girl student escape from Mangalore hostel: ಮಂಗಳೂರಿನ ಹಾಸ್ಟೆಲ್​ನಿಂದ ವಿದ್ಯಾರ್ಥಿನಿಯರು ಎಸ್ಕೇಪ್​ ಪ್ರಕರಣ ಸುಖಾಂತ್ಯ

ಮಂಗಳೂರು : girl student escape from Mangalore hostel : ಶಾಲೆ ಕಾಲೇಜುಗಳಲ್ಲಿ ತಮ್ಮ ಮಕ್ಕಳು ಹೈಯೆಸ್ಟ್ ಸ್ಕೋರ್ ಮಾಡುವಂತೆ ಒತ್ತಡ ಹಾಕುವ ಪೋಷಕರು ಒಮ್ಮೆ ಈ ಸ್ಟೋರಿಯನ್ನು ಓದಲೇಬೇಕು. ಯಾಕಂದ್ರೆ ತಮ್ಮ ಮಕ್ಕಳು ಶೈಕ್ಷಣಿಕ ಒತ್ತಡಕ್ಕೆ ಒಳಗಾಗಿ ಅವಸರದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮಂಗಳೂರಿನಲ್ಲಿಯೂ ಇದೇ ರೀತಿ ಒತ್ತಡಕ್ಕೆ ಒಳಗಾಗಿ ಎಸ್ಕೇಪ್ ಆಗಿದ್ದ ವಿದ್ಯಾರ್ಥಿನಿಯರು ಸುರಕ್ಷಿತವಾಗಿ ಮರಳಿ ಪೋಷಕರ ಬಳಿ ಸೇರಿದ್ದಾರೆ.

ಹೌದು..ಮೂರು ದಿನಗಳ ಮಂಗಳೂರು ನಗರದ ಖಾಸಗಿ ಕಾಲೇಜೊಂದನ ಹಾಸ್ಟೆಲ್‌ನಿಂದ ಮೂವರು ವಿದ್ಯಾರ್ಥಿನಿಯರು ಪರಾರಿಯಾಗಿದ್ದರು. ರಾತ್ರಿ ಮೂರು ಗಂಟೆ ಸುಮಾರಿಗೆ ಹಾಸ್ಟೆಲ್‌ನ ಕಿಟಕಿಯ ರಾಡ್ ಬೆಂಡ್ ಮಾಡಿ ಬಟ್ಟೆ ಬರೆ ಪ್ಯಾಕ್ ಮಾಡಿ ಲಗೇಜು ಸಹಿತ ಎಸ್ಕೇಪ್ ಆಗಿದ್ದರು. ಪಿಕ್‌ನಿಕ್ ಹೊರಟವರಂತೆ ಯಾವುದೇ ಆತಂಕವಿಲ್ಲದೆ ಕಾಲೇಜು ಆವರಣದಿಂದ ಹೊರ ಹೋಗುವ ದೃಶ್ಯ ಸಹ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿತ್ತು. ಇದೀಗ ಕಿಟಕಿ ಮುರಿದು ಪರಾರಿಯಾಗಿರುವ ಈ ಮೂವರು ವಿದ್ಯಾರ್ಥಿನಿಯರನ್ನು ಕುಡ್ಲ ಖಾಕಿ ಪತ್ತೆ ಹಚ್ಚಿದೆ. ಅಷ್ಟಕ್ಕೂ ಈ ವಿದ್ಯಾರ್ಥಿಯರು ಪರಾರಿಯಾಗಿರೋದು ಯಾಕೆಂದು ಗೊತ್ತಾದರೆ ಎಲ್ಲರೂ ಆಶ್ಚರ್ಯರಾಗೋದು ಖಚಿತ. ಯಾಕಂದ್ರೆ ಇವರು ತಮ್ಮ ಪ್ರಥಮ ಪಿಯುಸಿಯ ಯುನಿಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿರುವುದರಿಂದ ಮನನೊಂದು, ತಮ್ಮ ಶೈಕ್ಷಣಿಕ ಒತ್ತಡವನ್ನು ನಿರ್ವಹಿಸಲಾಗದೆ ಹಾಸ್ಟೆಲ್‌ನಿಂದ ಓಡಿಹೋಗಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಮೂವರು ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆಯ ಸಂಬಂಧಿಕರು ಚೆನೈನಲ್ಲಿದ್ದಾರೆ. ಹೀಗಾಗಿ ಅವರ ಮನೆಗೆ ತೆರಳುವ ನಿರ್ಧಾರ ಮಾಡಿ ಮಂಗಳೂರಿನಿಂದ ರೈಲಿನ ಮೂಲಕ ಕೊಯಂಬತ್ತೂರಿಗೆ ತೆರೆಳಿದ್ದಾರೆ. ಅಲ್ಲಿಂದ ಬಸ್‌ನಲ್ಲಿ ಪಾಂಡಿಚೇರಿಗೆ ಪ್ರಯಾಣಿಸಿದ್ದಾರೆ. ವಾಪಾಸ್ ಪಾಂಡಿಚೇರಿಯಿಂದ ಚೆನೈಗೆ ಬಂದಿದ್ದಾರೆ‌. ರಾತ್ರಿ ವೇಳೆ ಎಲ್ಲೂ ತಂಗಲು ಆಗದ ವಿದ್ಯಾರ್ಥಿನಿಯರು ಸಂಚಾರದಲ್ಲಿಯೇ ಇದ್ದರು. ಆದರೆ ಎಲ್ಲಿಗೂ ಹೋಗಲು ತಿಳಿಯದೆ ಅಟೋ ಚಾಲಕರ ಸಹಾಯ ಪಡೆದು ಸಮೀಪದ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ. ಆ ಬಳಿಕ ಮಂಗಳೂರು ಪೊಲೀಸರು ಚೆನೈನಿಂದ ಸುರಕ್ಷಿತವಾಗಿ ಕರೆ ತಂದಿದ್ದಾರೆ‌. ಈ ಮೂಲಕ ಯಾವುದೇ ತೊಂದರೆಯಿಲ್ಲದೆ ಮತ್ತೆ ಮನೆಯವರನ್ನು ಸೇರಿರುವ ವಿದ್ಯಾರ್ಥಿನಿಯರ ಪರಾರಿ ಪ್ರಹಸನ ಸುಖಾಂತ್ಯಗೊಂಡಿದೆ.

