ಹಿಂದುಗಳ ಅತಿ ದೊಡ್ಡ ಹಬ್ಬ ನವರಾತ್ರಿ (Navratri 2022). ಒಂಬತ್ತು ದಿನಗಳ ಕಾಲ ನಡೆಯುವ ಈ ಹಬ್ಬ, ಭಾರತಾದಾದ್ಯಂತ ಶಕ್ತಿ ದೇವತೆಯನ್ನು ಶ್ರದ್ದಾ, ಭಕ್ತಿಯಿಂದ ಆರಾಧಿಸುತ್ತಾರೆ. ಇದು ಒಂಬತ್ತು ದಿನಗಳ ಕಾಲ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುವ ಹಬ್ಬವಾಗಿದೆ. ಈ ವರ್ಷ ನವರಾತ್ರಿಯು ಸೆಪ್ಟೆಂಬರ್ 26, 2022 ರಿಂದ ಆರಂಭವಾಗಲಿದೆ. ನವರಾತ್ರಿಯಲ್ಲಿ ಭಕ್ತರು ಉಪವಾಸ ವೃತವನ್ನು ಕೈಗೊಳ್ಳುತ್ತಾರೆ. ಸಾತ್ವಿಕ ಆಹಾರ ಸೇವಿಸುತ್ತಾರೆ. ಪ್ರತಿ ದಿನವೂ ಒಂದು ನಿರ್ದಿಷ್ಟ ಬಣ್ಣವನ್ನು ದುರ್ಗಾದೇವಿಯ ಒಂದು ರೂಪದೊಂದಿಗೆ ಹೋಲಿಸುತ್ತಾರೆ. ನವರಾತ್ರಿಗೆ ಪ್ರತಿದಿನ ಪ್ರತ್ಯೇಕವಾಗಿ ಒಂದು ನಿರ್ದಿಷ್ಟ ಬಗೆಯ ಪ್ರಸಾದವನ್ನು ತಯಾರಿಸುತ್ತಾರೆ ಮತ್ತು ದೇವಿಗೆ ಸಮರ್ಪಿಸುತ್ತಾರೆ. ನೀವು ಈ ವರ್ಷದ ನವರಾತ್ರಿಯನ್ನು ಸಾಂಪ್ರದಾಯಿಕವಾಗಿ ಆಚರಿಸಬೇಕು ಅಂದುಕೊಳ್ಳುತ್ತಿದ್ದರೆ ಪ್ರತಿದಿನದ ಬಣ್ಣ ಮತ್ತು ಮಹತ್ವ ಇಲ್ಲಿದೆ.
ನವರಾತ್ರಿಯ ಒಂಬತ್ತು ಬಣ್ಣ ಮತ್ತು ಅದರ ವಿಶೇಷತೆ:
ಮೊದಲನೇ ದಿನ : ಶೈಲಪುತ್ರಿ , ಬಣ್ಣ– ಬಿಳಿ
ನವರಾತ್ರಿಯ ಮೊದಲನೇ ದಿನವನ್ನು ಶೈಲಪುತ್ರಿ ಎಂದು ಪೂಜಿಸುತ್ತಾರೆ. ಮೊದಲನೇ ದಿನದ ಬಣ್ಣ ಬಿಳಿ. ಇದು ಶಾಂತಿಯ ಸಂಕೇತ.
ಎರಡನೇ ದಿನ : ಬ್ರಹ್ಮಚಾರಿಣಿ, ಬಣ್ಣ – ಕೆಂಪು
ಬ್ರಹ್ಮಚಾರಿಣಿ ಎಂದು ದುರ್ಗಾ ದೇವಿಯನ್ನು ಪೂಜಿಸುವ ಎರಡನೇ ದಿನದ ಬಣ್ಣವು ಕೆಂಪು. ಇದು ಪ್ರೀತಿ ಮತ್ತು ಉತ್ಸಾಹದ ಸಂಕೇತ. ಈ ಬಣ್ಣವು ಜೀವನದಲ್ಲಿ ಚೈತನ್ಯವನ್ನು ತುಂಬುತ್ತದೆ ಎನ್ನಲಾಗುತ್ತದೆ.
ಮೂರನೇ ದಿನ : ಚಂದ್ರಘಂಟಾ, ಬಣ್ಣ– ನೀಲಿ
ಈ ದಿನದಂದು ದೇವಿಯನ್ನು ಚಂದ್ರಘಂಟಾ ಎಂದು ಪೂಜಿಸಲಾಗುತ್ತದೆ. ಸಮೃದ್ಧಿ ಮತ್ತು ಪ್ರಶಾಂತತೆಯ ಸಂಕೇತವಾದ ನೀಲಿ ಈ ದಿನದ ಸಂಕೇತ.
