- ವಂದನ ಕೊಮ್ಮುಂಜೆ
krishna radhe romance : ಇದು ದೇವಾಲಯ ಅನ್ನೋದಕ್ಕಿಂತ ಹೆಚ್ಚಾಗಿ ಪ್ರೇಮ ಸೌಧ. ಇಲ್ಲಿ ಪ್ರೇಮವೇ ಮುಕ್ತಿಯ ಮಾರ್ಗ, ಪ್ರೇಮವೇ ಭಕ್ತಿಯ ಪರಾಕಾಷ್ಠೆ. ಇಲ್ಲಿ ಪ್ರೀತಿಯ ಸಂಕೇತವಾಗಿ ನೆಲೆಸಿದ್ದಾನೆ ಆ ಪ್ರಭು. ಅದು ತನ್ನ ಪ್ರೀತಿಯ ಜೊತೆಗೆ. ಅವರು ಲೋಕ ಕಂಡ ಅಮರ ಪ್ರೇಮಿಗಳು ಅವರೇ ರಾಧಾ ಕೃಷ್ಣ ಹೌದು, ರಾಧಾಕೃಷ್ಣರ ಪ್ರೇಮ ಸಂಕೇತ ಈ ದೇವಾಲಯ. ಇದನ್ನು ದೇವಾಲಯ ಅನ್ನೋದಕ್ಕಿಂತ ದೇವವನ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಹೆಚ್ಚು ವಿಸ್ಮಯವನ್ನು ಹೊಂದಿರೋದೇ ಇಲ್ಲಿಯ ವನ. ಅದಕ್ಕೆ ಇದನ್ನು ನಿಧಿವನ ಅಂತಾರೆ ಅನಿಸುತ್ತೆ. ಇದು ಕೃಷ್ಣನ ಪ್ರೇಮದ ವನ. ಇಲ್ಲಿಗೆ ಕೃಷ್ಣ ಇಂದಿಗೂ ಬರುತ್ತಾನೆ ಅನ್ನೋ ನಂಬಿಕೆಯಿದೆ.

ರಾತ್ರಿ ನಡೆಯುತ್ತೆ ಕೃಷ್ಣನ ರಾಸಲೀಲೆ (Krishna Radhe Romance )
ಇದನ್ನು ಓದಿ ನಿಮಗೆ ಆಶ್ಚರ್ಯವಾಗಬಹುದು. ಆದ್ರೆ ಇದೇ ಸತ್ಯ. ಇಲ್ಲಿಯ ಪ್ರತಿ ರಾತ್ರಿ ಕೃಷ್ಣ ಹಾಗೂ ರಾಧೆ ಬಂದು ರಾಸಲೀಲೆ ಆಡುತ್ತಾರೆ. ಇದು ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಇದೆ. ಇಂದಿಗೂ ಇದನ್ನು ಭಕ್ತರು ನಂಬುತ್ತಾರೆ. ಇದಕ್ಕೆ ಸಾಕ್ಷಿಯೂ ಈ ಭೂಮಿಯಲ್ಲಿ ಸಿಗುತ್ತೆ.

ಈ ವನದಲ್ಲಿ ಹೂವು ಲತೆಗಳಿಲ್ಲ ಬದಲಾಗಿ ಇರೋದು ಬರೀ ತುಳಸಿಯ ಗಿಡಗಳು. ಇನ್ನು ಕೆಲವರ ಪ್ರಕಾರ ತುಳಸಿಯನ್ನು ನಿಧಿ ಅಂತ ಕರಿತಾರೆ. ಹಾಗಾಗಿ ಇದನ್ನು ನಿಧಿವನ ಆಂತಾರೆ ಅನ್ನೋದು . ಇನ್ನು ಕೆಲವರ ಪ್ರಕಾರ ನಿಧಿ ಆಂದ್ರೆ ರಾಧೆ. ಆದರೆ ಇಲ್ಲಿನ ತುಳಸಿ ಗಿಡಗಳನ್ನು ಬರಿ ತುಳಸಿಯಾಗಿ ಇಲ್ಲಿ ನೋಡಲ್ಲ. ಬದಲಾಗಿ ಇದು ತುಳಸಿಗಳಾಗಿ ರೂಪಾಂತರ ಗೊಂಡ ಗೋಪಿಕೆಯರು ಅನ್ನೋ ನಂಬಿಕೆ ಇಲ್ಲಿನ ಜನರಲ್ಲಿದೆ.
ಇದನ್ನೂ ಓದಿ : ತೊಟ್ಟಿಲು ಹರಕೆಯನ್ನು ಕಟ್ಟಿದರೆ, ಸಂತಾನ ಭಾಗ್ಯ ಕರುಣಿಸುವ ಅಪ್ರಮೇಯ ಸ್ವಾಮಿ !

