಚರ್ಮಕ್ಕೆ ತಂಪು ನೀಡುತ್ತದೆ.

ತ್ವಚೆಯ ಆರೈಕೆಯಲ್ಲಿ ಸೌತೆಕಾಯಿಯ ಪ್ರಯೋಜನಗಳು:

  1. ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಇದೆ. ಈ ಕಾರಣದಿಂದಾಗಿ, ಇದು ಚರ್ಮಕ್ಕೆ ನೀರಿನ ಮರು ಪೂರೈಕೆ ಮಾಡುತ್ತದೆ. ಇದು ಒಣ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಿ ನಿಮ್ಮ ತ್ವಚೆಯನ್ನು ತಾಜಾ ಮತ್ತು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.
  2. ಸೌತೆಕಾಯಿ ತಂಪಾಗಿಸುವ ಗುಣವನ್ನು ಹೊಂದಿದೆ. ಇದು ಬೇಸಿಗೆಯಲ್ಲಿ ಉಂಟಾಗುವ ಚರ್ಮದ ಕಿರಿಕಿರಿಯಿಂದ ಪರಿಹಾರವನ್ನು ನೀಡುತ್ತದೆ. ಮುಖದ ಮೇಲೆ ದದ್ದುಗಳು ಬಂದರೆ ನೀವು ಸೌತೆಕಾಯಿ ಪೇಸ್ಟ್ ಅನ್ನು ಅನ್ವಯಿಸಬಹುದು. ಇದು ದದ್ದುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  3. ವಿಟಮಿನ್ ಸಿ ಮತ್ತು ಆಂಟಿಒಕ್ಸಿಡೆಂಟ್‌ ಹೊಂದಿರುವ ಸೌತೆಕಾಯಿ, ಚರ್ಮದ ಮೇಲೆ ಸ್ವತಂತ್ರ ರಾಡಿಕಲ್ಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ಸಮಸ್ಯೆಯೂ ದೂರವಾಗುತ್ತದೆ.
  4. ಸೌತೆಕಾಯಿ ಒಂದು ಕ್ಲೀನಿಂಗ್ ಏಜೆಂಟ್. ಇದರ ಈ ಗುಣವು ಒಳಗಿನಿಂದ ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಚರ್ಮದ ಮೇಲೆ ಗೋಚರಿಸುವ ಹೆಚ್ಚುವರಿ ಎಣ್ಣೆ ಮತ್ತು ಕಲ್ಮಶಗಳನ್ನು ತೆಗೆದುಹಾಕುತ್ತದೆ.

ಇದನ್ನೂ ಓದಿ : Fruits On Empty Stomach : ಖಾಲಿ ಹೊಟ್ಟೆಯಲ್ಲಿ ತಪ್ಪಾಗಿಯೂ ಈ ಹಣ್ಣುಗಳನ್ನು ತಿನ್ನಲೇಬೇಡಿ

ಇದನ್ನೂ ಓದಿ : Bottle guard Halva: ಬಾಯಲ್ಲಿ ನೀರೂರಿಸುವ ಸೋರೆಕಾಯಿ ಹಲ್ವಾ..! ಒಮ್ಮೆ ಹೀಗೆ ಮಾಡಿ ನೋಡಿ

(Use Cucumber Face Mask for your skin to get rid of summer problem)

Comments are closed.