ವಿದ್ಯಾರ್ಥಿನಿಯರು ಕಿಟಕಿ ಮುರಿದು ಹಾಸ್ಟೆಲ್‌ನಿಂದ ಪರಾರಿಯಾದ ಈ ಘಟನೆಯಿಂದ ಕಾಲೇಜು ಆಡಳಿತ ಮಂಡಳಿಯು ಎಚ್ಚೆತ್ತುಕೊಂಡಿದ್ದು, ಮುಂದೆ ಇನ್ನಷ್ಟು ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮ ಭದ್ರತೆಗೆ ಇನ್ನಷ್ಟು ಒತ್ತು ನೀಡುವುದಾಗಿ ಹೇಳಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರಲ್ಲಿ ಯಶಸ್ವಿನಿ ಮತ್ತು ದಕ್ಷತಾ ಬೆಂಗಳೂರಿನ ನಿವಾಸಿಗಳಾಗಿದ್ದರೆ, ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿಯಾಗಿದ್ದಾಳೆ. ಸದ್ಯ ಈ ಮೂವರ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದು ಒತ್ತಡ ನಿವಾರಣೆಗೆ ಕೌನ್ಸಿಲಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. ಒಟ್ಟಿನಲ್ಲಿ ಹಾಸ್ಟೇಲ್‌ನಿಂದಲೇ ಪರಾರಿಯಾಗಿ ಆತಂಕ ಸೃಷ್ಟಿಸಿದ ಘಟನೆ ಇದೀಗ ಸುಖಾಂತ್ಯಗೊಂಡಿದೆ.

ಇದನ್ನು ಓದಿ : Rohit Sharma World Record : ಆಸೀಸ್ ವಿರುದ್ಧ ಸಿಕ್ಸರ್‌ಗಳ ಸುರಿಮಳೆ.. ಅಮೋಘ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ : BCCI: ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ, ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಇದೆಂಥಾ ದುರ್ಗತಿ..?

The case of girl student escape from Mangalore hostel has a happy ending

Comments are closed.