ಗೋಪಿರಾಗುತ್ತೆ ತುಳಸಿ
ಹೌದು ಇಲ್ಲಿ ತುಳಸಿ ಗಿಡಗಳು ರಾತ್ರಿ ವೇಳೆ ಗೋಪಿಕೆಯರಾಗಿ ರಾಧಾಕೃಷ್ಣರ ಜೊತೆ ರಾಸ ಲೀಲೆ ಆಡುತ್ತಾರಂತೆ . ಬೆಳಗಾಗುತ್ತಲೇ ಮತ್ತೆ ತುಳಸಿ ಗಿಡಳಾಗುತ್ತಾರಂತೆ. ಇದಕ್ಕೆ ಸಾಕ್ಷಿಯೆಂಬಂತಿದೆ ಇಲ್ಲಿ ಈ ತುಳಸಿ ಗಿಡಗಳು. ಯಾಕಂದ್ರೆ ಇವು ಮಾಮೂಲಿ ತುಳಸಿ ಗಿಡಗಳಂತಿಲ್ಲ. ಬದಲಾಗಿ ಇವುಗಳು ನೋಡೋಕೆ ತುಂಬಾ ಭಿನ್ನ ಹಾಗೂ ವಿಸ್ಮಯಕಾರಿಯಾಗಿದೆ. ಎಲ್ಲಾ ತುಳಸಿ ಗಿಡದಲ್ಲಿ ಗಿಡದ ಕೊಂಬೆಗಳು ಎತ್ತರಕ್ಕೆ ಚಾಚಿದ್ರೆ , ಇಲ್ಲಿನ ತುಳಸಿ ಗಿಡಗಳು ಭೂಮಿಯತ್ತ ಬಾಗಿ ಬೆಳೆಯುತ್ತವೆ. ಇನ್ನು ಇಲ್ಲಿನ ಭೂಮಿ ಹಾಗು ಗಿಡದ ಕೊಂಬೆಗಳು ಒಣಗಿದಂತಿದ್ದು, ಎಲೆಗಳು ಮಾತ್ರ ಹಸಿರಾಗಿದೆ. ಇದು ವಿಜ್ಞಾನಿಗಳಿಗೆ ದೊಡ್ಡ ಪ್ರಶ್ನೆ ಯಾಗಿ ಉಳಿದಿದೆ.

ದೇವಾಲಯದಲ್ಲಿ ಕೃಷ್ಣ ರಾಧೆಗೆ ಮಾಡುತ್ತಾನೆ ಶೃಂಗಾರ
ಇದು ವನದ ಕಥೆಯಾದ್ರೆ ವನದಲ್ಲಿರೋ ದೇವಾಲಯ ಮತ್ತೊಂದು ವಿಸ್ಮಯಕ್ಕೆ ಸಾಕ್ಷಿಯಾಗುತ್ತೆ. ಅದೇ “ರಂಗ ಮಹಲ್ ಅಥವಾ ರಾಧಾ ರಾಣಿಯ ಶೃಂಗಾರ್- ಘರ್. ರಾತ್ರಿ ವೇಳೆ ರಾಧಾಕೃಷ್ಣರು ಈ ದೇವಾಲಯದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾರಂತೆ. ಇದಕ್ಕೆ ಸಾಕ್ಷಿಯಾಗುತ್ತೆ ದೇವಾಲಯದ ಮರುದಿನದ ಮುಂಜಾವಿನ ಚಿತ್ರಣ.
ಇದನ್ನೂ ಓದಿ : ನಾಗದೋಷ, ಕಾಳಸರ್ಪ ದೋಷವನ್ನುನಿವಾರಣೆ ಮಾಡ್ತಾನೆ ನಾಗರಾಜ : ಇಲ್ಲಿ ಭಕ್ತರನ್ನು ಕಾಯುತ್ತೆ 30 ಸಾವಿರ ಸರ್ಪಗಳು