ನಾಲ್ಕನೇ ದಿನ : ಕೂಷ್ಮಾಂಡ, ಬಣ್ಣ – ಹಳದಿ
ಎಂಟು ಭುಜ ಹೊಂದಿರುವ ಕೂಷ್ಮಾಂಡ ದೇವಿಯನ್ನು ನಾಲ್ಕನೇ ದಿನ ಪೂಜಿಸುತ್ತಾರೆ. ಹಳದಿ ಬಣ್ಣವು ಈ ದಿನದ ಬಣ್ಣವಾಗಿದೆ. ಇದು ಸಂತೋಷ ಮತ್ತು ಉತ್ಸಾಹದ ಸಂಕೇತವಾಗಿದೆ.
ಐದನೇ ದಿನ : ಸ್ಕಂದಮಾತಾ, ಬಣ್ಣ – ಹಸಿರು
ಐದನೇ ದಿನದ ಬಣ್ಣ ಹಸಿರು. ಇದು ಪ್ರಕೃತಿಯ ಸಂಕೇತ. ಹಸಿರು ಬಣ್ಣವು ಫಲವತ್ತತೆ ಭಾವವನ್ನು ಉಂಟುಮಾಡುತ್ತದೆ ಮತ್ತು ಜೀವನದಲ್ಲಿ ಹೊಸ ಆರಂಭವನ್ನು ಪ್ರತಿನಿಧಿಸುತ್ತದೆ. ಈ ದಿನದಂದು ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ.
ಇದನ್ನೂ ಓದಿ : Navratri : ದೇಶದ ಯಾವ್ಯಾವ ಭಾಗದಲ್ಲಿ ನವರಾತ್ರಿ ಆಚರಣೆ ಹೇಗಿರುತ್ತೆ : ಇಲ್ಲಿದೆ ಮಾಹಿತಿ
ಆರನೇ ದಿನ : ಕಾತ್ಯಾಯಿನಿ, ಬಣ್ಣ – ಬೂದು
ಈ ದಿನವನ್ನು ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದ ಬಣ್ಣ ಬೂದು. ಇದು ಸಮತೋಲಿತ ಭಾವನೆಗಳನ್ನು ಪ್ರತಿನಿಧಿಸುವ ಬಣ್ಣವಾಗಿದೆ.
ಏಳನೇ ದಿನ : ಕಾಲರಾತ್ರಿ, ಬಣ್ಣ – ಕಿತ್ತಳೆ
ಕಾಲರಾತ್ರಿ ದೇವಿ ಎಂದು ನವರಾತ್ರಿಯ ಏಳನೇ ದಿನವನ್ನು ಪೂಜಿಸಲಾಗುತ್ತದೆ. ಇದು ಧನಾತ್ಮಕ ಶಕ್ತಿ ಮತ್ತು ಉತ್ಸಾಹದ ಸಂಕೇತವಾಗಿದೆ.
ಎಂಟನೇ ದಿನ : ಮಹಾಗೌರಿ, ಬಣ್ಣ – ನವಿಲು ಹಸಿರು
ಇದು ಮಹಾಗೌರಿಯ ದೇವಿಯ ದಿನವಾಗಿದೆ. ನವಿಲು ಹಸಿರು ಎಂಟನೇ ದಿನದ ಬಣ್ಣ. ಇದು ಸಹಾನುಭೂತಿಯ ಸಂಕೇತವಾಗಿದೆ.
ಒಂಬತ್ತನೇ ದಿನ : ಸಿದ್ಧಿದಾತ್ರಿ , ಬಣ್ಣ – ಗುಲಾಬಿ
ನವರಾತ್ರಿಯ ಕೊನೆ ದಿನವನ್ನು ಸಿದ್ಧಿದಾತ್ರಿ ದೇವಿಯನ್ನು ಪೂಜಿಸುವ ಮೂಲಕ ಆಚರಿಸುತ್ತಾರೆ. ಈ ದಿನದ ಬಣ್ಣ ಗುಲಾಬಿ. ದಯೆ, ವಾತ್ಸಲ್ಯ ಮತ್ತು ಸಾಮರಸ್ಯದ ಸಂಕೇತವಾಗಿದೆ.
(Navratri 2022 know the 9 colors and its significance)