ಹೌದು, ರಾತ್ರಿ ಕೊನೆ ಆರತಿಯ ನಂತರ ದೇವಾಲಯದ ಒಳಗೆ ಕೃಷ್ಣ ರಾಧೆಯರಿಗಾಗಿ ಹಾಸಿಗೆ, ಶೃಂಗಾರ ಸಾಮಗ್ರಿ, ಬೆಣ್ಣೆ ಲಡ್ಡು, ಬೇವಿನ ಕಡ್ಡಿ, ವೀಳ್ಯವನ್ನು ಇಡಲಾಗುತ್ತೆ. ನಂತರ ದೇವರಿಗೆ ಆರತಿ ಮಾಡಿ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತೆ. ಆದ್ರೆ ಮುಂಜಾನೆ ಬಂದು ನೋಡಿದ್ರೆ ಇದೆಲ್ಲಾ ಹರಡಿದಂತಿರುತ್ತೆ . ಲಾಡು, ಬೆಣ್ಣೆ ಹಾಗು ವೀಳ್ಯವನ್ನು ಯಾರೋ ತಿಂದಂತೆ ಇರುತ್ತೆ. ಬೇವಿನ ಕಡ್ಡಿಯನ್ನು ಯಾರೋ ಬಳಸಿದಂತೆ ಇರುತ್ತೆ . ಇದನ್ನು ಭಕ್ತರಿಗೂ ತೋರಿಸಲಾಗುತ್ತೆ . ಭಕ್ತರು ಇದನ್ನು ಕೃಷ್ಣನೇ ಬಳಸಿದ ಆಂತ ಪ್ರಾದವಾಗಿ ಸ್ವೀಕರಿಸುತ್ತಾರೆ.

ರಾಸಲೀಲೆ ನೋಡೋಕೆ ಹೋದವರ ರಹಸ್ಯ
ಇಲ್ಲಿ ರಾತ್ರಿ ಕೃಷ್ಣ ರಾಸಲೀಲೆ ಆಡೋದನ್ನು ನೋಡೋದು ನಿಷಿದ್ಧ. ಹೀಗಾಗಿ ರಾತ್ರಿ ವೇಳೆ ಈ ವನಕ್ಕಾಗಲೀ ದೇವಾಲಯಕ್ಕಾಗಲೀ ಯಾರಿಗೂ ಪ್ರವೇಶವಿಲ್ಲ. ರಾತ್ರಿಯ ಪೂಜೆ ನಂತ್ರ ಭಕ್ತರನ್ನು ಹೊಕ್ಕೆ ಕಳುಹಿಸಿ ಬೀಗ ಹಾಕಲಾಗುತ್ತೆ . ಇನ್ನು ಕುತೂಲಕ್ಕಾಗಿ ಕಣ್ಣುತಪ್ಪಿಸಿ ಪರೀಕ್ಷಿಸಲು ಅಲ್ಲೇ ಉಳಿದವರೂ ಇಲ್ಲಿವರೆಗೆ ಬದುಕಿಲ್ಲ. ಬದುಕಿದ್ದರೂ ಮಾನಸಿಕ ಸ್ವಾಸ್ತ ಕಳೆದುಕೊಂಡಿರೋ ಸಾಕ್ಷಿಗಳು ಅಲ್ಲೆ ಕಾಣ ಸಿಗುತ್ತೆ.

ಒಂದು ಸಾರಿ ಕೃಷ್ಣ ಭಕ್ತನೊಬ್ಬ ಕೃಷ್ಣನ ನೋಡೋಕೆ ಅಂತ ವನದಲ್ಲಿ ಅಡಗಿ ಕೂತಿದ್ರು . ಎರಡು ಬಾರಿ ಅವರನ್ನು ನೋಡಿದ ದೇವಾಲಯದ ಮಂದಿ ಅವರನ್ನು ಹೊರಗೆ ಕಳಿಸದ್ರು. ಆದರೆ ಮೂರನೇ ಬಾರಿ ಆತ ಯಾರಿಗೂ ಕಾಣದ ಜಾಗದಲ್ಲಿ ಅವಿತು ಕೂತಿದ್ದ. ಆದ್ರೆ ಮುಂಜಾನೆ ಆತ ಮೂರ್ಚೆ ತಪ್ಪಿದ ಸ್ಥಿತಿಯಲ್ಲಿ ಕಾಣಸಿಕ್ಕಿದ್ದ. ಆತನಲ್ಲಿ ಮಾತನಾಡಿಸಿದರೂ ಮಾತನಾಡಿರಲಿಲ್ಲ. ನಂತನ ಆತನ ಗುರುಗಳು ಆತನನ್ನು ಆಶ್ರಮಕ್ಕೆ ಕರೆದೊಯ್ದರು. ಮೂರು ದಿನದ ಯಾರಲ್ಲೂ ಮಾತನಾಡಿರಲಿಲ್ಲ. ಆಹಾರವನ್ನೂ ಸೇವಿಸಿರಲಿಲ್ಲ.
ಇದನ್ನೂ ಓದಿ : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ- ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ

ಮೂರನೇ ದಿನ ಬೆಳಗ್ಗೆ ತಮ್ಮ ಗುರುಗಲ್ಲಿ ಪೆನ್ನು ಹಾಗು ಹಾಳೆಯನ್ನು ಕೇಳಿದ್ದಾನೆ. ಅದನ್ನು ನೀಡಿ ಗುರುಗಳು ಸ್ನಾನಕ್ಕೆಂದು ಯಮುನೆಯ ಬಳಿ ತೆರಳಿದ್ದಾರೆ. ಆದರೆ ಅವರು ಬರುವ ವೇಳೆ ಆತ ಪ್ರಾಣ ಬಿಟ್ಟಿದ್ದ. ಆತ ಗುರುಗಳಿಗೊಂದು ಕಾಗದ ಬರೆದಿದ್ದ ಅದರಲ್ಲಿ ರಾಧಾ ಕೃಷ್ಣರ ರಾಸಲೀಲೆಯ ಉತ್ತೇಖವಾಗಿದೆ . ಇದನ್ನು ಇಂದು ನಮಗೆ ನೋಡಲು ಸಿಗುತ್ತೆ.

ಇಲ್ಲಿನ ಮತ್ತೊಂದು ವಿಶೇಷ ಅಂದ್ರೆ ಕೇವಲ ಮಾನುಷ್ಯರಲ್ಲದೇ , ಪ್ರಾಣಿಗಳೂ ರಾತ್ರಿ ವೇಳೆ ಅಲ್ಲಿ ಉಳಿಯಲ್ಲ. ಅಲ್ಲಿ ಹಗಲಿನಲ್ಲಿ ಅಲ್ಲಿ ಮಂಗಗಳು ಕಾಣಸಿಗುತ್ತವೆ. ಆದ್ರೆ ರಾತ್ರಿಯಾಗುತ್ತಿದ್ದಂತೆ ಅವುಗಳು ಈವನದಿಂದ ಹೊರಗೆ ಹೋಗೋದನ್ನು ನಾವು ಕಾಣಬುಹುದು. ಇಲ್ಲಿ ಯಾವ ಪ್ರಾಣಿ ಪಕ್ಷಿಗಳು ರಾತ್ರೆ ವೇಳೆ ಇರೋದಿಲ್ಲವಂತೆ. ನಿಧಿವನದ ಅಕ್ಕಪಕ್ಕದಲ್ಲಿ ಮನೆಗಳಿದ್ದು, ಅವರ ಮನೆಗಳಲ್ಲಿ ವನದ ಕಡೆಗೆ ಯಾವುದೇ ಕಿಟಕಿಗಳಿಲ್ಲ. ಇದ್ರೂನೂ ಅದನ್ನು ರಾತ್ರಿಯಾಗುತ್ತಲೇ ಮುಚ್ಚುತ್ತಾರೆ. ಯಾಕಂದ್ರೆ ಇಲ್ಲಿ ರಾಸಲೀಲೆ ನೋಡೋದು ನಿಷಿದ್ಧ ಅಂತ.

ಅಂದ ಹಾಗೆ ಈ ನಿಧಿವನ ಇರೋದು ಕೃಷ್ಣನ ತವರು ಮಧುರಾದ ವೃಂದಾವನದಲ್ಲಿ . ಇದು ರಾಧಾಕೃಷ್ಣರು ದ್ವಾಪರಯುಗದಲ್ಲಿ ರಾಸಲೀಲೆ ಆಡಿದ ಸ್ಥಳ. ಇಂದಿಗೂ ಆಡುತ್ತಿರುವ ಸ್ಥಳ. ಇಂತಹ ಪರಮಾತ್ಮನ ಸನ್ನಿಧಿಯಲ್ಲಿ ಕೈ ಮುಗಿದರೆ ಮುಕ್ತಿ ಸಿಗದೇ ಇರದು. ಇಲ್ಲಿ ಹೆಚ್ಚಾಗಿ ಬಿಸಿ ಇರೋದ್ರಿಂದ ಬೇಸಿಗೆಯ ತಿಂಗಳುಗಳನ್ನು ಹೊರತುಪಡಿಸಿ ಉಳಿದ ತಿಂಗಳುಗಳಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಆದ್ರೆ ಸಂಜೆ 5 ಒಳಗೆ ಇಲ್ಲಿಗೆ ಭೇಟಿ ನೀಡೋದು ಉತ್ತಮ ಏಕೆಂದ್ರೆ ಇಲ್ಲಿ 7 ಗಂಟೆಗೆ ದೇವಾಲಯವನ್ನು ಬಂದೆ ಮಾಡುತ್ತಾರೆ.

ವೃಂದಾವನಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಚಳಿಗಾಲದ ತಿಂಗಳುಗಳು.ಆಹ್ಲಾದಕರ ಹವಾಮಾನದೊಂದಿಗೆ ಸುತ್ತಮುತ್ತಲಿನ ಪ್ರದೇಶಗಳು ಪ್ರಶಾಂತವಾಗಿರುತ್ತವೆ. ನೀವು ಯಮುನೆಯ ಸೌಂದರ್ಯವನ್ನು ಸವಿಯಬಹುದು.
(The Lords Rasaleela happens every night – what happens to those who have gone )